We Miss You SRK Trends: ಮಗನ ಅರೆಸ್ಟ್‌ ನಂತರ ಅಂತರ ಕಾಯ್ದುಕೊಂಡ ಶಾರೂಖ್, ಫ್ಯಾನ್ಸ್ ಬೇಸರ

Published : Jan 21, 2022, 05:04 PM ISTUpdated : Jan 21, 2022, 06:49 PM IST

ಮಗ ಆರ್ಯನ್ ಖಾನ್ ಬಂಧನ-ಬಿಡುಗಡೆಯ ನಂತರ ಕಿಂಗ್ ಖಾನ್ ಅಷ್ಟಾಗಿ ಹೊರಗೆ ಕಾಣಿಸಿಕೊಳ್ಳುತ್ತಿಲ್ಲ. ಸೋಷಿಯಲ್ ಮೀಡಿಯಾದಿಂದಲೂ ಗಾಯಬ್ ಆಗಿದ್ದಾರೆ. ಎಲ್ಲರಿಂದ ಅಂತರ ಕಾಯ್ದುಕೊಂಡಿರುವ ಶಾರೂಖ್ ಖಾನ್ ಅವರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

PREV
16
We Miss You SRK Trends: ಮಗನ ಅರೆಸ್ಟ್‌ ನಂತರ ಅಂತರ ಕಾಯ್ದುಕೊಂಡ ಶಾರೂಖ್, ಫ್ಯಾನ್ಸ್ ಬೇಸರ

ಬೆಂಬಲಿಗರು ಮತ್ತು ಫಾಲೋವರ್ಸ್ ಶಾರುಖ್ ಖಾನ್ ಅವರನ್ನು 'ಬಾಲಿವುಡ್ ರಾಜ' ಎಂದು ಕರೆಯುತ್ತಾರೆ. ಅವರ ನಟನೆ ಪ್ರೇಕ್ಷಕರನ್ನು ಮೋಡಿ ಮಾಡುತ್ತದೆ. ಪ್ರಣಯದ ಶೈಲಿಯು ಮಹಿಳೆಯರನ್ನು ಆಕರ್ಷಿಸುತ್ತದೆ.

26

ಬಾಲಿವುಡ್ ಬಾದ್‌ಶಾ ಈಗ ದೀರ್ಘಕಾಲದಿಂದ ಗ್ಲಾಮರ್ ಪ್ರಪಂಚದಿಂದ ಕಾಣೆಯಾಗಿದ್ದಾರೆ ಎಂದೇ ಹೇಳಬಹುದು. ಅವರ ಕೊನೆಯ ಚಿತ್ರ ಝೀರೋ 2018 ರಲ್ಲಿ ಬಿಡುಗಡೆಯಾಯಿತು.

36

ಕಳೆದ ವರ್ಷ ಅವರ ಮಗ ಆರ್ಯನ್ ಖಾನ್ ಬಂಧನ, ಡ್ರಗ್ಸ್ ಕೇಸ್ ಪ್ರಕರಣದ ನಂತರ ಅವರು ಟ್ವಿಟರ್‌ನಲ್ಲಿ ಅವರ ಅಭಿಮಾನಿಗಳೊಂದಿಗೆ ಸಂವಹನ ನಡೆಸಲಿಲ್ಲ. ಗುರುವಾರ ಸಂಜೆ, ಅವರ ಅಭಿಮಾನಿಗಳು ತಮ್ಮ ಭಾವನೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸಿದ್ದಾರೆ. 'ವಿ ಮಿಸ್ ಯು ಎಸ್‌ಆರ್‌ಕೆ' ಎಂದು ಟ್ರೆಂಡ್ ಮಾಡಿದ್ದಾರೆ.

46

ಸಾಮಾನ್ಯವಾಗಿ ಶಾರೂಖ್ ತಮ್ಮ ಮನೆ ಮನ್ನತ್‌ನ ಮಹಡಿಯಿಂದ ಅಭಿಮಾನಿಗಳೊಂದಿಗೆ ಬರ್ತ್‌ಡೇ ದಿನ ಹಾಯ್ ಮಾಡುತ್ತಾರೆ. ಆದರೆ ಈ ಬಾರಿ ಅದನ್ನೂ ಮಿಸ್ ಮಾಡಿದ್ದಾರೆ.

56

ಅಭಿಮಾನಿಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಟ್ವಿಟರ್‌ನಲ್ಲಿ ಟ್ರೆಂಡ್ ಮಾಡಿದ್ದಾರೆ. ಅವರು ಹ್ಯಾಶ್‌ಟ್ಯಾಗ್‌ನಲ್ಲಿ 'ವಿ ಮಿಸ್ ಯು ಎಸ್‌ಆರ್‌ಕೆ' ಎಂದು ಟ್ರೆಂಡಿಂಗ್ ಮಾಡುತ್ತಿದ್ದಾರೆ. ಎಸ್‌ಆರ್‌ಕೆ ಅವರ ಹಳೆಯ ಫೋಟೋಗಳು, ವೀಡಿಯೊಗಳು ಮತ್ತು ಉತ್ತಮ ನೆನಪುಗಳನ್ನು ಟ್ವೀಟ್ ಮಾಡುತ್ತಿದ್ದಾರೆ.

66

ಅಭಿಮಾನಿಗಳು ಶಾರುಖ್ ಅವರಲ್ಲಿ ಟ್ವಿಟರ್‌ನಲ್ಲಿ ಕನಿಷ್ಠ ಅವರ 'AskSRK' ಸೆಷನ್ ಅನ್ನು ಆಯೋಜಿಸುವಂತೆ ವಿನಂತಿಸಿದರು. ಇದು ಮೂಲತಃ ಪ್ರಶ್ನೋತ್ತರ ಟ್ರೆಂಡ್ ಆಗಿದೆ. ಅಭಿಮಾನಿಯೊಬ್ಬರು ಟ್ವೀಟ್ ಮಾಡಿ, '4 ತಿಂಗಳಾಗಿದೆ #WeMissYouSRK ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ ಎಂದು ಭಾವಿಸುತ್ತೇವೆ ಎಂದಿದ್ದಾರೆ.

Read more Photos on
click me!

Recommended Stories