83 Movie Premiere: ಪ್ಲಂಗಿಂಗ್‌ ನೆಕ್‌ ಗೌನ್‌ನಲ್ಲಿ ರಾಣಿಯಂತೆ ಕಂಗೊಳಿಸಿದ ದೀಪಿಕಾ!

First Published | Dec 23, 2021, 8:07 PM IST

ಬಾಲಿವುಡ್‌ನ ಮೋಸ್ಟ್ ಗ್ಲಾಮರಸ್ ಜೋಡಿಗಳಲ್ಲಿ ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ (Deepika padukone) ಕೂಡ ಒಬ್ಬರು. ಇಬ್ಬರೂ ತಮ್ಮ ಪ್ರೀತಿಯನ್ನು ಪರಸ್ಪರ ವ್ಯಕ್ತಪಡಿಸಲು ಎಂದಿಗೂ ಹಿಂಜರಿಯುವುದಿಲ್ಲ. ಸೋಷಿಯಲ್ ಮೀಡಿಯಾ ಇರಲಿ ಅಥವಾ  ಸಾರ್ವಜನಿಕ ಸ್ಥಳಗಳಲ್ಲೇ ಇರಲಿ ಪ್ರಪಂಚವೇ ಇರಲಿ,  ಅಂಚಿನಲ್ಲಿ, ಅವರ ರೋಮ್ಯಾನ್ಸ್‌ ಎಲ್ಲೆಡೆ ಗೋಚರಿಸುತ್ತದೆ.  ರಣವೀರ್ ಸಿಂಗ್ ತಮ್ಮ '83' ಸಿನಿಮಾ ಪ್ರೀಮಿಯರ್‌ ಶೋ ಆಯೋಜಿಸಿದ್ದರು.  ದೀಪಿಕಾ ಪಡುಕೋಣೆ ಪ್ರವೇಶಿಸಿದಾಗ, ಎಲ್ಲರ ಕಣ್ಣುಗಳು ಅವರ ಮೇಲೆಯೇ ಇತ್ತು. ಈ ಸಮಯದ ದೀಪಿಕಾರ ಪೋಟೋಗಳು ಸಖತ್‌ ವೈರಲ್‌ ಆಗಿವೆ. 

ರಣವೀರ್ ಸಿಂಗ್ ಅಭಿನಯದ 83 ಸಿನಿಮಾದ ವಿಶೇಷ ಪ್ರೀಮಿಯರ್ ಬುಧವಾರ ನಡೆಯಿತು. ಮುಂಬೈನಲ್ಲಿ ನಡೆದ ಸ್ಕ್ರೀನಿಂಗ್‌ನಲ್ಲಿ ಸಿನಿಮಾದ ಪಾತ್ರವರ್ಗ ಹಾಗೂ 1983 ರ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕಾಗಿ ಆಡಿದ ಮಾಜಿ ಕ್ರಿಕೆಟಿಗರು ಮತ್ತು ಅವರ ಕುಟುಂಬ ಸದಸ್ಯರು ಒಳಗೊಂಡಿದ್ದರು.

ದೀಪಿಕಾ ಪಡುಕೋಣೆ ರೆಡ್ ಕಾರ್ಪೆಟ್ ಮೇಲೆ ಎಂಟ್ರಿ ಕೊಟ್ಟಾಗ ಎಲ್ಲರ ಕಣ್ಣು ಅವರ ಮೇಲೆ ನೆಟ್ಟಿದೆ. ದೀಪಿಕಾ ಮೊಸ್ಟ್‌ ಸ್ಟನ್ನಿಂಗ್‌ ಲುಕ್‌ನಲ್ಲಿ ಕಾಣಿಸಿಕೊಂಡರು. ಪತಿ ರಣವೀರ್ ಸಿಂಗ್ ಅವರ ಕಣ್ಣುಗಳು ಸಹ ಪತ್ನಿ ದೀಪಿಕಾರ ಮೇಲೆ ನಿಂತವು.

Tap to resize

ಈ ಸಮಯದಲ್ಲಿ ರಣವೀರ್ ಸಿಂಗ್‌ ಫಾರ್ಮಲ್‌ ಬಿಳಿ ಸೂಟ್ ಅನ್ನು ಆರಿಸಿಕೊಂಡರೆ, ದೀಪಿಕಾ ಕಸ್ಟಮೈಸ್ ಮಾಡಿದ ಗೌರಿ ಮತ್ತು ನೈನಿಕಾ ಗೌನ್‌ ಧರಿಸಿದ್ದರು. ಸ್ಕೈ ಕಲರ್ ಗೌನ್‌ಗೆ ಅವರ ಹೇರ್ ಸ್ಟೈಲ್, ಆಭರಣ ಎಲ್ಲವೂ ಪೂರಕವಾಗಿತ್ತು.

ಸುಂದರವಾದ ಬಿಳಿ ಹರಳಿಗೆ ಹಸಿರು ಪೆಂಡೆಂಟ್‌ ಹೊಂದಿದ್ದ ನೇಕ್‌ಪೀಸ್‌ ಮತ್ತು ಐ ಮೇಕಪ್‌ನೊಂದಿಗೆ ದೀಪಿಕಾ ಪಡುಕೋಣೆ ತಮ್ಮ ಲುಕ್‌ ಅನ್ನು ಪೂರ್ಣಗೊಳಿಸಿದರು. ನಟಿಯ ಗಾರ್ಜಿಯಸ್‌ ಲುಕ್‌ ಎಲ್ಲರನ್ನು ಬೆರಗುಗೊಳಿಸಿದೆ.
 

ರಣವೀರ್ ಸಿಂಗ್ ತಮ್ಮ ಪತ್ನಿಯನ್ನು ರೆಡ್ ಕಾರ್ಪೆಟ್ ಮೇಲೆ ಸ್ವಾಗತಿಸಿದರು. ಇದರೊಂದಿಗೆ ಈ ಕಪಲ್‌ ಕೈ ಹಿಡಿದುಕೊಂಡು ಕ್ಯಾಮೆರಾ ಮುಂದೆ ಸಾಕಷ್ಟು ಪೋಸ್ ನೀಡಿದ್ದು ಕೂಡ ಕಂಡು ಬಂತು.
 

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ರೋಮ್ಯಾಂಟಿಕ್‌ ' ಕ್ಷಣವನ್ನು 83 ಚಿತ್ರದ ಪ್ರೀಮಿಯರ್ ನೈಟ್‌ನಲ್ಲಿ ನೋಡಲಾಗಿದೆ. ರಣವೀರ್ ದೀಪಿಕಾ ಕೆನ್ನೆಗೆ ಮುತ್ತಿಟ್ಟರು. ಈ ಸಿನಿಮಾದದಲ್ಲಿ ರಣವೀರ್ ಸಿಂಗ್‌  ಕ್ರಿಕೆಟ್‌ ಲೆಜೆಂಡ್‌ ಕಪಿಲ್ ದೇವ್ ಅವರ ಪಾತ್ರದಲ್ಲಿ ಕಾಣಿಸಿಕೊಂಡರೆ, ದೀಪಿಕಾ ಪಡುಕೋಣೆ ಅವರ ಪತ್ನಿ ರೂಮಿ ಭಾಟಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಕಬೀರ್ ಖಾನ್ ನಿರ್ದೇಶನದಲ್ಲಿ ತಯಾರಾಗಿರುವ  83 ಸಿನಿಮಾದಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ, ಪಂಕಜ್ ತ್ರಿಪಾಠಿ, ಆಮಿ ವಿರ್ಕ್, ಸಾಕಿಬ್ ಸಲೀಂ, ಹಾರ್ಡಿ ಸಂಧು, ಬೊಮನ್ ಇರಾನಿ, ಸಾಹಿಲ್ ಖಟ್ಟರ್, ಅಮೃತಾ ಪುರಿ, ತಾಹಿರ್ ರಾಜ್ ಭಾಸಿನ್ ಮತ್ತು ನಿಶಾಂತ್ ದಹಿಯಾ ನಟಿಸಿದ್ದಾರೆ. 

Latest Videos

click me!