ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಿಯಾಂಕಾ ಚೋಪ್ರಾ ಡಾನ್ 2 ಚಿತ್ರೀಕರಣದ ವೇಳೆ ನಡೆದ ಘಟನೆಯೊಂದನ್ನ ಹೇಳಿಕೊಂಡಿದ್ದಾರೆ. ತನ್ನ ಡೈಲಾಗ್‌ಗಳ ಸಾಲುಗಳನ್ನು ನೆನಪಿಸಿಕೊಳ್ಳಲೂ ಆಗದಷ್ಟು ಭಯವಾಯಿತು ಎಂದು ಪ್ರಿಯಾಂಕಾ ಹೇಳಿದ್ದರು. ವಾಸ್ತವವಾಗಿ, ಚಿತ್ರದ ಒಂದು ದೃಶ್ಯದಲ್ಲಿ, ಶಾರುಖ್ ಮತ್ತು ಪ್ರಿಯಾಂಕಾರ ನಡುವಿನ ಹೊಡೆದಾಟದ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದ್ದು, ಪ್ರಿಯಾಂಕಾ ಅವರ ಕುತ್ತಿಗೆಯನ್ನು ಶಾರುಖ್ ಬಿಗಿಯಾಗಿ ಹಿಡಿದಿದ್ದರು.