ಮಿಸ್ ವರ್ಲ್ಡ್‌ನಿಂದ ಫೋರ್ಬ್ಸ್‌ವರೆಗೆ ದೇಶದ ಕೀರ್ತಿ ಹೆಚ್ಚಿಸಿದ ಪ್ರಿಯಾಂಕಾ ಚೋಪ್ರಾ ಸಾಧನೆಗಳು

First Published Jul 18, 2022, 6:42 PM IST

2000ರಲ್ಲಿ ವಿಶ್ವ ಸುಂದರಿ ಕೀರಿಟ ಗೆದ್ದ ಪ್ರಿಯಾಂಕಾ ಚೋಪ್ರಾ (Priyanka Chopra) 2003ರಲ್ಲಿ ಅಕ್ಷಯ್ ಕುಮಾರ್ ಮತ್ತು ಲಾರಾ ದತ್ತಾ ಜೊತೆಗಿನ 'ಅಂದಾಜ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಅವರು ಈ ಹಿಂದೆ ಸೂಪರ್‌ಸ್ಟಾರ್ ವಿಜಯ್ ಜೊತೆ ತಮಿಳು ಚಿತ್ರ 'ತಮಿಜೋನ್' ನಲ್ಲಿ ಮೊದಲ ಬಾರಿಗೆ ನಟಿಸಿದ್ದರು. 2008ರಲ್ಲಿ ‘ಫ್ಯಾಶನ್’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದ ನಂತರ ಪ್ರಿಯಾಂಕಾ ಚೋಪ್ರಾಗೆ ಹಿಂತಿರುಗಿ ನೋಡಲೇ ಇಲ್ಲ. ಇದಾದ ನಂತರ ಹಲವು ವರ್ಷಗಳ ಕಾಲ ಬಾಲಿವುಡ್ ನ ಟಾಪ್ ನಟಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಅವರು 2015 ರಲ್ಲಿ ಅಮೇರಿಕನ್ ಟಿವಿ ಕಾರ್ಯಕ್ರಮಗಳನ್ನು ಮಾಡಿದ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದರು.  ಪ್ರಿಯಾಂಕಾ ಇಂದು ಜಾಗತಿಕ ತಾರೆಯೂ ಆಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ, ಅವರು ಅನೇಕ ಸಂದರ್ಭಗಳಲ್ಲಿ ದೇಶವನ್ನು ಜಾಗತಿಕವಾಗಿ ಪ್ರತಿನಿಧಿಸಿದ್ದಾರೆ. ಜುಲೈ 18 ರಂದು ಪ್ರಿಯಾಂಕಾ ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಪ್ರಿಯಾಂಕಾ ಅವರ ಜೀವನದ ಸಾಧನೆಗಳ ಬಗ್ಗೆ  ಮಾಹಿತಿ ಇಲ್ಲಿದೆ.

 ಫೋರ್ಬ್ಸ್ 100 ರ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಮಹಿಳೆ

2018 ರಲ್ಲಿ 'ಫೋರ್ಬ್ಸ್' 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಿಯಾಂಕಾ ಅವರನ್ನು ಸೇರಿಸಿದಾಗ ಅವರ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ. ಈ ಪಟ್ಟಿಯಲ್ಲಿ ಹೆಸರು ಬಂದ ಮೊದಲ ಭಾರತೀಯ ಮಹಿಳೆ ಮತ್ತು ಇದು ಮಾತ್ರವಲ್ಲ, ಈ ಪಟ್ಟಿಯಲ್ಲಿ ಎರಡು ಬಾರಿ ಕಾಣಿಸಿಕೊಂಡ ಏಕೈಕ ಭಾರತೀಯ ಮಹಿಳೆ.

ವೋಗ್ ಅಮೇರಿಕಾ ಮ್ಯಾಗಜೀನ್‌ನ ಮುಖಪುಟದಲ್ಲಿ ಕಾಣಿಸಿಕೊಂಡ ಭಾರತೀಯ

2018 ರಲ್ಲಿ, ಪ್ರಿಯಾಂಕಾ ವೋಗ್ ಅಮೇರಿಕಾ ನಿಯತಕಾಲಿಕದ ಮುಖಪುಟಕ್ಕೆ ಬಂದ ಮೊದಲ ದಕ್ಷಿಣ ಏಷ್ಯಾದ ವ್ಯಕ್ತಿಯಾಗಿದ್ದಾರೆ. ವೋಗ್ ಇಂಡಿಯಾದ ಮುಖಪುಟದಲ್ಲಿ ಹಲವಾರು ಬಾರಿ ಕಾಣಿಸಿಕೊಂಡ ನಂತರ, ಪ್ರಿಯಾಂಕಾ ನಿಯತಕಾಲಿಕದ ಯುಎಸ್ ಆವೃತ್ತಿಯ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯರಾದರು.

 ಮಾರಾಕೆಚ್ ಉತ್ಸವದಲ್ಲಿ ಗೌರವ ಪಡೆದ ಮೊದಲ ಭಾರತೀಯ ನಟಿ

2019 ರಲ್ಲಿ, ಮೊರಾಕೊದಲ್ಲಿ ನಡೆದ ಮರ್ಕೆಚ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಿಯಾಂಕಾ ಅವರನ್ನು ಗೌರವಿಸಲಾಯಿತು. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಲಿವುಡ್ ನಟ ರಾಬರ್ಟ್ ರೆಡ್‌ಫೋರ್ಟ್ ಅವರೊಂದಿಗೆ ಅವರನ್ನು ಗೌರವಿಸಲಾಯಿತು. ಈ ಗೌರವ ಪಡೆದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಟೊರೊಂಟೊ ಚಲನಚಿತ್ರೋತ್ಸವದ ರಾಯಭಾರಿಯಾದ ಮೊದಲ ಭಾರತೀಯ ನಟಿ

ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಿಯಾಂಕಾ ಬಾಲಿವುಡ್ ಅನ್ನು ಪ್ರತಿನಿಧಿಸಿದ್ದಾರೆ. ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ಆಯ್ಕೆಯಾದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2020 ರಲ್ಲಿ ನಡೆದ ಈ ಉತ್ಸವದ 45 ನೇ ಆವೃತ್ತಿಗೆ ಅವರನ್ನು ವಿಶೇಷವಾಗಿ ಆಹ್ವಾನಿಸಲಾಯಿತು.

 ಮಕ್ಕಳ ಹಕ್ಕುಗಳ ಜಾಗತಿಕ UNICEF ರಾಯಭಾರಿ

2016 ರಲ್ಲಿ, ಪ್ರಿಯಾಂಕಾ ಮಕ್ಕಳ ಹಕ್ಕುಗಳ ಜಾಗತಿಕ ಯುನಿಸೆಫ್ ರಾಯಭಾರಿಯಾದರು. ಇದಕ್ಕೂ ಮೊದಲು 10 ವರ್ಷಗಳ ಕಾಲ ಇದೇ ಸಂಸ್ಥೆಗೆ ರಾಷ್ಟ್ರೀಯ ರಾಯಭಾರಿಯೂ ಆಗಿದ್ದರು.

 ಅತ್ಯುತ್ತಮ ನಟಿಗಾಗಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ನಟಿ

ತನ್ನ ಪ್ರಬಲ ನಟನೆಗಾಗಿ ವಿಶ್ವಾದ್ಯಂತ ಗುರುತಿಸಲ್ಪಟ್ಟ ನಟಿ ಪ್ರಿಯಾಂಕಾ, US ನಲ್ಲಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿಯನ್ನು ಸಹ ಗೆದ್ದರು. ಈ ಪ್ರಶಸ್ತಿಯನ್ನು ದೂರದರ್ಶನ ವಿಭಾಗದಲ್ಲಿ ಅತ್ಯುತ್ತಮ ನಟಿಯಾಗಿ ನೀಡಲಾಯಿತು. ಇದನ್ನು ಗೆದ್ದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಮತ್ತು ಅವರ ಇಂಗ್ಲಿಷ್ ಶೋ 'ಕ್ವಾಂಟಿಕೋ' ಗಾಗಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಬಲ್ಗೇರಿಯ ಜಾಗತಿಕ ರಾಯಭಾರಿಯಾದ ಮೊದಲ ಭಾರತೀಯ ಮಹಿಳೆ

ಪ್ರಿಯಾಂಕಾ ಅವರನ್ನು ಇತ್ತೀಚೆಗೆ ಪ್ರಸಿದ್ಧ ಆಭರಣ ಬ್ರ್ಯಾಂಡ್ ಬಲ್ಗೇರಿ ತನ್ನ ಜಾಗತಿಕ ರಾಯಭಾರಿಯಾಗಿ ಮಾಡಿದೆ. ಈ ಕಂಪನಿಯ ಜಾಗತಿಕ ರಾಯಭಾರಿಯಾದ ಮೊದಲ ಭಾರತೀಯ ಮಹಿಳೆ ಇವರಾಗಿದ್ದಾರೆ.

2000 ವಿಶ್ವ ಸುಂದರಿ ಪ್ರಶಸ್ತಿ
2000ರಲ್ಲಿ ಕೇವಲ 18 ನೇ ವಯಸ್ಸಿನಲ್ಲಿ, ಪ್ರಿಯಾಂಕಾ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ

click me!