ಸಂಪಾದನೆಯಲ್ಲಿ ಬಾಲಿವುಡ್‌ ಟಾಪ್ ನಟಿಯರಿಗಿಂತ ಪ್ರಿಯಾಂಕಾ ಚೋಪ್ರಾ ಮುಂದು

Published : Jul 18, 2022, 05:50 PM IST

ಇಂದು ಅಂದರೆ ಜುಲೈ 18 ರಂದು ನಟಿ ಪ್ರಿಯಾಂಕಾ ಚೋಪ್ರಾ (Priyanaka Chopra) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ದೇಸಿ ಗರ್ಲ್ ಎಂದು ಕರೆಯಲ್ಪಡುವ ಈ ನಟಿ  ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಪ್ರಸ್ತುತ ಅಮೆರಿಕ ಗಾಯಕ ನಿಕ್ ಜೋನಾಸ್ ಅವರನ್ನು ಮದುವೆಯಾದ ನಂತರ ಯುಎಸ್ಎನಲ್ಲಿ ನೆಲೆಸಿದ್ದಾರೆ. ನಿಕ್ ಜೋನಾಸ್ ಜೊತೆಗಿನ ಮದುವೆಯ ನಂತರ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಭೇಟಿ ನೀಡುವುದು ಅಪರೂಪ. ನಿಕ್ ಮತ್ತು ಪ್ರಿಯಾಂಕಾ 2 ಡಿಸೆಂಬರ್ 2018ರಂದು ರಾಜಸ್ಥಾನದ ಉಮೈದ್ ಭವನದಲ್ಲಿ ಅತ್ಯಂತ ಐಷಾರಾಮಿ ರೀತಿಯಲ್ಲಿ ವಿವಾಹವಾದರು. ಪ್ರಿಯಾಂಕಾ ಚೋಪ್ರಾ ಅವರ ನೆಟ್ ವರ್ತ್ ಮತ್ತು ಐಷಾರಾಮಿ ಜೀವನ ಹೇಗಿದೆ  ನೋಡಿ.

PREV
18
ಸಂಪಾದನೆಯಲ್ಲಿ ಬಾಲಿವುಡ್‌ ಟಾಪ್ ನಟಿಯರಿಗಿಂತ ಪ್ರಿಯಾಂಕಾ ಚೋಪ್ರಾ ಮುಂದು

ಪ್ರಿಯಾಂಕಾ ಅವರ ವಿವಾಹವು ರಾಜಮನೆತನದ ರೀತಿಯಲ್ಲಿ ನಡೆಯಿತು. ಇದು ಬಾಲಿವುಡ್‌ನ ಅತ್ಯಂತ ದುಬಾರಿ ವಿವಾಹಗಳಲ್ಲಿ ಒಂದಾಗಿದೆ. ಪ್ರಿಯಾಂಕಾ ಮತ್ತು ನಿಕ್ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯಗಳ ಪ್ರಕಾರ ವಿವಾಹವಾದರು.


 

28

ಪ್ರಿಯಾಂಕಾ ಚೋಪ್ರಾ ತುಂಬಾ ಮಹತ್ವಾಕಾಂಕ್ಷೆಯುಳ್ಳವರು ಮತ್ತು ಅವರು ಎಲ್ಲವನ್ನೂ ಸ್ವಂತವಾಗಿ ಸಾಧಿಸಿದ್ದಾರೆ. ಅವರು ತಮ್ಮ ಜೀವನದಲ್ಲಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. 

38
বলি-সেলেব

ಪ್ರಿಯಾಂಕಾ ತನಗಿಂತ 10 ವರ್ಷ ಕಿರಿಯ ನಿಕ್ ಜೋನಾಸ್ ನನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ತಮ್ಮ ಮದುವೆಗಾಗಿ ಹಣವನ್ನು ನೀರಿನಂತೆ  ಖರ್ಚುಮಾಡಿದ್ದಾರೆ.

48

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಜೊತೆಗೆ ಸುಮಾರು 734 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಚಲನಚಿತ್ರಗಳ ಹೊರತಾಗಿ, ಅವರು ಜಾಹೀರಾತುಗಳು ಮತ್ತು ಸ್ಟೇಜ್ ಶೋ ಮೂಲಕ ದೊಡ್ಡ ಆದಾಯ ಗಳಿಸುತ್ತಾರೆ. ನಟಿ  ಒಂದು ಶೋಗೆ 4 ರಿಂದ 5 ಕೋಟಿ ಚಾರ್ಜ್ ಮಾಡುತ್ತಾರೆ.

58

ವರದಿಯೊಂದರ ಪ್ರಕಾರ, ದೋಸ್ತಾನಾ ಚಿತ್ರದ ನಟಿ ಈ ಕಾಲದ ಟಾಪ್ ನಟಿಯರಾದ ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಐಶ್ವರ್ಯಾ ರೈಗಿಂತ ಆದಾಯದಲ್ಲಿ ಮುಂದಿದ್ದಾರೆ. ಇಷ್ಟು ದಿನಗಳಿಂದ  ಪ್ರಿಯಾಂಕಾ ಚೋಪ್ರಾ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾಗದಿದ್ದರೂ ಅವರ ಗಳಿಕೆ ಮಾತ್ರ ಕಡಿಮೆಯಾಗಿಲ್ಲ. 
 

68

ದೇಸಿ ಗರ್ಲ್ ವಿವಿಧ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ ಗಳಿಸುತ್ತಾರೆ.  ಪ್ರಿಯಾಂಕಾ ಪರ್ಪಲ್ ಪೆಬಲ್ ಪಿಕ್ಚರ್ಸ್ (ಪಿಪಿಪಿ) ಕಂಪನಿಯನ್ನು ಸಹ ಸ್ಥಾಪಿಸಿದ್ದಾರೆ. ಈ ಮೂಲಕ ಕೋಟ್ಯಂತರ ರೂ ಆದಾಯ ಹೊಂದಿದ್ದಾರೆ. ಈ ಕಂಪನಿಯು ಭಾರತದಲ್ಲಿ ವ್ಯವಹಾರವನ್ನು ನೋಡಿಕೊಳ್ಳುತ್ತದೆ.


 

78

ಪ್ರಿಯಾಂಕಾ ಚೋಪ್ರಾ ಭಾರತದ ಮುಂಬೈ ಮತ್ತು ಗೋವಾದಲ್ಲಿ ಐಷಾರಾಮಿ ಬಂಗಲೆಗಳನ್ನು ಹೊಂದಿದ್ದಾರೆ. ಅದೇ ಸಮಯದಲ್ಲಿ, ನಟಿಗೆ ಲಾಸ್ ಏಂಜಲೀನ್‌ನಲ್ಲಿ ಮನೆ ಇದೆ. ಅಲ್ಲಿ ಅವರು ಪತಿ ನಿಕ್ ಜೋನಾಸ್ ಜೊತೆ ವಾಸಿಸುತ್ತಾರೆ.
 

 

 

88

ಪ್ರಿಯಾಂಕಾ ಚೋಪ್ರಾ ಐಷಾರಾಮಿ ಕಾರುಗಳ  ಬಾರೀ ಕಲೆಕ್ಷನ್‌ ಹೊಂದಿದ್ದಾರೆ. Rolls Royal Ghost, Mercedes-Maybach S650, BMW 5-Series, Mercedes S-Class, Mercedes E-Class, Audi Q7 ಮುಂತಾದ ಎಲ್ಲಾ ಐಷಾರಾಮಿ ಕಾರುಗಳ ಓನರ್‌ ಈ ನಟಿ.

Read more Photos on
click me!

Recommended Stories