ಮಂಗಳೂರಿನಲ್ಲಿ 'ಮಿಸ್ ಇಂಡಿಯಾ'; ದುರ್ಗಪರಮೇಶ್ವರಿ ಆಶೀರ್ವಾದ ಪಡೆದ ಸಿನಿ ಶೆಟ್ಟಿ

Published : Jul 18, 2022, 05:52 PM IST

‘ಮಿಸ್‌ ಇಂಡಿಯಾ ವರ್ಲ್ಡ್-2022’ ಕಿರೀಟ ಮುಡಿಗೇರಿಸಿಕೊಂಡಿರುವ ಕರ್ನಾಟಕ ಮೂಲದ ಯುವತಿ ಸಿನಿ ಶೆಟ್ಟಿ ಇಂದು (ಜುಲೈ 18) ಕರ್ನಾಟಕಕ್ಕೆ ಆಗಮಿಸಿದ್ದರು. ಕರಾವಳಿ ಮೂಲದ ಸುಂದರಿ ಸಿನಿ ಶೆಟ್ಟಿ ಇಂದು ಮಂಗಳೂರಿಗೆ ಆಗಮಿಸಿದ್ದಾರೆ. ಮಿಸ್ ಇಂಡಿಯಾ ಕಿರೀಟ್ ಹೊತ್ತು ಬಂದ ಸಿನಿ ಶೆಟ್ಟಿಗೆ ಮಂಗಳೂರು ಜನತೆ ಅದ್ದೂರಿ ಸ್ವಾಗತ ಕೋರಿದರು. 

PREV
17
ಮಂಗಳೂರಿನಲ್ಲಿ 'ಮಿಸ್ ಇಂಡಿಯಾ'; ದುರ್ಗಪರಮೇಶ್ವರಿ ಆಶೀರ್ವಾದ ಪಡೆದ ಸಿನಿ ಶೆಟ್ಟಿ

‘ಮಿಸ್‌ ಇಂಡಿಯಾ ವರ್ಲ್ಡ್-2022’ ಕಿರೀಟ ಮುಡಿಗೇರಿಸಿಕೊಂಡಿರುವ ಕರ್ನಾಟಕ ಮೂಲದ ಯುವತಿ ಸಿನಿ ಶೆಟ್ಟಿ ಇಂದು (ಜುಲೈ 18) ಕರ್ನಾಟಕಕ್ಕೆ ಆಗಮಿಸಿದ್ದರು. ಕರಾವಳಿ ಮೂಲದ ಸುಂದರಿ ಸಿನಿ ಶೆಟ್ಟಿ ಇಂದು ಮಂಗಳೂರಿಗೆ ಆಗಮಿಸಿದ್ದಾರೆ. ಮಿಸ್ ಇಂಡಿಯಾ ಕಿರೀಟ್ ಹೊತ್ತು ಬಂದ ಸಿನಿ ಶೆಟ್ಟಿಗೆ ಮಂಗಳೂರು ಜನತೆ ಅದ್ದೂರಿ ಸ್ವಾಗತ ಕೋರಿದರು. 

27

ಅಂದಹಾಗೆ ಸಿನಿ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಇನ್ನಂಜೆ ಮೂಲದವರು.
ಮಿಸ್ ಇಂಡಿಯಾ ಆದ ಬಳಿಕ ಮೊದಲ ಬಾರಿಗೆ ಸಿನಿ ಶೆಟ್ಟಿ  ಮಂಗಳೂರಿಗೆ ಆಗಮಿಸಿದ್ದಾರೆ. ಹುಟ್ಟೂರಿಗೆ ಬರುತ್ತಿದ್ದಂತೆ ಸಿನಿ ಶೆಟ್ಟಿಗೆ ಅರತಿ‌ ಎತ್ತಿ, ಹೂಮಾಲೆ, ಹೂ ಗುಚ್ಛ ನೀಡಿ‌ ಸ್ವಾಗತ ಕೋರಿದರು. 

37

ಸಿನಿ ಶೆಟ್ಟಿ ಜೆರೆ ಸೀರೆಯಲ್ಲಿ ಧರಿಸಿ ಮಿರಮಿರ ಮಿಂಚುತ್ತಿದ್ದರು. ಮಂಗಳೂರಿಗೆ ಆಗಮಿಸುತ್ತಿದ್ದಂತೆ ಸಿನಿ ಶೆಟ್ಟಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಿನಿ ಶೆಟ್ಟಿ ತುಳುವಿನಲ್ಲೇ  ಕನ್ನಡಿಗರಿಗೆ ಧನ್ಯವಾದ ತಿಳಿಸಿದರು. 

47

ಮಿಸ್ ಇಂಡಿಯಾ ಆಗಿರುವ ಸಿನಿ ಶೆಟ್ಟಿ ಮಿಸ್ ವರ್ಲ್ಡ್ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಇದೇ ಸಮಯದಲ್ಲಿ ಸಿನಿಮಾ ಮಾಡುವುದಾಗಿಯೂ ಹೇಳಿದ್ದಾರೆ. ಒಳ್ಳೆ ಚಿತ್ರಕತೆ ಸಿಕ್ಕಿದ್ರೆ ಸಿನಿಮಾದಲ್ಲಿಯೂ ನಟನೆ ಮಾಡುವುದಾಗಿ ಸಿನಿ ಶೆಟ್ಟಿ ಮಂಗಳೂರಿನಲ್ಲಿ ಹೇಳಿದ್ದಾರೆ.

57

ಬಳಿಕ ಸಿನಿ ಶೆಟ್ಟಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದುರ್ಗಪರಮೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿನಿ ಶೆಟ್ಟಿ ದೇವರ ಆಶೀರ್ವಾದ ಪಡೆದು ಎಲ್ಲಿಂದ ಹೊರಟರು. ಮಿಸ್ ಇಂಡಿಯಾ ಜೊತೆ ಅನೇಕರು ಫೋಟೋ ಕ್ಲಿಕ್ಕಿಸಿಕೊಂಡು ತಂತಸ ಪಟ್ಟರು.

67

ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಸಿನಿ ಶೆಟ್ಟಿ ಮುಂಬೈನಲ್ಲಿ ಜನಿಸಿದವರು. 21 ವರ್ಷದ ಶೆಟ್ಟಿ ಅಕೌಂಟಿಂಗ್ ಮತ್ತು ಫೈನಾನ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 

77

ಸದ್ಯ ಸಿನಿ ಶೆಟ್ಟಿ ವೃತ್ತಿಪರ ಕೋರ್ಸ್ ಮಾಡುತ್ತಿದ್ದಾರೆ. ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ (CFA). ಮಾಡೆಲಿಂಗ್ ಜೊತೆಗೆ ಸಿನಿ ಶೆಟ್ಟಿ ಭರತನಾಟ್ಯ ನೃತ್ಯಗಾರ್ತಿಯೂ ಹೌದು. ಸಿನಿ ಶೆಟ್ಟಿ ನಾಲ್ಕನೇ ವಯಸ್ಸಿನಲ್ಲೇ ನೃತ್ಯ ಮಾಡಲು ಪ್ರಾರಂಭಿಸಿದ್ದು, ಹದಿನಾಲ್ಕು ವರ್ಷದವರಿದ್ದಾಗ ತನ್ನ ಅರಂಗೇತ್ರಂ ಮತ್ತು ಭರತನಾಟ್ಯವನ್ನು ಪೂರ್ಣಗೊಳಿಸಿದರು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories