2011ರಲ್ಲಿ ಸುಶ್ಮಿತಾ ಸೇನ್‌ಗೆ ಲಲಿತ್‌ ಮೋದಿ ಮಾಡಿದ ಸಹಾಯದಿಂದ ಶುರುವಾಗಿತ್ತು ಇಬ್ಬರ ಕೆಮಿಸ್ಟ್ರಿ?

Published : Jul 16, 2022, 05:58 PM IST

ಇತ್ತೀಚೆಗೆ, ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ (Lalit Modi)ಮತ್ತು ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmita Sen) ಅವರ ಕೆಲವು ಫೋಟೋಗಳು ಸಾಮಾಜಿಕ  ಮಾಧ್ಯಮದಲ್ಲಿ ವೈರಲ್ ಆದ ನಂತರ  ಇಬ್ಬರೂ ನ್ಯೂಸ್‌ನಲ್ಲಿದ್ದಾರೆ. ಈ ಫೋಟೋಗಳನ್ನು ಉದ್ಯಮಿ ಲಲಿತ್ ಮೋದಿ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ದಿನಗಳಲ್ಲಿ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದೆಲ್ಲದರ ನಡುವೆ ಸುಶ್ಮಿತಾ ಸೇನ್ ಮಾಡಿರುವ 11 ವರ್ಷದ ಟ್ವೀಟ್‌ನ ಸ್ಕ್ರೀನ್ ಶಾಟ್ ಕೂಡ ವೈರಲ್ ಆಗಿದೆ. ಸುಶ್ಮಿತಾರ ಲಲಿತ್‌ ಅವರು ಮಾಡಿದ ಫೇವರ್‌ ನಂತರ ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ  ಎಂದು ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. 

PREV
15
2011ರಲ್ಲಿ ಸುಶ್ಮಿತಾ ಸೇನ್‌ಗೆ ಲಲಿತ್‌ ಮೋದಿ ಮಾಡಿದ ಸಹಾಯದಿಂದ ಶುರುವಾಗಿತ್ತು ಇಬ್ಬರ ಕೆಮಿಸ್ಟ್ರಿ?

ಲಲಿತ್ ಮೋದಿ ಅವರು 2011 ರಲ್ಲಿ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರ ಟ್ವಿಟರ್ ಹ್ಯಾಂಡಲ್ ಅನ್ನು ವೇರಿಫೈ ಮಾಡಲು ಸಹಾಯ ಮಾಡಿದ್ದರು ಮತ್ತು ಇದರ ನಂತರ ಇಬ್ಬರೂ ಪರಸ್ಪರ ಹತ್ತಿರವಾದರು ಎಂದು ಹೇಳಲಾಗಿದೆ.

25
lalit modi

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಶ್ಮಿತಾ ಮಾಡಿರುವ ಟ್ವೀಟ್ ಕೂಡ ವೈರಲ್ ಆಗುತ್ತಿದೆ. ಸಹಾಯದ  ನಂತರ ಸುಶ್ಮಿತಾ ಅವರು ಲಲಿತ್ ಮೋದಿಗೆ ಧನ್ಯವಾದಗಳನ್ನು  ಹೇಳಿದ್ದಾರೆ. 2011 ರಲ್ಲಿ ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರಿಗೆ ಟ್ವಿಟರ್ ಎಪಿಯಲ್ಲಿ ಬ್ಲೂ ಟಿಕ್ ಪಡೆಯಲು ಸಹಾಯ ಮಾಡಿದರು

35
2011 Lalit Modi helped Sushmita Sen get a blue tick on Twitter

ಜನವರಿ 25, 2011 ರಂದು ಪೋಸ್ಟ್ ಮಾಡಲಾದ ವೈರಲ್ ಟ್ವೀಟ್‌ನಲ್ಲಿ, ಸುಶ್ಮಿತಾ ತನ್ನ ಟ್ವಿಟ್ಟರ್ ಖಾತೆಯನ್ನು ವೇರಿಫೈ ಆಗಿದೆ  ಅಂದರೆ, ತನ್ನ ಬ್ಲೂ ಟಿಕ್ ಪಡೆಯುವುದನ್ನು ಸಂಭ್ರಮಿಸುತ್ತಿದ್ದಾರೆ. ಅದೇ ವೇಳೆ ನೀನಿಲ್ಲದೆ ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ ಎಂದು ಲಲಿತ್ ಮೋದಿಗೆ ಧನ್ಯವಾದ ಹೇಳಿದ್ದಾರೆ ಇದು ಪಾರ್ಟಿ ಸಮಯ ಎಂದು ಬರೆದಿದ್ದಾರೆ.  

45
lalit modi

ಅಂದಹಾಗೆ, ಇದರ ಜೊತೆಗೆ ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಅವರ ಸುಮಾರು 9 ವರ್ಷಗಳ ಹಳೆಯ ಟ್ವೀಟ್ ಕೂಡ ವೈರಲ್ ಆಗುತ್ತಿದೆ.  2013 ರಲ್ಲಿ ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರನ್ನು ಟ್ಯಾಗ್ ಮಾಡಿ , ಸರಿ ನಾನು ಸುಶ್ಮಿತಾ ಸೇನ್ ಅವರನ್ನು ಒಪ್ಪುತ್ತೇನೆ.ನೀವು ದಯಾಮಯಿ. ಪ್ರಾಮಿಸ್‌ಗಳು ಮುರಿಯಲು ಇರುವುದು. ಆದರೆ  ಕಮ್ಮಿಟ್‌ಮೇಟ್‌ಗಳನ್ನು ಪೂರ್ತಿ ಮಾಡಲಾಗುತ್ತದೆ. ಚೀರ್ಸ್, ಲವ್‌ ಎಂದು ಟ್ವೀಟ್‌ ಮಾಡಿದ್ದರು ಮತ್ತು ಅದಕ್ಕೆ ಸುಶ್ಮಿತಾ ಸ್ಮೈಲಿ ಎಮೋಜಿ ಮೂಲಕ ಉತ್ತರಿಸಿದ್ದರು.

55

ಇದರ ನಂತರ  ಮತ್ತೊಮ್ಮೆ ಲಲಿತ್ ನನ್ನ SMS ಗೆ ಉತ್ತರಿಸಿ ಎಂದು ಸುಶ್ಮಿತಾರನ್ನು ಟ್ಯಾಗ್‌ ಮಾಡಿ ಮಾಡಿದ ಟ್ವೀಟ್‌ ಸಹ ಸಖತ್‌ ವೈರಲ್‌ ಆಗಿದೆ. ಈ  ಟ್ವೀಟ್‌ ಸಂಭಾಷಣೆಯನ್ನು ನೋಡಿದ ನಂತ ನೆಟ್ಟಿಗ್ಗರು ಇವರಿಬ್ಬರ ನಟುವೆ 11 ವರ್ಷಗಳಿಂದ ಏನೋ ನಡೆಯುತ್ತಿದೆ ಎಂದು ಗೆಸ್‌ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories