ಗರ್ಲ್‌ಫ್ರೆಂಡ್ ಜೊತೆ ಲಂಡನ್ ಕ್ಲಬ್‌ನಲ್ಲಿ ಹೃತಿಕ್ ರೋಷನ್ ಮಸ್ತ್ ಮಜಾ; ಫೋಟೋ ವೈರಲ್

Published : Jul 16, 2022, 04:14 PM IST

ಹೃತಿಕ್ ರೋಷನ್ ಪತ್ನಿಯಿಂದ ದೂರ ಆದ ಬಳಿಕ ಮತ್ತೋರ್ವ ಯುವತಿಯ ಜೊತೆ ಡೇಟಿಂಗ್ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹೌದು ಹೃತಿಕ್ ರೋಷನ್ ಕಳೆದೊಂದು ವರ್ಷದಿಂದ ಸಬಾ ಅಜಾದ್ ಜೊತೆ ಪ್ರೀತಿಯಲ್ಲಿದ್ದಾರೆ. ಕದ್ದು ಮುಚ್ಚಿ ಓಡಾಡುತ್ತಿದ್ದ ಹೃತಿಕ್ ಜೋಡಿ ಇದೀಗ ರಾಜಾರೋಷವಾಗಿ ಸುತ್ತಾಡುತ್ತಿದ್ದಾರೆ.

PREV
16
ಗರ್ಲ್‌ಫ್ರೆಂಡ್ ಜೊತೆ ಲಂಡನ್ ಕ್ಲಬ್‌ನಲ್ಲಿ ಹೃತಿಕ್ ರೋಷನ್ ಮಸ್ತ್ ಮಜಾ; ಫೋಟೋ ವೈರಲ್

ಹೃತಿಕ್ ರೋಷನ್ ಪತ್ನಿಯಿಂದ ದೂರ ಆದ ಬಳಿಕ ಮತ್ತೋರ್ವ ಯುವತಿಯ ಜೊತೆ ಡೇಟಿಂಗ್ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹೌದು ಹೃತಿಕ್ ರೋಷನ್ ಕಳೆದೊಂದು ವರ್ಷದಿಂದ ಸಬಾ ಅಜಾದ್ ಜೊತೆ ಪ್ರೀತಿಯಲ್ಲಿದ್ದಾರೆ. ಕದ್ದು ಮುಚ್ಚಿ ಓಡಾಡುತ್ತಿದ್ದ ಹೃತಿಕ್ ಜೋಡಿ ಇದೀಗ ರಾಜಾರೋಷವಾಗಿ ಸುತ್ತಾಡುತ್ತಿದ್ದಾರೆ.

26

ಫಾರಿನ್, ಪಬ್, ಮೋಜು, ಮಸ್ತಿ ಅಂತಿರುವ ಸಬಾ ಆಜಾದ್ ಮತ್ತು ಹೃತಿಕ್ ರೋಷನ್ ಜೋಡಿ ಇದೀಗ ಲಂಡನ್ ಗೆ ಹಾರಿದೆ. ಈ ಲವ್ ಬರ್ಡ್ಸ್ ಈಗ ಲಂಡನ್‌ನಲ್ಲಿ ಉತ್ತಮ ಸಮಯ ಕಳೆಯುತ್ತಿದ್ದಾರೆ. ಹೃತಿಕ್ ಮತ್ತು ಸಬಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 
 
36

ಲಂಡನ್ ಕ್ಲಬ್‌ನಲ್ಲಿ ಬಾಲಿವುಡ್ ಲವ್ ಬರ್ಡ್ಸ್ ಮಸ್ತ್ ಎಂಜಾಯ್ ಮಾಡಿದ್ದಾರೆ. ಹೃತಿಕ್ ರೋಷನ್ ಇತ್ತೀಚಿಗೆ ಸಬಾ ಜೊತೆ ಹೆಚ್ಚು ಕಾಲಕಳೆಯುತ್ತಿದ್ದಾರೆ. ಆಗಾಗ ಪ್ರವಾಸ ಅಂತ ವಿದೇಶಕ್ಕೆ ಹಾರುತ್ತಿರುತ್ತಾರೆ. ಜೊತೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. 

46

ಅಂದಹಾಗೆ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಅವರು ಸ್ನೇಹಿತರ ಮೂಲಕ ಭೇಟಿಯಾದರು ಎನ್ನಲಾಗುತ್ತಿದೆ. ಹೃತಿಕ್ ರೋಷನ್ ಮತ್ತು ಸಬಾ ಮೊದಲು ಒಬ್ಬರನ್ನೊಬ್ಬರು ಇಂಡೀ ಮ್ಯೂಸಿಕ್‌ನ  ಕಾಮನ್‌ ಫ್ರೆಂಡ್‌ ಮೂಲಕ ಭೇಟಿಯಾದರು. ಅವರ ಮೊದಲ ಭೇಟಿಯ ನಂತರ, ಹೃತಿಕ್ ಮತ್ತು ಸಬಾ ಅವರು ಸಂಪರ್ಕದಲ್ಲಿದ್ದರು, ಬಳಿಕ ಇಬ್ಬರ ನಡುವೆ ಪ್ರೀತಿ ಪ್ರಾರಂಭವಾಗಿದೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

56

ಹೃತಿಕ್ ಗರ್ಲ್ ಫ್ರೆಂಡ್ ಸಬಾ ಆಜಾದ್ ಅದ್ಭುತ ಗಾಯಕಿ. ಅವರು ಜನಪ್ರಿಯ ಬ್ಯಾಂಡ್ ಮ್ಯಾಡ್‌ಬಾಯ್/ಮಿಂಕ್‌ನ ಭಾಗವಾಗಿದ್ದಾರೆ ಮತ್ತು ದಿ ಬಾರ್ಟೆಂಡರ್ಸ್‌ನೊಂದಿಗೆ ಸಹ ಸಂಬಂಧ ಹೊಂದಿದ್ದಾರೆ. ಮುಂಬೈ ಹಾಗೂ ದೇಶ-ವಿದೇಶಗಳಲ್ಲಿ ಶೋಗಳನ್ನು ಕೊಡುತ್ತಾರೆ. 

66

ಹೃತಿಕ್ ರೋಷನ್  ಅವರ ಮಾಜಿ ಪತ್ನಿ ಸುಸೇನ್‌ ಖಾನ್ ಮತ್ತು ಸಬಾ ಆಜಾದ್ ಇಬ್ರು ಸ್ನೇಹಿತರು. ಸುಸೇನ್ ್ಖಾನ್ ಕೂಡ ಸಬಾ ಅವರ ಅಭಿಮಾನಿ. ಅವರ ಗಾಯನದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
 
Read more Photos on
click me!

Recommended Stories