ಬಾನಗಡಿ ದಾಟಿದ ಬಂಗಾರ ದರ: 100 ಗ್ರಾಂಗೆ 11 ಲಕ್ಷದ ಗಡಿ ದಾಟಿದ ಚಿನ್ನ

Published : Sep 09, 2025, 11:42 AM IST

ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಭಾರಿ ಏರಿಕೆ ಆಗಿದೆ. ದೇಶದ ಪ್ರಮುಖ ಮಹಾನಗರಗಳಲ್ಲಿ ಇಂದಿನ ಬಂಗಾರದ ದರದ ವಿವರ ಇಲ್ಲಿದೆ.

PREV
17
ಚಿನ್ನದ ದರ ಹೇಗಿದೆ?

ಕೆಲ ದಿನಗಳಿಂದ ಚಿನ್ನದ ದರದಲ್ಲಿ ಏರಿಳಿತವಾಗುತ್ತಲೇ ಇದ್ದು, ಬಹುತೇಕರು ಚಿನ್ನವನ್ನು ಆಭರಣಕ್ಕಿಂತ ಹೆಚ್ಚು ಆಸ್ತಿ ಎಂದು ಪರಿಗಣಿಸಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.ಇದರ ಜೊತೆಗೆ ಚಿನ್ನದ ಬೆಲೆ ಬಹುತೇಕ ಭಾರತೀಯ ಷೇರು ಮಾರುಕಟ್ಟೆ ಮೇಲೆ ಅವಲಂಬಿತವಾಗಿರುವುದು ಮತ್ತೊಂದು ಕಾರಣ. ಅಮೆರಿಕಾದ ತೆರಿಗೆ ನೀತಿಯಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಹಳ ಏರಿಳಿತವಾಗುತ್ತಿದ್ದು, ಮಾರುಕಟ್ಟೆ ಕುಸಿತ ಕಾಣುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತದೆ. ಹಾಗಿದ್ದರೆ ಇಂದಿನ ಚಿನ್ನಾಭರಣಗಳ ದರ ವಿವಿಧ ನಗರಗಳಲ್ಲಿ ಹೇಗಿದೆ ಅಂತ ನೋಡೋಣ.

27
ಚಿನ್ನದ ದರ ಇಂದು ಹೇಗಿದೆ

ವಿವಿಧ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 24 ಹಾಗೂ 22 ಕ್ಯಾರೆಟ್ ಚಿನ್ನದ ದರ ಇಂದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ ನಿನ್ನೆಗಿಂತ ಏರಿಕೆಯಾಗಿದೆ. ಗ್ರಾಂ ಗೆ 11,029 ರೂಪಾಯಿ ಇದೆ. ಹಾಗೆಯೇ 22 ಕ್ಯಾರೆಟ್ ಚಿನ್ನದ 10,110 ಹಾಗೆಯೇ 18 ಕ್ಯಾರೆಟ್ ಚಿನ್ನದ ದರ 8,272 ಇದೆ.

37
24 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 11,029 ರೂಪಾಯಿ (ನಿನ್ನೆಗಿಂತ 136 ರೂಪಾಯಿ ಏರಿಕೆ)

8 ಗ್ರಾಂ ಚಿನ್ನದ ದರ 88,232 ರೂಪಾಯಿ ( ನಿನ್ನೆಗಿಂತ 1,088 ರೂಪಾಯಿ ಏರಿಕೆ)

10 ಗ್ರಾಂ ಚಿನ್ನದ ದರ 1,10,290 ರೂಪಾಯಿ (ನಿನ್ನೆಗಿಂತ 1,360 ರೂಪಾಯಿ ಏರಿಕೆ)

100 ಗ್ರಾಂ ಚಿನ್ನದ ದರ 11,02,900 ರೂಪಾಯಿ (ನಿನ್ನೆಗಿಂತ 13,600 ರೂಪಾಯಿ ಏರಿಕೆ)

47
22 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 10,110 ರೂಪಾಯಿ (ನಿನ್ನೆಗಿಂತ 125 ರೂಪಾಯಿ ಏರಿಕೆ)

8 ಗ್ರಾಂ ಚಿನ್ನದ ದರ 80,880 ರೂಪಾಯಿ (ನಿನ್ನೆಗಿಂತ 1,000 ರೂಪಾಯಿ ಏರಿಕೆ)

10 ಗ್ರಾಂ ಚಿನ್ನದ ದರ 1,01,100 ರೂಪಾಯಿ (ನಿನ್ನೆಗಿಂತ 1,250 ರೂಪಾಯಿ ಏರಿಕೆ)

100 ಗ್ರಾಂ ಚಿನ್ನದ ದರ 10,11,000 ರೂಪಾಯಿ (ನಿನ್ನೆಗಿಂತ 12,500 ರೂಪಾಯಿ ಏರಿಕೆ)

57
18 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 8,272 ರೂಪಾಯಿ (ನಿನ್ನೆಗಿಂತ 102 ರೂಪಾಯಿ ಏರಿಕೆ)

8 ಗ್ರಾಂ ಚಿನ್ನದ ದರ 66,176 ರೂಪಾಯಿ (ನಿನ್ನೆಗಿಂತ 816 ರೂಪಾಯಿ ಏರಿಕೆ)

10 ಗ್ರಾಂ ಚಿನ್ನದ ದರ 82,720 ರೂಪಾಯಿ (ನಿನ್ನೆಗಿಂತ 1,020 ರೂಪಾಯಿ ಏರಿಕೆ)

100 ಗ್ರಾಂ ಚಿನ್ನದ ದರ 8,27,200 ರೂಪಾಯಿ (ನಿನ್ನೆಗಿಂತ 10,200 ರೂಪಾಯಿ ಏರಿಕೆ)

67
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 1,01,500 ರೂಪಾಯಿ, ಮುಂಬೈ: 1,01,100 ರೂಪಾಯಿ, ದೆಹಲಿ: 1,01,250 ರೂಪಾಯಿ, ಬೆಂಗಳೂರು: 1,01,100 ರೂಪಾಯಿ, ಅಹಮದಾಬಾದ್: 1,01,150 ರೂಪಾಯಿ, ಕೋಲ್ಕತ್ತಾ: 101100 ರೂಪಾಯಿ, ಹೈದರಾಬಾದ್‌: 1,01,100 ರೂಪಾಯಿ, ವಡೋದರಾ: 1,01,150 ರೂಪಾಯಿ

77
ದೇಶದಲ್ಲಿಂದು ಬೆಳ್ಳಿ ಬೆಲೆ

ಚಿನ್ನದ ಜೊತೆಯಲ್ಲಿ ಬೆಳ್ಳಿ ದರದಲ್ಲೂ ಇಳಿಕೆ ಆಗಿದೆ. ಇಂದಿನ ದರ ಎಷ್ಟಿದೆ ಎಂದು ನೋಡೋಣ ಬನ್ನಿ

10 ಗ್ರಾಂ: 1,300 ರೂಪಾಯಿ

100 ಗ್ರಾಂ: 13,000 ರೂಪಾಯಿ

1000 ಗ್ರಾಂ: 1,30,000 ರೂಪಾಯಿ

ಇದನ್ನೂ ಓದಿ: ಕದ್ದು ತಿನ್ನುತ್ತಿರುವಾಗಲೇ ಟೀಚರ್ ಕೈಗೆ ಸಿಕ್ಕಿಬಿದ್ದ ಪುಟಾಣಿ: ವೀಡಿಯೋ ಭಾರಿ ವೈರಲ್

ಇದನ್ನೂ ಓದಿ: 19 ಜನರ ಬಲಿಪಡೆದ ನಂತರ ಸೋಶಿಯಲ್ ಮೀಡಿಯಾ ಮೇಲಿನ ನಿಷೇಧ ಹಿಂಪಡೆದ ನೇಪಾಳ

ಇದನ್ನೂ ಓದಿ: ಪೋಷಕರು ಮನೆಯಲ್ಲಿಲ್ಲದ ವೇಳೆ ದುರಂತ: ಲೋಡೆಡ್ ಗನ್‌ ಜೊತೆ ಆಟ, ಟ್ರಿಗರ್ ಒತ್ತಿದ ಬಾಲಕ ಸಾವು

Read more Photos on
click me!

Recommended Stories