Food And Health: ಸೀಸನಲ್ ಫುಡ್ ಯಾಕೆ ಸೇವಿಸಬೇಕು ?

By Suvarna News  |  First Published Jan 19, 2022, 5:38 PM IST

ಆಹಾರ (Food)ದ ವಿಷಯ ಬಂದಾಗ ಎಲ್ಲರೂ ಸ್ಪಲ್ಪ ಮಟ್ಟಿಗೆ ಚ್ಯೂಸಿಯಾಗಿರುತ್ತಾರೆ. ಸಿಹಿ (Sweet) ಇಷ್ಟ, ಖಾರ ಇಷ್ಟ ಹೀಗೆ ಅಭಿರುಚಿಗಳು ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಾಗಿರುತ್ತದೆ. ಆದರೆ ರುಚಿ ಹೇಗಿದ್ದರೂ ಸೀಸನಲ್ ಫುಡ್ ದಿ ಬೆಸ್ಟ್ ಅಂತಾರೆ ಪೌಷ್ಟಿಕ ತಜ್ಞರು. ಹಾಗಿದ್ರೆ ಸೀಸನಲ್ ಫುಡ್ (Seasonal Food) ಎಂದರೇನು ?


ಆರೋಗ್ಯ (Health) ಮತ್ತು ಆಹಾರಕ್ಕೆ ಅವಿನಾವಭಾವ ಸಂಬಂಧವಿದೆ. ಆಹಾರ ಉತ್ತಮವಾಗಿದ್ದಾಗ ಆರೋಗ್ಯವೂ ಉತ್ತಮವಾಗಿರುತ್ತದೆ. ಹೀಗಾಗಿ ಆಯಾ ಕಾಲಕ್ಕೆ ತಕ್ಕಂತೆ ಸಿಗುವ ಆಹಾರವನ್ನು ಸೇವಿಸುವುದು ಸಹ ಮುಖ್ಯವಾಗುತ್ತದೆ. ವೈದ್ಯರು, ಪೌಷ್ಟಿಕತಜ್ಞರು, ಅಥವಾ ಎಲ್ಲಾ ಆರೋಗ್ಯ ತಜ್ಞರು ಆಹಾರದಲ್ಲಿ ಹೆಚ್ಚು ಹೆಚ್ಚು ಕಾಲೋಚಿತ ಆಹಾರವನ್ನು ಸೇವಿಸುವಂತೆ ಪ್ರೋತ್ಸಾಹಿಸುತ್ತಾರೆ. ಅದು ಹಣ್ಣುಗಳು ಆಗಿರಲಿ ಅಥವಾ ತರಕಾರಿಗಳೇ ಆಗಿರಲಿ. ನಿರ್ಧಿಷ್ಟ ಕಾಲದಲ್ಲಿ ಲಭ್ಯವಾಗುವ ಆಹಾರಗಳು ತಾಜಾವಾಗಿರುವುದು ಮಾತ್ರವಲ್ಲದೆ ಪೌಷ್ಟಿಕಾಂಶದ ವಿಷಯದಲ್ಲಿ ದಟ್ಟವಾಗಿರುತ್ತದೆ ಎಂದು ಆಹಾರತಜ್ಞರು ತಿಳಿಸುತ್ತಾರೆ. 

ಇತ್ತೀಚಿನ ದಿನಗಳಲ್ಲಿ, ಬಹುತೇಕ ಎಲ್ಲಾ ರೀತಿಯ ಆಹಾರಗಳು ವರ್ಷವಿಡೀ ಲಭ್ಯವಾಗುತ್ತವೆ. ಯಾಕೆಂದರೆ ಈಗ ಕೋಲ್ಡ್ ಸ್ಟೋರೇಜ್ ಎಂಥಹಾ ಆಹಾರವನ್ನೂ ತಾಜಾವಾಗಿ ಇರುವಂತೆ ಶೇಖರಿಸಿ ಇಡಲು ಸಾಧ್ಯವಾಗುತ್ತದೆ. ಆದರೆ ಈ ರೀತಿಯ ಆಹಾರದಲ್ಲಿ ದೇಹಕ್ಕೆ ಅಗತ್ಯವಾದ ಸತ್ವವಿರುವುದಿಲ್ಲ. ನಿರ್ಧಿಷ್ಟ ಆಹಾರವನ್ನು ಬೆಳೆಯುವ ಕಾಲದಲ್ಲಿ ಅಲ್ಲದೆ ಇತರ ಕಾಲದಲ್ಲೂ ದೊರಕುವ ಆಹಾರ ಆರೋಗ್ಯಕ್ಕೆ ಉತ್ತಮವಲ್ಲ. 

Latest Videos

undefined

ಪ್ರತಿಯೊಂದು ಕಾಲದಲ್ಲಿ ದೊರಕುವ ತಾಜಾ ತರಕಾರಿಗಳು, ಹಣ್ಣುಗಳು (Fruits) ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊ ನ್ಯೂಟ್ರಿಯೆಂಟ್‌ಗಳಲ್ಲಿ ಸಮೃದ್ಧವಾಗಿರುತ್ತದೆ ಎಂದು ಲವ್‌ಲೈಫ್ ಆಸ್ಪತ್ರೆಯ ಡಾ.ರಾಜ್ಯಲಕ್ಷ್ಮಿ ದೇವಿ ವಿವರಿಸುತ್ತಾರೆ. ಇದಲ್ಲದೆ, ಋತುಮಾನದ ಆಹಾರವನ್ನು ಸೇವಿಸುವ ವಿವಿಧ ಪ್ರಯೋಜನಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

Health Tips: ಕುಕ್ಕರ್‌ನಲ್ಲಿ ಬೇಯಿಸಿದ ಅನ್ನವನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದಾ ?

ಹೆಚ್ಚು ಪೌಷ್ಟಿಕಾಂಶವಿರುತ್ತದೆ
ನೈಸರ್ಗಿಕವಾಗಿ ಹಣ್ಣಾಗುವ ಹಣ್ಣುಗಳು ಮತ್ತು ತರಕಾರಿಗಳು ಉತ್ತಮ ರುಚಿಯನ್ನು ಹೊಂದಿರುತ್ತವೆ ಮತ್ತು ತಾಜಾ ಆಗಿರುತ್ತವೆ. ಸಂರಕ್ಷಿಸಲ್ಪಟ್ಟ ಹಣ್ಣು, ತರಕಾರಿಗಳಿಗೆ ಹೋಲಿಸಿದರೆ ಸೀಸನಲ್ ಫುಡ್ ಹೆಚ್ಚಿನ ಪ್ರಮಾಣದ ಪ್ರೋಟೀನ್‌ (Protein)ಗಳನ್ನು ಹೊಂದಿದೆ. 

ಸೀಸನಲ್ ಫುಡ್ ಅಗ್ಗವಾಗಿದೆ
ಕಾಲೋಚಿತವಾಗಿ ಉತ್ಪಾದಿಸುವ ಬೆಳೆಗಳು ಅಗ್ಗವಾಗಿರುತ್ತವೆ. ಯಾಕೆಂದರೆ ಇದನ್ನು ರೈತರು ದೊಡ್ಡ ಪ್ರಮಾಣದಲ್ಲಿ ಕೊಯ್ಲು ಮಾಡುತ್ತಾರೆ. ಹೀಗಾಗಿ ಇದನ್ನು ರಾಶಿ ರಾಶಿಯಾಗಿ, ಬಂಡಲ್ ಆಗಿ ಮಾರಾಟ ಮಾಡಲಾಗುತ್ತದೆ. ಕೋಲ್ಡ್ ಸ್ಟೋರೇಜ್‌ನಲ್ಲಿ ಶೇಖರಿಸಿಟ್ಟ ಆಹಾರವು ಯಾವುದೇ ಸಂದರ್ಭದಲ್ಲಿ ಖರೀದಿಸಿದಾಗಲೂ ಬೆಲೆ ಹೆಚ್ಚಾಗಿರುತ್ತದೆ. ಅದರಲ್ಲೂ ಆಫ್-ಸೀಸನ್‌ನಲ್ಲಿ ಇದರ ಬೆಲೆ ಬೇಕಾಬಿಟ್ಟಿಯಾಗಿ ಹೆಚ್ಚು ಮಾಡಿಡುತ್ತಾರೆ. 

Table Manners: ಊಟ ಮಾಡೋಕೂ ರೀತಿ ನೀತಿ ಉಂಟು!

ಹೆಚ್ಚು ರುಚಿಯನ್ನು ಹೊಂದಿದೆ
ನಿರ್ದಿಷ್ಟ ಋತುವಿನಲ್ಲಿ ಉತ್ಪತ್ತಿಯಾಗುವ ಆಹಾರವು ತಾಜಾವಾಗಿರುವುದರಿಂದ ಹೆಚ್ಚು ರುಚಿಯಾಗಿರುತ್ತದೆ. ಸಂಪೂರ್ಣವಾಗಿ ಹಣ್ಣಾದ ಕಾರಣ ಹಣ್ಣುಗಳು ಸಿಹಿಯಾಗಿರುತ್ತವೆ. ಉಳಿದ ಕಾಲದಲ್ಲಿ ಲಭ್ಯವಾಗುವ ಹಣ್ಣುಗಳು ಹುಳಿ, ಸಿಹಿ ಮೊದಲಾದ ರುಚಿ ವ್ಯತ್ಯಾಸವನ್ನು ನೋಡಬಹುದು. ಹಣ್ಣುಗಳು ಮತ್ತು ತರಕಾರಿಗಳನ್ನು ಸರಿಯಾದ ಸಮಯದಲ್ಲಿ ಕೊಯ್ಲು ಮಾಡಿದಾಗ, ಅವು ಹೆಚ್ಚು ಪರಿಮಳದಿಂದ ಕೂಡಿರುತ್ತವೆ.

ರಾಸಾಯನಿಕ ಸಿಂಪಡಣೆಯಿಲ್ಲದೆ ಬೆಳೆಯುವ ಆಹಾರ
ಸೀಸನಲ್ ಆಗಿ ಸಿಗುವ ಹಣ್ಣು, ತರಕಾರಿ (Vegetables)ಗಳನ್ನು ಸಾಮಾನ್ಯವಾಗಿ ಹೆಚ್ಚು ರಾಸಾಯನಿಕ ಸಿಂಪಡಣೆಯಿಲ್ಲದೆ ಬೆಳೆಸಿರುತ್ತಾರೆ. ಉಳಿದ ಕಾಲಗಳಂತೆ ಬೇಗನೇ ಕಾಯಿಯಾಗಿ, ಹಣ್ಣಾಗಿ ಮಾರುಕಟ್ಟೆಯಲ್ಲಿ ಮಾರಬೇಕೆಂಬ ಧಾವಂತವಿರುವುದಿಲ್ಲ. ಬೀಜ ಹಾಕಿ, ಅದು ಕಾಲಕ್ಕನುಸರಿಸಿ ಹೂ ಬಿಟ್ಟು, ಕಾಯಿಯಾಗಿ ಹಣ್ಣಾದ ನಂತರವೇ ಮಾರುಕಟ್ಟೆಗೆ ತಂದು ಮಾರಲಾಗುತ್ತದೆ.

ಯಾವಾಗಲೂ ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳನ್ನು ಆರಿಸಿಕೊಳ್ಳಿ. ಯಾಕೆಂದರೆ ಅದು ಚಳಿಗಾಲ, ಮಳೆಗಾಲ ಅಥವಾ ಬೇಸಗೆ ಕಾಲ ಯಾವುದೇ ಆಗಿರಲಿ. ಕಾಲೋಚಿತವಾಗಿ ಬೆಳೆಯುವ ಆಹಾರಗಳಲ್ಲಿ ಕಾಲಕ್ಕೆ ತಕ್ಕಂತೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಿರುತ್ತವೆ ಎಂದು ಋತುಮಾನದ ಪಾಕಪದ್ಧತಿಯನ್ನು ಉತ್ತೇಜಿಸುವ ಬಾಣಸಿಗ ಕುನಾಲ್ ಕಪೂರ್ ಹೇಳುತ್ತಾರೆ. ಯಾವ ಕಾಲದಲ್ಲಾದರೂ ಈ ಹಣ್ಣು, ತರಕಾರಿಗಳು ಹಲವಾರು ಕೈಗಳನ್ನು ಸೇರಿ ನಿಮ್ಮ ಮನೆಗೆ ತಲುಪುವ ಕಾರಣ ಇದನ್ನು ಚೆನ್ನಾಗಿ ತೊಳೆದು ಬಳಸುವುದನ್ನು ಮರೆಯದಿರಿ. ಸಂಪೂರ್ಣವಾಗಿ ತೊಳೆದು ಬಳಸಿದಾಗ ಮಾತ್ರ ಸೀಸನಲ್ ಫುಡ್‌ಗಳು ಸಹ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. 

click me!