ಅಬ್ಬಬ್ಬಾ..ಒಂದು ಕೆಜಿ ಆಲೂಗಡ್ಡೆ ಬೆಲೆ ಇಷ್ಟೊಂದಾ? ಆ ದುಡ್ಡಲ್ಲಿ ಐಫೋನ್‌ ಖರೀದಿಸ್ಬೋದು!

By Vinutha Perla  |  First Published Apr 14, 2023, 11:32 AM IST

ಆಲೂಗಡ್ಡೆ ಪ್ರಪಂಚದಾದ್ಯಂತ ಬಳಸೋ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ರುಚಿಕರ ಮತ್ತು ಬೆಲೆಯೂ ಕಡಿಮೆಯಾಗಿರೋ ಕಾರಣ ಅಡುಗೆಮನೆಯಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸ್ತಾರೆ. ಆದ್ರೆ ಇಲ್ಲೊಂದು ಡಿಫರೆಂಟ್ ಆಲೂಗಡ್ಡೆಯಿದೆ. ಇದರ ಬೆಲೆ ಗೊತ್ತಾದ್ರೆ ನೀವು ಬೆಚ್ಚಿಬೀಳೋದು ಖಂಡಿತ.  


ಆಲೂಗಡ್ಡೆ, ಅಡುಗೆಮನೆಯಲ್ಲಿ ಬಳಕೆಯಾಗುವ ಪ್ರಮುಖ ತರಕಾರಿಗಳಲ್ಲಿ ಒಂದಾಗಿದೆ. ಸಾಂಬಾರು, ಪಲ್ಯ, ಬೋಂಡಾ, ಸಾಗು ಹೀಗೆ ಹಲವು ಅಡುಗೆಗಳನ್ನು ತಯಾರಿಸಲು ಆಲೂಗಡ್ಡೆಯನ್ನು ಬಳಸುತ್ತಾರೆ. ಪಲಾವ್‌, ಬಿರಿಯಾನಿ ಹೀಗೆ ಹಲವು ರೆಸಿಪಿಗಳಿಗೆ ಆಲೂಗಡ್ಡೆ ಹಾಕಿದರೆ ರುಚಿ ಹೆಚ್ಚುತ್ತದೆ. ಆಲೂಗಡ್ಡೆಯನ್ನು ಹೀಗೆ ವ್ಯಾಪಕವಾಗಿ ಬಳಸಲು ಕಾರಣವೆಂದರೆ ಅದರ ಅಗ್ಗದ ದರ. ಕಡಿಮೆ ಬೆಲೆಗೆ ಹೆಚ್ಚು ಆಲೂಗಡ್ಡೆ ದೊರಕುವ ಕಾರಣ ಹೆಚ್ಚು ಬಳಕೆ ಮಾಡಲಾಗುತ್ತದೆ. ಆಲೂಗಡ್ಡೆ ಬೆಲೆ ಸಾಮಾನ್ಯವಾಗಿ ಮೂವತ್ತು, ನಲವತ್ತು, ಐವತ್ತು ರೂಪಾಯಿಯ ಒಳಗಡೆ ಇರುತ್ತದೆ. ಆದ್ರೆ ಇಲ್ಲೊಂದೆಡೆ ಕಾಸ್ಟ್ಲೀಯೆಸ್ಟ್ ಆಲೂಗಡ್ಡೆಯಿದೆ. ಇದರ ಬೆಲೆ ಗೊತ್ತಾದ್ರೆ ನೀವು ಬೆಚ್ಚಿಬೀಳೋದು ಖಂಡಿತ. 

ಹೌದು, ಇದು ಕಾಸ್ಟ್ಲೀಯೆಸ್ಟ್ ಆಲೂಗಡ್ಡೆ (Potato). ಇದರ ಹೆಸರು ಲಾ ಬೊನೊಟ್. ಇದು ಪ್ರತಿ ಕೆಜಿಗೆ 40,000-50,000 ರೂಪಾಯಿಗೆ ಮಾರಾಟ (Sale)ವಾಗುತ್ತದೆ. ಈ ಆಲೂಗಡ್ಡೆಯ ವಿಶೇಷತೆ ಅಂದ್ರೆ ವರ್ಷಕ್ಕೆ 10 ದಿನಗಳ ವರೆಗೆ ಮಾತ್ರ ಈ ವಿಶೇಷ ಆಲೂಗಡ್ಡೆ ಕಂಡುಬರುತ್ತದೆ. 50 ಚದರ ಮೀಟರ್ ಭೂಮಿಯಲ್ಲಿ ಮಾತ್ರ ಇದನ್ನು ಬೆಳೆಸಲಾಗುತ್ತದೆ. ಆಲೂಗೆಡ್ಡೆಯ ಈ ರೂಪಾಂತರವನ್ನು ಫ್ರಾನ್ಸ್ ನ ಐಲ್ ಡಿ ನೊಯಿರ್ಮೌಟಿಯರ್ ಎಂಬ ದ್ವೀಪದಲ್ಲಿ ಬೆಳೆಯಲಾಗುತ್ತದೆ. 

Tap to resize

Latest Videos

ವಿಶ್ವದ ಅತ್ಯಂತ ದುಬಾರಿ ತರಕಾರಿಯಿದು, ಈ ಬೆಲೆಗೆ ಕಾಸ್ಟ್ಲೀ ಬೈಕನ್ನೇ ಖರೀದಿಸ್ಬೋದು!

ಮರುಭೂಮಿಯಲ್ಲಿ ಬೆಳೆಯುವ ಅಪರೂಪದ ಆಲೂಗಡ್ಡೆ
ಮರಳು ಭೂಮಿಯಲ್ಲಿ ಮಾತ್ರ ಬೆಳೆಸುವುದು ಈ ಆಲೂಗಡ್ಡೆಯ ಇನ್ನೊಂದು ವಿಶೇಷತೆ. ಕಡಲಕಳೆ ಮತ್ತು ಪಾಚಿಯನ್ನು ಗೊಬ್ಬರವನ್ನಾಗಿ ಆಲೂಗಡ್ಡೆ ಬೆಳೆಗೆ ಹಾಕಲಾಗುತ್ತದೆ. ಈ ಕಾರಣದಿಂದ ಇವುಗಳನ್ನು ವಿಶ್ವದ ಅತ್ಯಂತ ದುಬಾರಿ (Costly) ಆಲೂಗಡ್ಡೆಯೆನ್ನಲಾಗುತ್ತದೆ. ವಿಶೇಷವಾಗಿ Le Bonnotte ಆಲೂಗಡ್ಡೆಯ ರುಚಿ (Taste) ಇತರವುಗಳಿಗಿಂತ ಭಿನ್ನವಾಗಿದೆ. ಇದು ಸ್ವಲ್ಪ ಹುಳಿ, ಸ್ವಲ್ಪ ಉಪ್ಪು ರುಚಿಯನ್ನು ಹೊಂದಿರುತ್ತದೆ.

ಈ ಆಲೂಗಡ್ಡೆಯನ್ನು ದುರ್ಬಲ ಮತ್ತು ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇದನ್ನು ಪ್ರತ್ಯೇಕವಾಗಿ ಕೈಯಿಂದ ಒಂದೊಂದಾಗಿ ಕೀಳಲಾಗುತ್ತದೆ. ದ್ವೀಪದಲ್ಲಿ ಕೊಯ್ಲು ಮಾಡುವ 10,000 ಟನ್ ಆಲೂಗಡ್ಡೆಗಳಲ್ಲಿ, ಕೇವಲ 100 ಟನ್‌ಗಳು ಲಾ ಬೊನೆಟ್ ಆಗಿದೆ. ಇದು ಈ ವಿಶಿಷ್ಟ ಆಲೂಗಡ್ಡೆಯ ಬೆಲೆ ಹೆಚ್ಚಿರಲು ಕಾರಣವಾಗಿದೆ.. ಅವುಗಳನ್ನು ಕೈಯಿಂದ ಆರಿಸುವುದರಿಂದ, ಆಲೂಗಡ್ಡೆಯ ಏಳು ದಿನಗಳ ಸುಗ್ಗಿಯ ಕಾಲದಲ್ಲಿ, ಸುಮಾರು 2,500 ಜನರು ಇದನ್ನು ಆರಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಒಣಗಿದ ತರಕಾರಿಯನ್ನು ಫ್ರೆಶ್ ಮಾಡುವ ಕೆಮಿಕಲ್‌: ವೈರಲ್ ವಿಡಿಯೋ ನೋಡಿ ಆಘಾತಗೊಂಡ ಜನ

ಮಾತ್ರವಲ್ಲ, ಅಡುಗೆ ಮಾಡುವಾಗ ಈ ಆಲೂಗಡ್ಡೆಗಳ ಸಿಪ್ಪೆ ತೆಗೆಯದಂತೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಈ ಆಲೂಗಡ್ಡೆಯು ಮಣ್ಣಿನ ಎಲ್ಲಾ ಪರಿಮಳ ಮತ್ತು ಸುವಾಸನೆ ಹಾಗು ಹತ್ತಿರದ ಸಮುದ್ರದ ನೀರನ್ನು ಹೀರಿಕೊಂಡಿರುತ್ತದೆ. ಈ ವಿಶೇಷ ಆಲೂಗಡ್ಡೆಗಳನ್ನು ಸಾಂಬಾರ್, ಸೂಪ್ ಮತ್ತು ಕ್ರೀಮ್ ತಯಾರಿಸಲು ಬಳಸಲಾಗುತ್ತದೆ. ವೈದ್ಯರ ಪ್ರಕಾರ ಬೊನೊಟ್ ಗಳನ್ನು ತೀವ್ರವಾದ ಕಾಯಿಲೆಗಳಿಂದ ರಕ್ಷಿಸಲು ಬಳಸಲಾಗುತ್ತದೆ. ಅಲ್ಲದೆ ಅವು ಸೂಪರ್‌ಮಾರ್ಕೆಟ್‌ಗಳಲ್ಲಿ ಲಭ್ಯವಾಗುವುದಿಲ್ಲ. ಜನ ಅವುಗಳನ್ನು ಖರೀದಿಸಲು ಇ-ಕಾಮರ್ಸ್ ಸೈಟ್‌ಗಳನ್ನು ಸಂಪರ್ಕಿಸಬೇಕಾಗುತ್ತ.

ತರಕಾರಿಗಳಲ್ಲಿ ಹುಳ, ಕೀಟ ಹುಡುಕಿ ಸಾಕಾಗಿದೆಯೇ? ಈ ಸೂಪರ್ ಟ್ರಿಕ್ಸ್ ಟ್ರೈ ಮಾಡಿ

click me!