ನೀವು ಎಷ್ಟು ರುಚಿ ಚಾಕೋಲೇಟ್ ತಿಂದಿದ್ದೀರಿ ಅಂತಾ ಕೇಳಿದ್ರೆ ನಾಲ್ಕೈದು ರುಚಿ ಹೇಳ್ತೀರಾ. ಆದ್ರೆ ವಿಶ್ವದಲ್ಲಿ ಬರೀ ನಾಲ್ಕೈದಲ್ಲ, ಸಾವಿರಾರು ರುಚಿಯ ಚಾಕೋಲೇಟ್ ಇದೆ. ಅದ್ರ ಕೆಲ ಫೆವರ್ ಮಾಹಿತಿ ಇಲ್ಲಿದೆ.
ಹ್ಯಾಪಿ ಚಾಕೋಲೇಟ್ ಡೇ.. ಹೀಗಂತ ಬರಿಗೈನಲ್ಲಿ ವಿಶ್ ಮಾಡಿದ್ರೆ ಮಕ್ಕಳಿಗೆ ಹೋಗ್ಲಿ ನಮಗೂ ಕೋಪ ಬರುತ್ತೆ. ಚಾಕೋಲೇಟ್ ಡೇ ಅಂದ್ಮೇಲೆ ಒಂದಿಷ್ಟು ಚಾಕೋಲೇಟ್ ಕೈಗೆ ಕೊಡ್ಬೇಕು ಅಲ್ವಾ? ನಿಮ್ಮಾಪ್ತರು ಚಾಕೋಲೇಟ್ ತಂದುಕೊಂಡ್ರು ಅಂದೇ ಇಟ್ಕೊಳ್ಳೋಣ. ಲೀಸ್ಟ್ ನಲ್ಲಿ ಯಾವುದಿರುತ್ತೆ? ಡ್ರೈ ಫ್ರೂಟ್ಸ್ ಚಾಕೋಲೇಟ್, ಡಾರ್ಕ್ ಚಾಕೋಲೇಟ್, ಮಿಲ್ಕ್ ಚಾಕೋಲೇಟ್. ಸಾಮಾನ್ಯವಾಗಿ ನಮಗೆ ಗೊತ್ತಿರೋದು ಇದಿಷ್ಟೆ. ಈಗಿನ ಮಕ್ಕಳು ಪೆಪ್ಪರ್ ಮೆಂಟ್ ತಿನ್ನೋದಿಲ್ಲ. ಹಾಗಾಗಿ ಅವರ ಪಟ್ಟಿಯಲ್ಲೂ ಈ ಚಾಕೋಲೇಟ್ ಗಳೇ ಅಗ್ರ ಸ್ಥಾನದಲ್ಲಿರುತ್ವೆ.
ಆದ್ರೆ ಚಾಕೋಲೇಟ್ (Chocolate) ನಲ್ಲಿ ಇಷ್ಟೇ ಫ್ಲೇವರ್ (Flavor) ಅಲ್ಲ ಇನ್ನೂ ಅನೇಕ ಬಗೆಯ ಚಾಕಲೇಟ್ ಗಳು ಇವೆ. ವಿಶ್ವ ಚಾಕಲೇಟ್ ದಿನವಾದ ಇಂದು ನಾವು ಕೆಲವು ಫೇಮಸ್ ಚಾಕೋಲೇಟ್ ಗಳ ಕುರಿತಾದ ಮಾಹಿತಿ ನೀಡಲಿದ್ದೇವೆ.
ಸೆಮಿಸ್ವೀಟ್ ಚಾಕೋಲೇಟ್ : ಹೆಚ್ಚು ಸಿಹಿಯ ಅಂಶವನ್ನು ಹೊಂದಿರದ ಸೆಮಿಸ್ವೀಟ್ ಚಾಕೋಲೇಟನ್ನು ಹೆಚ್ಚಾಗಿ ಬೇಕಿಂಗ್ (Baking) ನಲ್ಲಿ ಬಳಸಲಾಗುತ್ತೆ. ಇದನ್ನು ಸ್ವೀಟ್ ಡಾರ್ಕ್ ಚಾಕೋಲೇಟ್ ಎಂದು ಕೂಡ ಕರೆಯಬಹುದು. ಇದರಲ್ಲಿ ಕೇವಲ 35 ರಷ್ಟು ಮಾತ್ರ ಕೋಕೋ ಬೀಜಗಳ ಬಳಕೆಯಾಗುತ್ತದೆ.
ಜಾಂಡೀಸ್‌ನಿಂದ ಶೀಘ್ರ ಪರಿಹಾರ ಬೇಕಾ? ಈ ಆಹಾರ ಬಿಟ್ಟುಬಿಡಿ!
ಬಿಟರ್ ಸ್ವೀಟ್ ಚಾಕೋಲೇಟ್ : ಎಫ್ ಡಿ ಎ(Food And Drug Administration) ವರದಿಯ ಪ್ರಕಾರ, ಬಿಟರ್ ಸ್ವೀಟ್ ಚಾಕೋಲೇಟಿನಲ್ಲಿ ಕೇವಲ 35ರಷ್ಟು ಮಾತ್ರ ಕೋಕೋ ಬೀಜಗಳನ್ನು ಬಳಕೆ ಮಾಡುತ್ತಾರೆ. ಆದರೆ ಕೆಲವು ಕಂಪನಿಗಳು ಬಿಟರ್ ಸ್ವೀಟ್ ಚಾಕೋಲೇಟಿನಲ್ಲಿ ಪ್ರತಿಶತ 50-80 ರಷ್ಟು ಕೋಕೋ ಬೀಜಗಳನ್ನು ಸೇರಿಸುತ್ತಾರೆ.
ಬೇಕಿಂಗ್ ಚಾಕೋಲೇಟ್ : ಬೇಕಿಂಗ್ ಚಾಕೋಲೇಟ್ ಅತ್ಯಂತ ಶುದ್ಧವಾದ ಚಾಕೋಲೇಟ್ ಆಗಿದೆ. ಇದರಲ್ಲಿ ಯಾವುದೇ ರೀತಿಯ ಸಕ್ಕರೆ ಅಥವಾ ಹಾಲಿನ ಅಂಶವಿರುವುದಿಲ್ಲ. ಇದನ್ನು ಹೆಚ್ಚಾಗಿ ಬೇಕಿಂಗ್ ಪ್ರಕ್ರಿಯೆಯಲ್ಲಿ ಬಳಸುತ್ತಾರೆ. ಇದರ ರುಚಿ ಚೆನ್ನಾಗಿರದ ಕಾರಣ ಇದನ್ನು ನೀವು ಹಾಗೇ ತಿನ್ನಲು ಸಾಧ್ಯವಿಲ್ಲ.
ಕೌವರ್ಚರ್ ಚಾಕೊಲೇಟ್ : ಕೌವರ್ಚರ್ ಚಾಕೋಲೇಟ್ ಅನ್ನು ಅತ್ಯಂತ ದುಬಾರಿ ಚಾಕೋಲೇಟ್ ಎನ್ನಲಾಗುತ್ತೆ. ಹೆಚ್ಚಿನ ದುಬಾರಿ ಚಾಕೋಲೇಟುಗಳ ತಯಾರಿಕೆಯಲ್ಲಿ ಇದನ್ನೇ ಬಳಸಲಾಗುತ್ತದೆ.
ರೂಬಿ ಚಾಕೋಲೇಟ್ : ಈ ಜನಪ್ರಿಯ ಚಾಕೋಲೇಟನ್ನು 2017ರಲ್ಲಿ ಚೀನಾದಲ್ಲಿ ಕಂಡುಹಿಡಿಯಲಾಯಿತು. ಇದನ್ನು ತಯಾರಿಸಲು ರೂಬಿ ಕೋಕೋ ಬೀಜವನ್ನು ಉಪಯೋಗಿಸುತ್ತಾರೆ. ಈ ಬೀಜ ಕೇವಲ ಬ್ರೆಜಿಲ್ ಮತ್ತು ಎಕ್ವಾಡೋರ್ ನಲ್ಲಿ ಮಾತ್ರ ಸಿಗುತ್ತದೆ. ಈ ಚಾಕೋಲೇಟು ಗುಲಾಬಿ ಬಣ್ಣದಲ್ಲಿರುತ್ತೆ.
30 ರೂ.ಗೆ ಸಿಗೋ ಪಾಪ್‌ಕಾರ್ನ್, ಸಿನಿಮಾಸ್‌ನಲ್ಲಿ 460 ರೂ. ಬಿಲ್ ಶೇರ್ ಮಾಡಿದ ಗ್ರಾಹಕ!
ಪೀನಟ್ ಬಟರ್ ಚಾಕೋಲೇಟ್ : ಕಡಲೆಕಾಯಿಯ ಬೆಣ್ಣೆಯಿಂದ ತಯಾರಾಗುವ ಈ ಪ್ರಸಿದ್ಧ ಚಾಕೋಲೇಟ್ ಕಹಿಯಾಗಿರದೇ ಹೆಚ್ಚಿನ ರುಚಿಯನ್ನು ಹೊಂದಿರುತ್ತದೆ.
ಮಿಲ್ಕ್ ಚಾಕೋಲೇಟ್ : ಹಾಲಿನ ಚಾಕೋಲೇಟ್ ಜಗತ್ತಿನಲ್ಲೇ ಹೆಚ್ಚು ಖ್ಯಾತಿ ಪಡೆದಿದೆ. ಅಂಗಡಿಗಳಲ್ಲಿ ಸಿಗುವಂತಹ ಹೆಚ್ಚಿನ ಚಾಕೋಲೇಟುಗಳು ಹಾಲಿನಿಂದಲೇ ತಯಾರಾಗಿರುತ್ತವೆ. ಹಾಲಿನ ಚಾಕೋಲೇಟಿನಲ್ಲಿ ಪ್ರತಿಶತ 40 ರಷ್ಟು ಮಾತ್ರ ಕೋಕೋ ಪೌಡರ್ ಇರುತ್ತದೆ. ಇನ್ನುಳಿದ ಪ್ರತಿಶತ 60 ರಷ್ಟು ಭಾಗ ಹಾಲು ಸಕ್ಕರೆಯಿಂದಲೇ ತಯಾರಾಗುತ್ತದೆ.
ವೈಟ್ ಚಾಕೋಲೇಟ್ : ಮಕ್ಕಳು ಹೆಚ್ಚು ಇಷ್ಟಪಡುವ ಚಾಕೋಲೇಟುಗಳ ಪೈಕಿ ವೈಟ್ ಚಾಕೋಲೇಟ್ ಕೂಡ ಒಂದು. ಬಿಳಿ ಚಾಕೋಲೇಟ್ ಅನ್ನು ತಯಾರಿಸಲು ಸಕ್ಕರೆ, ಹಾಲು ಮತ್ತು ಕೋಕೋ ಬೆಣ್ಣೆಯನ್ನು ಉಪಯೋಗಿಸುತ್ತಾರೆ. ಇದ ವೆನಿಲಾದ ರುಚಿಯನ್ನೇ ನೀಡುತ್ತದೆ. ಬಿಳಿ ಚಾಕೋಲೇಟನ್ನು ತಯಾರಿಸಲು ಪ್ರತಿಶತ 20ರಷ್ಟು ಕೋಕೋ ಬೆಣ್ಣೆ, ಪ್ರತಿಶತ 55 ರಷ್ಟು ಸಕ್ಕರೆ ಮತ್ತು 15 ರಷ್ಟು ಹಾಲನ್ನು ಬಳಸಲಾಗುತ್ತದೆ.
ಡಾರ್ಕ್ ಚಾಕೋಲೇಟ್ : ಡಾರ್ಕ್ ಚಾಕೋಲೇಟ್ ತಿನ್ನಲು ಸ್ವಲ್ಪ ಕಹಿ ಎನಿಸುವುದರಿಂದ ಮಕ್ಕಳು ಇದನ್ನು ಹೆಚ್ಚು ಇಷ್ಟಪಡೊಲ್ಲ. ಆರೋಗ್ಯ ದೃಷ್ಟಿಯಲ್ಲಿ ನೋಡಿದರೆ ಡಾರ್ಕ್ ಚಾಕೋಲೇಟ್ ಬಹಳ ಒಳ್ಳೆಯದು. ಇದರಲ್ಲಿ ಪ್ರತಿಶತ 30 ರಿಂದ 80 ರಷ್ಟು ಪ್ರಮಾಣದ ಕೋಕೋ ಪೌಡರ್ ಬಳಕೆಯಾಗುತ್ತೆ.