ಹಣ್ಣು ಆರೋಗ್ಯ ವೃದ್ಧಿಸುತ್ತದೆ. ಹಾಗಂತ ಹಾಳಾದ ಹಣ್ಣು ತಿಂದ್ರೆ ಆರೋಗ್ಯ ಹಾಳಾಗುತ್ತದೆ. ಹಣ್ಣು ತಿನ್ಬೇಕು ಎನ್ನುವ ಕಾರಣಕ್ಕೆ ದುಬಾರಿ ಬೆಲೆ ಕೊಟ್ಟು, ಕೆಟ್ಟ ಹಣ್ಣು ಖರೀದಿಸಿದ್ರೆ ಏನು ಪ್ರಯೋಜನ ? ಹೀಗಾಗಿ ಹಣ್ಣು ಖರೀದಿಸೋ ಮೊದ್ಲು ಕೆಲವೊಂದು ವಿಚಾರ ತಿಳ್ಕೊಂಡಿದ್ರೆ ಒಳ್ಳೆಯದು.
ಹಣ್ಣಿನ ವಿಷ್ಯ ಬಂದಾಗ ಜನರು ಹಿಂದೆ ಮುಂದೆ ನೋಡೋದಿಲ್ಲ. ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಎಲ್ಲರೂ ಹಣ್ಣು ಸೇವನೆ ಮಾಡ್ತಾರೆ. ಹಬ್ಬಗಳಲ್ಲೂ ಹಣ್ಣಿನ ಬಳಕೆ ಹೆಚ್ಚಿರುವ ಕಾರಣ ಜನರು ಎಷ್ಟೇ ದುಬಾರಿಯಾದ್ರೂ ಹಣ್ಣು ಖರೀದಿ ಮಾಡ್ತಾರೆ. ಒಳ್ಳೆ ಹಣ್ಣು ದುಬಾರಿಯಾದ್ರೂ ಖರೀದಿ ಮಾಡಬಹುದು. ಆದ್ರೆ ಹಾಳಾದ ಹಣ್ಣಿಗೂ ಹೆಚ್ಚಿನ ಬೆಲೆ ನೀಡಿದ್ರೆ ಹೇಗೆ? ಇದ್ರಿಂದ ಹಣ್ಣಿನ ಸಂಪೂರ್ಣ ಪೋಷಕಾಂಶ ನಿಮಗೆ ಸಿಗೋದಿಲ್ಲ. ಜೊತೆಗೆ ಜೇಬು ಖಾಲಿಯಾಗಿರುತ್ತದೆ. ಅನೇಕರಿಗೆ ಹಣ್ಣು ಖರೀದಿ ಮಾಡಲು ಬರೋದಿಲ್ಲ. ದುಬಾರಿ ಬೆಲೆ ಕೊಟ್ಟು ಕೆಲವರು ಹಣ್ಣು ಖರೀದಿ ಮಾಡಿದ್ರೆ ಮತ್ತೆ ಕೆಲವರು ಹಾಳಾದ ಹಣ್ಣುಗಳನ್ನು ಮನೆಗೆ ತರ್ತಾರೆ. ಆನ್ಲೈನ್ ನಲ್ಲಿ ಹಣ್ಣು ಖರೀದಿ ಮಾಡುವ ಟ್ರೆಂಡ್ ಈಗ ಹೆಚ್ಚಾಗಿದೆ. ಮನೆಯಲ್ಲೇ ಕುಳಿತು ಜನರು ಹಣ್ಣಿನ ಆರ್ಡರ್ ಮಾಡ್ತಾರೆ. ಆ ಹಣ್ಣು ತಾಜಾ ಹಣ್ಣೇ ಎಂಬುದು ನಮಗೆ ಗೊತ್ತಾಗೋದಿಲ್ಲ. ಮನೆಗೆ ಬಂದ್ಮೇಲೆ ವಾಪಸ್ ಮಾಡಲು ಸಾಧ್ಯವಾಗೋದಿಲ್ಲ. ಹಾಗಾಗಿ ಹಣ್ಣು ಖರೀದಿ ಮಾಡುವ ಮೊದಲು ನಾವು ಕೆಲ ಸಂಗತಿ ತಿಳಿದಿದ್ರೆ ಒಳ್ಳೆಯದು.
ಹಣ್ಣು (Fruit) ಖರೀದಿಸುವಾಗ ಈ ವಿಷ್ಯ ತಿಳಿದಿರಿ :
undefined
ಖರೀದಿ (Purchase) ವೇಳೆ ಆತುರ ಬೇಡ : ಹಣ್ಣುಗಳು ತಾಜಾ ಆಗಿದ್ದರೆ ಒಳ್ಳೆಯದು. ಹಾಳಾದ ಹಣ್ಣು ಹೊಟ್ಟೆ ಹಾಳು ಮಾಡುತ್ತದೆ. ಇದ್ರಿಂದ ಹಣ (Money) ನಷ್ಟವಾಗುತ್ತದೆ. ಹಾಗಾಗಿ ಹಣ್ಣುಗಳನ್ನು ಆತುರಪಡದೆ ನಿಧಾನವಾಗಿ ಖರೀದಿ ಮಾಡಿ. ಹಣ್ಣನ್ನು ಸರಿಯಾಗಿ ಪರಿಶೀಲನೆ ಮಾಡಿ. ಹಾಳು ಕಂಡು ಬಂದ್ರೆ ಅದನ್ನು ಖರೀದಿ ಮಾಡಬೇಡಿ. ಹಾಗೆಯೇ ಹಣ್ಣುಗಳು ಮೃದುವಾಗಿದ್ದರೆ ಅವು ಬೇಗ ಹಾಳಾಗುತ್ತವೆ ಎಂಬುದು ನೆನಪಿರಲಿ.
ಟೈಪ್-2 ಮಧುಮೇಹದ ಅಪಾಯ ತಗ್ಗಿಸುವ ಚಿಯಾ ಬೀಜ
ಬಾಳೆ ಹಣ್ಣು (Banana Fruit) ಖರೀದಿ ವೇಳೆ ಎಚ್ಚರ : ಬಾಳೆ ಹಣ್ಣಿನಂತಹ ಬೇಗ ಹಾಳಾಗುವ ಹಣ್ಣುಗಳನ್ನು ಖರೀದಿಸುವಾಗ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಅತಿಯಾದ ಹಣ್ಣಾಗಿರುವ ಬಾಳೆ ಹಣ್ಣನ್ನು ಎಂದಿಗೂ ಖರೀದಿಸಬಾರದು. ಈಗಾಗಲೇ ಹಣ್ಣಾಗಿರುವ ಬಾಳೆ ಹಣ್ಣು ಬೇಗ ಕಪ್ಪಾಗುತ್ತದೆ. ಬೇಗ ಕೊಳೆಯಲು ಶುರುವಾಗುತ್ತದೆ. ನಾಲ್ಕೈದು ದಿನ ಬರಬೇಕೆಂದ್ರೆ ಬಾಳೆಹಣ್ಣು ಸ್ವಲ್ಪ ಗಟ್ಟಿಯಾಗಿರಲಿ. ಹಾಗಂತ ಕಾಯಿ ಸೇವನೆ ಮಾಡಬೇಡಿ. ಅಂಗಡಿಯವರು ಹೇಳಿದ ಬೆಲೆ ನೀಡಿ ಹಣ್ಣು ಖರೀದಿ ಮಾಡಬೇಡಿ. ಚೌಕಾಸಿ ಮಾಡಲು ಮರೆಯದಿರಿ.
ಬೆಣ್ಣೆ ಹಣ್ಣು ಖರೀದಿ ವೇಳೆ ಇದನ್ನು ಗಮನಿಸಿ : ಬೆಣ್ಣೆ ಹಣ್ಣು ಆವಕಾಡೊ (Avocado) ಖರೀದಿ ಮಾಡುವಾಗ ಅದರ ಸಿಪ್ಪೆಯನ್ನು ಗಮನಿಸಬೇಕು. ಹಣ್ಣು ಕಪ್ಪಾಗಿದ್ದರೆ ಖರೀದಿ ಮಾಡಬೇಡಿ. ಹಣ್ಣಿನ ಮೇಲ್ಭಾಗ ಹಸಿರು ಬಣ್ಣದ್ದಾಗಿದ್ದರೆ ಮಾತ್ರ ಖರೀದಿ ಮಾಡಿ. ಆವಕಾಡೊದ ಸಿಪ್ಪೆ ತುಂಬಾ ಕಪ್ಪಾಗಿ ಕಾಣುತ್ತಿದ್ದರೆ, ಅದು ಒಳಗಿನಿಂದ ಕೆಡಲು ಪ್ರಾರಂಭಿಸಿದೆ ಎಂಬ ಸೂಚನೆಯಾಗಿದೆ.
ದಾಳಿಂಬೆ (Pomegranate) ಹೀಗಿರಲಿ : ದಾಳಿಂಬೆ ಆರೋಗ್ಯಕ್ಕೆ ಒಳ್ಳೆಯದು. ಅದ್ರ ಪ್ರತಿ ಬೀಜವೂ ಪ್ರಯೋಜನಕಾರಿ. ಬಾಡಿದ ದಾಳಿಂಬೆ ಹಣ್ಣನ್ನು ಖರೀದಿ ಮಾಡಬೇಡಿ. ಹಾಗೆ ಕಪ್ಪು ಕಲೆಗಳನ್ನು ಹೊಂದಿರುವ, ಸಣ್ಣ ಹಣ್ಣುಗಳು ಹಾಳಾಗಿರುವ ಸಾಧ್ಯತೆಯಿರುತ್ತದೆ. ದೊಡ್ಡದಾದ ಹಾಗೂ ಕಲೆಯಿಲ್ಲದ ದಾಳಿಂಬೆ ಖರೀದಿ ಮಾಡಿ.
HEALTH TIPS : ಬೆಳಗ್ಗೆ ಹೊಟ್ಟೆ ಸರಿಯಾಗಿ ಕ್ಲೀನ್ ಆಗ್ತಿಲ್ವಾ ? ಹೀಗೆ ಮಾಡಿ
ಹಣ್ಣನ್ನು ಇಲ್ಲಿ ಖರೀದಿಸೋದು ತಪ್ಪಿಸಿ : ಮೊದಲೇ ಹೇಳಿದಂತೆ ನೀವು ಆದಷ್ಟು ಹಣ್ಣುಗಳನ್ನು ಆನ್ಲೈನ್ ನಲ್ಲಿ ಖರೀದಿ ಮಾಡಬೇಡಿ. ಆ ಹಣ್ಣುಗಳ ತಾಜಾತನ ನಿಮಗೆ ತಿಳಿಯುವುದಿಲ್ಲ. ಹಾಳಾಗಿದೆಯೇ ಎಂಬುದನ್ನು ಆನ್ಲೈನ್ (Online) ನಲ್ಲಿ ಪರೀಕ್ಷಿಸಲು ಸಾಧ್ಯವಿಲ್ಲ. ಹಣ್ಣಿನ ಅಂಗಡಿಗಳು ಸಾಕಷ್ಟಿದ್ದು, ಒಳ್ಳೆ ಗುಣಮಟ್ಟದ ಹಣ್ಣುಗಳು ಸಿಗುವ ಅಂಗಡಿಯಲ್ಲೇ ನೀವು ಹಣ್ಣುಗಳನ್ನು ಖರೀದಿ ಮಾಡಿ.