ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ, ಕಾಫಿ ಅಥವಾ ನೀರು, ಯಾವುದು ಕುಡಿಯೋದು ಒಳ್ಳೇದು ?

By Suvarna News  |  First Published Oct 7, 2022, 2:50 PM IST

ಬೆಳಗ್ಗೆದ್ದು ಬಿಸಿ ಬಿಸಿ ನೀರು, ಟೀ ಅಥವಾ ಕಾಫಿ ಕುಡಿಯುವುದು ಹೆಚ್ಚಿನವರ ಅಭ್ಯಾಸ. ಆದ್ರೆ ಆರೋಗ್ಯಕ್ಕೆ ಇದು ಎಷ್ಟರಮಟ್ಟಿಗೆ ಒಳ್ಳೆಯದು. ಇದ್ರಿಂದ ಆರೋಗ್ಯಕ್ಕೆ ತೊಂದ್ರೆಯಾಗುತ್ತಾ ? ನೀರು, ಚಹಾ ಅಥವಾ ಕಾಫಿ ನಿಮ್ಮ ದಿನವನ್ನು ಯಾವ ಪಾನೀಯದೊಂದಿಗೆ ಪ್ರಾರಂಭಿಸಬೇಕು ಎಂಬ ಕುರಿತಾದ ಮಾಹಿತಿ ಇಲ್ಲಿದೆ. 


ರಾತ್ರಿಯಿಡೀ ನಿದ್ದೆ ಮಾಡುವುದರಿಂದ ಬೆಳಗ್ಗೆ ಎದ್ದಾಗ ನೀವು ಹೊಸತಾಗಿ ದೇಹಕ್ಕೆ ಚೈತನ್ಯವನ್ನು ಒದಗಿಸಬೇಕಾಗುತ್ತದೆ. ಹೀಗಾಗಿ ಆರೋಗ್ಯಕರ ಪಾನೀಯದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದು ಮುಖ್ಯವಾಗಿದೆ. ಹೆಚ್ಚಿನ ಜನರು ಒಂದು ಕಪ್ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ತಮ್ಮ ದಿನವನ್ನು ಕಿಕ್‌ಸ್ಟಾರ್ಟ್ ಮಾಡಲು ಇಷ್ಟಪಡುತ್ತಾರೆ. ಇದು ಹೆಚ್ಚಿನವರು ಅನುಸರಿಸುವ ದಿನಚರಿಯಾಗಿದೆ. ಆದರೆ, ತಜ್ಞರ ಪ್ರಕಾರ, ಈ ಅಭ್ಯಾಸವು ನಿಮ್ಮ ದೇಹಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ನ್ಯೂಟ್ರಸಿ ಲೈಫ್‌ಸ್ಟೈಲ್‌ನ ಪೌಷ್ಟಿಕತಜ್ಞ ಮತ್ತು ಸಿಇಒ ಡಾ.ರೋಹಿಣಿ ಪಾಟೀಲ್, ಚಹಾವು ಸಂಜೆಯ ಹೊತ್ತಿನಲ್ಲಿ ಕುಡಿಯಲು ಆರಾಮ ಪಾನೀಯವಾಗಬಹುದು. ಆದರೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ ಕುಡಿಯುವುದರಿಂದ ಹೊಟ್ಟೆಯ ಆಮ್ಲಗಳನ್ನು ಪ್ರಚೋದಿಸಬಹುದು ಮತ್ತು ನಿಮ್ಮ ಜೀರ್ಣಕ್ರಿಯೆಯನ್ನು ಹಾಳುಮಾಡಬಹುದು ಎಂದು ತಿಳಿಸುತ್ತಾರೆ. 

ಬೆಳಗ್ಗೆ ಚಹಾ (Tea) ಸೇವನೆಯು ಚಯಾಪಚಯವನ್ನು ಅಡ್ಡಿಪಡಿಸಬಹುದು ಮತ್ತು ಅಜೀರ್ಣ ಮತ್ತು ಎದೆಯುರಿ ಉಂಟುಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. ಇದರಲ್ಲಿ ಅಡಕವಾಗಿರುವ ಕೆಫೀನ್ ನಿರ್ಜಲೀಕರಣಕ್ಕೆ ಕಾರಣವಾಗಬಹುದು ಎಂದು ತಿಳಿದುಬಂದಿದೆ. ಹೀಗಾಗಿ ಟೀ, ಕಾಫಿಗಿಂತ ನೀರು (Water) ಕುಡಿಯೋದು ಒಳ್ಳೆಯದು ಎಂದು ತಜ್ಞರು ಸೂಚಿಸುತ್ತಾರೆ. ನಿಮ್ಮ ದಿನವನ್ನು ಪ್ರಾರಂಭಿಸಲು ನೀರು ಯಾವಾಗಲೂ ಉತ್ತಮ ಆಯ್ಕೆಯಾಗಿದೆ. 

Tap to resize

Latest Videos

ಶುಗರ್ ಪೇಷೆಂಟ್ಸ್ ಗಮನಕ್ಕೆ: ಖಾಲಿ ಹೊಟ್ಟೇಲಿ ಕಾಫಿ ಕುಡಿದರೆ ರೋಗ ಕಂಟ್ರೋಲಿಗೆ ಬರೋಲ್ಲ!

ಬೆಳಗ್ಗೆದ್ದು ಚಹಾ, ಕಾಫಿ ಕುಡಿಯುವುದರಿಂದ ಆರೋಗ್ಯ ಸಮಸ್ಯೆ
ಚಹಾ ಮತ್ತು ಕಾಫಿಯ PH ಮೌಲ್ಯಗಳು ಕ್ರಮವಾಗಿ 4 ಮತ್ತು 5 ಆಗಿದ್ದು, ಅವು ಆಮ್ಲೀಯತೆಯನ್ನು ಉಂಟುಮಾಡಬಹುದು. ಆದರೆ ಈ ಪಾನೀಯಗಳನ್ನು ಕುಡಿಯುವ ಮೊದಲು ಕೋಣೆಯ ಉಷ್ಣಾಂಶದಲ್ಲಿ ಇರಿಸಲಾದ ಒಂದು ಲೋಟ ನೀರನ್ನು ಸೇವಿಸುವುದರಿಂದ ಆಮ್ಲ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇಲ್ಲದಿದ್ದರೆ, ದೀರ್ಘಾವಧಿಯಲ್ಲಿ, ನೀವು ಅಪಾಯಕ್ಕೆ ಒಳಗಾಗಬಹುದು. ಹೃದಯದ ಸುಡುವಿಕೆ ಅಥವಾ ಹುಣ್ಣುಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯೂ ಇದೆ. ರಾತ್ರಿಯ ನಂತರ ದೇಹವು (Body) ನಿರ್ಜಲೀಕರಣಗೊಳ್ಳುವುದರಿಂದ ಬೆಳಿಗ್ಗೆ ಮೊದಲು ನೀರು ಕುಡಿಯುವುದು ಸಹ ಮುಖ್ಯವಾಗಿದೆ.

ಚಹಾ ಮತ್ತು ಕಾಫಿಯ ಬದಲು ಬಿಸಿ ನೀರು ಕುಡಿಯಿರಿ
ನೀರನ್ನು ಯಾವಾಗಲೂ ನಿಮ್ಮ ದಿನಕ್ಕೆ ಉತ್ತಮ ಆರಂಭವೆಂದು ಪರಿಗಣಿಸಲಾಗುತ್ತದೆ.  ಬೆಳಗ್ಗೆದ್ದು ನೀರು ಕುಡಿಯುವ ಅಭ್ಯಾಸ ದೇಹವನ್ನು ಪುನರ್ಜಲೀಕರಣ ಮಾಡುವ ಮೂಲಕ ಎದೆಯುರಿ, ಆಮ್ಲೀಯತೆ ಮತ್ತು ತಲೆನೋವುಗಳ (Headache) ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಕರುಳನ್ನು ಸ್ವಚ್ಛಗೊಳಿಸುವ ಮೂಲಕ ಮತ್ತು ಕರುಳಿನ (Gut) ಚಲನೆಗೆ ಸಹಾಯ ಮಾಡುತ್ತದೆ. ಈ ಮೂಲಕ ಮಲಬದ್ಧತೆಯಿಂದ (Constipation) ಬಳಲುತ್ತಿರುವವರಿಗೆ ಸಹಾಯ ಮಾಡುತ್ತದೆ.

ಫಿಟ್ ಆಗಿರ್ಬೇಕಾ? ಕಸರತ್ತು ಮಾಡೋದೇನೂ ಬೇಡ, ಬೆಳಗ್ಗೆ ಎದ್ದು ಇಷ್ಟು ಮಾಡಿ ಸಾಕು!

ಕಾಫಿ, ಟೀ ಬದಲು ಬೆಳಗ್ಗೆದ್ದು ಬೇರೇನು ಕುಡಿಯಬಹುದು ?

ಆಪಲ್ ಸೈಡರ್ ವಿನೆಗರ್ ಜೊತೆಗೆ ನೀರು: ಆಪಲ್ ಸೈಡರ್ ವಿನೇಗರ್ ಜೊತೆಗೆ ನೀರಿನ ಮಿಶ್ರಣವು ದೇಹದಲ್ಲಿ ಆಂಟಿ ಆಕ್ಸಿಡೆಂಟ್‌ಗಳನ್ನು ಹೆಚ್ಚಿಸುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸರಳವಾದ ಪಾನೀಯವು ಜೀರ್ಣಕ್ರಿಯೆಗೆ (Digetion) ಸಹ ಸಹಾಯ ಮಾಡುತ್ತದೆ.

ಹಸಿರು ಚಹಾ: ಹೆಚ್ಚಿನ ಮಟ್ಟದ ಆಂಟಿಆಕ್ಸಿಡೆಂಟ್‌ಗಳಿಂದಾಗಿ ಗ್ರೀನ್ ಟೀ ಹಲವಾರು ಆರೋಗ್ಯ ಪ್ರಯೋಜನಗಳನ್ನು (Health benefits) ಹೊಂದಿದೆ. ಪಾನೀಯವು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಕೊಬ್ಬನ್ನು ಸುಡುತ್ತದೆ. ಹಸಿರು ಚಹಾವು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವುದರಿಂದ, ಇದು ಮೆದುಳಿನ (Brain) ಕಾರ್ಯವನ್ನು ಸಹಾಯ ಮಾಡುತ್ತದೆ, ಕ್ಯಾನ್ಸರ್ ವಿರುದ್ಧ ರಕ್ಷಿಸುತ್ತದೆ, ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಕೊಬ್ಬು ಸುಡುವಿಕೆಯನ್ನು ಹೆಚ್ಚಿಸುತ್ತದೆ.

ಟೊಮೇಟೊ ಜ್ಯೂಸ್: ಟೊಮೇಟೊ ಜ್ಯೂಸ್‌ನೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹವು ಆಮ್ಲೀಯತೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ಸುಲಭವಾಗಿ ಲಭ್ಯವಿರುವ ಪೋಷಕಾಂಶಗಳನ್ನು ಪೂರೈಸುವ ಮೂಲಕ ಅಂಗಗಳನ್ನು ಸಕ್ರಿಯಗೊಳಿಸುತ್ತದೆ.

click me!