ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್, ವಿಟಮಿನ್, ಕಬ್ಬಿಣ ಇತ್ಯಾದಿಗಳಿದ್ದು ಇವೆಲ್ಲವೂ ದೇಹಕ್ಕೆ ಬಹಳ ಮುಖ್ಯವಾದ ಪೋಷಕಾಂಶಗಳಾಗಿವೆ. ಜಿಮ್‌ಗೆ ಹೋಗುವ ಹೆಚ್ಚಿನ ಜನರು ತಮ್ಮ ಫೋಟೀನ್ ಆಹಾರಕ್ಕೆ ಪೂರಕವಾಗಿ ತಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿಕೊಳ್ಳುತ್ತಾರೆ. ಆದರೆ ನೀವು ತಿನ್ನುವ ಮೊಟ್ಟೆಯಲ್ಲಿ ಸತ್ತ ಮರಿ ಇದ್ದರೆ ಊಹಿಸಿ?, ಕೇಳಿಯೇ ಭಯ ಆಯ್ತು ಅಲ್ವಾ, ನೋಡಿದ್ರೆ ಏನ್ ಹೇಳ್ತೀರಾ?, ಈ ವಿಡಿಯೋ ನೋಡಿ..ನಿಂತ ಜಾಗದಲ್ಲಿ ನೀವು ನಿಲ್ಲಲ್ಲ. ಹೌದು, ಈ ಶಾಕಿಂಗ್ ವಿಡಿಯೋ ನೋಡಿದ ನಂತರ ಭವಿಷ್ಯದಲ್ಲಿ ಮೊಟ್ಟೆಗಳನ್ನು ತಿನ್ನುವ ಮೊದಲು ನೀವು ನೂರು ಬಾರಿ ಯೋಚಿಸುವಿರಿ. ಏಕೆಂದರೆ ಮಹಿಳೆಯೊಬ್ಬರು ಮೊಟ್ಟೆಯನ್ನು ಕುದಿಸಿದ ನಂತರ ಮೊಟ್ಟೆಯಲ್ಲಿ ಸತ್ತ ಮರಿ ಇರುವುದನ್ನು ಕಂಡುಕೊಂಡಿದ್ದಾರೆ. ಇದರ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗ್ತಿದೆ.
ಈ ವಿಡಿಯೋದಲ್ಲಿ, ಒಬ್ಬ ಮಹಿಳೆ ಮೊಟ್ಟೆಯನ್ನು ಗಟ್ಟಿಯಾಗಿ ಬೇಯಿಸಿರುವುದನ್ನು ನೀವು ನೋಡಬಹುದು. ಅಷ್ಟು ಮೊಟ್ಟೆಗಳ ಪೈಕಿ ಒಂದು ಮೊಟ್ಟೆಯಲ್ಲಿ ಮರಿ ಹಾವು ಸಿಲುಕಿಕೊಂಡಿದೆ ಎನ್ನಲಾಗಿದೆ. ಹಾಗಾಗಿ ಮೊಟ್ಟೆಗಳನ್ನು ತಿನ್ನುವಾಗ ಸರಿಯಾದ ಕಾಳಜಿ ವಹಿಸಬೇಕು. ಮಾರುಕಟ್ಟೆಯಲ್ಲಿ ಈಗಾಗಲೇ ನಮಗೆ ದೊಡ್ಡ ಪ್ರಮಾಣದಲ್ಲಿ ಮೋಸವಾಗುತ್ತಿದೆ. ಕಲಬೆರಕೆ ಮತ್ತು ಸಂಸ್ಕರಿಸಿದ ಆಹಾರವನ್ನು ತಿನ್ನುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ. ಇದೇ ಕಾರಣಕ್ಕೆ ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗುವ ಪ್ರಮಾಣ ಹೆಚ್ಚಾಗಿದೆ.
ಈ ವೀಡಿಯೊವನ್ನು krantinewsofficial ಎಂಬ ಇನ್ಸ್ಟ್ರಾಗ್ರಾಮ್ ಖಾತೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿ ಕೊಳ್ಳಲಾಗಿದೆ. ಜನರು ಈಗ ಇದಕ್ಕೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ
ರಿಯಲ್ ಮೊಟ್ಟೆ ಗುರುತಿಸುವುದು ಹೇಗೆ?
ಈ ಕೆಳಗಿನ ವಿಧಾನವನ್ನು ಬಳಸಿಕೊಂಡು ಮನೆಯಲ್ಲಿ ಪ್ಲಾಸ್ಟಿಕ್ ಮತ್ತು ನಿಜವಾದ ಮೊಟ್ಟೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬಹುದು.
* ಮೊಟ್ಟೆಯನ್ನು ಅಲ್ಲಾಡಿಸಲು ಪ್ರಯತ್ನಿಸಿ ಅದು ಶಬ್ದ ಮಾಡಿದರೆ ನಕಲಿಯಾಗಿರಬಹುದು.
* ಮೊಟ್ಟೆಯನ್ನು ಒಡೆದು ನೋಡಿ ಹಾಗೆ ಮಾಡುವಾಗ ಹಳದಿ ಲೋಳೆ ಮತ್ತು ಬಿಳಿ ಭಾಗಗಳು ಒಟ್ಟಿಗೆ ಬೆರೆತರೆ ಮೊಟ್ಟೆ ನಕಲಿಯಾಗಿರಬಹುದು
* ಒಂದು ಲೋಟ ನೀರು ತೆಗೆದುಕೊಂಡು ಅದರಲ್ಲಿ ಒಂದು ಮೊಟ್ಟೆಯನ್ನು ಇರಿಸಿ ಮೊಟ್ಟೆ ನಿಜವಾದದ್ದಾಗಿದ್ದರೆ ಅದು ನೀರಿನಲ್ಲಿ ಮುಳುಗುತ್ತದೆ. ಆದರೆ ನಕಲಿ ಮೊಟ್ಟ ನೀರಿನಲ್ಲಿ ತೇಲುತ್ತದೆ ಎಂದು ಹೇಳಲಾಗುತ್ತದೆ.
*ಮೊಟ್ಟೆಯನ್ನು ಸುಡಲು ಪ್ರಯತ್ನಿಸಿ ಮೊಟ್ಟೆ ನಿಜವಾಗಿದ್ದರೆ ಅದರ ಮೇಲೆ ಕಪ್ಪು ಚುಕ್ಕೆ ಮಾತ್ರ ಕಾಣಿಸಿಕೊಳ್ಳುತ್ತದೆ. ಅದು ನಕಲಿಯಾಗಿದ್ದರೆ ಮೊಟ್ಟೆ ಉರಿಯಲು ಪ್ರಾರಂಭಿಸುತ್ತದೆ.
ಹಾವಿನ ಮೊಟ್ಟೆಗಳ ಬಗ್ಗೆ ತಜ್ಞರು ಏನು ಹೇಳುತ್ತಾರೆ?
ತಜ್ಞರ ಪ್ರಕಾರ, ಹಾವಿನ ಮೊಟ್ಟೆಗಳಲ್ಲಿ ವಿಷವಿರುವುದಿಲ್ಲ. ಹಾವಿನ ವಿಷವು ಹಲ್ಲುಗಳ ಹಿಂದಿರುವ ವಿಷ ಗ್ರಂಥಿಗಳಿಂದ ಬರುತ್ತದೆ, ಅದರ ಮೊಟ್ಟೆಗಳಿಂದಲ್ಲ. ಆದ್ದರಿಂದ ಹಾವಿನ ಮೊಟ್ಟೆಗಳನ್ನು ತಿನ್ನುವುದು ನೇರವಾಗಿ ಮಾರಕವಲ್ಲ, ಆದರೆ ಅದು ಸಂಪೂರ್ಣವಾಗಿ ಸುರಕ್ಷಿತವೂ ಅಲ್ಲ. ಮೂಲಗಳ ಪ್ರಕಾರ, ಹಾವಿನ ಮೊಟ್ಟೆಗಳು ಸಾಲ್ಮೊನೆಲ್ಲಾದಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊಂದಿರಬಹುದು, ಇದು ತೀವ್ರವಾದ ಆಹಾರ ವಿಷಕ್ಕೆ ಕಾರಣವಾಗಬಹುದು. ಮೊಟ್ಟೆಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅಥವಾ ಬೇಯಿಸದಿದ್ದರೆ, ಅದು ಹೊಟ್ಟೆ ನೋವು, ವಾಂತಿ ಮತ್ತು ಜ್ವರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ಕೆಲವು ಜನರು ಹಾವಿನ ಮೊಟ್ಟೆಗಳಿಗೆ ಅಲರ್ಜಿಯನ್ನು ಹೊಂದಿರಬಹುದು, ಇದು ಚರ್ಮದ ದದ್ದುಗಳು, ತುರಿಕೆ, ಉಸಿರಾಟದ ತೊಂದರೆ ಅಥವಾ ಅನಾಫಿಲ್ಯಾಕ್ಸಿಸ್‌ನಂತಹ ತೀವ್ರ ಲಕ್ಷಣಗಳನ್ನು ಉಂಟುಮಾಡಬಹುದು. ಈ ಕಾರಣಕ್ಕಾಗಿ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ವಿಶೇಷವಾಗಿ ಜಾಗರೂಕರಾಗಿರಬೇಕು.
ಮೊಟ್ಟೆಯಲ್ಲಿರುವ ಭ್ರೂಣವು ಸಂಪೂರ್ಣವಾಗಿ ಅಭಿವೃದ್ಧಿಗೊಂಡಿದ್ದರೆ, ಅದರಲ್ಲಿ ಸ್ವಲ್ಪ ಪ್ರಮಾಣದ ವಿಷವಿರಬಹುದು ಎಂದು ತಜ್ಞರು ನಂಬುತ್ತಾರೆ. ಆದರಿದು ಬಹಳ ಅಪರೂಪ. ಸಾಮಾನ್ಯವಾಗಿ ಹಾವಿನ ಮೊಟ್ಟೆಗಳು ವಿಷವನ್ನು ಹೊಂದಿರುವುದಿಲ್ಲ ಮತ್ತು ಅವುಗಳನ್ನು ಸಂಪೂರ್ಣವಾಗಿ ಸುರಕ್ಷಿತವೆಂದೂ ಪರಿಗಣಿಸಲಾಗುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.