
ಬೆಂಗಳೂರು: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಅಧಿಕಾರಿಗಳು ಬೆಂಗಳೂರಿನಲ್ಲಿನ 6 ಎಂಪೈರ್ ಶಾಖೆಗಳಲ್ಲಿ ನಡೆಸಿದ ಆಹಾರ ಪರೀಕ್ಷೆಯ ವೇಳೆ, ಚಿಕನ್ ಕಬಾಬ್ ಮಾದರಿಗಳನ್ನು ಅಸುರಕ್ಷಿತ ಎಂದು ಪರಿಗಣಿಸಿದ್ದು ಈ ಕುರಿತು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಎಂಪೈರ್ ಗ್ರೂಪ್ ಸ್ಪಷ್ಟನೆ ನೀಡಿದ್ದು, ಗ್ರಾಹಕರ ಭದ್ರತೆ ಮತ್ತು ವಿಶ್ವಾಸಕ್ಕೆ ತನ್ನ ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದೆ.
ನಮ್ಮ ಕಬಾಬ್ ಮ್ಯಾರಿನೇಡ್‌ನಲ್ಲಿ ‘ಸನ್‌ಸೆಟ್ ಯೆಲ್ಲೋ ಎಫ್‌ಸಿಎಫ್ (Sunset Yellow FCF)’ ಎಂಬ ಸಂಶ್ಲೇಷಿತ ಆಹಾರ ಬಣ್ಣವನ್ನು ಹಿಂದೆ ಬಳಕೆ ಮಾಡಲಾಗುತ್ತಿತ್ತು. ಈ ಬಣ್ಣವು ಎಫ್ಎಸ್ಸ್ಎಸ್ಎಐಗೆ ಅನುಮೋದಿತವಾಗಿದ್ದು, ವಾಣಿಜ್ಯವಾಗಿ ಲಭ್ಯವಿದೆ. ಆದರೂ ಎಫ್ಎಸ್ಸ್ಎಸ್ಎಐ ಮಾರ್ಗದರ್ಶನದಂತೆ, ನಾವು ತಕ್ಷಣವೇ ಈ ಬಣ್ಣದ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ ಎಂದಿದೆ.
ಗ್ರಾಹಕರ ಆರೋಗ್ಯ ನಮ್ಮ ಮೊದಲ ಆದ್ಯತೆ. ಆದ್ದರಿಂದ ಇನ್ನುಮುಂದೆ ಎಂಪೈರ್ ಹೋಟೆಲ್‌ಗಳಲ್ಲಿ ಕೃತಕ ಬಣ್ಣಗಳ ಬಳಕೆ ಮಾಡಲಾಗದೆ, ಸಂಪೂರ್ಣ ನೈಸರ್ಗಿಕ ಬಣ್ಣಗಳನ್ನು ಮಾತ್ರ ಬಳಸಲಾಗುವುದು ಎಂದು ಹೇಳಿದೆ.
ಎಂಪೈರ್ ಗ್ರೂಪ್ 60 ವರ್ಷಗಳ ಭರವಸೆಯ ಪರಂಪರೆಯನ್ನು ಹೊಂದಿದ್ದು, ಉತ್ತಮ ಗುಣಮಟ್ಟದ ಆಹಾರ ಸೇವನೆ ನೀಡುತ್ತಲೇ ಬಂದಿದೆ. ನಮ್ಮ ಅಡುಗೆ ಮನೆಗಳು ಉದ್ಯಮದಲ್ಲಿ ಅತ್ಯಂತ ನೈರ್ಮಲ್ಯಯುತವಾಗಿದ್ದು, ಎಲ್ಲಾ ಆಹಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತವೆ.
ಆಹಾರ ಸುರಕ್ಷತೆ ಮತ್ತು ಗ್ರಾಹಕರ ವಿಶ್ವಾಸವೇ ನಮ್ಮ ಅಸ್ತಿತ್ವದ ಆಧಾರ. ಯಾವುದೇ ಅನುಮಾನಗಳಿಗೆ ಅವಕಾಶವಿಲ್ಲ. ನಿಮ್ಮ ಪ್ರೀತಿಯ ಎಂಪೈರ್‌ನಲ್ಲೆಂದಿಗೂ ರುಚಿಕರ, ಸುರಕ್ಷಿತ ಆಹಾರವನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.