ತಿಂಡಿ, ಊಟದ ವೇಳೆ ತಟ್ಟೆಗೆ ಒಂದು ಚಮಚ ಬೆಣ್ಣೆ ಅಥವಾ ತುಪ್ಪ ಹಾಕ್ಕೋಳ್ಳೋದು ಗೊತ್ತು. ಆದರೆ ಇಲ್ಲೊಬ್ಬಾಕೆಗೆ ದಿನಾ ತಿನ್ನೋಕೆ 1 ಕೆಜಿ ಬೆಣ್ಣೆ ಮತ್ತು ಎಣ್ಣೆ ಬೇಕೇ ಬೇಕಂತೆ. ಅರೆ, ಇದೇನ್ ವಿಚಿತ್ರ ಅನ್ಬೇಡಿ. ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ.
ಆಹಾರ ತಿನ್ನುವ ರೀತಿ, ತಿನ್ನುವ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಕೆಲವೊಬ್ಬರು ಹೆಚ್ಚಿನ ಪ್ರಮಾಣದಲ್ಲಿ ತಿಂದರೆ, ಇನ್ನು ಕೆಲವರು ಅತೀ ಕಡಿಮೆ ತಿನ್ನುತ್ತಾರೆ. ಇನ್ನು ಕೆಲವರು ಎರಡು ಮೂರು ಹೊತ್ತು ತಿನ್ನದೇ ಇದ್ದರೂ ಆರಾಮವಾಗಿರುತ್ತಾರೆ. ಮತ್ತೆ ಕೆಲವರು ಒಂದೇ ಹೊತ್ತಿನಲ್ಲಿ ಮೂರು ಹೊತ್ತು ತಿನ್ನುವ ಆಹಾರವನ್ನು ತಿಂದುಬಿಡುತ್ತಾರೆ. ಹಾಗೆಯೇ ಇಲ್ಲೊಬ್ಬ ಮಹಿಳೆ ನೋಡಿ ಈಕೆ ಒಂದೇ ದಿನ ಭರ್ತಿ 1 ಕೆಜಿ ಬೆಣ್ಣೆ ತಿನ್ನುತ್ತಾಳಂತೆ. ಹೌದು, ಅಚ್ಚರಿ ಅನಿಸಿದರೂ ಇದು ನಿಜ.
ತಿಂಡಿ, ಊಟದ ವೇಳೆ ತಟ್ಟೆಗೆ ಒಂದು ಚಮಚ ಬೆಣ್ಣೆ ಅಥವಾ ತುಪ್ಪ ಹಾಕ್ಕೋಳ್ಳೋದು ಗೊತ್ತು. ಆದರೆ ಇಲ್ಲೊಬ್ಬಾಕೆಗೆ ದಿನಾ ತಿನ್ನೋಕೆ 1 ಕೆಜಿ ಬೆಣ್ಣೆ ಮತ್ತು ಎಣ್ಣೆ ಬೇಕೇ ಬೇಕು. ಫ್ರೆಂಚ್ ಮಹಿಳೆ (Woman)ಯೊಬ್ಬರು ಪ್ರತಿದಿನ 2 ಪೌಂಡ್‌ಗಳಿಗಿಂತ ಹೆಚ್ಚು ಬೆಣ್ಣೆ (Butter) ಮತ್ತು ಒಂದು ಲೀಟರ್ ಅಡುಗೆ ಎಣ್ಣೆ (Cooking oil)ಯನ್ನು ಸೇವಿಸುತ್ತಾನೆ ಎಂಬುದನ್ನು ಬಹಿರಂಗಪಡಿಸಿದ್ದಾಳೆ. 24 ವರ್ಷದ ಮನೋನ್ ಅಲಿಯಾಸ್ ಒನ್ಬೌ ಎಂಬಾಕೆ, ಟಿಕ್‌ಟಾಕ್‌ನಲ್ಲಿ ತಾವು ಒಂದು ದಿನದಲ್ಲಿ ತಿನ್ನುವ ಆಹಾರ (Food)ವನ್ನು ತೋರಿಸಿದರು. ಈ ಸಂದರ್ಭದಲ್ಲಿ ಅವರು ಸೇವಿಸುವ ಎಣ್ಣೆ ಮತ್ತು ಬೆಣ್ಣೆಯ ಪ್ರಮಾಣವನ್ನು ಬಹಿರಂಗಪಡಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.
ಹಸಿ ರಕ್ತದ ಪುಡ್ಡಿಂಗ್ ತಿಂದ ಮಹಿಳೆ, ಮೆದುಳು ಸೇರಿತ್ತು ಹುಳುಗಳ ರಾಶಿ!
ಈ ವೀಡಿಯೋ ಟಿಕ್‌ಟಾಕ್‌ನಲ್ಲಿ ಹತ್ತಾರು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಟಿಕ್ ಟಾಕರ್ ಮನೋನ್ ನಿಯಮಿತವಾಗಿ ಚಾಕೊಲೇಟ್ ಮತ್ತು ಫ್ರೆಂಚ್ ಫ್ರೈಗಳನ್ನು ತಿನ್ನುತ್ತಾರಂತೆ. ಆನ್‌ಲೈನ್‌ನಲ್ಲಿ ಇದನ್ನು ನೋಡಿದ ವೀಕ್ಷಕರು ವಿಚಿತ್ರ ಎಂದು ವಿವರಿಸಿದ್ದಾರೆ.
1 ಕೆಜಿ ಬೆಣ್ಣೆ, 1 ಲೀಟರ್ ಎಣ್ಣೆ ತಿಂದು ಮಾನಸಿಕ ಆರೋಗ್ಯ ಸುಧಾರಿಸಿದೆಯಂತೆ
ಸಂದರ್ಶನವೊಂದರಲ್ಲಿ ಮನೋನ್ ತಾವು ಹೀಗೆ ತಿನ್ನುವುದರಿಂದ ಆರೋಗ್ಯ (Health) ಸುಧಾರಿಸಿಕೊಂಡಿರುವುದಾಗಿ ಹೇಳಿದ್ದಾರೆ. ಪ್ಯಾನಿಕ್ ಅಟ್ಯಾಕ್‌ಗಳ ವಿರುದ್ಧ ಹೋರಾಡಲು ಇಷ್ಟು ಪ್ರಮಾಣದಲ್ಲಿ ಎಣ್ಣೆ, ಬೆಣ್ಣೆ ತಿನ್ನುವುದು ಸಹಾಯಕವಾಗಿದೆ ಎಂದಿದ್ದಾರೆ. 'ನನ್ನ ಆಹಾರದ ಅಸ್ವಸ್ಥತೆಗಳು ಉಲ್ಬಣಗೊಂಡಾಗ ನಾನು ಬೆಣ್ಣೆ ಮತ್ತು ಚಾಕೊಲೇಟ್‌ನ್ನು ಒಟ್ಟಿಗೆ ತಿನ್ನಲು ಪ್ರಾರಂಭಿಸಿದೆ. ಇದರಿಂದ ಆರೋಗ್ಯ ಸುಧಾರಿಸುತ್ತಿದೆ' ಎಂದು ತಿಳಿಸಿದರು.
ಸ್ವಿಗ್ಗಿಯ ವೆಜ್ ಬಿರಿಯಾನಿಯಲ್ಲಿ ಸಿಕ್ತು ಮಾಂಸದ ತುಂಡು..ಮಹಿಳೆ ಕಕ್ಕಾಬಿಕ್ಕಿ!
ನಾಲ್ಕು ದಿನಗಳ ವರೆಗೆ ತಿನ್ನಲು ಖರೀದಿಸಿರುವ ಭಾರೀ ಪ್ರಮಾಣ ಆಹಾರ
ಒನ್ಬೌ ತಾವು ನಾಲ್ಕು ದಿನಗಳ ವರೆಗೆ ತಿನ್ನಲು ಖರೀದಿಸಿರುವ ಆಹಾರವನ್ನು ವೀಡಿಯೋದಲ್ಲಿ ತೋರಿಸುತ್ತಾರೆ. ಇದರಲ್ಲಿ ಅವರು 18 ಬ್ಲಾಕ್ ಬೆಣ್ಣೆಯನ್ನು ತೆಗೆದಿಡುವುದನ್ನು ನೋಡಬಹುದು. ಮಾತ್ರವಲ್ಲ ಒಂದು ಲೀಟರ್ ಎಣ್ಣೆಯನ್ನು ಸಹ ಖರೀದಿಸಿರುತ್ತಾರೆ. ವೀಡಿಯೋದಲ್ಲಿ ಅವರು ಅರ್ಧ ಡಜನ್ ಬ್ಲಾಕ್‌ಗಳ ಬಿಳಿ ಚಾಕೊಲೇಟ್ ಮತ್ತು ನಾಲ್ಕು ಬಾಟಲಿಗಳ ಅಡುಗೆ ಎಣ್ಣೆಯನ್ನು ಸಹ ಖರೀದಿಸಿರುವುದನ್ನು ತೋರಿಸುತ್ತಾರೆ. ಮಹಿಳೆಯ ವೀಡಿಯೋಗೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
'ಇದು ನಾಲ್ಕು ದಿನಕ್ಕಿರುವ ಆಹಾರವೇ' ಎಂದು ವ್ಯಕ್ತಿಯೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, 'ಇದು ನಾಲ್ಕು ತಿಂಗಳುಗಳ ಆಹಾರ, ನಾಲ್ಕು ದಿನಗಳು ಅಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು 'ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ಆಹಾರ ತಿಂದರೆ ಆರೋಗ್ಯ ಸುಧಾರಿಸುವ ಬದಲು ಅನಾರೋಗ್ಯ ಕಾಡಬಹುದು' ಎಂದು ಗಾಬರಿಯಾಗಿದ್ದಾರೆ. ಅದೇನೆ ಇರ್ಲಿ ಊಟಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಎಣ್ಣೆ, ಬೆಣ್ಣೆ ಬಳಸಿದ್ರೆ ಹೇಗಪ್ಪಾ ಅಂತ ಗಾಬರಿಯಾಗ್ತಿದ್ದಾರೆ ನೆಟ್ಟಿಗರು.