ಸಂಜೆ ಟೈಮ್ ನಲ್ಲಿ ಯಾವ ಸ್ನ್ಯಾಕ್ಸ್ ಮಾಡ್ಬೇಕು? ಇದು ಅನೇಕರನ್ನು ಕಾಡುವ ಪ್ರಶ್ನೆ. ಮನೆಯಲ್ಲಿ ಬಿಸ್ಕಿಟ್ ಇದೆ ಅಂದ್ರೆ ಅದನ್ನು ಹಾಗೆ ತಿನ್ನುವ ಬದಲು ಅದಕ್ಕೊಂದಿಷ್ಟು ಶೃಂಗಾರ ಮಾಡ್ಬೇಕು. ಆಗ ಮಕ್ಕಳ ಜೊತೆ ದೊಡ್ಡವರೂ ಬಿಸ್ಕಟ್ ತಿನ್ನೋಕೆ ಇಷ್ಟಪಡ್ತಾರೆ.
ಸಂಜೆಯ ಹೊತ್ತಿನಲ್ಲಿ ತಿನ್ನಲು ಏನಾದರೂ ತಿಂಡಿ ಬೇಕೇ ಬೇಕು. ಕೆಲಸ ಮುಗಿಸಿ ಮನೆಗೆ ಬರುವ ಹಿರಿಯರಿರಲಿ ಇಲ್ಲ ಶಾಲೆ ಮುಗಿಸಿ ಮನೆಗೆ ಬರುವ ಮಕ್ಕಳಿರಲಿ ಎಲ್ಲರಿಗೂ ಸಾಮಾನ್ಯವಾಗಿ ಸಂಜೆಯ ತಿಂಡಿ ಇಷ್ಟವಾಗುತ್ತೆ. ಅದರಲ್ಲೂ ಮಕ್ಕಳಂತೂ ಎಲ್ಲ ರೀತಿಯ ತಿಂಡಿಗಳನ್ನು ತಿನ್ನೋದಿಲ್ಲ. ವಾರಪೂರ್ತಿ ಅದೇ ದೋಸೆ, ಉಪ್ಪಿಟ್ಟು, ಚಪಾತಿ ನೀಡಿದ್ರೆ ಅವರು ತಿನ್ನಲು ಆಸಕ್ತಿ ತೋರಿಸೋದಿಲ್ಲ. ನೋಡಲು ಆಕರ್ಷಕವಾದ, ಹೊಸದೆನಿಸುವ ಅಥವಾ ಬೇಕರಿ ಶೈಲಿಯ ತಿಂಡಿಯಾದರೆ ಮಕ್ಕಳು ಆಸೆಪಟ್ಟು ತಿನ್ನುತ್ತಾರೆ.
ವೃತ್ತಿನಿತರ ಮಹಿಳೆಯರಿಗೆ ಪ್ರತಿದಿನ ಏನಾದರೂ ತಿಂಡಿ (Food ) ಮಾಡುವುದು ಕಷ್ಟ. ಹಾಗಂತ ಮಕ್ಕಳಿಗೆ ಪ್ರತಿನಿತ್ಯವೂ ಬಿಸ್ಕೆಟ್, ಬ್ರೆಡ್ ಮುಂತಾದ ಹೊರಗಿನ ಆಹಾರವನ್ನು ನೀಡುತ್ತಿದ್ದರೆ ಅವರ ಆರೋಗ್ಯ ಕೂಡ ಕೆಡುತ್ತದೆ. ಹಾಗಾಗಿ ಅಂತಹ ಪ್ಯಾಕ್ಡ್ (Packed) ಫುಡ್ ಬದಲಾಗಿ ನಾವೇ ಮನೆಯಲ್ಲಿ ಕೆಲವು ಸುಲಭವಾದ, ಮಕ್ಕಳು ಇಷ್ಟಪಡುವಂತ ತಿಂಡಿಗಳನ್ನು ಮಾಡಬಹುದು. ಇದರಿಂದ ಮಕ್ಕಳು ಜಂಕ್ (Junk) ಫುಡ್ ತಿನ್ನುವುದನ್ನು ಕೂಡ ತಪ್ಪಿಸಬಹುದು. ಮಕ್ಕಳಿಗೆ ಇಷ್ಟವಾಗುವ ಆರೋಗ್ಯಕರವಾದ ಅಂತಹ ಒಂದು ತಿಂಡಿ ಇಲ್ಲಿದೆ. ಇದನ್ನು ನೀವು ಟೀ ಜೊತೆ ಕೂಡ ಸೇವಿಸಬಹುದು.
undefined
ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಲು ಬಯಸಿದ್ರೆ ಈ ಲಸ್ಸಿ ಕುಡಿಯಿರಿ…
ಮೊನೆಕೋ ಬಿಸ್ಕೆಟ್ (Monaco Biscuits) ಮೇಲೆ ಪನೀರ್, ಮಸಾಲೆಗಳು ಮತ್ತು ತರಕಾರಿಗಳನ್ನು ಹಾಕಿ ಒಂದು ಒಳ್ಳೆಯ ಸ್ನ್ಯಾಕ್ಸ್ ಅನ್ನು ತಯಾರಿಸಬಹುದು. ಈ ಪಾಕವಿಧಾನವನ್ನು ಬಹಳ ಸುಲಭ ಮತ್ತು ಬಹಳ ಬೇಗ ಮಾಡಬಹುದಾಗಿದೆ. ಒಟ್ಟಿನಲ್ಲಿ ಇದು ಒಂದು ಒಳ್ಳೆಯ ಟೀ ಟೈಮ್ ಸ್ನ್ಯಾಕ್ಸ್ ಆಗಿದೆ. ಮಕ್ಕಳ ಕಣ್ಣಿಗೆ ಆಕರ್ಷಕವಾಗಿ ಕಾಣುವ ಇದರಲ್ಲಿ ತರಕಾರಿ ಕೂಡ ಇರುವುದರಿಂದ ಮಕ್ಕಳ ಆರೋಗ್ಯಕ್ಕೂ ಇದು ಒಳ್ಳೆಯದು. ಇದನ್ನು ಬಹಳ ಕಡಿಮೆ ಸಮಯದಲ್ಲಿ ಮಾಡಬಹುದಾಗಿದೆ.
ಚೀಸಿ ಮೊನಾಕೋಸ್ ಗೆ ಬೇಕಾಗುವ ಸಾಮಗ್ರಿ :
• 2 ಚಮಚ ಬೆಣ್ಣೆ
• ಒಂದು ಕಪ್ ತರಕಾರಿ (ಕ್ಯಾರೆಟ್, ಗ್ರೀನ್ ಪೀಸ್, ಕಾರ್ನ್)
• 3 ಚಮಚ ಮೈದಾ ಹಿಟ್ಟು
• 1/3 ಕಪ್ ಹಾಲು
• 1 ಚಮಚ ಡ್ರೈಯ್ಡ್ ಒರಿಗಾನೊ ಪೌಡರ್
• 2 ಚಮಚ ಪಿಜಾ ಸಾಸ್
• ½ ಚಮಚ ಮೆಣಸಿನ ಪುಡಿ
• 2 ಚಮಚ ಹುರಿದ ಬಾದಾಮಿ ಚೂರುಗಳು
• ¼ ಕಪ್ ಹುರಿದ ಚೀಸ್
• ರುಚಿಗೆ ತಕ್ಕಷ್ಟು ಚಿಲ್ಲಿ ಫ್ಲೇಕ್ಸ್
• ಪುದೀನ ಎಲೆಗಳು
• 25-30 ಮೊನಾಕೋ ಬಿಸ್ಕೆಟ್
• ಚೀಸ್ ಸ್ಲೈಸ್ ಗಳು
Viral Video : ಐಸ್ ಕ್ರೀಂ ಜೊತೆ ತಂದೂರಿ ಚಿಕನ್, ಹೇಗಿರಬಹುದು ಟೇಸ್ಟ್?
ಚೀಸಿ ಮೊನಾಕೋಸ್ ಮಾಡುವ ವಿಧಾನ :
• ಮೊದಲು ಬಾಣಲೆಯನ್ನು ಬಿಸಿಮಾಡಿ ಅದಕ್ಕೆ ಬೆಣ್ಣೆ ಹಾಕಿ
• ಬೆಣ್ಣೆ ಕರಗಿದ ನಂತರ ಅದಕ್ಕೆ ತರಕಾರಿಗಳನ್ನು ಹಾಕಿ ತರಕಾರಿ ಮೆತ್ತಗಾಗುವವರೆಗೆ ಬೇಯಿಸಿ
• ತರಕಾರಿಗೆ ಮೈದಾ ಹಿಟ್ಟನ್ನು ಸೇರಿಸಿ 2 ನಿಮಿಷ ಬೇಯಿಸಿ
• ತರಕಾರಿಯ ಮಿಶ್ರಣಕ್ಕೆ ಹಾಲು ಹಾಕಿ ಈ ಮಿಶ್ರಣ ದಪ್ಪವಾಗುವವರೆಗೆ ತಿರುವುತ್ತಿರಿ
• ಈಗ ಗ್ಯಾಸ್ ಆಫ್ ಮಾಡಿ ಅದಕ್ಕೆ ಒರಿಗಾನೊ, ಪಿಜಾ ಸಾಸ್, ಮೆಣಸಿನ ಪುಡಿ ಮತ್ತು ಬಾದಾಮಿಯ ಚೂರು, ಚೀಸ್ ಗಳನ್ನು ಹಾಕಿ ಚೆನ್ನಾಗಿ ಬೆರೆಸಿ ಮಿಶ್ರಣ ತಣ್ಣಗಾಗಲು ಬಿಡಿ
• ಮಿಶ್ರಣ ತಣ್ಣಗಾದ ಮೇಲೆ ಮೊನಾಕೋ ಬಿಸ್ಕೆಟ್ ತೆಗೆದುಕೊಂಡು ಅದರ ಮೇಲೆ ಚೀಸ್ ಸ್ಲೈಸ್ ಅನ್ನು ಹಾಕಿ
• ನಂತರದಲ್ಲಿ ನೀವು ತಯಾರಿಸಿದ ತರಕಾರಿ ಮಿಶ್ರಣವನ್ನು ಹಾಕಿ ಅದರ ಮೇಲೆ ಪುದೀನ ಎಲೆಗಳನ್ನಿಟ್ಟು ಗಾರ್ನಿಶ್ ಮಾಡಿ
• ಹೀಗೆ ಸಿದ್ಧವಾದ ಮೊನಾಕೋ ಸ್ನ್ಯಾಕ್ಸ್ ಅನ್ನು ನೀವು ಟೊಮೆಟೊ ಸಾಸ್ ಜೊತೆಗೆ ಕೂಡ ಸರ್ವ್ ಮಾಡಬಹುದು.