ಬೆಳಗ್ಗೆದ್ದು ಕಾಫಿ, ಟೀ ಕುಡಿಯೋದಲ್ಲ ಬಾಳೆಹಣ್ಣು ತಿನ್ನಿ..ಎನರ್ಜಿಟಿಕ್ ಆಗಿರ್ತೀರಿ

By Vinutha PerlaFirst Published Jan 16, 2023, 12:49 PM IST
Highlights

ಸಾಮಾನ್ಯವಾಗಿ ಹೆಚ್ಚಿನವರು ಬೆಳಗ್ಗೆದ್ದು ಟೀ ಅಥವಾ ಕಾಫಿ ಕುಡಿಯೋ ಅಭ್ಯಾಸವನ್ನು ಹೊಂದಿರುತ್ತಾರೆ. ಆದ್ರೆ ಆರೋಗ್ಯ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಇನ್ನು ಕೆಲವರು ಬೆಳಗ್ಗೆದ್ದು ಬಿಸಿನೀರು ಕುಡಿಯುತ್ತಾರೆ. ಆದರೆ ಇದೆಲ್ಲಕ್ಕಿಂತಲೂ ಮಾರ್ನಿಂಗ್‌ ಬರೀ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನೋ ಅಭ್ಯಾಸ ಒಳ್ಳೇದು ಅನ್ನೋದು ನಿಮ್ಗೊತ್ತಾ ?

ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನಾವು ತಿನ್ನೋ ಆಹಾರನೂ ಚೆನ್ನಾಗಿರಬೇಕು. ಅದರಲ್ಲೂ ಬೆಳಗ್ಗೆ ಎದ್ದಾಗ ನಾವು ಏನು ತಿನ್ನುತ್ತೇವೆ, ಕುಡಿಯುತ್ತೇವೆ ಅನ್ನೋದು ತುಂಬಾ ಮುಖ್ಯವಾಗುತ್ತದೆ. ಹೆಚ್ಚಿನ ಆರೋಗ್ಯ ತಜ್ಞರು ಮತ್ತು ಪೌಷ್ಟಿಕತಜ್ಞರು ಬೆಳಗ್ಗೆ ನಾವೇನು ತಿನ್ನುತ್ತೇವೆ ಅನ್ನೋದು ನಮ್ಮ ಆರೋಗ್ಯದ ಮೇಲೆ ಮುಖ್ಯವಾಗಿ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ದಿನದ ಮೊದಲಿನ ಆಹಾರ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಕೊಬ್ಬುಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಬೆಳಗಿನ ಉಪಾಹಾರವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಅನಗತ್ಯ ಸಿಹಿ ಕಡುಬಯಕೆಗಳಿಂದ ನಮ್ಮನ್ನು ದೂರವಿರಿಸುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ.

ಟೀ ಅಥವಾ ಕಾಫಿ ಬದಲು ಬೆಳಗ್ಗೆದ್ದು ಏನು ತಿನ್ಬೇಕು ?
ಬಹುತೇಕರು ಚಹಾ ಅಥವಾ ಕಾಫಿಯೊಂದಿಗೆ ದಿನವನ್ನು ಆರಂಭಿಸುತ್ತಾರೆ. ಆದ್ರೆ ಈ ಅಭ್ಯಾಸ (Habit) ಒಳ್ಳೆಯದಲ್ಲ ಅಂತ ಕರೀನಾ ಕಪೂರ್, ಆಲಿಯಾ ಭಟ್ ಮತ್ತು ಕಂಗನಾ ರಣಾವತ್ ಅವರಂತಹಾ ಸೆಲೆಬ್ರಿಟಿಗಳ ಫಿಟ್‌ನೆಸ್‌ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಹೇಳುತ್ತಾರೆ. ಬದಲಿಗೆ ಆರೋಗ್ಯಕ್ಕೆ ಉತ್ತಮವಾದ ಆಹಾರ (Food)ಗಳನ್ನು ಆಯ್ಕೆ ಮಾಡಿ ಎಂದು ಸಲಹೆ ನೀಡುತ್ತಾರೆ. ರುಜುತಾ ದಿವೇಕರ್ ತಮ್ಮ ಇತ್ತೀಚಿನ Instagram ಪೋಸ್ಟ್‌ನಲ್ಲಿ, ಚಹಾ ಅಥವಾ ಕಾಫಿಯ ಬದಲಿಗೆ ಬಾಳೆಹಣ್ಣು (Banana) ಅಥವಾ ನೆನೆಸಿದ ಬಾದಾಮಿ (Almond), ಒಣದ್ರಾಕ್ಷಿ ತಿನ್ನುವಂತೆ ಸಲಹೆ ನೀಡುತ್ತಾರೆ. ಅದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ.

ಚೀಸ್ ಫುಡ್ ಬಾಯಿ ಚಪ್ಪರಿಸಿಕೊಂಡು ತಿನ್ತೀರಾ? ಟೈಪ್ 2 ಮಧುಮೇಹ ಕಾಡ್ಬೋದು ಎಚ್ಚರ

'ಜೀರ್ಣಕ್ರಿಯೆ, ಗ್ಯಾಸ್, ಹೊಟ್ಟೆ ಉಬ್ಬುವಿಕೆಯ ಸಮಸ್ಯೆಯಿದ್ದರೆ ಅಥವಾ ಶಕ್ತಿಯ ಕೊರತೆಯಿದ್ದರೆ ಅಥವಾ ಊಟದ ನಂತರ ಕಡುಬಯಕೆ ಇದ್ದರೆ, ಮಲಬದ್ಧತೆ ಇದ್ದರೆ, ಬಾಳೆಹಣ್ಣಿನಿಂದ ನಿಮ್ಮ ದಿನವನ್ನು ಪ್ರಾರಂಭಿಸಿ. ಬಾಳೆಹಣ್ಣು ತಿನ್ನಲು ಸಾಧ್ಯವಾಗದಿದ್ದರೆ ಸ್ಥಳೀಯ ಅಥವಾ ಕಾಲೋಚಿತ ಹಣ್ಣನ್ನು ತಿನ್ನಿರಿ' ಎಂದು ಅವರು ಪೋಸ್ಟ್‌ನಲ್ಲಿ ಹೇಳುತ್ತಾರೆ.

ಬೆಳಗ್ಗೆದ್ದು ಬಾಳೆಹಣ್ಣು ತಿನ್ನಬೇಕು ಯಾಕೆ ?
ಊಟದ ನಂತರ ಸಿಹಿ ತಿನ್ನಬೇಕು ಬಯಸುವವರು ಅಥವಾ ಜೀರ್ಣಕ್ರಿಯೆಯ ಸಮಸ್ಯೆ ಇರುವವರು ಬಾಳೆಹಣ್ಣನ್ನು ಹೆಚ್ಚು ತಿನ್ನುವಂತೆ ರುಜುತಾ ದಿವೇಕರ್ ಸಲಹೆ ನೀಡುತ್ತಾರೆ. ತಾಜಾ, ಸ್ಥಳೀಯ ತಳಿಗಳನ್ನು ವಾರಕ್ಕೆ ಕನಿಷ್ಠ 2-3 ಬಾರಿ ಖರೀದಿಸಿ. ಇವುಗಳನ್ನು ಮನೆಗೆ ತರಲು ಪ್ಲಾಸ್ಟಿಕ್ ಚೀಲಗಳನ್ನು ಬಳಸಬೇಡಿ, ಬದಲಿಗೆ ಬಟ್ಟೆಯ ಚೀಲವನ್ನು ಬಳಸಿ' ಎನ್ನುತ್ತಾರೆ. ಆರೋಗ್ಯ ಸ್ಥಿತಿಯನ್ನು ಅವಲಂಬಿಸಿ ಮತ್ತೊಂದು ಆಯ್ಕೆಯನ್ನು ಅವರು ನೀಡಿದ್ದಾರೆ.

6-7 ನೆನೆಸಿದ ಒಣದ್ರಾಕ್ಷಿಯನ್ನು ಬೆಳಗ್ಗೇ ತಿಂದರೆ ಆರೋಗ್ಯ ಸುಧಾರಿಸುತ್ತದೆ. 1-2 ಕೇಸರ್ ಎಳೆಗಳನ್ನೂ ಸೇರಿಸಬಹುದು ಎಂದು ಸಲಹೆ ನೀಡಿದ್ದಾರೆ. ಆದ್ರೆ ಇದು ಕಪ್ಪು ಒಣದ್ರಾಕ್ಷಿಯಾಗಿದ್ದರೆ ಒಳ್ಳೆಯದು ಎಂದು ಸಹ ಅವರು ಹೇಳುತ್ತಾರೆ. ಈ ದ್ರಾಕ್ಷಿಗಳು ಕಡಿಮೆ ಹಿಮೋಗ್ಲೋಬಿನ್, ಗ್ಯಾಸ್ ಕಿರಿಕಿರಿ, ಮೂಡ್ ಸ್ವಿಂಗ್ಸ್‌ಗಳು ಅಥವಾ PCOD (ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್) ಸಮಸ್ಯೆಗಳನ್ನು ಹೋಗಲಾಡಿಸುತ್ತದೆ ಎಂದವರು ಹೇಳುತ್ತಾರೆ.

Lakshana Serial: ಚಿತ್ರಾನ್ನದ ಮಹತ್ವ ತಿಳಿಸಿಕೊಟ್ಟ ನಕ್ಷತ್ರಾ, ಸಿಂಪಲ್ ಆಗಿ ಮಾಡೋದ್ಹೇಗೆ ?

ಬೆಳಗ್ಗೆ ಟೀ, ಕಾಫಿ ಅಥವಾ ಬಿಸಿ ನೀರನ್ನು ಕುಡಿಯುವ ಬದಲಿ ನೆನೆಸಿದ ಬಾದಾಮಿಯನ್ನು ತಿನ್ನುವುದು ತುಂಬಾ ಒಳ್ಳೆಯದು. 4-5 ನೆನೆಸಿದ ಮತ್ತು ಸಿಪ್ಪೆ ಸುಲಿದ ಬಾದಾಮಿ ಇನ್ಸುಲಿನ್ ಪ್ರತಿರೋಧ, ಮಧುಮೇಹ, PCOD ಅಥವಾ ಕಡಿಮೆ ಫಲವತ್ತತೆ ಅಥವಾ ಕಳಪೆ ನಿದ್ರೆಯ ಗುಣಮಟ್ಟವನ್ನು ಹೊಂದಿದ್ದರೆ ಶಮನ ಮಾಡುತ್ತದೆ ಎಂದು ರುಜುತಾ ದಿವೇಕರ್ ತಿಳಿಸಿದ್ದಾರೆ.

click me!