ಮಾನ್ಸೂನ್ ಎಲ್ಲರಿಗೂ ಖುಷಿ ನೀಡುವ ಕಾಲ. ಮಳೆ ಬರುವಾಗ ಮನಸ್ಸು ಮುದಗೊಳ್ಳುತ್ತದೆ ಬಿಸಿ ಬಿಸಿಯಾಗಿ ಟೀ, ಗರಿಗರಿಯಾದ ಸ್ನ್ಯಾಕ್ಸ್ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಆದ್ರೆ ಮಳೆಗಾಲದಲ್ಲಿ ಆಗಿಂದಾಗೆ ಹಸಿವಾಗ್ತಿರುತ್ತಲ್ಲಾ. ಇದಕ್ಕೆ ಕಾರಣವೇನೆಂದು ನಿಮಗೆ ಗೊತ್ತಾ ?
ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗ್ತಿದೆ. ಮನೆಯ ಹೊರಗೆ ನೀರು, ಒಳಗಡೆ ಥಂಡಿ ಥಂಡಿ. ಹೀಗಿದ್ದಾಗ ಬಿಸಿ ಬಿಸಿಯಾಗಿ ಏನಾದ್ರೂ ತಿನ್ಬೇಕು ಅನ್ಸುತ್ತೆ. ಹೀಗಾಗಿಯೇ ಕೆಲವರು ಸಂಜೆ ಹೊತ್ತು ಬಜ್ಜಿ, ಬೋಂಡಾ, ಪಕೋಡಾ ಮಾಡಿ ಸವೀತಾರೆ. ಚಾಟ್ಸ್ ಅಂಗಡಿಗಳಲ್ಲಿ ಜನ್ರು ಸಾಲುಗಟ್ಟಿ ನಿಂತಿರ್ತಾರೆ. ಆದ್ರೆ ಮಾನ್ಸೂನ್‌ನಲ್ಲಿ ಅದೆಷ್ಟು ತಿಂದ್ರೂ ತಿನ್ತಾ ಇರ್ಬೇಕು ಅನ್ಸುತ್ತೆ. ಹಾಗಂತ ಹೀಗೆ ಒಂದೆರಡು ಸಾರಿ ಅನಿಸಿದ್ರೆ ಪರ್ವಾಗಿಲ್ಲ. ಆದ್ರೆ ಮಳೆಗಾಲದಲ್ಲಿ ಆಗಾಗ ಹಸಿವಾಗುವ ಅನುಭವ ಆಗ್ತಿರುತ್ತೆ. ಏನಾದ್ರೂ ತಿನ್ಬೇಕು ಅನಿಸುತ್ತೆ. ಇದಕ್ಕೆ ಕಾರಣವೇನು ?
ದೇಹವು ತಾಪಮಾನವನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ
ಮಳೆಗಾಲದಲ್ಲಿ ಹಸಿವು ಜಾಸ್ತಿ ಎಂದು ಹೆಚ್ಚಿನವರು ಹೇಳುತ್ತಾರೆ. ಅದು ನಿಜ ಕೂಡಾ ಹೌದು ಆದ್ರೆ ಮಳೆಗಾಲದಲ್ಲಿ ಹಸಿವು (Hungry) ಹೆಚ್ಚಾಗೋಕೆ ನಿರ್ಧಿಷ್ಟ ಕಾರಣ ಕೂಡಾ ಇದೆ. ಮಳೆಗಾಲದಲ್ಲಿ ಸೋಂಕು, ಅಲರ್ಜಿ, ಜ್ವರ ಮೊದಲಾದ ಕಾಯಿಲೆಗಳು ವಕ್ಕರಿಸುತ್ತವೆ. ವಾತಾವರಣವೂ ತಂಪಿರುತ್ತದೆ. ಈ ಸಂದರ್ಭದಲ್ಲಿ ಶೀತದ ವಿರುದ್ಧ ಹೋರಾಡಲು ದೇಹವು ತಾಪಮಾನವನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. ಇದು ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಆಗಿಂದಾಗೆ ಹಸಿವಾದಂತೆ ಅನುಭವ ಆಗುತ್ತಿರುತ್ತದೆ. ಹಾಗೆಂದು ಹಸಿವಾದಾಗಲ್ಲೆಲ್ಲಾ ತಿನ್ನುವುದು ಉತ್ತಮ ಅಭ್ಯಾಸವಲ್ಲ. ಬದಲಿಗೆ ನಿರ್ಧಿಷ್ಟ ಪ್ರಮಾಣದಲ್ಲಿ ತಿನ್ನಿ. ಆದರೆ ಪೋಷಕಾಂಶಭರಿತ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವಂತೆ ಸೂಚಿಸಲಾಗುತ್ತದೆ.
ಮಳೆಗಾಲದಲ್ಲಿ ಕಾಡೋ ಡೇಂಜರಸ್ ಕಾಯಿಲೆಗಳಿವು, ಎಚ್ಚರಿಕೆಯಿರಲಿ
ಪೌಷ್ಟಿಕಾಂಶಯುಕ್ತ ಆಹಾರ ತಿನ್ನಿ
ಮಾನ್ಸೂನ್ ಮೆನುವು ಪೌಷ್ಟಿಕಾಂಶಯುಕ್ತವಾಗಿರಬೇಕು. ಮಳೆಗಾಲ (Monsoon)ದಲ್ಲಿ ಒಣಗಿದ ಹಣ್ಣುಗಳು ಮತ್ತು ಬಿಸಿ ಸೂಪ್‌ಗಳು ಕಟ್ಟುನಿಟ್ಟಾಗಿರಬೇಕು. ಜೊತೆಗೆ, ಸಿಹಿ ಸಿಹಿತಿಂಡಿಗಳು, ಹಾಲಿನ ಉತ್ಪನ್ನಗಳು ಮತ್ತು ಎಣ್ಣೆ ಮತ್ತು ತುಪ್ಪದಲ್ಲಿ ಬೇಯಿಸಿದ ಆಹಾರವನ್ನು ಸಹ ಆನಂದಿಸಬಹುದು. ಆದರೆ, ಆರೋಗ್ಯ (Health) ಸಂಬಂಧಿತ ಸಮಸ್ಯೆಗಳಿರುವವರು ತಮ್ಮ ಆಹಾರದ ಬಗ್ಗೆ ಪ್ರತ್ಯೇಕ ಕಾಳಜಿ ವಹಿಸಬೇಕು. ಕೆಲವು ಕಾಯಿಲೆಗಳಿಂದ ಬಳಲುತ್ತಿರುವ ಜನರು ಎಣ್ಣೆ ಅಥವಾ ತುಪ್ಪವನ್ನು ತಿನ್ನುವುದಿಲ್ಲ. ಆದ್ದರಿಂದ, ಮಾನ್ಸೂನ್ ಆಹಾರದಲ್ಲಿ ಇವುಗಳನ್ನು ಸೇರಿಸಬಹುದು
ಮಳೆಗಾಲದಲ್ಲಿ ತಂಪು ಪಾನೀಯಗಳ (cold drinks) ಸೇವನೆಯನ್ನು ಸಹ ತಪ್ಪಿಸಬೇಕು. ಯಾಕೆಂದರೆ ಈ ಸೀಸನ್ ನಲ್ಲಿ ಜೀರ್ಣಾಂಗ ವ್ಯವಸ್ಥೆಯು ತುಂಬಾನೆ ದುರ್ಬಲವಾಗಿದೆ, ಹಾಗಿರುವಾಗ ನೀವು ತಂಪು ಪಾನೀಯ ಸೇವನೆ ಮಾಡಿದ್ರೆ, ಅವು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿಯಾಗಬಹುದು. ಐಸ್‌ಕ್ರೀಂ, ಚಾಕೊಲೇಟ್‌ಗಳ ಸೇವನೆ ಸಹ ಒಳ್ಳೆಯದಲ್ಲ. ಆದುದರಿಂದ ಎಚ್ಚರಿಕೆಯಿಂದ ಇರಿ.
ಮಳೆಗಾಲದಲ್ಲಿ ಬೆಚ್ಚಗಿರಬೇಕು ಅಂದ್ರೆ ಇಂಥದ್ದನ್ನೆಲ್ಲಾ ತಿನ್ಬೇಕು
ಮಳೆಗಾಲದಲ್ಲಿ ಏನೆಲ್ಲಾ ತಿಂದ್ರೆ ಒಳ್ಳೇದು ?
ಮಳೆಗಾಲದಲ್ಲಿ ನಿಂಬೆ, ಜಲಜೀರಾದಂತಹ ಪಾನೀಯಗಳ ಸೇವನೆಯು ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಶುಂಠಿ ಚಹಾ, ಕಷಾಯ ಮತ್ತು ಸೀಸನಲ್ ಹಣ್ಣಿನ ರಸಗಳನ್ನು ಸೇವಿಸುವುದು ಸಹ ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ. ಇಮ್ಯೂನಿಟಿ ಬೂಸ್ಟ್ ಮಾಡಲು ಸಹಾಯ ಮಾಡುತ್ತೆ. ಮಳೆಗಾಲದಲ್ಲಿ ನಿಮ್ಮ ಆಹಾರದಲ್ಲಿ ಬೆಳ್ಳುಳ್ಳಿ, ಶುಂಠಿ ಮತ್ತು ಅರಿಶಿನವನ್ನು ಯಥೇಚ್ಛವಾಗಿ ಬಳಸಿ. ಅವು ಆಂಟಿ-ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿವೆ. ಈ ಸೀಸನ್ ನಲ್ಲಿ ಉಂಟಾಗುವ ಶೀತ-ಕೆಮ್ಮಿನ ವಿರುದ್ಧ ಹೋರಾಡಲು ಪರಿಣಾಮಕಾರಿ ಆಹಾರ ಪದಾರ್ಥಗಳಿವೆ.
ಮಳೆಗಾಲದಲ್ಲಿ ಅಡುಗೆಯಲ್ಲಿ ಸೊಪ್ಪನ್ನು ಬಳಸುವುದು ತಪ್ಪಿಸಿ.ಹಸಿರು ಎಲೆಗಳ ತರಕಾರಿಗಳು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಮಳೆಗಾಲದಲ್ಲಿ ಇವುಗಳ ಸೇವನೆ ಉತ್ತಮವಲ್ಲ. ಹಸಿರು ತರಕಾರಿಗಳನ್ನು ಸುಲಭವಾಗಿ ಕಲುಷಿತಗೊಳಿಸುವ ವಿವಿಧ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಮಾನ್ಸೂನ್ ಸೂಕ್ತ ಸಮಯವಾಗಿದೆ. ಹೀಗಾಗಿ ಇದನ್ನು ಬೆಳೆಯುವ ಮಣ್ಣು ಕೂಡ ಹೆಚ್ಚು ಕಲುಷಿತವಾಗಬಹುದು.ತರಕಾರಿಗಳಿಗಾಗಿ ಹಾಗಲಕಾಯಿ, ಸೋರೆಕಾಯಿ, ಹೀರೆಕಾಯಿ ಮೊದಲಾದ ತರಕಾರಿಗಳನ್ನು ಅಡುಗೆಯಲ್ಲಿ ಬಳಸೋದು ಒಳ್ಳೆಯದು. ಇವು ಮಳೆಗಾಲಕ್ಕೆ ಸೂಕ್ತವಾದ ತರಕಾರಿಗಳಾಗಿವೆ. ಇವು ಉತ್ತಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
Monsoon: ಸಿಕ್ಕಿದ್ದೆಲ್ಲ ಹಣ್ಣು ತಿಂದ್ರೆ ಆರೋಗ್ಯ ಕೆಡ್ಬಹುದು ಜೋಪಾನ
ಮಳೆಗಾಲದಲ್ಲಿ ಅತಿಯಾಗಿ ತಿನ್ನಬೇಡಿ
ಮಳೆಗಾಲದಲ್ಲಿ ಅತಿಯಾಗಿ ತಿನ್ನುವುವ ಅಭ್ಯಾಸ ಒಳ್ಳೆಯದಲ್ಲ. ಬದಲಾಗಿ ಕಡಿಮೆ ತಿನ್ನಿ ಆದರೆ ಪೋಷಕಾಂಶಭರಿತ ಆಹಾರಗಳನ್ನು ತಿನ್ನಿ. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯೋದನ್ನು ಮರೆಯಬೇಡಿ. ಮಾಂಸಾಧಾರಿತ ಆಹಾರಗಳ ಸೇವನೆ ಕಡಿಮೆ ಮಾಡಿ. ಜಂಕ್‌ಫುಡ್, ಕರಿದ ತಿಂಡಿಗಳ ಸೇವನೆಯೂ ಒಳ್ಳೆಯದಲ್ಲ.