ಬಾಸ್‌ಮತಿ ಅಕ್ಕಿ ಹೇಗಿರಬೇಕು ಎಂಬುದರ ಕುರಿತಾಗಿ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಗುಣಮಟ್ಟವನ್ನು ನಿಗದಿ ಮಾಡಿದೆ. ಈ ಗುಣಮಟ್ಟವನ್ನು ಆ.1ರಿಂದ ದೇಶಾದ್ಯಂತ ಜಾರಿ ಮಾಡಲಾಗುತ್ತದೆ.
ನವದೆಹಲಿ: ಬಾಸ್‌ಮತಿ ಅಕ್ಕಿ ಹೇಗಿರಬೇಕು ಎಂಬುದರ ಕುರಿತಾಗಿ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಗುಣಮಟ್ಟವನ್ನು ನಿಗದಿ ಮಾಡಿದೆ. ಈ ಗುಣಮಟ್ಟವನ್ನು ಆ.1ರಿಂದ ದೇಶಾದ್ಯಂತ ಜಾರಿ ಮಾಡಲಾಗುತ್ತದೆ. ಬಾಸ್‌ಮತಿ ಅಕ್ಕಿ (Basmati rice) ಪ್ರೀಮಿಯಂ ಗುಣಮಟ್ಟದ ಅಕ್ಕಿಯಾಗಿದ್ದು, ಇತರ ತಳಿಗಳಿಗಿಂತ ಹೆಚ್ಚಿನ ಬೆಲೆ ಹೊಂದಿದೆ. ಹಾಗಾಗಿ ಇದು ಇತರ ಅಕ್ಕಿಗಳಿಗಿಂತ ಹೆಚ್ಚಿನ ಕಲಬೆರಕೆಗೆ ಒಳಗಾಗುವ ಸಾಧ್ಯತೆಗಳಿರುವುದರಿಂದ ಗುಣಮಟ್ಟವನ್ನು ನಿಗದಿ ಮಾಡಲು ನಿರ್ಧರಿಸಲಾಗಿದೆ. ಈ ಕುರಿತಾಗಿ ಫೆಸಾಯ್ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಅದರ ಪ್ರಕಾರ, ಬ್ರೌನ್ ಬಾಸ್‌ಮತಿ (brown basmati), ಪಾಲಿಸ್ ಮಾಡಿದ ಬಾಸ್‌ಮತಿ (polished basmati), ಅರೆ ಬೇಯಿಸಿದ ಬಾಸ್‌ಮತಿ ಅಕ್ಕಿಗಳು (semi-cooked basmati) ನೈಸರ್ಗಿಕವಾಗಿ ಸುಗಂಧವನ್ನು (emit fragrance) ಹೊರಸೂಸಬೇಕು. ಅಲ್ಲದೇ ಇವುಗಳು ಕೃತಕ ಬಣ್ಣ, ಪಾಲಿಶ್ ಮತ್ತು ಸುಗಂಧದಿಂಧ ಮುಕ್ತವಾಗಿರಬೇಕು ಎಂದು ತಿಳಿಸಲಾಗಿದೆ.
ಅಲ್ಲದೇ ಅಕ್ಕಿಯನ್ನು ಬೇಯಿಸುವ ಮುನ್ನ ಮತ್ತು ಬೇಯಿಸಿದ ನಂತರ ಅವುಗಳ ಗಾತ್ರದ ಕುರಿತಾಗಿಯೂ ಗುಣಮಟ್ಟಗಳನ್ನು ನಿಗದಿ ಮಾಡಲಾಗಿದೆ. ಬ್ರೌನ್ ಬಾಸ್‌ಮತಿ 7 ಮಿ.ಮೀ ಉದ್ದವಿರಬೇಕು, ಬೇಯಿಸಿದ ಬಳಿಕ 12 ಮಿ.ಮೀ ಆಗಿರಬೇಕು. ಮಿಲ್ಲಡ್ ಬಾಸ್‌ಮತಿ ಅಕ್ಕಿ 6.61 ಮಿ.ಮೀ ಉದ್ದವಿರಬೇಕು, ಬೇಯಿಸಿದ ಬಳಿಕ 12 ಮಿ.ಮೀ ಉದ್ದ ಆಗಬೇಕು ಎಂದು ತಿಳಿಸಲಾಗಿದೆ.
ಸಾದಾ ಅನ್ನ, ಬಾಸ್ಮತಿ ರೈಸ್ ರುಚಿ, ಪರಿಮಳ ಪಡೆಯಲು ಹೀಗ್ ಮಾಡಿ
Biryani Recipe: ಜಸ್ಟ್ ಹತ್ತೇ ನಿಮಿಷದಲ್ಲಿ ರೆಡಿ ಮಾಡಿ