Kids health : ರಾತ್ರಿ ಮಲಗೋ ಮುನ್ನ ಈ ಜ್ಯೂಸ್ ನೀಡಿದ್ರೆ ಮಕ್ಕಳ ಮಲಬದ್ಧತೆ ಮಾಯ

By Suvarna News  |  First Published Jan 13, 2023, 3:19 PM IST

ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚಿನ ಗಮನ ನೀಡ್ಬೇಕು. ಮಕ್ಕಳ ಒಣ ಆಹಾರ ಮಲಬದ್ಧತೆಗೆ ಕಾರಣವಾಗುತ್ತದೆ. ಚಳಿಗಾಲದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚು. ಮಕ್ಕಳು ಪ್ರತಿ ದಿನ ಮಲವಿಸರ್ಜನೆ ಮಾಡ್ಬೇಕೆಂದ್ರೆ ಈ ಹಣ್ಣಿನ ಜ್ಯೂಸ್ ನೀಡ್ಬೇಕು. 
 


ಮಲಬದ್ಧತೆ ಎನ್ನುವುದು ಎದೆಹಾಲು ಕುಡಿಯುವ ಮಗುವಿನಿಂದ ಹಿಡಿದು ದೊಡ್ಡವರನ್ನೂ ಕಾಡುವ ಸಾಮಾನ್ಯ ತೊಂದರೆಯಾಗಿದೆ. ನಮ್ಮ ನಿತ್ಯದ ಆಹಾರ ಹಾಗೂ ಅಭ್ಯಾಸಗಳು ಇದಕ್ಕೆ ಕಾರಣವಾಗಿರಬಹುದು. ಇತ್ತೀಚಿನ ದಿನಗಳಲ್ಲಿ ಮಕ್ಕಳು ತರಕಾರಿ ಅಂದ್ರೆ ದೂರ ಓಡ್ತಾರೆ. ಆರೋಗ್ಯಕ ಆಹಾರದ ಬದಲು ಬಿಸ್ಕೆತ್, ಚಾಕಲೇಟ್ ಸೇವನೆಯನ್ನು ಇಷ್ಟಪಡ್ತಾರೆ. ಅದಲ್ಲದೇ ಮಕ್ಕಳು ಸೇವಿಸುವ ಹಾಲು, ಘನ ಆಹಾರ, ತರಹೇವಾರಿ ಔಷಧಗಳು, ಜಂಕ್ ಫುಡ್, ಸ್ನ್ಯಾಕ್ಸ್ ಮುಂತಾದವುಗಳಿಂದಲೂ ಮಲಬದ್ಧತೆ ಉಂಟಾಗಬಹುದು. ಮಲಬದ್ಧತೆಯ ಕಾರಣದಿಂದಾಗಿ ಹೊಟ್ಟೆ ನೋವು, ಹಸಿವಿನ ಕೊರತೆ, ಹೊಟ್ಟೆ ಉಬ್ಬರ ಮುಂತಾದ ತೊಂದರೆ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತವೆ.

ಮಕ್ಕಳ (Children) ಲ್ಲಿ ಮಲಬದ್ಧತೆ (Constipation) ಯ ಸಮಸ್ಯೆಯನ್ನು ನೀಗಿಸಲು ನಾವು ಯಾವ್ಯಾವುದೋ ಔಷಧ (Medicine) ವನ್ನೋ ಅಥವಾ ತರಕಾರಿಗಳನ್ನೋ ಕೊಟ್ಟರೆ ಮಕ್ಕಳು ಅದನ್ನು ಸೇವಿಸುವುದಿಲ್ಲ. ಅದು ಅವರಿಗೆ ರುಚಿಸುವುದೂ ಇಲ್ಲ. ಹಾಗಾಗಿ ಮಕ್ಕಳು ಇಷ್ಟಪಡುವಂತ ಕಲರ್ ಫುಲ್ ಜ್ಯೂಸ್ (Juice) ಗಳನ್ನು ನೀಡಿದ್ರೆ ಮಕ್ಕಳು ಅದನ್ನು ಪ್ರೀತಿಯಿಂದ ಕುಡಿಯುತ್ತಾರೆ. ಅಂತಹ ಒಂದು ಜ್ಯೂಸ್ ಬಗ್ಗೆ ಮಾಹಿತಿ ಇಲ್ಲಿದೆ.

ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸ ಕುಡಿದ್ರೆ ತೂಕ ಇಳಿಯುತ್ತಂತೆ!

Tap to resize

Latest Videos

ಪ್ರೂನ್ ಹಣ್ಣಿನ ಜ್ಯೂಸ್ ನಿಂದ ಇದೆ ಇಷ್ಟೆಲ್ಲ ಲಾಭ : ಪ್ರೂನ್ ಹಣ್ಣು (Prune) ಮಕ್ಕಳ ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡಲು ಸಹಕಾರಿಯಾಗಿದೆ. ಪ್ರೂನ್ ಹಣ್ಣಿನಲ್ಲಿ ಪೋಷಕಾಂಶಗಳು ಮತ್ತು ಖನಿಜಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಇದು ವಿರೇಚಕದಂತೆ ಕೆಲಸ ಮಾಡುತ್ತದೆ. ಪ್ರೂನ್ ಹಣ್ಣು ಮಕ್ಕಳಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸಿ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.
ಪ್ರೂನ್ ಹಣ್ಣಿನ ರಸವು ಮಕ್ಕಳಲ್ಲಿ ಡಿಹೈಡ್ರೇಟ್ ಸಮಸ್ಯೆಯನ್ನು ದೂರಮಾಡುತ್ತದೆ. ಇದರಲ್ಲಿರುವ ನಾರಿನಂಶ ಮತ್ತು ಫೈಬರ್ ಅಂಶವು ಮಲವನ್ನು ತೆಳುವಾಗಿಸಿ ಅದು ಸರಾಗವಾಗಿ ಹೊರಹೋಗುವಂತೆ ಮಾಡುತ್ತದೆ. ಪ್ರೂನ್ ನಲ್ಲಿರುವ ಆರೋಗ್ಯಕರ ಕಿಣ್ವಗಳು ಜೀರ್ಣಾಂಗವನ್ನು ಸ್ವಚ್ಛಗೊಳಿಸಿ ಜೀರ್ಣಕ್ರಿಯೆ ಸುಲಭವಾಗುವಂತೆ ಮಾಡುತ್ತವೆ.

ಪ್ರೂನ್ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಚಿಕ್ಕ ಮಕ್ಕಳಲ್ಲಿ ಕಾಡುವ ಕರುಳಿನ ಸಮಸ್ಯೆಗಳು ವಾಸಿಯಾಗುತ್ತದೆ. ಪ್ಲಮ್ ಎಂಟಿ ಆಕ್ಸಿಟೆಂಟ್ ಅಂಶಗಳ ಆಗರವಾಗಿದ್ದು, ಜೀವಕೋಶಗಳಿಗೆ ಹಾನಿಯಾಗದಂತೆ ಇದು ತಡೆಯುತ್ತವೆ. ಹಾಗಾಗಿ ನೀವು ಮಕ್ಕಳಿಗೆ ಈ ಪ್ರೂನ್ ಜ್ಯೂಸ್ ನೀಡ್ಬೇಕು.

ಪ್ರೂನ್ ಜ್ಯೂಸ್ ಹೇಗೆ ಮಾಡೋದು? : 
ತೊಳೆದು ಒಣಗಿಸಿದ ಪ್ರೂನ್ ಹಣ್ಣನ್ನು ಹಬೆಯಲ್ಲಿ ಬೇಯಿಸಿ ನಂತರ ಅದರ ರಸವನ್ನು ತೆಗೆಯಬೇಕು. ಇದು ಸಂಪೂರ್ಣವಾಗಿ ನೈಸರ್ಗಿಕ ಜ್ಯೂಸ್ ಆಗಿದ್ದು, ಚಿಕ್ಕ ಮಗುವಿಗೂ ಇದನ್ನು  ನೀಡಬಹುದು. ಮೊದಲು ಸ್ವಲ್ಪ ಪ್ರೂನ್ ಹಣ್ಣಿನ ರಸಕ್ಕೆ ಸ್ವಲ್ಪ ನಿಂಬೆರಸ ಮತ್ತು ಒಂದು ಲೋಟ ನೀರನ್ನು ಬೆರೆಸಿ ಜ್ಯೂಸ್ ತಯಾರಿಸಬೇಕು. ರಾತ್ರಿ ಮಲಗುವ ಮೊದಲು ಮಕ್ಕಳಿಗೆ ಈ ಜ್ಯೂಸ್ ನೀಡ್ಬೇಕು. ಬೆಳಿಗ್ಗೆ ಮಕ್ಕಳಿಗೆ ಮಲ ವಿಸರ್ಜನೆ ಸರಾಗವಾಗುತ್ತದೆ. ಪ್ರೂನ್ ಹಣ್ಣನ್ನು ಬೇರೆ ಹಣ್ಣಿನ ಜೊತೆ ಸೇರಿಸಿ ಕೂಡ ಜ್ಯೂಸ್ ತಯಾರಿಸಬಹುದು. ಉದಾಹರಣೆಗೆ ಶುದ್ಧ ತೆಂಗಿನಹಾಲು, ಬೋರೆಹಣ್ಣು, ಬಾಳೆಹಣ್ಣು, ಅಗಸೆಬೀಜ ಮತ್ತು ಪ್ರೂನ್ ಹಣ್ಣಿನ ರಸವನ್ನು ಸೇರಿಸಿ ಜ್ಯೂಸ್ ತಯಾರಿಸಿ ಮಕ್ಕಳಿಗೆ ಕೊಡಬಹುದು.

ಮಧುಮೇಹಿಗಳಿಗೆ ಬೀಟ್ ರೂಟ್ ಬೆಸ್ಟ್! ಎಷ್ಟು ಪ್ರಮಾಣ ಬೆಟರ್?

ತಜ್ಞರ ಪ್ರಕಾರ, ಒಂದು ಬಾರಿ ಮಗುವಿಗೆ 60ರಿಂದ 120 ಮಿ.ಲೀ ಜ್ಯೂಸ್ ಕೊಡಬಹುದಾಗಿದೆ. ಪ್ರೂನ್ ಹಣ್ಣಿನ ಜ್ಯೂಸ್ ಸೇವನೆಯಿಂದ ಮಕ್ಕಳಲ್ಲಿ ಜೀರ್ಣಕ್ರಿಯೆ ಸರಾಗವಾಗುತ್ತದೆ. ಇದರಿಂದ ಮಗುವಿನಲ್ಲಿ ಮಲಬದ್ಧತೆಯ ಸಮಸ್ಯೆ ಕೂಡ ದೂರವಾಗಿ ಮಗು ಆರೋಗ್ಯವಾಗಿರುತ್ತದೆ. ಮಕ್ಕಳು ಒಂದೇ ಆಹಾರವನ್ನು ಪ್ರತಿ ದಿನ ಸೇವನೆ ಮಾಡಲು ಇಷ್ಟಪಡುವುದಿಲ್ಲ. ಹಾಗಾಗಿ ನೀವು ಒಂದು ದಿನ ಪ್ರೂನ್ ಜ್ಯೂಸ್ ನೀಡಿದ್ರೆ ಮತ್ತೊಂದು ದಿನ ಸ್ಮೂತಿ ಮಾಡಿ ನೀಡಬೇಕು. 
 

click me!