Indian Food: ಹಪ್ಪಳ ಇಲ್ಲದ ಊಟವೇ ಕಂಪ್ಲೀಟ್ ಆಗೋಲ್ಲ, ಅಷ್ಟಕ್ಕೂ ಇದೆಲ್ಲಿ ಹುಟ್ಟಿ ಕೊಂಡಿದ್ದು?

By Suvarna NewsFirst Published Jan 13, 2023, 3:00 PM IST
Highlights

ಭಾರತದ ತಿಂಡಿಗಳಲ್ಲಿ ಹಪ್ಪಳ ಕೂಡ ಒಂದು. ಹಪ್ಪಳ – ಉಪ್ಪಿನಕಾಯಿ ಇದ್ರೆ ಸೆಪ್ಪೆ ಊಟವಾದ್ರೂ ಹೊಟ್ಟೆ ಸೇರುತ್ತದೆ. ರುಚಿ ರುಚಿ ಹಪ್ಪಳವನ್ನು ಬಾಯಿ ಚಪ್ಪರಿಸಿ ತಿನ್ನುವ ನಮಗೆ ಅದ್ರ ಇತಿಹಾಸ ಗೊತ್ತಿಲ್ಲದೆ ಹೋದ್ರೆ ಹೇಗೆ?
 

ಹಪ್ಪಳ ಇಲ್ಲದೆ ಊಟ ರುಚಿಸೋದಿಲ್ಲ ಎನ್ನುವವರಿದ್ದಾರೆ. ಅನ್ನ – ರಸಂ ಊಟಕ್ಕೆ ಮಸಾಲೆ ಹಪ್ಪಳವಿದ್ರೆ ರುಚಿ ದುಪ್ಪಟ್ಟಾಗುತ್ತದೆ. ಸಿಂಪಲ್ ಅಡುಗೆಯನ್ನೂ ಹಬ್ಬದೂಟ ಮಾಡುವ ಶಕ್ತಿ ಈ ಹಪ್ಪಳಕ್ಕಿದೆ. ಹಪ್ಪಳವನ್ನು ನಾವು ನಾನಾ ರೀತಿಯಲ್ಲಿ ತಯಾರಿಸ್ತೇವೆ. ಅಕ್ಕಿ ಹಪ್ಪಳ, ರವಾ ಹಪ್ಪಳ, ಮಸಾಲೆ ಹಪ್ಪಳ, ಉದ್ದಿನ ಹಪ್ಪಳ, ಹಲಸಿನ ಹಪ್ಪಳ ಹೀಗೆ ನಾನಾ ರೀತಿಯಲ್ಲಿ ನಾನಾ ರುಚಿಯಲ್ಲಿ ಹಪ್ಪಳವನ್ನು ತಯಾರಿಸಬಹುದು. ಹಾಗೆಯೇ ನಾನಾ ರೀತಿಯಲ್ಲಿ ಬಳಕೆ ಮಾಡ್ತೇವೆ. ಅನ್ನದ ಜೊತೆ ಮಾತ್ರವಲ್ಲ ಹೋಟೆಲ್ ಹಾಗೂ ಮನೆಗಳಲ್ಲಿ ಮಸಾಲಾ ಪಾಪಡ್ ಊಟದ ಸ್ಟಾರ್ಟರ್ ಆಗಿದೆ. 

ಈ ಹಪ್ಪಳ (Papad) ವನ್ನು ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಕರ್ನಾಟಕ (Karnataka) ದಲ್ಲಿ ಇದನ್ನು ಹಪ್ಪಳ ಅಂತ ಕರೆದ್ರೆ ತಮಿಳುನಾಡಿ (Tamil Nadu) ನಲ್ಲಿ ಅಪ್ಪಳಂ ಎಂದು ಕರೆಯಲಾಗುತ್ತದೆ. ಆಂಧ್ರಪ್ರದೇಶದಲ್ಲಿ ಅಪ್ಪಡಂ, ಕೇರಳದಲ್ಲಿ ಪಾಪಡುಂ ಹೀಗೆ ನಾನಾ ಹೆಸರುಗಳು ಇದಕ್ಕಿವೆ. ಈ ಹಪ್ಪಳ ಈಗಿನದ್ದಲ್ಲ. ಅದ್ರ ಹಿಂದೆ ದೊಡ್ಡ ಇತಿಹಾಸವಿದೆ. ನಾವಿಂದು ಹಪ್ಪಳ ಎಲ್ಲಿ ಶುರುವಾಯ್ತು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಹಪ್ಪಳದ ಇತಿಹಾಸ : ಹಪ್ಪಳದ ಇತಿಹಾಸ ಕ್ರಿಸ್ತ ಪೂರ್ವ 500 ವರ್ಷಗಳಷ್ಟು ಹಿಂದಿನದು ಎಂದು ನಂಬಲಾಗಿದೆ. ಹಲವಾರು ವರದಿಗಳ ಪ್ರಕಾರ, ಇದನ್ನು ಬೌದ್ಧ- ಜೈನ ಕ್ಯಾನೊನಿಕಲ್ ಸಾಹಿತ್ಯದಲ್ಲಿಯೂ ಉಲ್ಲೇಖಿಸಲಾಗಿದೆ. ಆಹಾರ ಇತಿಹಾಸಕಾರ ಮತ್ತು ಲೇಖಕ ಕೆಟಿ ಆಚಾರ್ಯ ಅವರು ಬರೆದಿರುವ 'ಎ ಹಿಸ್ಟಾರಿಕಲ್ ಡಿಕ್ಷನರಿ ಆಫ್ ಇಂಡಿಯನ್ ಫುಡ್' ಎಂಬ ಪುಸ್ತಕದಲ್ಲಿ ಈ ಬಗ್ಗೆ ಹೇಳಲಾಗಿದೆ. ಆಗ ಉದ್ದಿನಬೇಳೆ, ಹೆಸರು ಬೇಳೆ, ಕಡಲೆ ಬೇಳೆಯಿಂದ ಹಪ್ಪಳ ತಯಾರಿಸಲಾಗುತ್ತಿತ್ತು ಎಂದು ಪುಸ್ತಕದಲ್ಲಿ ಹೇಳಲಾಗಿದೆ.

ಊಟದ ಪ್ಲೇಟ್‌ ಹೀಗಿದ್ದರೆ ಆರೋಗ್ಯ ಸಿದ್ಧಿ! ಜ್ಯೋತಿಷ್ಯ ಹೇಳೋದೇನು?

ನಿಮಗೆ ಗೊತ್ತಿರುವಂತೆ ಕೇವಲ ಬೇಳೆಯಿಂದ ಮಾತ್ರ ಹಪ್ಪಳವನ್ನು ತಯಾರಿಲಾಗುವುದಿಲ್ಲ. ಸಾಬುದಾನ, ಆಲೂಗಡ್ಡೆ, ಕ್ಯಾರೆಟ್ ಹೀಗೆ ಬೇರೆ ಬೇರೆ ತರಕಾರಿಗಳಿಂದ ಕೂಡ ಹಪ್ಪಳ ಮಾಡಲಾಗುತ್ತದೆ. ಈ ತರಕಾರಿ ಹಪ್ಪಳಕ್ಕೂ 1500 ವರ್ಷಗಳ ಇತಿಹಾಸವಿದೆ ಎಂದು ಇತಿಹಾಸ ತಜ್ಞರು ನಂಬುತ್ತಾರೆ. ತರಕಾರಿಗಳನ್ನು ಒಣಗಿಸುವುದು ಮತ್ತು ಸಂಗ್ರಹಿಸುವುದು ಪ್ರಾಚೀನ ಕಾಲದ ತಂತ್ರವಾಗಿತ್ತು. ಜೈನ ವ್ಯಾಪಾರಿ ಸಮುದಾಯದಲ್ಲಿ ಇದು ಪ್ರಮುಖವಾಗಿ ಕಂಡುಬರುತ್ತದೆ.  ಅವರು ಋತುವಿನಲ್ಲಿ ಲಭ್ಯವಿರುವ ತರಕಾರಿಗಳನ್ನು ಒಣಗಿಸಿ ನಂತರ ಅವುಗಳನ್ನು ಸಂಗ್ರಹಿಸುತ್ತಿದ್ದರು. ತರಕಾರಿಗಳನ್ನು ಪುನಃ ಹೈಡ್ರೀಕರಿಸಿ ಶೇಖರಿಸಿಡಲಾಗುತ್ತಿತ್ತು. ವ್ಯಾಪಾರದ ನಿಮಿತ್ತ ಊರೂರು ಸುತ್ತುವ ವೇಳೆ ಅವರು ಇದರಿಂದ ಬಳಸುತ್ತಿದ್ದರು.   

ಹಪ್ಪಳ ಹಾಗೂ ಸಿಂಧಿ ಜನಾಂಗದ ನಂಟು : ನಾವು ಹಪ್ಪಳವನ್ನು ಕೇವಲ ಒಂದು ವ್ಯಂಜನವನ್ನಾಗಿ ನೋಡ್ತೇವೆ. ಆದ್ರೆ ಸಿಂಧಿ ಜನಾಂಗ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಮನೆಗೆ ಯಾವುದೇ ಅತಿಥಿ ಬರಲಿ, ಅವರಿಗೆ ನೀರು ಕೊಡುವ ಪದ್ಧತಿ ನಮ್ಮಲ್ಲಿದೆ. ಸಿಂಧಿ ಜನಾಂಗದವರು ನೀರಿನ ಜೊತೆ ಹಪ್ಪಳವನ್ನು ನೀಡ್ತಾರೆ. ಇದು ಗಮನಾರ್ಹ ಇತಿಹಾಸ ಹೊಂದಿದೆ.

ನಿಮಗೆ ತಿಳಿದಿರುವಂತೆ ಭಾರತದ ಸಿಂಧಿ ಹಿಂದೂಗಳು ಆಧುನಿಕ ಪಾಕಿಸ್ತಾನದಲ್ಲಿ ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಭಾರತದ ವಿಭಜನೆಯ ನಂತರ ಬಹುತೇಕ ಸಿಂಧಿಗಳು ಭಾರತಕ್ಕೆ ವಲಸೆ ಬಂದರು. ಆದ್ರೆ ಅವರ ಪುರಾತನ ಪ್ರದೇಶಗಳು ಅವರ ಆಹಾರ ಮತ್ತು ಜೀವನಶೈಲಿಯ ಮೇಲೆ ಮಹತ್ವದ ಪ್ರಭಾವ ಬೀರಿದವು. ಶುಷ್ಕ ವಾತಾವರಣದಲ್ಲಿ ದೇಹವನ್ನು ಹೈಡ್ರೇಟ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಹಪ್ಪಳ ಕ್ರಮೇಣ ಮುಖ್ಯ ಆಹಾರವಾಯಿತು. ಸಿಂಧಿ ಹೆಂಗಸರು ಮತ್ತು ಮಕ್ಕಳು ತಮ್ಮ ಅಂಗಳದಲ್ಲಿ ಉದ್ದಿನ ಬೇಳೆ, ಕರಿಮೆಣಸು ಮತ್ತು ಜೀರಿಗೆಯಿಂದ ಮಾಡಿದ ಹಿಟ್ಟನ್ನು ಬಳಸಿ ಹಪ್ಪಳ ಮಾಡುವುದನ್ನು ನೀವು ಸಾಮಾನ್ಯವಾಗಿ ನೋಡಬಹುದು. 

ತರಕಾರಿ ತಿಂದ್ರೂ ಹೊಟ್ಟೆ ಕೆಡುತ್ತೆ, ನೀವು ಸರಿಯಾದ ರೀತೀಲಿ ತಿನ್ತಿದ್ದೀರಾ ಚೆಕ್ ಮಾಡ್ಕೊಳ್ಳಿ

ಅಮೃತಸರಿ ಪಾಪಡ್  : ಅಮೃತಸರಿ ಪಾಪಡ್ ಉತ್ತರ ಭಾರತದ ರಾಜ್ಯವಾದ ಪಂಜಾಬ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಜನಪ್ರಿಯ ತಿಂಡಿಯಾಗಿದೆ. ಇದು ಭಾರತದಾದ್ಯಂತ ಪ್ರಸಿದ್ಧವಾಗಿದೆ ಮತ್ತು ವಿದೇಶಗಳಿಗೂ ರಫ್ತಾಗುತ್ತದೆ.
 

click me!