ಪೇಸ್ಟ್ರೀಸ್ ಅಂದ್ರೆ ಎಲ್ಲರಿಗೂ ಇಷ್ಟ. ಬೇರೆಲ್ಲಾ ತಿನ್ನೋವಾಗ ಡಯಟ್ (Diet), ಶುಗರ್ ಇದೆ ಅಂತ ನೆಪ ಹೇಳಿದ್ರೂ ಪೇಸ್ಟ್ರೀ (Pastry) ಕೇಕ್ ಎಂದಾಗ ಎಲ್ಲರಿಗೂ ಬೇಕು. ಪೇಸ್ಟ್ರಿ ಕೇಕ್ (Cake) ಏನೋ ಎಲ್ರಿಗೂ ಗೊತ್ತು. ಹಾಗಿದ್ರೆ ಪೇಸ್ಟ್ರೀ ಫ್ಲೋರ್ ಅಂದ್ರೇನು ? ಅದನ್ನು ಹೇಗೆ ಮಾಡ್ತಾರೆ ?
ಗೋಧಿ ಹಿಟ್ಟು, ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್ (Flour).ಯಪ್ಪಾ ಎಷ್ಟೊಂದು ಹಿಟ್ಟುಗಳು. ಥಟ್ಟಂತ ನೋಡಿದ್ರೆ ಯಾವ್ದು ಅಂತಾನೇ ಗೊತ್ತಾಗಲ್ಲ. ಹೀಗೆ ಅನ್ನೋರ ಪೈಕಿ ನೀವು ಒಬ್ರಾ. ಹಾಗಿದ್ರೆ ನೀವು ಈ ಹಿಟ್ಟನ್ನು ನೋಡಿದ್ರೆ ಇನ್ನೂ ಕನ್‌ಫ್ಯೂಸ್ ಆಗೋದು ಗ್ಯಾರಂಟಿ. ಯಾಕಂದ್ರೆ ಇದು ಗೋಧಿಯಿಂದ ಮಾಡುವ ಹಿಟ್ಟು ಆದ್ರೆ ಗೋಧಿ ಹಿಟ್ಟಿನಂತಿಲ್ಲ. ನೋಡೋಕೆ ಮೈದಾ ಹಿಟ್ಟಿನ ಹಾಗೆಯೇ ಇದೆ. ಆದ್ರೆ ಮೈದಾ ಹಿಟ್ಟು ಕೂಡಾ ಅಲ್ಲ. ಹಗುರವಾಗಿದೆ, ಗರಿಗರಿಯಾಗಿದೆ ಆದ್ರೆ ಕಾರ್ನ್ ಫ್ಲೋರ್ ಅಂತೂ ಅಲ್ವೇ ಅಲ್ಲ. ಇದೇನಪ್ಪಾ ಫಯಲ್ ಅಂತ ಕನ್‌ಫ್ಯೂಸ್ ಆದ್ರಾ. ಇದು ಮತ್ತೇನಲ್ಲ ಪೇಸ್ಟ್ರಿ ಫ್ಲೋರ್.
ಚಪಾತಿ ಹಿಟ್ಟು, ಮೈದಾ ಹಿಟ್ಟು, ಅಕ್ಕಿ ಹಿಟ್ಟು ಅಂತೆಲ್ಲಾ ನೀವು ಕೇಳಿರ್ತೀರಾ. ಆದ್ರೆ ಇದೇನಿದು ವಿಚಿತ್ರ ಪೇಸ್ಟ್ರಿ (Pastry) ಹಿಟ್ಟು ಅಂತ ಆಶ್ಚರ್ಯ ಆಗ್ತಿದ್ಯಾ. ಪೇಸ್ಟ್ರೀ ಕೇಕ್ ಎಲ್ಲರೂ ಕೇಳಿರ್ತೀವಿ. ಬಾಯಿ ಚಪ್ಪರಿಸಿಕೊಂಡು ತಿಂದು ಕೂಡಾ ಇರ್ತೀವಿ. ಆದ್ರೆ, ಇದು ಅದಲ್ಲ. ಪೇಸ್ಟ್ರಿ ಹಿಟ್ಟು ಮೂಲತಃ ಪೇಸ್ಟ್ರಿಗಳನ್ನು ತಯಾರಿಸಲು ಬಳಸಲಾಗುವ ಹಿಟ್ಟು. ಗೋಧಿಯಿಂದ ತಯಾರಿಸುವ ಈ ಹಿಟ್ಟು ಹಗುರವಾಗಿ ಮತ್ತು ಹೆಚ್ಚು ಗರಿಗರಿಯಾಗಿ ಇರುತ್ತದೆ. ತುಂಬಾ ಸೂಕ್ಷ್ಮವಾಗಿ ಇದನ್ನು ಬೇಯಿಸಲಾಗುತ್ತದೆ. ಇದು ಮೂಲಭೂತವಾಗಿ ಕಡಿಮೆ ಪ್ರೋಟೀನ್ (Protein) ಇರುವ ಹಿಟ್ಟಾಗಿದೆ.
ಕೇಕ್ ತಿನ್ನೋಂದ್ರಿಂದಾನೂ ಪ್ರಯೋಜನಗಳಿವೆ ಅನ್ನೋದು ಗೊತ್ತಾ?
ಪೇಸ್ಟ್ರಿ ಹಿಟ್ಟು ಎಂದರೇನು ?
ಸಾಂಪ್ರದಾಯಿಕವಾಗಿ, ಪೇಸ್ಟ್ರಿ ಹಿಟ್ಟನ್ನು ಕೇಕ್ (Cake), ಸಿಹಿಯಾದ ಬೇಯಿಸಿದ ಉತ್ಪನ್ನಗಳನ್ನು ತಯಾರಿಸಲು ಸಂಗ್ರಹಿಸಿಡಲಾಗುತ್ತದೆ. ಉತ್ಪನ್ನಗಳನ್ನು ತಯಾರಿಸಲು ಅಗತ್ಯವಾದ ಹಿಟ್ಟಿನ ಸರಿಯಾದ ಸಮತೋಲನವನ್ನು ತರಲು, ಹೆಚ್ಚಿನ ಸ್ವಾದವನ್ನು ತರಲು ಬೇಕರ್‌ಗಳು ಮತ್ತು ಗಿರಣಿಗಾರರು ಈ ಹಿಟ್ಟನ್ನು ಮಾಡಲು ಆರಂಭಿಸಿದರು. ಗೋಧಿಯಿಂದ ಗಟ್ಟಿಯಾದ ಹಿಟ್ಟಿನ ಭಾಗಗಳನ್ನು ಬೆರೆಸಿ ಈ ವಿಶಿಷ್ಟವಾದ ಮೃದುವಾದ ಹಿಟ್ಟನ್ನು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲರೂ ಇದನ್ನು ಅಡುಗೆಮನೆಯಲ್ಲಿ ಬಳಸುವುದಿಲ್ಲ. ಪಾಕ ಪ್ರವೀಣರು ಕೇಕ್, ಪೈ, ಪಫ್‌ಗಳು ಮತ್ತು ಇತರ ಸಿಹಿತಿಂಡಿಗಳನ್ನು ತಯಾರಿಸುವಾಗ ಇದನ್ನು ಬಳಸುತ್ತಾರೆ. ಈ ಹಿಟ್ಟನ್ನು ಈಗ ವಾಣಿಜ್ಯಿಕವಾಗಿ ಮೃದುವಾದ ಗೋಧಿಯಿಂದ ಅರೆಯಲಾಗುತ್ತದೆ.
ಇತರ ಹಿಟ್ಟುಗಳಿಗಿಂತ ಪೇಸ್ಟ್ರಿ ಹಿಟ್ಟು ಯಾಕೆ ಭಿನ್ನವಾಗಿದೆ ?
ಹೆಚ್ಚಿನ ಭಕ್ಷ್ಯಗಳನ್ನು ಬೇಯಿಸುವಲ್ಲಿ ಗೋಧಿ (Wheat) ಹಿಟ್ಟು ಮುಖ್ಯ ಅಂಶವಾಗಿದೆ. ಹೀಗಿದ್ದೂ ಯಾವುದೇ ತಿಂಡಿಯನ್ನು ತಯಾರಿಸುವಾಗ ಗೋಧಿಯನ್ನು ನಾದಿಕೊಳ್ಳಬೇಕಾಗುತ್ತದೆ. ಇದು ಗಾಳಿಯಿಂದ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಹಿಟ್ಟನ್ನು ಅಭಿವೃದ್ಧಿಪಡಿಸುತ್ತದೆ. ಗೋಧಿ ಹಿಟ್ಟು ಪಿಷ್ಟದ ವಿನ್ಯಾಸವನ್ನು ಹೊಂದಿರುತ್ತದೆ, ಇದು ಪಿಷ್ಟ ಜೆಲಾಟಿನೀಕರಣದ ಮೂಲಕ ಹಿಟ್ಟನ್ನು ರೂಪಿಸುತ್ತದೆ. ಮಿಲ್ಲಿಂಗ್ ಪ್ರಕ್ರಿಯೆಯಿಂದ ಮೃದುವಾದ ಹಿಟ್ಟಿನೊಂದಿಗೆ ಗೋಧಿ ಹಿಟ್ಟನ್ನು ಬೆರೆಸುವ ಮೂಲಕ ಪೇಸ್ಟ್ರಿ ಹಿಟ್ಟನ್ನು ಪಡೆಯಲಾಗುತ್ತದೆ.
Eggless Sponge cake: ಮೊಟ್ಟೆ ಬದಲು ಇವನ್ನು ಬಳಸಿ ಮಾಡಿ ಸಾಫ್ಟ್ ಕೇಕ್!
ಮತ್ತೊಂದೆಡೆ, ಪೇಸ್ಟ್ರಿ ಹಿಟ್ಟನ್ನು ಸಾಮಾನ್ಯವಾಗಿ ವಾಣಿಜ್ಯ ಬಳಕೆಗಾಗಿ ಬಿಳುಪುಗೊಳಿಸಲಾಗುತ್ತದೆ. ಹಿಟ್ಟನ್ನು ಬ್ಲೀಚಿಂಗ್ ಮಾಡುವುದರಿಂದ ಇದು ಸಹಜವಾಗಿ ಗೋಧಿಯಲ್ಲಿರುವ ನೈಸರ್ಗಿಕ ಹಳದಿ ಬಣ್ಣವನ್ನು ಕಡಿಮೆಯಾಗುತ್ತದೆ. ಮತ್ತು ಹಿಟ್ಟು ಪ್ರಕಾಶಮಾನವಾದ ಬಿಳಿ ಬಣ್ಣವನ್ನು ಪಡೆದುಕೊಳ್ಳುತ್ತದೆ. ನಂತರ ಇದನ್ನು ಸಕ್ಕರೆ ಇತರ ಅಂಶಗಳನ್ನು ಸೇರಿಸಿ ಪಿಜ್ಜಾ ಕ್ರಸ್ಟ್‌ಗಳು, ಬನ್‌ಗಳು ಮತ್ತು ಕುಕೀಗಳನ್ನು ಮತ್ತು ಹಲವು ಸಿಹಿತಿಂಡಿಗಳನ್ನು ತಯಾರಿಸಲು ಬಳಸಿಕೊಳ್ಳುತ್ತಾರೆ. ಪೇಸ್ಟ್ರಿ ಹಿಟ್ಟು, ಇತರ ಹಿಟ್ಟುಗಳಿಗೆ ಹೋಲಿಸಿದರೆ ತಿಂಡಿಯನ್ನು ತೆಳ್ಳಗೆ, ಕೋಮಲ ಮತ್ತು ಗರಿಗರಿಯಾಗಿಸುತ್ತದೆ. ಇದು ಪೇಸ್ಟ್ರಿ ಹಿಟ್ಟನ್ನು ಎಲ್ಲಾ ಉದ್ದೇಶದ ಹಿಟ್ಟಿಗಿಂತ ತುಲನಾತ್ಮಕವಾಗಿ ಆರೋಗ್ಯಕರವಾಗಿಸುತ್ತದೆ.
ಇನ್ನೇನು, ಪೇಸ್ಟ್ರೀ ಲವರ್ಸ್ ಇನ್ನು ಯಾವಾಗ ಬೇಕಾದ್ರೂ ಪೇಸ್ಟ್ರಿ ತಿನ್ಭೋದು. ಯಾಕಿಷ್ಟು ಪೇಸ್ಟ್ರಿ ತಿನ್ತೀ ಆರೋಗ್ಯಕ್ಕೆ ಒಳ್ಳೇಯದಲ್ಲ ಅಂತ ಮನೆ ಮಂದಿ ಹೇಳಿದ್ರೆ ನಿಮ್ಗೆ ಗೊತ್ತಾ ಇದನ್ನು ಮಾಡಿರೋದು ಗೋಧಿಯಿಂದ ಅಂತ ಹೇಳಿಬಿಟ್ರೆ ಸಾಕು ಬಿಡಿ.