ಬೇಳೆಕಾಳುಗಳಲ್ಲಿ ಹುಳುಗಳಾಗದಂತೆ ದೀರ್ಘಕಾಲದ ವರೆಗೆ ಸಂರಕ್ಷಿಸಿಡುವುದು ಹೇಗೆ ?

By Suvarna News  |  First Published May 19, 2022, 3:48 PM IST

ಅಡುಗೆಮನೆಯಲ್ಲಿ (Kitchen) ಬೇಳೆಕಾಳು (Grains)ಗಳಿಲ್ಲದೆ ಆಗುವುದೇ ಇಲ್ಲ. ಸಾಂಬಾರು (Sambar), ಪಲ್ಯ ಹೀಗೆ ಏನಾದರೂ ಮಾಡುವಾಗ ಬೇಳೆ ಬೇಕಾಗುತ್ತದೆ. ಹೀಗಾಗಿ ಎಲ್ಲರೂ ಮನೆಯಲ್ಲಿ ಬೇಳೆಕಾಳುಗಳ ಸ್ಟಾಕ್ (Stock) ಖಾಲಿಯಾಗದಂತೆ ನೋಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಹೀಗೆ ತಂದು ಸ್ಟಾಕ್ ಇಡೋ ಬೇಳೆಗಳಲ್ಲ ಹುಳು (Bugs)ಗಳಾಗುತ್ತವೆ. ಹೀಗಾಗದಂತೆ ಏನು ಮಾಡಬಹುದು ?


ಭಾರತೀಯ ಆಹಾರಪದ್ಧತಿಯಲ್ಲಿ ಬೇಳೆಕಾಳುಗಳಿಗೆ (Grains) ಹೆಚ್ಚಿನ ಪ್ರಾಶಸ್ತ್ಯವಿದೆ. ಸಾಂಬಾರು, ಪಲ್ಯ, ಕೋಸಂಬರಿ ಮೊದಲಾದ ಆಹಾರ (Food) ತಯಾರಿಸಲು ಬೇಳೆ ಕಾಳುಗಳನ್ನು ಉಪಯೋಗಿಸಲಾಗುತ್ತದೆ. ಬೇಳೆ ಕಾಳುಗಳಲ್ಲಿ ಪ್ರೊಟೀನ್ (Protein), ಪೋಷಕಾಂಶಗಳು ಹೆಚ್ಚಿವೆ ಅನ್ನೋ ಕಾರಣಕ್ಕೆ ಪ್ರತಿ ಅಡುಗೆ ಮನೆ (Kitchen)ಯಲ್ಲೂಬೇಳೆ ಕಾಳುಗಳನ್ನು ಬಳಸುತ್ತಾರೆ. ಎಷ್ಟೋ ಸಲ ಅಗತ್ಯಕ್ಕಿಂತ ಜಾಸ್ತಿಯಾಗಿ ಬೇಳೆ ಕಾಳುಗಳನ್ನು ಖರೀದಿಸುವ ಅಭ್ಯಾಸ ಕೆಲವರಿಗೆ ಇರುತ್ತದೆ. ಬೆಲೆ ವ್ಯತ್ಯಾಸ ಆಗುತ್ತಿರುತ್ತೆ, ಮಳೆಗಾಲದಲ್ಲಿ ಆಗಾಗ ತರೋದು ತೊಂದ್ರೆ ಹೀಗೆ ಹಲವು ಕಾರಣಗಳಿಂದ ಬೇಳೆಕಾಳುಗಳನ್ನು ತಂದಿಟ್ಟು ಸ್ಟಾಕ್ ಮಾಡಿರ್ತಾರೆ.

ಆದರೆ ಬೇಳೆಕಾಳುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಂದು ಸಂಗ್ರಹಿಸಿಟ್ಟರೂ ಕಷ್ಟ. ಹೆಚ್ಚು ಕಾಲ ಬೇಳೆ  ಕಾಳುಗಳನ್ನು ಹಾಗೆಯೇ ಇಟ್ಟಾಗ ಅದರಲ್ಲಿ ಸಣ್ಣ ಸಣ್ಣ ಹುಳಗಳು (Insects) ಕಂಡು ಬರುತ್ತವೆ. ಬೇಳೆಕಾಳುಗಳಿಗೆ ಹುಳುಗಳು ಬರದಂತೆ ಏನು ಮಾಡಬಹುದು ಎಂಬುದನ್ನು ತಿಳಿಯೋಣ. 

Tap to resize

Latest Videos

Kitchen Hacks : ಬೇಳೆ ಬೇಯಿಸುವಾಗ ನೀರು ಕುಕ್ಕರ್‌ನಿಂದ ಹೊರಗೆ ಬರ್ತಿದೆಯಾ? ಚಿಂತೆ ಬಿಡ್ಬಿಡಿ

ಬೇಳೆಕಾಳುಗಳಿಗೆ ಹುಳುಗಳು ಬರದಂತೆ ಕಾಪಾಡಿಕೊಳ್ಳುವುದು ತುಂಬಾ ಸುಲಭ. ಹೆಚ್ಚು ಖರ್ಚು ಮಾಡುವ ಅಗತ್ಯವೂ ಇಲ್ಲ. ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಬಳಸಿದರೆ ಸಾಕು. ಬೇಳೆ ಕಾಳುಗಳಲ್ಲಿ ಆಗುವ ಹುಳಗಳನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳನ್ನು ಬಳಸಬಹುದು. ಮನೆಯಲ್ಲಿಯೇ ಸಿಗುವ ಈ ವಸ್ತುಗಳನು ಬಳಸಿಕೊಂಡು,  ಬೆಲೆಯಲ್ಲಿ ಹುಳುಗಳಾಗದಂತೆ ಅದನ್ನು ಸಂರಕ್ಷಿಸಿ ಇಡಬಹುದು. 

ಅರಿಶಿನ: ಅರಿಶಿನ (Turmeric) ಬಳಸಿ ಬೇಳೆಗಳಲ್ಲಿ ಹುಳು ಆಗದಂತೆ ನೋಡಿಕೊಳ್ಳಬಹುದಾಗಿದೆ. ಬೇಳೆ ಕಾಳುಗಳನ್ನು ಶೇಖರಿಸಿಡುವ ಡಬ್ಬಿಯಲ್ಲಿ ಅರಶಿನದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಇಡಿ. ಹೀಗೆ ಮಾಡುವುದರಿಂದ ಧಾನ್ಯಗಳಿಗೆ ಹುಳುಗಳು ಬರುವುದಿಲ್ಲ.

ಪಲಾವ್ ಎಲೆ: ಪಲಾವ್ ಎಲೆಗಳನ್ನು ಬಳಸಿ ಕೂಡಾ ಹುಳಗಳಾಗದಂತೆ ನೋಡಿಕೊಳ್ಳಬಹುದು. ಬೇಳೆ ಕಾಳುಗಳನ್ನು ಹಾಕಿಡುವ ಡಬ್ಬದಲ್ಲಿ ಪಲಾವ್ ಎಲೆಗಳನ್ನು ಹಾಕಿಟ್ಟರೂ ಕೂಡಾ ಬೇಳೆ ಕಾಳುಗಳಲ್ಲಿ ಹುಳಗಳಾಗದಂತೆ ನೋಡಿಕೊಳ್ಳಬಹುದು. 

ಬೆಳ್ಳುಳ್ಳಿ: ಅಡುಗೆ ಮನೆಯಲ್ಲಿ ಹಲವು ರೀತಿಯಲ್ಲಿ ಉಪಯೋಗವಾಗುವ ಬೆಳ್ಳುಳ್ಳಿ (Garlic) ಕೂಡ ಧಾನ್ಯಗಳಲ್ಲಿ ಹುಳುಗಳು ಆಗದಂತೆ ನೋಡಿಕೊಳ್ಳುತ್ತವೆ. ಯಾವ ಡಬ್ಬದಲ್ಲಿ ಬೇಳೆ ಧಾನ್ಯ , ಕಾಳುಗಳನ್ನು ಹಾಕಿ ಇಡುತ್ತೇವೆಯೋ ಅದೇ ಡಬ್ಬದಲ್ಲಿ ಬೆಳ್ಳುಳ್ಳಿಯ ಎಸಳುಗಳನ್ನು ಹಾಕಿಡಿ, ಇದರಿಂದ ಹುಳುಗಳು ಹತ್ತಿರ ಬರುವುದಿಲ್ಲ.

ತುಪ್ಪದಲ್ಲಿ ತರಕಾರಿ ಬೇಯಿಸುವುದು ಆರೋಗ್ಯಕ್ಕೆ ಒಳ್ಳೇದಾ ?

ಸಾಸಿವೆ ಎಣ್ಣೆ: ಸಾಸಿವೆ ಎಣ್ಣೆಯನ್ನು ಅಡುಗೆಗೆ ಬಳಸಲಾಗುತ್ತದೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಈ ಎಣ್ಣೆಯನ್ನು ಬೇಳೆ ಕಾಳುಗಳಲ್ಲಿ ಕೀಟಗಳಾಗದಂತೆ ತಡೆಯಲು ಕೂಡಾ ಬಳಸಲಾಗುತ್ತದೆ. ಹೌದು,  ಬೇಳೆಗೆ ಸ್ವಲ್ಪ ಸಾಸಿವೆ ಎಣ್ಣೆಯನ್ನು ಬೆರೆಸಿ ನಂತರ ಬೆಲೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು.  ನಂತರ ಬೆಲೆಯನ್ನು ಡಬ್ಬದಲ್ಲಿ ಹಾಕಿಟ್ಟರೆ ಬಳಕೆಯಿಂದ ಕೂದಲನ್ನು ಬೇರುಗಳಿಂದ ಅದರಲ್ಲಿ ಹುಳಗಳಾಗದಂತೆ ತಡೆಯಬಹುದು.  

ಬೇವಿನ ಎಲೆ: ಬೇವಿನ ಎಲೆಗಳನ್ನು ಪಾತ್ರೆಗಳಲ್ಲಿ ಇರಿಸಿ. ಇದು ತುಂಬಾ ಪರಿಣಾಮಕಾರಿಯಾಗಿದೆ. ಧಾನ್ಯಗಳ ಪಾತ್ರೆಗಳಲ್ಲಿ ಹಾಕಿದಾಗ, ಕೀಟಗಳನ್ನು ದೂರ ಇಡುತ್ತದೆ. ಇದು ಧಾನ್ಯಗಳನ್ನು ಹಾಳು ಮಾಡದಂತೆ ಕೀಟಗಳನ್ನು ದೂರವಿರಿಸಲು ರೈತರು ಬಳಸುತ್ತಿರುವ ಹಳೆಯ ವಿಧಾನವಾಗಿದೆ.

ಇವಿಷ್ಟು ಅಲ್ಲದೆ ಬೇಳೆಕಾಳುಗಳನ್ನು ಸಂರಕ್ಷಿಸುವಾಗ ಈ ರೀತಿ ಜಾಗ್ತತೆ ವಹಿಸಿ. ಬೇಳೆ ಕಾಳುಗಳನ್ನು ತಂದಾಗ ನೀರಿನಲ್ಲಿ ತೊಳೆದು ಎರಡು ದಿನಗಳ ಕಾಲ ಬಿಸಿಲಿನಲ್ಲಿಡಿ. ಧಾನ್ಯಗಳನ್ನು ಗಾಳಿಯ ಬಿಗಿಯಾದ ಪಾತ್ರೆಗಳಲ್ಲಿ ಇರಿಸಿ. ಧಾನ್ಯಗಳು/ಹಿಟ್ಟನ್ನು ದೀರ್ಘಕಾಲ/ಕಾಲ ಇಟ್ಟುಕೊಳ್ಳಬೇಡಿ. ಆಗಾಗ್ಗೆ ಅವುಗಳನ್ನು ಬಳಸಿ ಇದರಿಂದ ನೀವು ತಾಜಾ ಆಹಾರವನ್ನು ಸೇವಿಸುತ್ತೀರಿ. ಕೀಟಗಳನ್ನು ದೂರವಿಡಲು ಎಲ್ಲಾ  ಕಪಾಟುಗಳನ್ನು ನಿಯಮಿತವಾಗಿ ಕೀಟನಾಶಕಗಳಿಂದ ಸ್ವಚ್ಛಗೊಳಿಸಿ.ಉಳಿದಿರುವ ಆಹಾರಗಳನ್ನು ತಕ್ಷಣವೇ ತೆರವುಗೊಳಿಸಿ ಮತ್ತು ಸ್ವಚ್ಛಗೊಳಿಸಿ.

click me!