ಇತ್ತೀಚಿನ ದಿನಗಳಲ್ಲಿ ಡೈರಿಯನ್ನು ಆಹಾರದಿಂದ ಹೊರಗಿಡುವ ಪ್ರವೃತ್ತಿ ಹೆಚ್ಚಿದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳು 4 ವರ್ಷದ ನಂತರ ಅಗತ್ಯವಿಲ್ಲ ಎಂಬ ಮಾತೊಂದು ಕೇಳಿಬರುತ್ತಿದೆ. ನಿಜಕ್ಕೂ ಡೈರಿ ಉತ್ಪನ್ನಗಳನ್ನು ಒಂದು ತಿಂಗಳ ಕಾಲ ದೂರವಿಟ್ಟರೆ ಏನಾಗುತ್ತದೆ ಎಂಬ ಪ್ರಯೋಗ ನಡೆದಿದ್ದು, ಅದರ ಫಲಿತಾಂಶ ಇಲ್ಲಿದೆ.
ಇತ್ತೀಚಿನ ವರ್ಷಗಳಲ್ಲಿ, ಆಹಾರದಿಂದ ಡೈರಿಯನ್ನು ಹೊರಗಿಡುವ ಪ್ರವೃತ್ತಿಯು ಗಮನ ಸೆಳೆಯುತ್ತಿದೆ . ನೈತಿಕ ಕಾಳಜಿಗಳು, ಪರಿಸರದ ಪರಿಗಣನೆಗಳು ಅಥವಾ ಆರೋಗ್ಯ-ಸಂಬಂಧಿತ ಕಾರಣಗಳಿಂದ ಡೈರಿಯನ್ನು ಆಹಾರದಿಂದ ಹೊರಗಿಡಲಾಗುತ್ತಿದೆ. ವೇಗನ್ ಆಹಾರದ ಮೊರೆ ಹೋಗುವವರು ಈ ಎಲ್ಲ ಕಾರಣಗಳಿಂದ ಹಾಲಿನ ಉತ್ಪನ್ನಗಳನ್ನು ದೂರವಿಡುತ್ತಿದ್ದಾರೆ.
ಹೀಗೆ ಡೈರಿ ಉತ್ಪನ್ನಗಳನ್ನು 1 ತಿಂಗಳ ಕಾಲ ತ್ಯಜಿಸಿದರೆ ಆರೋಗ್ಯದ ಮೇಲೆ ಏನು ಪರಿಣಾಮವಾಗುತ್ತದೆ ಎಂಬ ಪ್ರಯೋಗವನ್ನು ಇತ್ತೀಚೆಗೆ ಕೈಗೊಳ್ಳಲಾಯಿತು. ಈ ಡೈರಿ-ಮುಕ್ತ ಪ್ರಯೋಗವು ವಿವಿಧ ಫಲಿತಾಂಶಗಳನ್ನು ನೀಡಿತು. ಇದು ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಮತ್ತು ಭಾವನಾತ್ಮಕ ಅಂಶಗಳ ಮೇಲೆ ಕೂಡಾ ಪರಿಣಾಮ ಬೀರುವುದನ್ನು ಸಾಬೀತುಪಡಿಸಿತು.
ಯಶೋದಾ ಹಾಸ್ಪಿಟಲ್ಸ್ ಹೈದರಾಬಾದ್‌ನ ಹಿರಿಯ ಸಲಹೆಗಾರ ವೈದ್ಯ ಡಾ ದಿಲೀಪ್ ಗುಡೆ ಅವರ ಪ್ರಕಾರ, ಒಬ್ಬರು ಡೈರಿಯನ್ನು ಕಡಿತಗೊಳಿಸಿದಾಗ, ಅವರ ಆಹಾರದಿಂದ ಹೆಚ್ಚುವರಿ ಸ್ಯಾಚುರೇಟೆಡ್ ಕೊಬ್ಬುಗಳು, ಸಕ್ಕರೆ ಮತ್ತು ಉಪ್ಪನ್ನು ತೆಗೆದುಹಾಕುವುದರಿಂದ ಪ್ರಯೋಜನವಾಗಲಿದೆ.
'ಹೃದ್ರೋಗ, ಮಧುಮೇಹ, ಆಲ್ಝೈಮರ್ಸ್ ಇತ್ಯಾದಿ ಕೆಲವು ಅಸ್ವಸ್ಥತೆಗಳು ಪೂರ್ಣ-ಕೊಬ್ಬಿನ ಡೈರಿ ದೈನಂದಿನ ಸೇವನೆಯಿಂದ ಹದಗೆಡಬಹುದು,' ಎನ್ನುತ್ತಾರೆ ಡಾ ಗುಡೆ.
ತೂಕ ಕಡಿತ
ಡೈರಿ ಉತ್ಪನ್ನಗಳಲ್ಲಿ ಹೆಚ್ಚಿನ ಕ್ಯಾಲೋರಿಗಳು ಮತ್ತು ಕೊಬ್ಬಿನಂಶವಿರುವ ಕಾರಣ ಕೆಲವರು ಡೈರಿಯನ್ನು ಆಹಾರದಿಂದ ಕಡಿತಗೊಳಿಸಿದಾಗ ತೂಕವನ್ನು ಕಳೆದುಕೊಳ್ಳುತ್ತಾರೆ. ಯಶೋದಾ ಹಾಸ್ಪಿಟಲ್ಸ್ ಹೈದರಾಬಾದ್‌ನ ಡಾ. ಕೆ. ಸೋಮನಾಥ್ ಗುಪ್ತಾ ಪ್ರಕಾರ, ಈ ಪರಿಣಾಮವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಸಂಭಾವ್ಯ ಪೋಷಕಾಂಶಗಳ ಕೊರತೆಯನ್ನು ತಪ್ಪಿಸಲು ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಅಜೀರ್ಣ ಸಮಸ್ಯೆಗೆ ಪರಿಹಾರ
ಒಂದು ತಿಂಗಳ ಕಾಲ ಡೈರಿಯನ್ನು ತೆಗೆದುಹಾಕುವುದು ಕೆಲವು ವ್ಯಕ್ತಿಗಳಿಗೆ ಜೀರ್ಣಕಾರಿ ಸಮಸ್ಯೆಗಳಲ್ಲಿ ಸುಧಾರಣೆಗೆ ಕಾರಣವಾಗಬಹುದು. ಹಾಲಿನಲ್ಲಿ ಕಂಡುಬರುವ ಲ್ಯಾಕ್ಟೋಸ್, ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವವರಲ್ಲಿ ಜೀರ್ಣಕಾರಿ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಡೈರಿಯನ್ನು ತೆಗೆದುಹಾಕುವುದರಿಂದ ಲ್ಯಾಕ್ಟೋಸ್ ಅನ್ನು ಸಂಸ್ಕರಿಸುವ ಸವಾಲು ಇಲ್ಲದೆ ಜೀರ್ಣಾಂಗ ವ್ಯವಸ್ಥೆಯು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಆಗ ಹೊಟ್ಟೆ ಉಬ್ಬರಿಸುವುದು, ಗ್ಯಾಸ್, ಅತಿಸಾರ ಇವೆಲ್ಲವೂ ಹಾಲಿನ ಉತ್ಪನ್ನ ದೂರವಿಟ್ಟಾಗ ಕಡಿಮೆಯಾಗುತ್ತದೆ ಎಂಬುದು ಪ್ರಯೋಗದಲ್ಲಿ ಕಂಡುಬಂದಿದೆ.
ಬ್ಯಾಕ್ಟೀರಿಯಾ ಸಮತೋಲನ ಏರುಪೇರು
ಡೈರಿಯು ಕರುಳಿನ ಸೂಕ್ಷ್ಮಜೀವಿಯ ಸಂಯೋಜನೆಯ ಮೇಲೆ ಪ್ರಭಾವ ಬೀರಬಹುದು. ಡೈರಿ ಉತ್ಪನ್ನಗಳನ್ನು ಆಹಾರದಿಂದ ತೆಗೆಯುವುದು ಕರುಳಿನ ಬ್ಯಾಕ್ಟೀರಿಯಾದ ಸಮತೋಲನವನ್ನು ಬದಲಾಯಿಸಬಹುದು. ಇದು ಜೀರ್ಣಕಾರಿ ಆರೋಗ್ಯದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರಬಹುದು. ಈ ಬದಲಾವಣೆಗಳಿಗೆ ವೈಯಕ್ತಿಕ ಪ್ರತಿಕ್ರಿಯೆಗಳು ಬದಲಾಗಬಹುದು.
ತ್ವಚೆಯ ಆರೋಗ್ಯ
ಡೈರಿ ಸೇವನೆಯನ್ನು ನಿಲ್ಲಿಸಿದ ನಾಲ್ಕು ವಾರಗಳಲ್ಲಿ ಚರ್ಮದ ಆರೋಗ್ಯ ಹೆಚ್ಚಿ, ಹೆಚ್ಚು ಯಂಗ್ ಕಾಣಿಸುತ್ತಾರೆ ಎಂದು ಕಂಡುಬಂದಿದೆ.
ಹೆಚ್ಚು ಚೈತನ್ಯ
ಡೈರಿಯನ್ನು ತ್ಯಜಿಸಿದ ನಂತರ ಕೆಲವರು ಹೆಚ್ಚು ಚೈತನ್ಯವನ್ನು ಅನುಭವಿಸುತ್ತಿದ್ದಾರೆ. ಆದಾಗ್ಯೂ, ಇದು ಸಾರ್ವತ್ರಿಕ ಫಲಿತಾಂಶವಲ್ಲ, ಮತ್ತು ವೈಯಕ್ತಿಕ ಪ್ರತಿಕ್ರಿಯೆಗಳು ಬದಲಾಗುತ್ತವೆ ಎಂಬುದು ಗಮನಾರ್ಹ.
ಕ್ಯಾಲ್ಶಿಯಂ ಕೊರತೆ
ನಮಗೆಲ್ಲರಿಗೂ ತಿಳಿದಿರುವಂತೆ, ಡೈರಿ ಉತ್ಪನ್ನಗಳು ಕ್ಯಾಲ್ಸಿಯಂನ ಗಮನಾರ್ಹ ಮೂಲವಾಗಿದೆ. ಮೂಳೆಯ ಆರೋಗ್ಯಕ್ಕೆ ಪ್ರಮುಖವಾಗಿದೆ. ಆದ್ದರಿಂದ, ಅವುಗಳ ಸೇವನೆಯನ್ನು ನಿಲ್ಲಿಸುವುದರಿಂದ ಕ್ಯಾಲ್ಸಿಯಂ, ವಿಟಮಿನ್ ಡಿ, ಪ್ರೋಟೀನ್ ಮುಂತಾದ ಪೋಷಕಾಂಶಗಳ ಕೊರತೆ ಉಂಟಾಗಬಹುದು. ಆಗ ಸೋಯಾ, ಬಾದಾಮಿ, ತೋಫು, ಬ್ರೊಕೊಲಿ, ಅಂಜೂರದ ಹಣ್ಣುಗಳು, ಸೂರ್ಯಕಾಂತಿ ಬೀಜಗಳು ಮುಂತಾದ ಪರ್ಯಾಯ ಆಹಾರಗಳ ಬಳಕೆಯಿಂದ ಮರುಪೂರಣ ಮಾಡಬೇಕಾಗುತ್ತದೆ.