ಕೆಲ್ಲಾಗ್ಸ್ ಚೋಕೋಸ್‌ ಪ್ಯಾಕೆಟ್‌ನಲ್ಲಿ ಸಿಕ್ತು ಹುಳು, ಗ್ರಾಹಕರಿಗೆ ಗಾಬರಿ; ವೀಡಿಯೋ ವೈರಲ್‌

By Vinutha Perla  |  First Published Feb 13, 2024, 12:14 PM IST

ಕೆಲ್ಲಾಗ್ಸ್ ಚೋಕೋಸ್‌ ಹಲವರಿಗೆ ಅಚ್ಚುಮೆಚ್ಚು. ಹಸಿವಾದಾಗ ಹಾಲಿಗೆ ಹಾಕ್ಕೊಂಡು ತಿನ್ತಾರೆ. ಆದ್ರೆ ಎಲ್ರೂ ಹೆಲ್ದೀ ಅಂತ ಅಂದ್ಕೊಂಡಿರೋಕೆಲ್ಲಾಗ್ಸ್ ಚೋಕೋಸ್‌ನಲ್ಲಿ ಹುಳುಗಳು ಸಿಕ್ಕಿದೆ. ಈ ವೀಡಿಯೊ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.


ಫುಡ್‌ ಪ್ಯಾಕೆಟ್‌ಗಳಲ್ಲಿ, ಚಾಕೊಲೇಟ್‌ಗಳಲ್ಲಿ ಹುಳು ಸಿಗುವುದು ಹೊಸ ವಿಷಯವೇನಲ್ಲ. ಈ ಹಿಂದೆಯೂ ಹಲವು ಬಾರಿ ಹೆಸರಾಂತ ಬ್ರ್ಯಾಂಡ್‌ನ ಪ್ರಾಡಕ್ಟ್‌ಗಳಲ್ಲಿ ಹುಳುಗಳು ಸಿಕ್ಕಿರುವ ಪೋಟೋ ವೈರಲ್ ಆಗಿತ್ತು. ಸದ್ಯ ಕೆಲ್ಲಾಗ್ಸ್ ಚೋಕೋಸ್‌ನಲ್ಲಿ ಹುಳುಗಳು ಕಂಡುಬಂದಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ಗ್ರಾಹಕರು ಈ ಕುರಿತಾದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಹಲವರಲ್ಲಿ ಗಾಬರಿ ಮೂಡಿಸಿದೆ. ಈ ವೀಡಿಯೋದಲ್ಲಿ ಕೆಲ್ಲಾಗ್ಸ್‌ ಚೋಕೋಸ್‌ನಲ್ಲಿ ಹುಳುಗಳನ್ನು ಹರಿದಾಡ್ತಿರೋದನ್ನು ನೋಡಬಹುದು. 

@cummentwala_69 ಹೆಸರಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಚೋಕೋಸ್‌ನ ಒಂದು ತುಣುಕಿನ ಕ್ಲೋಸ್ ಅಪ್‌ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಬಿಳಿ ಬಣ್ಣದ ಹುಳು ಕಾಣುತ್ತದೆ. ಇತರ ಚಾಕೋಸ್‌ನಲ್ಲೂ ಇದೇ ರೀತಿಯ ಹುಳುಗಳನ್ನು ಕಾಣಬಹುದು. ಆದರೆ ಇದು ಡೇಟ್ ಬಾರ್ ಆದ ಪ್ಯಾಕೆಟ್‌ ಸಹ ಅಲ್ಲ ಅನ್ನೋದು ಗ್ರಾಹಕರಿಗೆ ಇನ್ನಷ್ಟು ಆತಂಕ ಮೂಡಿಸಿದೆ. ಮಾರ್ಚ್ 2024 ಎಂದು ಪ್ಯಾಕೆಟ್‌ನಲ್ಲಿ ನಮೂದಿಸಿದ್ದು, ಇದು ಪ್ಯಾಕೆಟ್‌ ಇನ್ನೂ ಅವಧಿ ಮೀರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

Tap to resize

Latest Videos

undefined

ಚಾಕೋಲೇಟೊಳಗೆ ಹುಳ ನೋಡಿ ಹೆದರಿದ ವ್ಯಕ್ತಿ; ಕ್ಯಾಡ್ಬರಿ ಹೇಳಿದ್ದೇನು?

ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಕೆಲ್ಲಾಗ್ಸ್ ಇಂಡಿಯಾ ಕಂಪೆನಿ
ವೈರಲ್ ವೀಡಿಯೋ ನೋಡಿ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, 'ನನಗೆ ವರ್ಷಗಳ ಹಿಂದೆ ಹೀಗೆಯೇ ಚಾಕೋಸ್‌ನಲ್ಲಿ ಹುಳುಗಳು ಸಿಕ್ಕಿತ್ತು. ಆದ್ರೆ ಆಗ ಸೋಷಿಯಲ್ ಮೀಡಿಯಾ ಹೆಚ್ಚು ಬಳಕೆಯಲ್ಲಿರಲ್ಲಿಲ್ಲ. ಹೀಗಾಗಿ ಸುದ್ದಿಯಾಗಲ್ಲಿಲ್ಲ. ಆದರೆ ನಾನು ಅವತ್ತಿನಿಂದಲೇ ಚಾಕೋಸ್ ತಿನ್ನುವುದನ್ನು ನಿಲ್ಲಿಸಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ನಾನು ಇನ್ನು ಮುಂದೆ ಖಂಡಿತವಾಗಿಯೂ ಇದನ್ನು ತಿನ್ನುವುದಿಲ್ಲ' ಎಂದು ತಿಳಿಸಿದ್ದಾರೆ. 

ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಕೆಲ್ಲಾಗ್ಸ್ ಇಂಡಿಯಾ ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದೆ. 'ಗ್ರಾಹಕ ವ್ಯವಹಾರಗಳ ತಂಡವು ಇನ್‌ಸ್ಟಾಗ್ರಾಮ್ ಬಳಕೆದಾರರನ್ನು ಸಂಪರ್ಕಿಸಿ ಸಮಸ್ಯೆಯನ್ನು ಪರಿಹರಿಸುತ್ತದೆ' ಎಂದು ಭರವಸೆ ನೀಡಿದೆ. 'ನಿಮಗೆ ಉಂಟಾದ ಅನಾನುಕೂಲತೆಗಾಗಿ ನಾವು ತೀವ್ರವಾಗಿ ವಿಷಾದಿಸುತ್ತೇವೆ. ನಿಮ್ಮ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಗ್ರಾಹಕ ವ್ಯವಹಾರಗಳ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ. ಸಂಪರ್ಕ ವಿವರಗಳನ್ನು ಇನ್‌ಬಾಕ್ಸ್ ಮಾಡಲು ಮನವಿ' ಎಂದು ಅವರು ಬರೆದಿದ್ದಾರೆ.

'ಆಹಾರದಲ್ಲಿ ಹುಳ, ಕೊಳಕು ತಲೆದಿಂಬು..ಇನ್ನೆಂದೂ ಭಾರತಕ್ಕೆ ಭೇಟಿ ನೀಡೋದಿಲ್ಲ' ಎಂದ ಸೆರ್ಬಿಯಾ ಟೆನಿಸ್‌ ತಾರೆ!

ವೈರಲ್ ವೀಡಿಯೋ:

click me!