ಪಾನಿಪುರಿ ಸೈಕಲ್‌ನಲ್ಲಿ ಮಾರೋದು ನೋಡಿರಬಹುದು ಇಲ್ಲೊಬ್ಬ ಯುವಕ ಮೊಮೊಸ್‌ಗಳನ್ನು ಕೂಡ ಸೈಕಲ್‌ನಲ್ಲಿ ಮಾರಲು ಶುರು ಮಾಡಿದ್ದು ಜನರ ಪ್ರಶಂಸೆಗೆ ಪಾತ್ರನಾಗಿದ್ದಾನೆ. ವ್ಯಕ್ತಿಯ ಉತ್ಸಾಹವು ಎಲ್ಲಾ ಅಡ್ಡಿಗಳನ್ನು ಸೋಲಿಸಲು ಸಹಾಯ ಮಾಡುತ್ತದೆ. ಇಂಟರ್‌ನೆಟ್‌ನಲ್ಲಿ ಇಂತಹ ಸ್ಪೂರ್ತಿದಾಯಕ ಕತೆಗಳನ್ನು ನಾವು ಸಾಕಷ್ಟು ನೋಡಬಹುದು. ನಮ್ಮ ಭರವಸೆಗಳು ಮತ್ತು ಕನಸುಗಳನ್ನು ಮುಂದುವರಿಸಲು ನಮ್ಮನ್ನು ಪ್ರೇರೇಪಿಸುವ ಇಂತಹ ಕಥೆಗಳನ್ನು ನಾವು ನೋಡುತ್ತಲೇ ಇರುತ್ತೇವೆ.
ಈಗ @foodyishal ಎಂಬ ಖಾತೆ ಹೊಂದಿರುವ ಫುಡ್ ಬ್ಲಾಗರ್‌ವೊಬ್ಬರು ಯೂಟ್ಯೂಬ್‌ನಲ್ಲಿ ವ್ಯಕ್ತಿಯೊಬ್ಬ ಜೀವನ ನಡೆಸಲು ಹೇಗೆ ಶ್ರಮ ಪಡುತ್ತಿದ್ದಾನೆ ಎಂಬುದನ್ನು ತೋರಿಸಿದ್ದಾರೆ. ಅದು ಜನರಿಗೆ ಸ್ಪೂರ್ತಿ ತುಂಬುತ್ತಿದೆ. ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರು ಫರಿದಾಬಾದ್‌ನಲ್ಲಿ ಸಂಜೆ ಮೊಮೊಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಆದರೆ ಮಾರುಕಟ್ಟೆಯಲ್ಲಿ ಹೆಚ್ಚಿದ ಸ್ಪರ್ಧೆಯಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಅವರಿಗೆ ಸ್ಥಳಾವಕಾಶ ಸಿಗಲಿಲ್ಲ. ಹಾಗಂತ ಅವರೇನು ಸುಮ್ಮನೆ ಕುಳಿತಿಲ್ಲ. ತಮ್ಮ ಸೈಕಲ್‌ನ್ನೇ ಬಳಸಿಕೊಂಡ ಅವರು ಅದರಲ್ಲೇ ಮೊಮೊಗಳನ್ನು ಮಾರಾಟ ಮಾಡಲು ಶುರು ಮಾಡಿದರು.
undefined
ನೀವು ಮೊಮೊಸ್ ಪ್ರಿಯರೆ? ಹಾಗಿದ್ರೆ ಹೆಚ್ಚು ತಿನ್ನೋ ಮುನ್ನ ಇದನ್ನೊಮ್ಮೆ ಓದಿ
ಬೀದಿಬದಿಯ ಆಹಾರಗಳಾದ ಭೇಲ್‌ಪುರಿ, ಗೋಲ್ ಗಪ್ಪೆಗಳನ್ನು ಸೈಕಲ್‌ಗಳಲ್ಲಿ ಮಾರುವುದನ್ನು ನಾವು ನೋಡಿದ್ದೇವೆ. ಆದರೆ ಸೈಕಲ್‌ನಲ್ಲಿ ಮೊಮೊಗಳನ್ನು ಮಾರುವವರನ್ನು ನಾವು ನೋಡಿಲ್ಲ. ಈ ಸೈಕಲ್-ಮೊಮೊ ಅಂಗಡಿಯು ಕಾಂಪ್ಯಾಕ್ಟ್ ಮತ್ತು ಕ್ರಿಯಾತ್ಮಕವಾಗಿ ನಿರ್ಮಾಣವಾಗಿದೆ. ಅವನು ತನ್ನ ಸೈಕಲ್‌ನಲ್ಲಿ ಸ್ಟೌ ಅನ್ನು ಇಡಲು ಸಾಧ್ಯವಾಗದ ಕಾರಣ, ಅವನು ಸ್ಟೀಮರ್‌ನೊಳಗೆ ಆವಿಯಿಂದ ಬೇಯಿಸಿದ ಬಿಸಿ ಮೊಮೊಗಳನ್ನು ಒಯ್ಯುತ್ತಾನೆ ಮತ್ತು ಸ್ಟೀಮರ್ ಬಕೆಟ್‌ನಲ್ಲಿದ್ದು ಗರಂ ಮೊಮೊಸ್" (ಹಾಟ್ ಮೊಮೊಸ್) ಎಂದು ಲೇಬಲ್ ಹಾಕಲಾಗಿರುತ್ತದೆ. ಈ ಲೇಬಲ್ಲೇ ಜನರಿಗೆ ಈತ ಮೊಮೊ ಮಾರಾಟಗಾರ ಎಂಬುದನ್ನು ತಿಳಿಯಪಡಿಸುತ್ತದೆ.
ಈತ ತನ್ನ ಸೈಕಲ್‌ಗಳ ಮೇಲೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಒಯ್ಯುತ್ತಾನೆ. ಒಂದು ಬದಿಯಲ್ಲಿ ಮಯೋನಿಸ್ ಜಾರ್ ಜೊತೆಗೆ ಸಿಗ್ನೇಚರ್ ಕೆಂಪು ಮೊಮೊ (momo) ಚಟ್ನಿ (chutney) ತುಂಬಿದ ಡಬ್ಬವನ್ನು ನೇತು ಹಾಕಿದರೆ, ಇನ್ನೊಂದು ಬದಿಯಲ್ಲಿ ಅವರು ಮೊಮೊಸ್ ಅನ್ನು ತಿನ್ನಲು, ತಿಂದು ಬಿಸಾಡಬಹುದಾದ ಪ್ಲೇಟ್‌ಗಳಿಂದ (plate) ತುಂಬಿದ ಚೀಲವನ್ನು (bag) ನೇತು ಹಾಕಿದ್ದಾರೆ. ಆದರೆ ಅಷ್ಟೇ ಅಲ್ಲ, ಅವರು ಇವರು ಕಸದ ಬುಟ್ಟಿಯನ್ನು ಕೂಡ ಈ ಒಂದು ಸೈಕಲ್‌ನಲ್ಲಿ ಸಾಗಿಸುತ್ತಾರೆ. ತನ್ನ ಸಂಚಾರಿ ವ್ಯಾಪಾರದಿಂದ ಬೀದಿಗಳಲ್ಲಿ ಕಸ ಆಗದಂತೆ, ಜನರು ತಟ್ಟೆಗಳನ್ನು ವಿಲೇವಾರಿ ಮಾಡಲು ಕಸದ ಡಬ್ಬಿಯನ್ನು ಜೊತೆಯಲ್ಲೇ ಇಟ್ಟುಕೊಂಡಿದ್ದಾರೆ.
Health Alert: ನೀವು ಮೊಮೊಸ್ ಪ್ರಿಯರೇ? ವಿಪರೀತ ಸೇವನೆಯಿಂದ ಅಪಾಯಗಳೊಂದೆರಡಲ್ಲ!
ವೀಡಿಯೊ ಎರಡು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, 17 ಸಾವಿರ ಜನ ಇಷ್ಟ ಪಟ್ಟಿದ್ದಾರೆ. ಅಲ್ಲದೇ ಈ ವಿಡಿಯೋ ನೋಡಿ ಸಾಕಷ್ಟು ಜನ ಕಾಮೆಂಟ್ ಮಾಡಿದ್ದು, ಇವನನ್ನು ನೋಡಿ ನಾನು ಭಾವುಕನಾದೆ. ಅವನು ಸೈಕಲ್‌ನಲ್ಲಿ ಮೋಮೋ ಕಾರ್ಟ್ ಅನ್ನು ಹೇಗೆ ನಿರ್ವಹಿಸುತ್ತಿದ್ದಾನೆಂದು ನನಗೆ ಆಶ್ಚರ್ಯವಾಗಿದೆ. ದೇವರು ಈ ಮನುಷ್ಯನನ್ನು ಆಶೀರ್ವದಿಸಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮೊಮೊಸ್ ಮಾರಾಟ ಮಾಡುವ ಈ ಶ್ರಮಜೀವಿ ಮನುಷ್ಯನನ್ನು ದೇವರು ಆಶೀರ್ವದಿಸಲಿ, ಈತನಿಗೆ ದೇವರು ಎಲ್ಲಾ ಸಂತೋಷ ಮತ್ತು ಪ್ರೀತಿಯನ್ನು ನೀಡಲಿ ಎಂದು ಈತನ ಕಾರ್ಯಕ್ಕೆ ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ತುಂಬಾ ಸ್ಪೂರ್ತಿದಾಯಕ ವಿಚಾರ. ನಿಜವಾಗಿಯೂ ಕಷ್ಟಪಟ್ಟು ದುಡಿಯುವುದು ಎಂದರೆ ಇದು. ಇದನ್ನು ನೋಡಿ ಸ್ವಲ್ಪ ಭಾವುಕನಾದೆ. ಧೈರ್ಯವಾಗಿ ಮುಂದುವರಿಯಿರಿ ಸಹೋದರ ಎಂದು ಕಾಮೆಂಟ್ ಮಾಡಿದ್ದಾರೆ. ಈ ವ್ಯಕ್ತಿಯನ್ನು ಬೆಂಬಲಿಸಿ, ಅವನು ಅದಕ್ಕೆ ಅರ್ಹನಾಗಿದ್ದಾನೆ. ದೇವರು ಈ ಮನುಷ್ಯನನ್ನು ಆಶೀರ್ವದಿಸಲಿ ಅವನು ತುಂಬಾ ಶ್ರಮಜೀವಿ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.