ಹೊಸ ವರ್ಷದ ಆರಂಭವು ಎಲ್ಲರಿಗೂ ಖುಷಿಯನ್ನು ನೀಡುತ್ತದೆ. ಹಲವರು ನ್ಯೂ ಇಯರ್ ಜೊತೆಗೇ ಹಲವು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುತ್ತಾರೆ. ಅದರಲ್ಲಿ ಮುಖ್ಯವಾದುದು ವೈಟ್ ಲಾಸ್ ಮಾಡಿಕೊಳ್ಳುವ ಗುರಿ. ಅದಕ್ಕೇನು ಮಾಡಬಹುದು. 2023ರಲ್ಲಿ ತೂಕ ಇಳಿಸಿಕೊಳ್ಳಲು ಕೆಲವೊಂದು ಸಲಹೆ ಇಲ್ಲಿದೆ.
ಹೊಸ ವರ್ಷದ (New year) ನಿರ್ಣಯವು ಏನೇ ಇರಲಿ, ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು (Food) ಸೇವಿಸುವುದರಿಂದ ಹಲವಾರು ಧನಾತ್ಮಕ ಪರಿಣಾಮಗಳು ಉಂಟಾಗುತ್ತದೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆದರೆ, ಪ್ರಮುಖ ಆಹಾರ ಹೊಂದಾಣಿಕೆಗಳನ್ನು ಮಾಡುವುದು ಕೆಲವೊಮ್ಮೆ ತುಂಬಾ ಕಷ್ಟಕರವಾಗಿ ತೋರುತ್ತದೆ. ಹೀಗಾಗಿ ದೊಡ್ಡ ದೊಡ್ಡ ಬದಲಾವಣೆಗಳನ್ನು ಮಾಡುವ ಬದಲು, ನಿರ್ವಹಿಸಬಹುದಾದ ಮತ್ತು ಉತ್ತಮ ಆರೋಗ್ಯವನ್ನು (Good health) ನೀಡಬಹುದಾದ ಕೆಲವು ಆಹಾರಪದ್ಧತಿಗಳನ್ನು ಅಳವಡಿಸಿಕೊಳ್ಳಬಹುದು.
ಹೊಸ ವರ್ಷದಲ್ಲಿ ಸುಲಭವಾಗಿ ತೂಕ ಇಳಿಸಿಕೊಳ್ಳಲು ಸಲಹೆಗಳು
1. ಸಂಪೂರ್ಣ ಆಹಾರಗಳು ಅತ್ಯಗತ್ಯ: ಬೀಜಗಳು, ಧಾನ್ಯಗಳು, ತರಕಾರಿಗಳು, ಹಣ್ಣುಗಳು (Fruits) ಮೊದಲಾದ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ತಿನಿಸುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಸಮತೋಲಿತ ಆಹಾರವನ್ನು ನಿರ್ವಹಿಸುವುದು ಕಷ್ಟಕರವೆಂದು ತೋರುತ್ತಿದ್ದರೆ, ಇವುಗಳನ್ನು ನಿಮ್ಮ ಆಹಾರದಲ್ಲಿ ಮಧ್ಯಮ ಪ್ರಮಾಣದಲ್ಲಿ ಸೇರಿಸಲು ಪ್ರಯತ್ನಿಸಿ. ಉದಾಹರಣೆಗೆ, ಪ್ರತಿದಿನ ಸ್ಪಲ್ಪ ಪ್ರಮಾಣದಲ್ಲಿ ತರಕಾರಿ ಸೇವಿಸಿ, ಕ್ರಮೇಣ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಬಹುದು. ತೂಕ ನಷ್ಟಕ್ಕೆ ಸಹಾಯ ಮಾಡುವುದರ ಜೊತೆಗೆ, ಸಂಪೂರ್ಣ ಆಹಾರಗಳು ಮಧುಮೇಹ, ಅಧಿಕ ರಕ್ತದ ಸಕ್ಕರೆ ಮತ್ತು ಹೃದ್ರೋಗವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ.
Love Astrology 2023: ಹೊಸ ವರ್ಷದಲ್ಲಿ ಯಾವ ರಾಶಿಯ ಲವ್ ಲೈಫ್ ಹೇಗಿರುತ್ತೆ?
2. ಹೆಲ್ದೀ ತಿಂಡಿಗಳನ್ನು ಆಯ್ಕೆ ಮಾಡಿ: ಹಸಿವಾದಾಗಲ್ಲೆಲ್ಲಾ ಚಿಪ್ಸ್, ಚಾಕೋಲೇಟ್ ಸವಿಯುವುದನ್ನು ಬಿಟ್ಟು ಬಿಡಿ. ಊಟದ ನಡುವೆ ತಿಂಡಿಗಳನ್ನು ಆಯ್ಕೆಮಾಡುವಾಗ ಜಾಗರೂಕರಾಗಿರಿ. ಅನಾರೋಗ್ಯಕರ ತಿಂಡಿಗಳು ಅನಗತ್ಯ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಅದರಲ್ಲಿ ಹೆಚ್ಚಿನವು ಮಧುಮೇಹ, ಹೃದ್ರೋಗ ಮತ್ತು ಆಯಾಸದಂತಹ ದೀರ್ಘಕಾಲದ ಕಾಯಿಲೆಗಳನ್ನು (Disease) ಬೆಳೆಸುವ ಅಪಾಯವನ್ನು ಹೆಚ್ಚಿಸಬಹುದು. ಒಣ ಹಣ್ಣುಗಳು, ಹಣ್ಣುಗಳನ್ನು ನಿಮ್ಮ ಲಘು ಆಹಾರದಲ್ಲಿ ಸೇರಿಸಲು ಪ್ರಯತ್ನಿಸಿ. ಏಕೆಂದರೆ ಅವು ಫೈಬರ್‌ನ ಸಮೃದ್ಧ ಮೂಲಗಳಾಗಿವೆ ಮತ್ತು ದೀರ್ಘಕಾಲದವರೆಗೆಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.
3. ಸಕ್ಕರೆಯ ಸೇವನೆಯನ್ನು ಮಿತಿಗೊಳಿಸಿ: ಸಕ್ಕರೆಯ ಸೇವನೆಯು ಮಧುಮೇಹ (Diabetes), ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ, ಅಧಿಕ ರಕ್ತದೊತ್ತಡ, ಉರಿಯೂತ ಮತ್ತು ತೂಕ ಹೆಚ್ಚಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಸಂಸ್ಕರಿಸಿದ ಬಿಳಿ ಸಕ್ಕರೆಗೆ ಕಂದು ಸಕ್ಕರೆ ಅಥವಾ ಬೆಲ್ಲವನ್ನು ಬದಲಿಸುವುದನ್ನು ಪರಿಗಣಿಸಿ. ಅವು ನೈಸರ್ಗಿಕ, ಸಂಸ್ಕರಿಸದ ಸಿಹಿಕಾರಕವಾಗಿದ್ದು, ಸಕ್ಕರೆಗಿಂತ ಕಡಿಮೆ ಸುಕ್ರೋಸ್ ಮತ್ತು ಹೆಚ್ಚಿನ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ.
ಹೊಸ ವರ್ಷದಲ್ಲಿ ಸಾಲಮುಕ್ತರಾಗಲು ಬಯಸಿದ್ದೀರಾ? ಹಾಗಾದ್ರೆ ಈ 5 ಟಿಪ್ಸ್ ಪಾಲಿಸಿ
4. ಬೆಳಗಿನ ಉಪಾಹಾರ ಸೇವನೆ ಅತ್ಯಗತ್ಯ: ಪ್ರತಿದಿನ ಬೆಳಿಗ್ಗೆ ತಪ್ಪದೆ ಉಪಾಹಾರ ಸೇವಿಸುವುದನ್ನು ಖಚಿತಪಡಿಸಿಕೊಳ್ಳಿ. ತೂಕ (Weight)ವನ್ನು ಕಳೆದುಕೊಳ್ಳುವ ಪ್ರಯತ್ನದಲ್ಲಿ ಹೆಚ್ಚಿನವರು ಬೆಳಗ್ಗಿನ ಉಪಾಹಾರವನ್ನು ಬಿಟ್ಟುಬಿಡುತ್ತಾರೆ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ. ಬೆಳಗ್ಗಿನ ಉಪಾಹಾರವನ್ನು ದಿನದ ಅತ್ಯಂತ ಮಹತ್ವದ ಆಹಾರವೆಂದು ಪರಿಗಣಿಸಲಾಗಿದೆ. ಇದು ಮೆಟಾಬಾಲಿಸಮ್‌ನ್ನು ಉತ್ತಮಗೊಳಿಸುತ್ತದೆ. ಕ್ಯಾಲೋರಿ ಬರ್ನಿಂಗ್‌ನಲ್ಲಿ ಸಹಾಯ ಮಾಡುತ್ತದೆ. ಬೆಳಗಿನ ಉಪಾಹಾರದಲ್ಲಿ ಮೊಟ್ಟೆ, ಸ್ಮೂಥಿಗಳು, ಓಟ್ಸ್, ಹಣ್ಣುಗಳು ಅಥವಾ ತರಕಾರಿಗಳನ್ನು ಸೇವಿಸುವುದನ್ನು ಪರಿಗಣಿಸಿ.
5. ಸರಿಯಾದ ಪ್ರಮಾಣದ ನೀರು ಕುಡಿಯಿರಿ: ತೂಕ ನಷ್ಟಕ್ಕೆ ನೀರು (Water) ಮುಖ್ಯ ಅಂಶವಾಗಿದೆ. ಹೀಗಾಗಿ ನೀವು ಸಾಕಷ್ಟು ನೀರು ಕುಡಿಯುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ದೇಹದಿಂದ ಇದು ವಿಷವನ್ನು ಹೊರಹಾಕಲು, ಚಯಾಪಚಯವನ್ನು ವೇಗಗೊಳಿಸಲು, ಆಹಾರ ಮತ್ತು ಇತರ ವಸ್ತುಗಳನ್ನು ಒಡೆಯಲು ಸಹಾಯ ಮಾಡುತ್ತದೆ. ದಿನಕ್ಕೆ ಕನಿಷ್ಠ 7-8 ಗ್ಲಾಸ್ ನೀರು ಕುಡಿಯಬೇಕು.