
ಮಖಾನಾ ಅಂದ್ರೆ ಕಮಲದ ಬೀಜದ ಪೋಷಣೆ ಬಗ್ಗೆ ಅನೇಕರಿಗೆ ತಿಳಿದಿರುತ್ತದೆ. ಮಖಾನಾ ಸೇವನೆ ಮಾಡೋದ್ರಿಂದ ಆರೋಗ್ಯದಲ್ಲಿ ಸುಧಾರಣೆ ತರಬಹುದು. ಮಖಾನಾವನ್ನು ಕೆಲವರು ಫಾಕ್ಸ್ ನಟ್ಸ್ ಎಂದು ಕರೆಯುತ್ತಾರೆ. ಕಮಲದ ಬೀಜವನ್ನು ಕ್ಲೀನ್ ಮಾಡಿ ಒಣಗಿಸಿ, ನಂತ್ರ ಹುರಿದ ಮಖಾನಾ ತಯಾರಿಸಲಾಗುತ್ತದೆ. ಮಖಾನಾ ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಇದು ದೇಹದ ಸ್ನಾಯುಗಳಿಗೆ ಪ್ರಯೋಜನಕಾರಿಯಾಗಿದೆ. ಇದನ್ನು ನೀವು ಮನೆಯಲ್ಲಿರುವ ಔಷಧಿ ಅಂದ್ರೆ ತಪ್ಪಾಗೋದಿಲ್ಲ.
ಹೆರಿಗೆ (Childbirth) ಯ ನಂತರವೂ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಮಖಾನಾ (Makhana) ವನ್ನು ನೀಡಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಇದನ್ನು ಸೇವಿಸಬಹುದು. ನೀವು ಇದ್ರಲ್ಲಿ ಸಿಹಿ ಹಾಗೂ ಖಾರ ಎರಡೂ ತಿಂಡಿ ತಯಾರಿಸಿ ಸೇವನೆ ಮಾಡಬಹುದು. ಉಪವಾಸದ ಸಮಯದಲ್ಲಿ ಮಖಾನಾ ಸೇವನೆ ಮಾಡೋದು ಹೆಚ್ಚು ಪ್ರಯೋಜನಕಾರಿ ಎನ್ನಲಾಗುತ್ತದೆ. ತೂಕ ಇಳಿಕೆಗೂ ಇದು ಒಳ್ಳೆಯದು. ಹಾಗಂತ ಪ್ರತಿ ದಿನ ನೀವು ಮಖಾನಾ ಸೇವನೆ ಮಾಡ್ತೀನಿ ಅಂದ್ರೆ ಸ್ವಲ್ಪ ಎಚ್ಚರಿಕೆ ತೆಗೆದುಕೊಳ್ಳುವುದು ಮುಖ್ಯ. ಮಖಾನಾ ಆರೋಗ್ಯ (Health) ಕ್ಕೆ ಪ್ರಯೋಜನಕಾರಿಯೇ ಹೌದು. ಆದ್ರೆ ಮಿತಿಮೀರಿ ಸೇವನೆ ಮಾಡೋದ್ರಿಂದ ಕೆಲವು ಸಮಸ್ಯೆ ನಿಮ್ಮನ್ನು ಕಾಡಬಹುದು. ಹಾಗೆಯೇ ಎಲ್ಲರಿಗೂ ಮಖಾನಾ ಒಳ್ಳೆಯದಲ್ಲ. ಕೆಲ ಆರೋಗ್ಯ ಸಮಸ್ಯೆ ಹೊಂದಿರುವವರು ಮಖಾನಾ ಸೇವನೆ ಮಾಡದಿರುವುದು ಉತ್ತಮ. ಮಖಾನಾವನ್ನು ಯಾರು ಸೇವನೆ ಮಾಡಬಾರದು ಹಾಗೆ ಎಷ್ಟು ಪ್ರಮಾಣದಲ್ಲಿ ಮಖಾನಾವನ್ನು ತಿನ್ನಬೇಕು ಎಂಬ ಬಗ್ಗೆ ಹೇಳ್ತೆವೆ.
ಇವರು ಹೆಚ್ಚು ಮಖಾನಾ ಸೇವನೆ ಮಾಡಬೇಡಿ : ಹೊಟ್ಟೆ (Stomach) ಯ ಸಮಸ್ಯೆ ನಿರಂತರವಾಗಿದ್ದರೆ ಮಖಾನಾ ಬೇಡ : ಅನೇಕ ದಿನಗಳಿಂದ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಿಸುತ್ತಿದ್ದರೆ ಮಖಾನಾದಿಂದ ದೂರವಿರುವುದು ಉತ್ತಮ. ಮಖಾನಾ ನೇರವಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಸೌಮ್ಯವಾದ ಅತಿಸಾರ ಇರುವವರಿಗೆ ಇದೇ ಕಾರಣಕ್ಕೆ ಮಖಾನಾ ತಿನ್ನಲು ಸಲಹೆ ನೀಡುತ್ತಾರೆ. ನೀವು ಮಲಬದ್ಧತೆ, ಗ್ಯಾಸ್ ಅಥವಾ ಹೊಟ್ಟೆ ಉಬ್ಬುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದರೆ ಮಖಾನಾದಿಂದ ದೂರವಿರುವುದು ಒಳ್ಳೆಯದು.
ಸಕ್ಕರೆ ಖಾಯಿಲೆ ರೋಗಿಗಳು ಮಖಾನಾ ಬಗ್ಗೆ ಎಚ್ಚರವಹಿಸಿ : ನೀವು ಶುಗರ್ ರೋಗಿಗಳಾಗಿದ್ದರೆ ಮಖಾನಾವನ್ನು ಬಹಳ ಎಚ್ಚರಿಕೆಯಿಂದ ಹಾಗೂ ಸೀಮಿತ ಪ್ರಮಾಣದಲ್ಲಿ ಸೇವಿಸಿ. ಸಂಶೋಧನೆಯೊಂದರ ಪ್ರಕಾರ, ಮಖಾನಾ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಅತಿಯಾದ ಮಖಾನಾ ಸೇವನೆಯು ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗಲು ಕಾರಣವಾಗಬಹುದು.
Omicron BF.7, ಸೋಂಕು ತಗುಲೋ ಮುನ್ನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
ಅಲರ್ಜಿ ಸಮಸ್ಯೆ ಕಾಡುತ್ತೆ : ಮಖಾನಾ ಎಲ್ಲರಿಗೂ ಸರಿ ಹೊಂದುವ ತಿಂಡಿಯಲ್ಲ. ಅದು ನೀರಿನಲ್ಲಿ ಬೆಳೆಯುವ ಆಹಾರ. ಇದು ಕೆಲ ಜನರ ದೇಹದ ಮೇಲೆ ವಿರುದ್ಧ ಪರಿಣಾಮ ಬೀರುತ್ತದೆ. ಅದು ವಿವಿಧ ರೀತಿಯ ಅಲರ್ಜಿಗೆ ಕಾರಣವಾಗುತ್ತದೆ. ಹಾಗಾಗಿ ಮಖಾನಾ ತಿಂದ ನಂತರ ನಿಮಗೆ ಅಲರ್ಜಿಯ ಯಾವುದೇ ಲಕ್ಷಣ ಕಂಡರೆ ಮಖಾನಾ ಸೇವನೆ ತಪ್ಪಿಸಿ.
ಮೂತ್ರಪಿಂಡದಲ್ಲಿ ಕಲ್ಲಿರುವವರು ಮಖಾನಾ ತಿನ್ಬೇಡಿ : ಕಿಡ್ನಿಯಲ್ಲಿ ಕಲ್ಲು ಇರುವವರು ಕೂಡ ಮಖಾನಾ ತಿನ್ನುವುದನ್ನು ತಪ್ಪಿಸಬೇಕು. ಮಖಾನಾದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುತ್ತದೆ. ಕಿಡ್ನಿಯಲ್ಲಿ ಕಲ್ಲು ಇರುವವರು ಮಖಾನಾ ಸೇವನೆ ಮಾಡಿದ್ರೆ ತೊಂದರೆ ಕಾಡುವ ಧ್ಯತೆಯಿರುತ್ತದೆ. ಅದ್ರಲ್ಲಿರುವ ಕ್ಯಾಲ್ಸಿಯಂ ಕಲ್ಲಿನ ಗಾತ್ರವನ್ನು ದೊಡ್ಡದಾಗಿಸುವ ಸಂಭವವಿರುತ್ತದೆ.
ಆಹಾರದಲ್ಲಿ ಮುಸುಕಿನ ಜೋಳ ಸೇರಿಸಿ ಆರೋಗ್ಯ ಲಾಭ ಪಡೆದುಕೊಳ್ಳಿ
ಸರಿಯಾದ ಮೊತ್ತ ಯಾವುದು? : ನೀವು ಯಾವುದೇ ನಿರ್ದಿಷ್ಟ ಸಮಸ್ಯೆಯಿಂದ ಬಳಲುತ್ತಿಲ್ಲವಾದರೆ ಪ್ರತಿದಿನ ಹುರಿದ ಮಖಾನಾವನ್ನು ತಿನ್ನಬಹುದು. ಒಂದು ಕಪ್ ಹುರಿದ ಮಖಾನಾವನ್ನು ಸೇವನೆ ಮಾಡಬೇಕು. 3.9 ಗ್ರಾಂ ಪ್ರೋಟೀನ್ ಇದ್ರಲ್ಲಿರುತ್ತದೆ. ಮಖಾನಾ ಸೇವನೆ ಮಾಡ್ತಿದ್ದರೆ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.