ಫಾರಿನ್‌ಗೆ ಹೋಗ್ಬೇಕು ಅನ್ನೋದು ಹಲವರ ಕನಸು. ಆದ್ರೆ ವಿದೇಶಗಳಲ್ಲಿ ಕೆಲವೊಂದು ವಸ್ತುಗಳ ಬೆಲೆ ತಿಳಿದ್ರೆ ಮಾತ್ರ ಹೌಹಾರೋದು ಖಂಡಿತ. ಡ್ರೆಸ್, ದಿನಸಿ, ತರಕಾರಿಯ ಬೆಲೆ ನೋಡಿದ್ರೆ ಅಬ್ಬಾ ಅನ್ಸುತ್ತೆ. ಸದ್ಯ ವಿದೇಶದಲ್ಲಿ ತೊಂಡೆಕಾಯಿ ಬೆಲೆ ಎಷ್ಟು ಅನ್ನೋದು ಬಹಿರಂಗಗೊಂಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.
ಲಂಡನ್: ಭಾರತೀಯರು ವಿದೇಶಕ್ಕೆ ಹೋದವರು ತಮ್ಮ ದೇಶದ ಪ್ರತ್ಯೇಕವಾದ ಆಪ್ತತೆಯನ್ನು ಹೊಂದಿರುತ್ತಾರೆ. ಹೀಗಾಗಿ ವಿದೇಶದಲ್ಲಿಯೂ ದೇಸಿ ಆಹಾರಗಳನ್ನು ಹುಡುಕಾಡುತ್ತಲೇ ಇರುತ್ತಾರೆ. ವಿದೇಶದಲ್ಲಿ ವಾಸಿಸುವುದು ತನ್ನದೇ ಆದ ಅನುಕೂಲ ಹಾಗೂ ಅನಾನುಕೂಲಗಳನ್ನು ಹೊಂದಿರುತ್ತದೆ. ನೋಡಲು ಹೊಸ ಹೊಸ ವಿಷಯಗಳಿದ್ದರೂ ಎಲ್ಲರೂ ದೇಸಿ ಆಹಾರಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ. ಹೀಗಾಗಿ ಫಾರಿನ್‌ನಲ್ಲಿಯೂ ತಮ್ಮ ದೇಶದ ತರಕಾರಿ, ಹಣ್ಣುಗಳನ್ನು ಹುಡುಕುತ್ತಾರೆ.
ಭಾರತೀಯ ಆಹಾರಗಳು ಈಗ ವಿಶ್ವದೆಲ್ಲೆಡೆ ಪರಿಚಿತವಾಗಿದ್ದು ಸಿಗುವುದು ಕಷ್ಟವೇನಲ್ಲ. ಆದರೆ, ಕೆಲವೊಮ್ಮೆ ಅದರ ಬೆಲೆಗಳು ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಯಾಕೆಂದರೆ ದೇಶದಲ್ಲಿ ಕಡಿಮೆ ಬೆಲೆಗೆ ಸಿಗುವ ವಸ್ತುಗಳು ವಿದೇಶಗಲ್ಲಿ (Foriegn) ಕೈಗೆಟುಕದ ಬೆಲೆಯಲ್ಲಿ ಇರುತ್ತದೆ. ಹಾಗೆಯೇ ಇತ್ತೀಚಿಗೆ ಲಂಡನ್‌ನಲ್ಲಿ ವಾಸಿಸುತ್ತಿರುವ ಭಾರತೀಯರೊಬ್ಬರು ತರಕಾರಿ (Vegetable) ಹಾಗೂ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ಹೋದಾಗ ಬೆಲೆ ನೋಡಿ ಶಾಕ್ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ (Social media) ಬರೆದುಕೊಂಡಿದ್ದಾರೆ. ಇತ್ತೀಚಿಗೆ ಟ್ವಿಟರ್ ಬಳಕೆದಾರರೊಬ್ಬರು ಲಂಡನ್‌ನ ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೋ, ಬೆಂಡೆಕಾಯಿ, ಹಾಗಲಕಾಯಿ, ಹಸಿ ಮೆಣಸಿನಕಾಯಿ, ತೊಂಡೆಕಾಯಿಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಅಬ್ಬಬ್ಬಾ..ಒಂದು ಕೆಜಿ ಆಲೂಗಡ್ಡೆ ಬೆಲೆ ಇಷ್ಟೊಂದಾ? ಆ ದುಡ್ಡಲ್ಲಿ ಐಫೋನ್ ಖರೀದಿಸ್ಬೋದು!
ತೊಂಡೆಕಾಯಿ, ಭಾರತದಲ್ಲಿ ಹೆಚ್ಚು ಬಳಕೆಯಾಗುವ ತರಕಾರಿ. ಹೀಗಾಗಿ ಇದು ಕಡಿಮೆ ದರದಲ್ಲಿ ಜನರಿಗೆ ಲಭ್ಯವಿದೆ. ಮಾರುಕಟ್ಟೆಯಲ್ಲಿ, ತರಕಾರಿ ಅಂಗಡಿಗಳಲ್ಲಿ ನಾವು ತೊಂಡೆಕಾಯಿ (Parwal) ಮಾರಾಟಕ್ಕಿಟ್ಟಿರುವುದನ್ನು ನೋಡಬಹುದು. ಹಾಗೆಯೇ ವಿದೇಶದಲ್ಲಿಯೂ ತೊಂಡೆಕಾಯಿ ಲಭ್ಯವಿತ್ತು. ಆದ್ರೆ ಬೆಲೆ ಮಾತ್ರ ಅಷ್ಟಿಷ್ಟಲ್ಲ. ಲಂಡನ್‌ನಲ್ಲಿ ತೊಂಡೆಕಾಯಿಯ ಬೆಲೆ ಸುಮಾರು 8.99 ಪೌಂಡ್ಸ್ ಎಂದು ನಮೂದಿಸಲಾಗಿದೆ. ಅಂದರೆ, ಪ್ರತಿ ಕೆಜಿಗೆ 900 ರೂಪಾಯಿ ಎಂದು ತಿಳಿದುಬಂದಿದೆ.
ಈ ಪೋಸ್ಟ್ ಅನ್ನು ಓಂಕಾರ್ ಖಂಡೇಕರ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಲಂಡನ್‌ನ ಮಾರುಕಟ್ಟೆಯಲ್ಲಿ ಕೆಲವು ತರಕಾರಿಗಳ ಚಿತ್ರವನ್ನು ಒಳಗೊಂಡಿತ್ತು. ಹಸಿರು ಮೆಣಸಿನಕಾಯಿ, ಟೊಮೇಟೊ, ಬೆಂಡೆಕಾಯಿ, ಹಾಗಲಕಾಯಿ, ಮೊನಚಾದ ಸೋರೆಕಾಯಿಗಳೂ ಇದ್ದವು. ಆದರೆ, ಒಂದು ಕಿಲೋ ಪರ್ವಾಲ್‌ನ ಬೆಲೆ ಬರೋಬ್ಬರಿ 8.99 ಪೌಂಡ್‌ಗಳು, ಅಂದರೆ ಅಂದಾಜು 919 ರೂ. ಎಂದು ನಮೂದಿಸಲಾಗಿದೆ. 'ಲಂಡನ್ ಉತ್ತಮವಾಗಿದೆ. ಕೆಜಿಗೆ 900 ರೂ. ಇರುವ ತೊಂಡೆಕಾಯಿಯನ್ನು ಹೊರತುಪಡಿಸಿ; ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ.
ವಿಶ್ವದ ಅತ್ಯಂತ ದುಬಾರಿ ತರಕಾರಿಯಿದು, ಈ ಬೆಲೆಗೆ ಕಾಸ್ಟ್ಲೀ ಬೈಕನ್ನೇ ಖರೀದಿಸ್ಬೋದು!
ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ದಂಗಾಗಿದ್ದಾರೆ. ಈ ಸಾದಾ ತರಕಾರಿಗೆ ಇಷ್ಟೊಂದು ಬೆಲೆನಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಬಳಕೆದಾರರು ಹಂಚಿಕೊಂಡಿರುವ ಟ್ವೀಟ್‌ಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 'ಇಂತಹ ದುಬಾರಿ ತರಕಾರಿಗಳನ್ನು ಸೇವಿಸಿದ ಮೇಲೆ ಬಿಪಿ ಟ್ಯಾಬ್ಲೆಟ್ಗಳನ್ನು ತೆಗೆದುಕೊಳ್ಳಬೇಕು' ಎಂದು ಒಬ್ಬರು ತಿಳಿಸಿದ್ದಾರೆ. ಇನ್ನೊಬ್ಬರು 'ಇದನ್ನು ಸೇವಿಸುವ ಬದಲು ಭಾರತದಿಂದ ಅಮದು ಮಾಡಿಕೊಂಡು ಮಾರಾಟ ಮಾಡುವುದು ಉತ್ತಮ' ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ಧಾರೆ. ಇನ್ನೊಬ್ಬರು 'ರೋಮ್‌ನಲ್ಲಿದ್ದಾಗ, ತೊಂಡೆಕಾಯಿ ತಿನ್ನಬೇಡಿ' ಎಂದು ಸಲಹೆ ನೀಡಿದ್ದಾರೆ.