Viral Food : ಮ್ಯಾಗಿ ಬ್ರೆಡ್ ಪಕೋಡಾದಲ್ಲಿ ಇದು ಆಲೂ ಬದಲು ತುಂಬಿದ್ದೇನು?

By Suvarna News  |  First Published Apr 22, 2023, 3:09 PM IST

ರುಚಿರುಚಿ ಆಹಾರ ಸೇವನೆ ಮಾಡಲು ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಆಹಾರದಲ್ಲಿ ಕೆಲ ಪ್ರಯೋಗಗಳು ನಡೆಯುತ್ತಿರುತ್ತವೆ. ಸಿಂಪಲ್ ಆಗಿ ತಯಾರಾಗ್ತಿದ್ದ ಮ್ಯಾಗಿಯಲ್ಲೂ ಅನೇಕ ವೆರೈಟಿ ಸಿದ್ಧವಾಗ್ತಿದೆ. ಈಗ ಪಕೋಡಾ ಮ್ಯಾಗಿ ಸುದ್ದಿ ಮಾಡಿದೆ. 
 


ಫಟಾಫಟ್ ಮಾಡುವ ಅಡುಗೆ ಅಂದ್ರೆ ಅದು ಮ್ಯಾಗಿ. ಇದ್ರ ಹೆಸರು ಕೇಳ್ತಿದ್ದಂತೆ ಮಕ್ಕಳ ಬಾಯಲ್ಲಿ ಮಾತ್ರವಲ್ಲ ದೊಡ್ಡವರ ಬಾಯಲ್ಲೂ ನೀರು ಬರುತ್ತದೆ. ಕೆಲವರು ಬೆಳಿಗ್ಗೆ ಉಪಹಾರಕ್ಕೆ ಮ್ಯಾಗಿ ತಿಂದ್ರೆ ಇನ್ನು ಕೆಲವರು ರಾತ್ರಿ ಊಟಕ್ಕೆ . ಒಟ್ಟಿನಲ್ಲಿ ವಾರಕ್ಕೆ ಒಂದೆರಡು ಬಾರಿಯಾದ್ರೂ ಮ್ಯಾಗಿ ಇಲ್ಲವೆಂದ್ರೆ ಬಾಯಿ ರುಚಿಸೋದಿಲ್ಲ ಎನ್ನುವವರಿದ್ದಾರೆ. ಮ್ಯಾಗಿಯಲ್ಲಿ ನಾನಾ ವೆರೈಟಿ ಮಾಡೋದನ್ನು ನೀವು ನೋಡ್ಬಹುದು.

ಮ್ಯಾಗಿ (Maggi) ಗೆ ಬಿಸಿ ನೀರು ಹಾಗೆ ಮಸಾಲೆ (Spices) ಹಾಕಿ ಬೇಯಿಸೋದು ಸುಲಭ ವಿಧಾನ. ಕೆಲವರು ಅದಕ್ಕೆ ತರಕಾರಿ, ಹೆಚ್ಚುವರಿ ಮಸಾಲೆ ಹಾಕಿ, ಅದ್ರ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಇನ್ನು ಕೆಲವರು ಮ್ಯಾಗಿಯಲ್ಲಿ ನಾನಾ ಪ್ರಯೋಗಗಳನ್ನು ಮಾಡ್ತಾರೆ. ಈಗಾಗಲೇ ಪೇಸ್ಟ್ರಿ ಮ್ಯಾಗಿ, ಮ್ಯಾಗಿ ಮಿಲ್ಕ್ ಶೇಕ್, ಚಾಕೊಲೇಟ್ ಮ್ಯಾಗಿ, ಮ್ಯಾಗಿ ವಿತ್ ಮೊಸರು ಹೀಗೆ ಚಿತ್ರವಿಚಿತ್ರ ರೆಸಿಪಿಗಳು ವೈರಲ್ ಆಗಿವೆ. ಈಗ  ಬ್ರೆಡ್ ಪಕೋಡಾ (Pakoda) ಮ್ಯಾಗಿ ಮಾರುಕಟ್ಟೆಗೆ ಬಂದಿದೆ.  ವೈರಲ್ ಆದ ಬ್ರೆಡ್ ಪಕೋಡಾ ಮ್ಯಾಗಿ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

Tap to resize

Latest Videos

ಲಂಡನ್‌ನಲ್ಲಿ ಒಂದು ಕೆಜಿ ತೊಂಡೆಕಾಯಿ ಬೆಲೆ 900 ರೂ., ಬೆರಗಾದ ಗ್ರಾಹಕ!

Foodpandits! ಹೆಸರಿನ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಮ್ಯಾಗಿ ಬ್ರೆಡ್ ಪಕೋಡಾ, ಸ್ಥಳ- ನೈಟ್ ಮಾರುಕಟ್ಟೆ, ಸಿವಿಲ್ ಲೈನ್ಸ್, ಪ್ರಯಾಗ್ರಾಜ್  ಎಂಬ ಶೀರ್ಷಿಕೆ ಹಾಕಲಾಗಿದೆ.  ವಿಡಿಯೋದಲ್ಲಿ, ಮಹಿಳೆಯೊಬ್ಬರು ಬ್ರೆಡ್ ಮೇಲೆ, ಮಟರ್ ಹಾಗೂ ತರಕಾರಿ ಹಾಕಿ ತಯಾರಿಸಿದ ಮ್ಯಾಗಿಯನ್ನು ಹಾಕುತ್ತಾರೆ. ನಂತ್ರ ಅದ್ರ ಮೇಲೆ ಇನ್ನೊಂದು ಬ್ರೆಡ್ ಇಟ್ಟು, ಬ್ರೆಡನ್ನು ತ್ರಿಕೋನಾಕಾರದಲ್ಲಿ ಕತ್ತರಿಸಲಾಗುತ್ತದೆ. ನಂತ್ರ ಪಕೋಡಾ ಮಸಾಲೆಯಲ್ಲಿ ಬ್ರೆಡ್ ಅದ್ದಿ ಅದನ್ನು ಡೀಪ್ ಫ್ರೈ ಮಾಡಲಾಗುತ್ತದೆ. ನಂತ್ರ ಅದನ್ನು ಮೂರು ಫೀಸ್ ಮಾಡಿ, ಅದಕ್ಕೆ ಗ್ರೀನ್ ಚಟ್ನಿ ಹಾಕಿ ಸರ್ವ್ ಮಾಡಲಾಗುತ್ತದೆ. ಬ್ರೆಡ್ ಮ್ಯಾಗಿ ಪಕೋಡಾ ತುಂಬಾ ರುಚಿಯಾಗಿದೆ ಎಂದು ಗ್ರಾಹಕ ಹೇಳೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಬ್ರೆಡ್ ಪಕೋಡಾದಲ್ಲಿ ಆಲೂಗಡ್ಡೆಯನ್ನು ಹಾಕಲಾಗುತ್ತದೆ. ಆಲೂಗಡ್ಡೆ ಬ್ರಡ್ ಪಕೋಡಾ ರುಚಿಯೇ ಬೇರೆ, ಮ್ಯಾಗಿ ಬ್ರೆಡ್ ಪಕೋಡಾ ರುಚಿಯೇ ಬೇರೆ. ನೀವೂ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ ಎನ್ನುತ್ತಾರೆ ವಿಡಿಯೋ ಹಂಚಿಕೊಂಡ ವ್ಯಕ್ತಿ.

Viral Video : ಮಟನ್ ಗೆ ಮದ್ಯ ಬೆರೆಸಿ ಕೊಡ್ತಾನೆ ಈತ..!

RIP ಮ್ಯಾಗಿ! : ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಾಕಷ್ಟು  ವೈರಲ್ ಆಗಿದೆ. ಇದುವರೆಗೆ ಈ ವಿಡಿಯೋವನ್ನು 1 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಇದಲ್ಲದೇ 63 ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಅನೇಕರು ಈ ವಿಡಿಯೋಕ್ಕೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಆಂಟಿ, ಐಸ್ ಕ್ರೀಮ್ ಹಾಕಿ ಎಂದು ಬಳಕೆದಾರನೊಬ್ಬ ಕಮೆಂಟ್ ಮಾಡಿದ್ದಾನೆ. ಮತ್ತೊಬ್ಬ ಬಳಕೆದಾರರು, ಇದು ಮಂಗಳ ಗ್ರಹಕ್ಕೆ ಹೋಗುವ ಸಮಯ ಎಂದು ಬರೆದಿದ್ದಾರೆ. ಕಡಲೆಹಿಟ್ಟು ಸ್ವಲ್ಪ ತೆಳುವಾಗಿದೆ ಎಂತಾ ಒಬ್ಬರು ಕಮೆಂಟ್ ಮಾಡಿದ್ರೆ, ಇದು ತುಂಬಾ ಟೇಸ್ಟಿಯಾಗಿದೆ. ಅನಾವಶ್ಯಕ ಕೆಟ್ಟ ಕಮೆಂಟ್ ಮಾಡ್ಬೇಡಿ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾನೆ. ಈ ವಿಡಿಯೋ ನೋಡ್ತಾ ಇದ್ದಂತೆ ನನ್ನ ಆತ್ಮ ನನ್ನ ದೇಹದಿಂದ ದೂರವಾದಂತೆ ಭಾಸವಾಗ್ತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಚೀಸ್ ಅಥವಾ ಸಾಸೇಜ್ ಆಂಟಿ ಮರೆತಿದ್ದಾರೆಂದು ಇನ್ನೊಬ್ಬರು ಬರೆದಿದ್ದಾರೆ. ರೋಗ ಶುರುವಾಗ್ದೆ ಮತ್ತೇನು ಆಗುತ್ತೆ? ಮಕ್ಕಳಿಗೆ ಹೃದಯಾಘಾತ, ಶುಗರ್ ಆಗ್ದೆ ಇನ್ನೇನಾಗುತ್ತೆ. ನಿಮ್ಮಿಷ್ಟ ಬಂದಂತೆ ಮಾಡಿ ಬಡಿಸಿ ಎಂದು ಇನ್ನೊಬ್ಬರು ಕೋಪ ವ್ಯಕ್ತಪಡಿಸಿದ್ದಾರೆ. ರಿಪ್ ಮ್ಯಾಗಿ, ಮ್ಯಾಗಿ ಮೇಲೆ ಅತ್ಯಾಚಾರವಾಗ್ತಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ.
 

 
 
 
 
 
 
 
 
 
 
 
 
 
 
 

A post shared by Foodpandits! (@foodpandits)

click me!