Aam Papad: ಮಾವಿನಹಣ್ಣಿನ ಹಪ್ಪಳ ತಯಾರಿಸೋದು ಹೇಗೆ? ವೀಡಿಯೋ ವೈರಲ್‌

By Vinutha Perla  |  First Published Apr 27, 2023, 1:32 PM IST

ಭಾರತದಲ್ಲಿ ಬೇಸಿಗೆ ಶುರುವಾಯ್ತು ಅಂದ್ರೆ ಮಾವಿನ ಹಣ್ಣಿನ ಸೀಸನ್ ಶುರುವಾಯ್ತು ಅಂತಾನೆ ಅರ್ಥ. ರಸಭರಿತವಾದ ಮಾವಿನ ಹಣ್ಣಿನ ತಿನಿಸುಗಳನ್ನು ಜನರು ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಹೀಗಿರುವಾಗ ಬಹುತೇಕರ ಬಾಲ್ಯದ ನೆನಪಾಗಿರುವ ಮಾವಿನ ಪಾಪಡ್ ವೀಡಿಯೋ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ.


ಭಾರತದಲ್ಲಿ ಬೇಸಿಗೆ ಎಂದರೆ ಮಾವಿನ ಹಣ್ಣುಗಳು ಹೇರಳವಾಗಿ ದೊರಕುವ ಕಾಲ. ಭಾರತೀಯರು ಈ ಹಣ್ಣಿನ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದಾರೆ. ಬೇಸಿಗೆಯುದ್ದಕ್ಕೂ ಮಾವಿನಕಾಯಿ, ಮಾವಿನಹಣ್ಣುಗಳಿಂದ ಸ್ವಾದಿಷ್ಟಕರವಾದ ಆಹಾರಗಳನ್ನು ತಯಾರಿಸಿ ಸವಿಯುತ್ತಾರೆ. ಮ್ಯಾಂಗೋ ಕುಲ್ಫಿ, ಮ್ಯಾಂಗೋ ಹಲ್ವಾ, ಮ್ಯಾಂಗೋ ಕೇಕ್ ಎಲ್ಲವೂ ಇದರಲ್ಲಿ ಸೇರಿದೆ. ಅಷ್ಟೇ ಯಾಕೆ ಮಾವಿನ ಹಣ್ಣಿನ ಜ್ಯೂಸ್ ಮಿಲ್ಕ್ ಶೇಕ್, ಐಸ್ ಕ್ರೀಮ್, ಚಾಕೊಲೇಟ್ ಹೀಗೆ ವಿವಿಧ ಬಗೆಯ ಭಕ್ಷ್ಯಗಳನ್ನು ಮಾವಿನ ಹಣ್ಣಿನಿಂದ ತಯಾರಿಸಲಾಗುತ್ತದೆ.

ಆದರೆ ಬಹುತೇಕರ ಪಾಲಿಗೆ ಅಚ್ಚುಮೆಚ್ಚಿನ ತಿನಿಸೆಂದರೆ ಬಾಲ್ಯದಲ್ಲಿ ಇಷ್ಟಪಟ್ಟು ಸವಿಯುತ್ತಿದ್ದ ಆಮ್‌ ಪಾಪಡ್ IMango papad) ಅಥವಾ ಮ್ಯಾಂಗೋ ಪಾಪಡ್. ರಸ್ತೆಬದಿಯ ಸ್ಟಾಲ್, ರೈಲ್ವೇ ನಿಲ್ದಾಣ ಅಥವಾ ಕಿರಾಣಿ ಅಂಗಡಿಗಳಲ್ಲಿ ಇದು ಸುಲಭವಾಗಿ ಸಿಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದರ ಮಾರಾಟ (Sale) ಸ್ಪಲ್ಪ ಮಟ್ಟಿಗೆ ಕಡಿಮೆಯಾಗಿದೆ. ಮಾವಿನ ಹಣ್ಣಿನ ಹಪ್ಪಳಗಳು ಸಿಹಿ, ಹುಳಿ ಮಿಶ್ರಿತ ರುಚಿಯನ್ನು ಹೊಂದಿರುತ್ತವೆ. ಈ ಹಪ್ಪಳಗಳನ್ನು ಕ್ಯಾಂಡಿ ರೀತಿಯಲ್ಲಿ ಸವಿಯಲಾಗುತ್ತದೆ. ಆದರೆ ಈ ಮ್ಯಾಂಗೋ ಪಾಪಡ್‌ನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದು ಅನೇಕ ಜನರಿಗೆ ತಿಳಿದಿಲ್ಲ. ಇತ್ತೀಚಿಗೆ ಮಾವಿನಹಣ್ಣಿನ ಹಪ್ಪಳ ತಯಾರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

Tap to resize

Latest Videos

Mango Benefit : ಮಧುಮೇಹಿಗಳಿಗೆ ಮಾವು ನಿಷಿದ್ಧ, ಆದ್ರೆ ಹೀಗ್ ತಿನ್ನಬಹುದು!

ಮಾವಿನ ಪಾಪಡ್‌ ತಯಾರಿಸುವಾಗ ನೈಮರ್ಲ್ಯದ ಬಗ್ಗೆ ನೆಟ್ಟಿಗರ ಚರ್ಚೆ
ಮಾವಿನ ಹಣ್ಣುಗಳಿಂದ ರಸವನ್ನು ತೆಗೆದು, ಈ ಮಾವಿನ ರಸಕ್ಕೆ ಸಕ್ಕರೆಯನ್ನು ಸೇರಿಸಿ ಆಮ್‌ ಪಾಪಡ್‌ನ್ನು ತಯಾರಿಸುವ ದೀರ್ಘವಾದ ಪ್ರಕ್ರಿಯೆಯನ್ನು ತೋರಿಸುವ ವೀಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ. Instagram ಖಾತೆ, @foodexplorerlalit ಎಂಬ ಖಾತೆಯಿಂದ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. 

ವಿಡಿಯೋದ ಆರಂಭದಲ್ಲಿ ಕಾರ್ಮಿಕರು ಮಾವಿನ ಹಣ್ಣಿನ ಸಿಪ್ಪೆ ತೆಗೆಯುವುದು ಮತ್ತು ಮಾವಿನ ಹಣ್ಣಿನ ತಿರುಳಿನಿಂದ ಪ್ಯೂರಿಯನ್ನು ರಚಿಸಲು ಯಂತ್ರವನ್ನು ಬಳಸುವುದನ್ನು ನೋಡಬಹುದು. ನಂತರ ಅವರು ತಮ್ಮ ಕೈಗಳನ್ನು ಬಳಸಿ ಪ್ಯೂರಿಯೊಂದಿಗೆ ಸಕ್ಕರೆಯನ್ನು ಬೆರೆಸುತ್ತಾರೆ ಮತ್ತು ಒಣ ಎಲೆಗಳ ಮೇಲೆ ಸುರಿಯುತ್ತಾರೆ. ಕೈಗಳಿಂದ ಆ ಪೇಪರ್‌ನ ಮೇಲೆ ಮಾವಿನ ರಸವನ್ನು ಸಮವಾಗಿ ಹರಡುತ್ತಾರೆ. ಒಣಗಿದ ನಂತರ, ಆಮ್ ಪಾಪಡ್ ಅನ್ನು ಮಾರಾಟಕ್ಕಾಗಿ ಸೆಲ್ಲೋಫೇನ್ ಹಾಳೆಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ. ವೈರಲ್ ಆಗಿರುವ ವೀಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವರು ಈ ಪಾಪಡ್ ತಯಾರಿಕೆಯ ವಿಧಾನಕ್ಕೆ ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ಹೀಯಾಳಿಸಿ ಕಮೆಂಟ್ ಮಾಡಿದ್ದಾರೆ.

Health Tips : ಮರೆತೂ ಕೂಡ ಮಾವಿನ ಹಣ್ಣಿನ ಜೊತೆ ಇವನ್ನು ತಿನ್ನಬೇಡಿ

'ಅತ್ಯಂತ ಪ್ರಸಿದ್ಧ ಮಾವಿನ ಪಾಪಡ್' ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.  ಇನ್ನೊಬ್ಬರು ಪಾಪಡ್‌ ತಯಾರಿಕೆಯ ಹಂತದಲ್ಲಿ ನೈರ್ಮಲ್ಯದ ಬಗ್ಗೆ ಗಮನಹರಿಸಿಲ್ಲ ಎಂದು ದೂರಿದ್ದಾರೆ. ಮತ್ತೆ ಕೆಲವರು 'RIP ನೈರ್ಮಲ್ಯ' ಎಂದು ಬರೆದರು,  ಮತ್ತೊಬ್ಬರು 'ಆರೋಗ್ಯಕ್ಕೆ ನಮಸ್ಕಾರ ಹೇಳಿ' ಎಂದು ಕಮೆಂಟಿಸಿದ್ದಾರೆ. ಇನ್ನು ಕೆಲವರು ಕಾರ್ಮಿಕರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

'ನಾವು ಯಾವಾಗಲೂ ನೈರ್ಮಲ್ಯದ ಬಗ್ಗೆ ಮಾತನಾಡುತ್ತೇವೆ ಮತ್ತು ಬೇಗ ಸಾಯುತ್ತೇವೆ. ಅವರೆಲ್ಲರೂ ಕಷ್ಟಪಟ್ಟು ದುಡಿಯುವ ಹಳ್ಳಿಯ ಜನರು, ಅದಕ್ಕಾಗಿಯೇ ಅವರು ನಮಗಿಂತ ಹೆಚ್ಚು ದಿನ ಬದುಕುತ್ತಾರೆ' ಎಂದು ಕಾಮೆಂಟಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ನೈರ್ಮಲ್ಯದ ಗೀಳನ್ನು ಪ್ರಶ್ನಿಸಿದರು, "ನಾವು ನೈಮರ್ಲ್ಯದ ಬಗ್ಗೆ ಮಾತನಾಡುತ್ತಾ 35 ವರ್ಷಕ್ಕೆ ಸಾಯುತ್ತೇವೆ. ನಾನು ನಮ್ಮ ಪೂರ್ವಜರು ತಮ್ಮ ಕೈಯಿಂದ ಕೆಲಸಗಳನ್ನು ಮಾಡುತ್ತಾಹೆಚ್ಚು ಕಾಲ ಹೇಗೆ ಬದುಕಿದ್ದಾರೆ ಎಂದು ಆಶ್ಚರ್ಯಪಡುತ್ತೇನೆ. ನೈರ್ಮಲ್ಯ ವಿಧಾನಗಳನ್ನು ತಪ್ಪಿಸುವುದು ನನ್ನ ಅರ್ಥವಲ್ಲ ಆದರೆ ಎಲ್ಲಾ ನೈರ್ಮಲ್ಯದ ಬಗ್ಗೆ ಮಾತನಾಡುವುದು ಅಪ್ರಸ್ತುತ' ಎಂದಿದ್ದಾರೆ.

 
 
 
 
 
 
 
 
 
 
 
 
 
 
 

A post shared by @foodexplorerlalit

click me!