ಬೇಸಿಗೆಯಲ್ಲಿ ಡಿಹೈಡ್ರೇಷನ್ ಜತೆಗೆ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಇದರ ಬಗ್ಗೆ ಗಮನ ಹರಿಸೋದು ಬಹಳ ಮುಖ್ಯ. ಚಯಾಪಚಯ ಕ್ರಿಯೆ ಸರಿಯಾಗಿರಬೇಕೆಂದ್ರೆ ಆಹಾರದ ಬಗ್ಗೆ ಹೆಚ್ಚು ಗಮನ ನೀಡ್ಬೇಕು.
ಬೇಸಿಗೆ ಆರಂಭವಾದರೆ ಸಾಕು ಶರೀರದಲ್ಲಿ ಅನೇಕ ರೀತಿಯ ಏರುಪೇರುಗಳು ತಾವಾಗಿಯೇ ಶುರುವಾಗುತ್ತವೆ. ವಿಪರೀತ ಬೆವರು, ಆಯಾಸ, ಸೆಕೆಯಿಂದಾಗಿ ಜೀವ ಹೈರಾಣಾಗುತ್ತದೆ. ನಮಗೆ ತಿಳಿಯದ ಹಾಗೆ ನಮ್ಮ ಶರೀರದಲ್ಲಿ ಬದಲಾವಣೆಗಳು ಸಹಜವಾಗಿಯೇ ನಡೆಯುತ್ತವೆ. ಅಂತಹ ಬದಲಾವಣೆಗಳಲ್ಲಿ ಚಯಾಪಚಯ ಕ್ರಿಯೆ ಕೂಡ ಒಂದು.
ಚಯಾಪಚಯ (Metabolism) ಕ್ರಿಯೆ ನಮ್ಮ ಶರೀರದಲ್ಲಿ ಅನೇಕ ರೀತಿಯಲ್ಲಿ ಪರಿಣಾಮಕಾರಿಯಾಗಿದೆ. ಚರ್ಮದ ಹೊಳಪಿನಿಂದ ಮೊದಲಾಗಿ ಶರೀರದ ಫಿಟ್ನೆಸ್ (Fitness) ತನಕವೂ ಮೆಟಾಬಾಲಿಜಮ್ ಮುಖ್ಯ ಪಾತ್ರವಹಿಸುತ್ತದೆ. ನಾವು ಸೇವಿಸುವ ಆಹಾರ (Food) ವನ್ನು ಶಕ್ತಿಯಾಗಿ ಪರಿವರ್ತಿಸುವ ಕೆಲಸವನ್ನು ಈ ಚಯಾಪಚಯ ಕ್ರಿಯೆ ನಡೆಸುತ್ತದೆ. ಇದು ದೇಹದ ಕಾರ್ಬೋಹೈಡ್ರೇಟ್, ಪ್ರೊಟೀನ್ ಮತ್ತು ಕೊಬ್ಬನ್ನು ಕರಗಿಸಿ ದೇಹಕ್ಕೆ ಶಕ್ತಿ ಒದಗಿಸುತ್ತದೆ. ಆದರೆ ಹೆಚ್ಚು ಬಿಸಿಲು ಮತ್ತು ಸೆಕೆಯ ಕಾರಣದಿಂದ ಮೆಟಾಬಾಲಿಜಮ್ ನಿಧಾನಗೊಳ್ಳುತ್ತದೆ ಮತ್ತು ಡಿಹೈಡ್ರೇಶನ್ ನಂತಹ ಸಮಸ್ಯೆಗಳು ಎದುರಾಗುತ್ತವೆ. ಮೆಟಾಬಾಲಿಜಮ್ ನಿಧಾನವಾಗುವುದರಿಂದ ಶರೀರದಲ್ಲಿ ನೀರು ಕಡಿಮೆಯಾಗುತ್ತದೆ ಮತ್ತು ಹಸಿವಾಗದೇ ಇರುವುದರಿಂದ ಶರೀರದಲ್ಲಿ ನಿಶ್ಶಕ್ತಿ ಕೂಡ ಕಾಣಿಸಿಕೊಳ್ಳುತ್ತದೆ. ಕಳಪೆ ಚಯಾಪಚಯ ಕ್ರಿಯೆಯಿಂದ ಹೊಟ್ಟೆಯ ತೊಂದರೆ ಹಾಗೂ ನಾಲಿಗೆಯ ಮೇಲೆ ಬಿಳಿ ಲೇಪನ ಕೂಡ ಕಾಣಿಸಿಕೊಳ್ಳುತ್ತದೆ.
HEALTHY FOODS : ಯಾರು ಗೋಧಿ ರೊಟ್ಟಿ ತಿನ್ಬೇಕು,ಯಾರು ತಿನ್ಬಾರದು?
ಮೆಟಾಬಾಲಿಜಮ್ (Metabolism) ಅನ್ನು ಬೂಸ್ಟ್ ಮಾಡುವುದು ಹೇಗೆ? : ಬಿಸಿಲು (Summer) ಮತ್ತು ಸೆಕೆಯಿಂದಾಗಿ ನಿಮ್ಮ ಶಕ್ತಿ ಕುಂದದೇ ಇರಲು ಮತ್ತು ಹೊಟ್ಟೆಯ ಸಮಸ್ಯೆಗಳು ಕಾಡದೇ ಇರಲು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವಂತ ಆಹಾರಗಳನ್ನು ಸೇವಿಸಬೇಕು. ಇದರಲ್ಲಿ ಉತ್ತಮ ಆರೋಗ್ಯಕ್ಕೆ ಪೂರಕವಾದ ಆರೋಗ್ಯಕ್ಕೆ ಒಳ್ಳೆಯದಾಗಿರುವ ಪಾನೀಯಗಳು ಸೇರಿಕೊಂಡಿವೆ. ನಿಮ್ಮ ಶರೀರವನ್ನು ಹೈಡ್ರೇಟ್ ಆಗಿರಿಸುವ ಪಾನೀಯಗಳೇ ಚಯಾಪಚಯ ಕ್ರಿಯೆಯನ್ನು ಬೂಸ್ಟ್ ಮಾಡುತ್ತವೆ. ಅಂತಹ ಪಾನೀಯಗಳು ಯಾವುದೆಂದು ನೋಡೋಣ.
ಇವು ಮೆಟಾಬಾಲಿಜಮ್ ಅನ್ನು ಹೆಚ್ಚಿಸುತ್ತವೆ :
• ನೀರು
• ಎಳೆನೀರು
• ಮಜ್ಜಿಗೆ
• ನಿಂಬೆ ಹಣ್ಣಿನ ಜ್ಯೂಸ್
• ಜ್ಯೂಸ್
ಈ ರೀತಿಯ ಪಾನೀಯಗಳು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಮೆಟಾಲಿಜಮ್ ಬೂಸ್ಟ್ ಆಗುತ್ತದೆ. ಇದರಿಂದ ನಿಮ್ಮ ಪೂರ್ತಿ ಶರೀರ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ.
Health : ಫ್ರಿಜ್‌ನಲ್ಲಿಟ್ಟ ತಾಮ್ರದ ಬಾಟಲ್ ನೀರು ಎಷ್ಟು ಸೇಫ್?
ಎಳೆನೀರಿನಿಂದ ಮೆಟಾಬಾಲಿಜಮ್ ವೃದ್ಧಿಯಾಗುತ್ತೆ : ನಾವು ಆಹಾರವನ್ನು ಸೇವಿಸಿದ ಕೆಲ ಸಮಯದ ತನಕ ಮೆಟಾಬಾಲಿಜಮ್ ಹೆಚ್ಚು ಬೂಸ್ಟ್ ಆಗುತ್ತದೆ. ಏಕೆಂದರೆ ಕೆಲವೊಮ್ಮೆ ನಾವು ಸೇವಿಸುವ ಆಹಾರಗಳನ್ನು ಜೀರ್ಣಮಾಡಲು ಶರೀರಕ್ಕೆ ಹೆಚ್ಚಿನ ಶಕ್ತಿಯ ಅವಶ್ಯಕತೆ ಇರುತ್ತದೆ. ಈ ಚಯಾಪಚಯ ಕ್ರಿಯೆಯನ್ನು ಯಾವಾಗಲೂ ಹೆಚ್ಚಿಸುವುದು ಬಹಳ ಕಠಿಣ ಕೆಲಸ. ಇಂತಹ ಕಠಿಣ ಕೆಲಸವನ್ನು ಸೂಕ್ತವಾಗಿ ನಿರ್ವಹಿಸಲು ಎಳೆನೀರು ಬಹಳ ಉಪಯುಕ್ತವಾಗಿದೆ. ಹಾಗಾಗಿ ಎಳೆನೀರನ್ನು ನಿಯಮಿತವಾಗಿ ಸೇವಿಸುವುದು ಅತ್ಯವಶ್ಯವಾಗಿದೆ. ಕೇವಲ ಒಂದೇ ಆಹಾರದಿಂದ ಎಂದಿಗೂ ಚಯಾಪಚಯ ಕ್ರಿಯೆ ವೃದ್ಧಿಯಾಗಲು ಅಥವಾ ಸ್ಥಿರವಾಗಿರಲು ಸಾಧ್ಯವಿಲ್ಲ. ಮೆಟಾಬಾಲಿಜಮ್ ಅನ್ನು ಹೆಚ್ಚಿಸಲು ಆರೋಗ್ಯಕರ ಡಯಟ್, ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುವುದು, 7-8 ಗಂಟೆ ನಿದ್ರಿಸುವುದು, ವ್ಯಾಯಾಮ ಎಲ್ಲವನ್ನೂ ಲಕ್ಷ್ಯದಲ್ಲಿ ಇಟ್ಟುಕೊಳ್ಳಬೇಕು.
ವೃದ್ಧಾಪ್ಯವನ್ನು ಮುಂದೂಡುವ ಎಳೆನೀರು : ವಯಸ್ಸು ಹೆಚ್ಚಿದಂತೆ ಚರ್ಮ ಸುಕ್ಕುಗಟ್ಟುವುದು ಸಾಮಾನ್ಯ ಸಂಗತಿ. ಕೆಲವರಿಗೆ ಇದು ವೃದ್ಧಾಪ್ಯಕ್ಕೂ ಮೊದಲೇ ಆರಂಭವಾಗುತ್ತದೆ. ಹೀಗೆ ಚರ್ಮ ಸುಕ್ಕುಗಟ್ಟುವ ಪ್ರಕ್ರಿಯೆಯನ್ನು ಎಳೆನೀರು ನಿಧಾನಗೊಳಿಸುತ್ತದೆ. ಆರೋಗ್ಯಕರ ಚರ್ಮವನ್ನು ಹೊಂದಲು ಶರೀರವನ್ನು ಹೈಡ್ರೇಟ್ ಆಗಿಡುವುದು ಅತ್ಯವಶ್ಯವಾಗಿದೆ. ಇದಕ್ಕಾಗಿ ನೀವು ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯುವುದು ಮತ್ತು ಚರ್ಮಕ್ಕೆ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದು ಉತ್ತಮ. ಇದರಿಂದ ಸ್ಕಿನ್ ಏಜಿಂಗ್ ಕ್ರಿಯೆ ನಿಧಾನವಾಗುತ್ತೆ. ಎಳೆನೀರು ದೇಹವನ್ನು ಹೈಡ್ರೇಟ್ ಆಗಿರಿಸಲು ಮತ್ತು ಚರ್ಮಕ್ಕೆ ಪೋಷಕಾಂಶಗಳನ್ನು ಒದಗಿಸಲು ಸಹಾಯಕಾರಿಯಾಗಿದೆ. ಇದರ ಜೊತೆಗೆ ಪುದೀನ, ದಾಲ್ಚಿನ್ನಿ, ನಿಂಬು, ಶುಂಠಿ, ಗ್ರೀನ್ ಟೀ ಗಳನ್ನು ಬಳಸಿ ತಯಾರಿಸಿದ ಪಾನೀಯಗಳು ಕೂಡ ಚಯಾಪಚಯ ಕ್ರಿಯೆಯನ್ನು ವೃದ್ಧಿಮಾಡುತ್ತವೆ.