ಭಾರತದಲ್ಲಿ ಸಾಂಪ್ರದಾಯಿಕ ಸಸ್ಯಹಾರಿ ಖಾದ್ಯಗಳು ಹೆಚ್ಚಿವೆ. ಒಂದೊಂದು ಹಳ್ಳಿಯಲ್ಲೂ ನಾವು ಒಂದೊಂದು ಸಾಂಪ್ರದಾಯಿಕ ಖಾದ್ಯ ಸವಿಬಹುದು ಅಂದ್ರೆ ಅತಿಶಯೋಕ್ತಿಯಾಗದು. ರುಚಿ ರುಚಿ ಆಹಾರದ ತವರಾದ ಭಾರತದ ಖಾದ್ಯಗಳು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿವೆ.
ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ವ್ಯಾಖ್ಯಾನಿಸುವಲ್ಲಿ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಭಾರತ ಅನೇಕ ಜಾತಿ, ಸಂಸ್ಕೃತಿ ಜೊತೆ ಆಹಾರದಲ್ಲೂ ವಿವಿಧತೆಯನ್ನು ಹೊಂದಿದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ಆಹಾರ ಪ್ರಸಿದ್ಧಿ ಪಡೆದಿದೆ. ಭಾರತೀಯ ಆಹಾರ ಪದ್ಧತಿ ತುಂಬಾ ವಿಸ್ತಾರವಾಗಿದೆ. ಹಾಗೆಯೇ ಆಹಾರ ಪದ್ಧತಿ ಶ್ರೀಮಂತವಾಗಿದೆ. ಪ್ರಪಂಚದಾದ್ಯಂತ ಭಾರತ ಪಾಕಪದ್ಧತಿ ಇಷ್ಟಪಡುವ ಜನರಿದ್ದಾರೆ.
ಭಾರತೀಯ ಆಹಾರ (Food) ಇಡೀ ಜಗತ್ತಿನ ಜನರನ್ನು ಸೆಳೆದಿರುವುದಲ್ಲದೆ, ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವಿಶ್ವದ ಅತ್ಯುತ್ತಮ ಭಕ್ಷ್ಯಗಳ ಪಟ್ಟಿಯಲ್ಲಿ ಅನೇಕ ಭಾರತೀಯ ಆಹಾರಗಳು ತಮ್ಮ ಸ್ಥಾನವನ್ನು ಪಡೆದಿವೆ.
ಕಳೆದ ತಿಂಗಳು, ವಿಶ್ವದ ಅತ್ಯುತ್ತಮ ಸ್ಯಾಂಡ್‌ವಿಚ್ (Sandwich) ಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಬೀದಿ ಆಹಾರಗಳಲ್ಲಿ ಒಂದಾದ ವಡಾ ಪಾವ್ 13 ನೇ ಸ್ಥಾನ ಪಡೆದಿತ್ತು.
SUMMER FOOD : ಚಯಾಪಚಯ ಬೂಸ್ಟ್ ಮಾಡುತ್ತೆ ಈ ಆಹಾರ
ಜಾಗತಿಕ ಸಸ್ಯಾಹಾರ (Vegetarian) ಭಕ್ಷ್ಯ ಪಟ್ಟಿಯಲ್ಲಿ ಮಿಸಲ್ ಪಾವ್ : ಈಗ ಭಾರತೀಯ ಪಾಕಪದ್ಧತಿಯು ಮತ್ತೊಮ್ಮೆ ಅತ್ಯುತ್ತಮ ಸಾಂಪ್ರದಾಯಿಕ ಸಸ್ಯಾಹಾರಿ ಭಕ್ಷ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಫುಡ್ ಗೈಡ್ ಪ್ಲಾಟ್‌ಫಾರ್ಮ್, ಟೇಸ್ಟ್ ಅಟ್ಲಾಸ್ ಈ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ಮಹಾರಾಷ್ಟ್ರದ ಪ್ರಸಿದ್ಧ ಮಿಸಲ್ ಪಾವ್ 11 ನೇ ಸ್ಥಾನದಲ್ಲಿದೆ. ಗ್ವಾಕಮೋಲ್, ಹಮ್ಮಸ್ ಮತ್ತು ಸ್ಪಾಗೆಟ್ಟಿ ಆಗ್ಲಿಯೊ ಇ ಒಲಿಯೊ ಸೇರಿದಂತೆ ವಿದೇಶಿ ಭಕ್ಷ್ಯಗಳು ಅಗ್ರ 10 ರಲ್ಲಿ ಪ್ರಾಬಲ್ಯ ಹೊಂದಿವೆ.
ಮಿಸಲ್ ಪಾವ್ ಮಾತ್ರವಲ್ಲ ಪಟ್ಟಿಯಲ್ಲಿದೆ ಈ ಎಲ್ಲ ಭಾರತೀಯ ಆಹಾರ : ಫುಡ್ ಗೈಡ್ ಪ್ಲಾಟ್‌ಫಾರ್ಮ್, ಟೇಸ್ಟ್ ಅಟ್ಲಾಸ್ 50 ಆಹಾರಗಳನ್ನು ಪಟ್ಟಿ ಮಾಡಿದೆ. ಇದ್ರಲ್ಲಿ ಮಿಸಾಲ್ ಪಾವ್ ಮಾತ್ರವಲ್ಲ ಇನ್ನೂ ಕೆಲ ಭಾರತೀಯ ಆಹಾರ ಪಟ್ಟಿ ಸೇರಿದೆ. 20 ನೇ ಸ್ಥಾನದಲ್ಲಿ ಆಲೂ ಗೋಬಿ ಇದೆ. ಅದರ ನಂತರ ರಾಜ್ಮಾ 22 ನೇ ಮತ್ತು ಗೋಬಿ ಮಂಚೂರಿಯನ್ 24 ನೇ ಸ್ಥಾನದಲ್ಲಿದೆ. ರಾಜ್ಮಾ ಚಾವಲ್ 41ನೇ ರ್ಯಾಂಕ್ ಪಡೆದಿದೆ.
Healthy Foods : ಯಾರು ಗೋಧಿ ರೊಟ್ಟಿ ತಿನ್ಬೇಕು,ಯಾರು ತಿನ್ಬಾರದು?
ಮಸಾಲಾ ವಡಾಕ್ಕೂ ಸಿಕ್ಕಿದೆ ಸ್ಥಾನ : ಪಟ್ಟಿಯ 27ನೇ ಸ್ಥಾನದಲ್ಲಿ ಮಸಾಲಾ ವಡಾ ಸೇರಿದೆ. ಮಸಾಲಾ ವಡಾ ತಮಿಳುನಾಡಿನ ತಿಂಡಿ ಎಂದು ಟೆಸ್ಟ್ ಅಟ್ಲಾಸ್‌ನಲ್ಲಿ ಹೇಳಲಾಗಿದೆ. ಇದು ಟೀ ಟೈಮ್ ಸ್ನ್ಯಾಕ್. ಸಾಮಾನ್ಯವಾಗಿ ಕಡಲೆ, ಈರುಳ್ಳಿ, ಶುಂಠಿ, ಕರಿಬೇವಿನ ಎಲೆಗಳು, ಒಣಗಿದ ಕೆಂಪು ಮೆಣಸಿನಕಾಯಿ ಎಣ್ಣೆ ಮತ್ತು ಉಪ್ಪಿ ಬೆರೆಸಿ ಇದನ್ನು ತಯಾರಿಸಲಾಗುತ್ತದೆ.
ಭೇಲ್ ಪುರಿಗೆ ಯಾವ ರ್ಯಾಂಕ್ ಗೊತ್ತಾ? : ಭೇಲ್ ಪುರಿ ಕೂಡ ಪಟ್ಟಿಯಲ್ಲಿ ಸೇರಿದೆ. ಭೇಲ್ ಪುರಿ 50 ಆಹಾರದಲ್ಲಿ 37ನೇ ಸ್ಥಾನವನ್ನು ಪಡೆದಿದೆ. ಭೇಲ್ ಪುರಿಯನ್ನು ಚಾಟ್ ಐಟಂ ಎಂದು ಪರಿಗಣಿಸಬಹುದು. ಈರುಳ್ಳಿ, ಟೊಮ್ಯಾಟೊ, ಆಲೂಗಡ್ಡೆ, ಶೇಂಗಾ, ಸೇವ್ ಮತ್ತು ಮಸಾಲೆಯುಕ್ತ ಚಟ್ನಿಯೊಂದಿಗೆ ಬೆರೆಸಿದ ಮಂಡಕ್ಕಿ ಜೊತೆ ಇದನ್ನು ಬೆರೆಸಲಾಗುತ್ತದೆ.
ಮಿಸಲ್ ಪಾವ್ ಗೆ 2015ರಲ್ಲೂ ಸಿಕ್ಕಿತ್ತು ಪ್ರಶಸ್ತಿ : ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಮಿಸಲ್ ಪಾವ್ ಮಹಾರಾಷ್ಟ್ರದ ಆಹಾರ. ಮಿಸಲ್ ಮಸಾಲೆ ಮತ್ತು ಪಾವನ್ನು ಇದ್ರಲ್ಲಿ ಸರ್ವ್ ಮಾಡಲಾಗುತ್ತದೆ. ಇದ್ರ ಜೊತೆಗೆ ಹಸಿ ಈರುಳ್ಳಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಗೂ ಪಾವ್ ಜೊತೆ ನಿಂಬುವನ್ನು ನೀಡಲಾಗುತ್ತದೆ. 2015 ರಲ್ಲಿ ಲಂಡನ್‌ನಲ್ಲಿ ನಡೆದ ಫುಡೀ ಹಬ್ ಪ್ರಶಸ್ತಿ ಪಟ್ಟಿಯಲ್ಲಿ ಮಿಸಲ್ ಪಾವ್ ಸ್ಥಾನ ಪಡೆದಿತ್ತು. ವಿಶ್ವದ ಅತ್ಯಂತ ರುಚಿಕರವಾದ ಸಸ್ಯಾಹಾರಿ ಖಾದ್ಯವೆಂಬ ಪ್ರಶಸ್ತಿಯನ್ನು ಮಿಸಲ್ ಪಾವ್ ಪಡೆದಿತ್ತು. ದಾದರ್‌ನಲ್ಲಿರುವ ಅಸ್ವಾದ್ ರೆಸ್ಟೋರೆಂಟ್ ಗೆ ಈ ಪ್ರಶಸ್ತಿ ನೀಡಲಾಗಿತ್ತು. ಈ ರೆಸ್ಟೋರೆಂಟ್ ಅನ್ನು 1986 ರಲ್ಲಿ ಬಾಳ್ ಠಾಕ್ರೆ ಉದ್ಘಾಟಿಸಿದ್ದರು.