Vegan Vs Vegetarian: ಏನಿದು ಹೊಸ ಡಯಟ್ ಖಯಾಲಿ?

By Suvarna News  |  First Published Jul 10, 2022, 6:14 PM IST

ಇತ್ತೀಚಿನ ದಿನಗಳಲ್ಲಿ ವೇಗಾನ್ ಡಯೆಟ್, ವೆಜಿಟೇರಿಯನ್ ಡಯೆಟ್ ಎಂದು ಬಹಳಷ್ಟು ಜನ ಹೇಳುವುದನ್ನು ಕೇಳಿರಬಹುದು. ವೇಗಾನ್ ಡಯೆಟ್ ಎಂದರೂ ಸಸ್ಯಾಹಾರದ್ದೇ. ಆದರೂ ವೇಗಾನ್ ಗೂ ವೆಜಿಟೇರಿಯನ್ ಗೂ ಭಾರೀ ವ್ಯತ್ಯಾಸವಿದೆ. ಅದೇನೆಂದು ನಿಮಗೆ ಗೊತ್ತೇ? 


ವಿಶ್ವದೆಲ್ಲೆಡೆ ಇಂದು ವೇಗಾನ್ ಹಾಗೂ ವೆಜಿಟೇರಿಯನ್ ಡಯೆಟ್ ಅನುಸರಿಸುವವರ ಸಂಖ್ಯೆ ಹೆಚ್ಚಿದೆ. ಆರೋಗ್ಯ ಹಾಗೂ ಆಹಾರ ಸುರಕ್ಷತಾ ವಲಯದಲ್ಲಿ ಈ ಡಯೆಟ್ ಗಳು ಹೊಸ ಪರಿಭಾಷೆಯನ್ನೇ ಬರೆದಿವೆ ಎಂದರೆ ತಪ್ಪಲ್ಲ. ಆದರೆ ಇವೆರಡು ವಿಧಾನಗಳ ಬಗ್ಗೆ ಸಾಕಷ್ಟು ಜನರಿಗೆ ಗೊಂದಲವಿದೆ ಎಂದರೆ ತಪ್ಪಿಲ್ಲ. ಎರಡೂ ಸಸ್ಯ ಆಧಾರಿತ ಡಯೆಟ್ ಆಗಿದ್ದರೂ ವೇಗಾನ್ ಡಯೆಟ್ ವೆಜಿಟೇರಿಯನ್ ಗಿಂತ ಸಾಕಷ್ಟು ಭಿನ್ನವಾಗಿದೆ. 

ಯಾರು ವೇಗಾನ್?
“ನಾನು ವೇಗಾನ್’ ಎಂದು ಹೇಳಿಕೊಳ್ಳುವುದು ಒಂದು ರೀತಿಯ ಹೆಮ್ಮೆ. ಆದರೆ, ಯಾರು ನಿಜವಾದ ವೇಗಾನ್? ಪ್ರಾಣಿ ಮೂಲದ ಎಲ್ಲ ಪದಾರ್ಥಗಳಿಂದ ಕಟ್ಟುನಿಟ್ಟಾಗಿ ದೂರವಿರುವವರು ವೇಗಾನ್. ಪ್ರಾಣಿ ಹಿಂಸೆಯನ್ನೂ ಯಾವ ರೀತಿಯಿಂದಲೂ ಮಾಡದವರು ವೇಗಾನ್. ಆಹಾರ, ಫ್ಯಾಷನ್ ಅಥವಾ ಯಾವುದೇ ರೀತಿಯಲ್ಲಿ ಪ್ರಾಣಿ ಮೂಲದ ಯಾವುದೇ ವಸ್ತುವನ್ನು ಇವರು ಬಳಕೆ ಮಾಡುವುದಿಲ್ಲ. ಪ್ರಾಣಿರಹಿತ ಜೀವನಶೈಲಿಯನ್ನು ಉತ್ತೇಜಿಸುವುದು ಹಾಗೂ ಈ ಮೂಲಕ ಪರಿಸರದ ಸಂರಕ್ಷಣೆಗೆ ಕೊಡುಗೆ ನೀಡುವುದು ಈ ವಿಧಾನದ ಉದ್ದೇಶ. ಇದರ ಹೊರತಾಗಿ ಪ್ರಾಣಿಗಳಿಗಾಗಿ ಪರೀಕ್ಷಿಸಿದ ಯಾವುದೇ ಉತ್ಪನ್ನವನ್ನು ವೇಗಾನ್ ಆದವರು ಬಳಕೆ ಮಾಡುವುದಿಲ್ಲ. 

ನೀವು ಕಡಲೆಕಾಯಿ ಪನೀರ್ ತಿಂದಿದ್ದೀರಾ?

ಆಹಾರದ ವಿಚಾರಕ್ಕೆ ಬಂದರೆ, ವೇಗಾನ್ ಶೈಲಿಯವರು ಎಲ್ಲ ರೀತಿಯ ಪ್ರಾಣಿ ಉತ್ಪನ್ನಗಳಿಂದ ದೂರವಿರುತ್ತಾರೆ. ಮಾಂಸ, ಮೊಟ್ಟೆ, ಹಾಲಿನ ಉತ್ಪನ್ನ, ಜೇನುತುಪ್ಪ, ಮೀನು ಹಾಗೂ ಇನ್ನಿತರ ಯಾವುದೇ ಉತ್ಪನ್ನಗಳನ್ನು ಅವರು ಬಳಕೆ ಮಾಡುವುದಿಲ್ಲ. ಕೇವಲ ಆಹಾರವೊಂದೇ ಅಲ್ಲ, ಪ್ರಾಣಿಮೂಲದಿಂದ ತಯಾರಾದ ಯಾವುದೇ ವಸ್ತುವಿನ ಬಳಕೆಯೂ ಅವರಿಗೆ ನಿಷಿದ್ಧ. ಅಂದರೆ, ಚರ್ಮ, ತುಪ್ಪಳ, ರೇಷ್ಮೆ ಇತ್ಯಾದಿ ಯಾವುದೇ ಬಟ್ಟೆಯನ್ನು ಅವರು ಬಳಕೆ ಮಾಡುವುದಿಲ್ಲ. 

Tap to resize

Latest Videos

ಯಾಕಾಗಿ ವೇಗಾನ್?
ನೈತಿಕ, ಆಧ್ಯಾತ್ಮಿಕ ಹಾಗೂ ಪರಿಸರದ ಕಾರಣಕ್ಕಾಗಿ ಜನರು ವೇಗಾನ್ ಮೊರೆ ಹೋಗುತ್ತಾರೆ. ಅವರ ಪ್ರಥಮ ಆದ್ಯತೆ ಎಂದರೆ ಪರಿಸರದ ರಕ್ಷಣೆ ಹಾಗೂ ಪ್ರಾಣಿ ಹಿಂಸೆಗೆ ಇತಿಶ್ರೀ ಹಾಡುವುದಾಗಿದೆ. ಅವರವರ ಅಗತ್ಯ, ಅನುಕೂಲಕ್ಕೆ ತಕ್ಕ ಹಾಗೆ ವೇಗಾನ್ ಆಗುವವರೂ ಇದ್ದಾರೆ. ಕೆಲವು ವೆರೈಟಿಗಳು ಹೀಗಿವೆ.
•    ಆಹಾರದಲ್ಲಿ ವೇಗಾನ್: ಇವರು ಹಣ್ಣು, ತರಕಾರಿ, ಧಾನ್ಯ, ಒಣಹಣ್ಣು, ಬೀಜಗಳನ್ನು ಬಳಕೆ ಮಾಡುತ್ತಾರೆ. ಪ್ರಾಣಿ ಮೂಲದ ಆಹಾರ ತ್ಯಜಿಸುತ್ತಾರೆ.
•    ಕಚ್ಚಾ ಆಹಾರದ ವೇಗಾನ್: ಇವರು ಕೇವಲ ಕಚ್ಚಾ ಹಣ್ಣುಗಳು, ತರಕಾರಿ, ಬೀಜಗಳನ್ನು ಬಳಕೆ ಮಾಡುತ್ತಾರೆ. ಅಂದರೆ, ಆಹಾರವನ್ನು 40 ಡಿಗ್ರಿ ಸೆಲ್ಸಿಯಸ್ ಹಾಗೂ ಅದಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ ಬೇಯಿಸಿರುತ್ತಾರೆ. 
•    80/10/10 ಡಯೆಟ್: ಈ ವಿಧಾನದ ವೇಗಾನ್ ಗಳು ಕೊಬ್ಬಿನಂಶ ಅಧಿಕವಾಗಿರುವ ಸಸ್ಯಾಹಾರವನ್ನು ಸೇವಿಸುವುದಿಲ್ಲ. ಒಣಹಣ್ಣು, ಬೆಣ್ಣೆಹಣ್ಣು ಇಂಥವುಗಳನ್ನು ಸೇವಿಸುವುದಿಲ್ಲ. ಕೇವಲ ಹಸಿರು ಸೊಪ್ಪು ಹಾಗೂ ಹಣ್ಣುಗಳನ್ನು ತಿನ್ನುತ್ತಾರೆ. ಈ ವಿಧಾನವನ್ನು ಲೋ ಫ್ಯಾಟ್ ವೇಗಾನ್ ಡಯೆಟ್, ರಾ ಫುಡ್ ವೇಗಾನ್ ಅಥವಾ ಫ್ರೂಟೇರಿಯನ್ ಡಯೆಟ್ ಎಂದೂ ಕರೆಯಲಾಗುತ್ತದೆ. 
•    ಸ್ಟಾರ್ಚ್ ಬಳಕೆ: ಈ ವಿಧಾನದಲ್ಲಿ ಕೇವಲ ಹಣ್ಣುಗಳ ಬದಲು ಅಕ್ಕಿ, ಆಲೂಗಡ್ಡೆ, ಜೋಳವನ್ನು ಬಳಕೆ ಮಾಡಲಾಗುತ್ತದೆ.  ಕಾರ್ಬೋಹೈಡ್ರೇಟ್ ಸೇವನೆ ಹೆಚ್ಚು. 
•    ಲೋ ಫ್ಯಾಟ್ ವೇಗಾನ್ ಹಾಗೂ ಸ್ಟಾರ್ಚ್ ವೇಗಾನ್ ಎರಡನ್ನೂ ಬಳಕೆ ಮಾಡುವ ವರ್ಗವೂ ಇದೆ. 
•    ಥ್ರೈವ್ ಡಯೆಟ್: ಇವರು ಆಹಾರವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಬೇಯಿಸುತ್ತಾರೆ. 

ಆರೋಗ್ಯ ವೃದ್ಧಿಗಾಗಿ ಮೂತ್ರ ಕುಡೀತಾನಂತೆ ಇವನು 

ವೆಜಿಟೇರಿಯನ್ ಡಯೆಟ್
ವೆಜಿಟೇರಿಯನ್ ಡಯೆಟ್ ಕೂಡ ಸಸ್ಯಾಹಾರವನ್ನೇ ಒಳಗೊಂಡಿದೆ. ಆದರೆ, ಇವರು ಪ್ರಾಣಿಮೂಲದ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ. ಇದರಲ್ಲೂ ಹಲವಾರು ವಿಧಗಳಿವೆ. 
 

click me!