ಕೊರೊನಾ ಸಮಯದಲ್ಲಿ ವೇಗನ್ ಡಯಟ್‌ ಅಪಾಯಕಾರಿ !

By Suvarna News  |  First Published May 31, 2021, 5:07 PM IST

ತೂಕ ಇಳಿಸಲು ಸೆಲೆಬ್ರಿಟಿಗಳೂ ಸೇರಿದಂತೆ ಹಲವರು ಬಳಸುವ ವೇಗನ್ ಡಯಟ್‌ ಈ ಸಮಯದಲ್ಲಿ ಅಷ್ಟು ಆರೋಗ್ಯಕರವಲ್ಲ. ಯಾಕೆ ಗೊತ್ತೆ?


ಆರೋಗ್ಯಕರವಾಗಿ ಇರಲು, ತೂಕ ಇಳಿಸಲು ಹಲವರು ವೇಗನ್ ಆಹಾರಕ್ರಮ ಪಾಲಿಸಲು ಆರಂಭಿಸಿದ್ದಾರೆ. ವೇಗನ್ ಡಯಟ್ ಅಂದರೆ ಬರೀ ಸಸ್ಯಾಹಾರವನ್ನು ಮಾತ್ರ ಸೇವಿಸುವುದು. ಈ ಆಹಾರದಲ್ಲಿ ಧಾನ್ಯಗಳು, ಒಣ ಹಣ್ಣುಗಳು, ತರಿಕಾರಿಗಳನ್ನಷ್ಟೇ ತಿನ್ನಲಾಗುವುದು. ಎಷ್ಟರವರೆಗೆ ಎಂದರೆ, ಮೊಟ್ಟೆ ಸೇವಿಸುವುದಿಲ್ಲ. ಹಾಲು ಅಥವಾ ಇನ್ನಿತರ ಹಾಲಿನ ಉತ್ಪನ್ನಗಳನ್ನು ಕೂಡ ಬಳಸುವುದು ಇಲ್ಲ. ಯಾಕೆಂದರೆ ಹಾಲು ದನ- ಎಮ್ಮೆಯಿಂದ ಬಂದುದು ಎಂಬ ಕಾರಣದಿಂದ. ಹಾಲಿನಿಂದ ಮಾಡಿದ್ದಕ್ಕಾಗಿ ಪನ್ನೀರ್ ಅನ್ನು ಕೂಡ ಬಳಸುವುದಿಲ್ಲ. ಆದರೆ ಈ ಡಯಟ್ ಕೊರೊನಾ ಟೈಮ್‌ನಲ್ಲಿ ಸೂಕ್ತವಲ್ಲ. ಯಾಕೆಂದು ನೋಡಿ. 

ವೇಗನ್ ಡಯಟ್‌ನ ಪ್ರಯೋಜನವೇನು?
- ಹಾಲು ಮೊಸರು ತುಪ್ಪ ಇತ್ಯಾದಿಗಳು ಇಲ್ಲವಾದ್ದರಿಂದ ದೇಹಕ್ಕೆ ಕೊಬ್ಬು ಸೇರುವುದಿಲ್ಲ. ಹಾಗೇ ಮಾಂಸಾಹಾರ ಕೂಡ ಇಲ್ಲವಾದ್ದರಿಂದ, ರೆಡ್ ಮೀಟ್‌ನಲ್ಲಿರುವ ಕೊಲೆಸ್ಟ್ರಾಲ್ ದೇಹಕ್ಕೆ ಸೇರುವುದಿಲ್ಲ. 
- ಸಸ್ಯ ಆಧಾರಿತ ಆಹಾರವು ಟೈಪ್ ೨ ಡಯಾಬಿಟಿಸ್, ಕ್ಯಾನ್ಸರ್, ಹೃದ್ರೋಗದ ಅಪಾಯಗಳನ್ನು ಕಡಿಮೆ ಮಾಡುತ್ತದೆ.
- ಪ್ರಾಣಿಗಳ ಶೋಷಣೆಯನ್ನು ನಿಲ್ಲಿಸುವುದು, ಮಿತಿಗೊಳಿಸುವುದು ಈ ಆಹಾರಕ್ರಮದ ಹಿಂದಿನ ಉದಾತ್ತ ಉದ್ದೇಶ.
- ಹೆಚ್ಚಿನ ಕೊಲೆಸ್ಟ್ರಾಲ್ ಇಲ್ಲದ ಬೇಳೆಕಾಳು ಮುಂತಾದ ಆಹಾರಗಳಾದ್ದರಿಂದ, ದೇಹದಲ್ಲಿ ಕೊಬ್ಬು ಸೇರುವುದಿಲ್ಲ. ತೂಕ ಇಳಿಸಲು ಇದು ಬೆಸ್ಟ್.
- ವೇಗನ್ ಆಹಾರಕ್ರಮದಲ್ಲಿ ಯಾವುದೇ ಕ್ಯಾಲೋರಿ ಆಗಲಿ, ಕೊಬ್ಬಿನಂಶವಾಗಲಿ ಇಲ್ಲದ ಕಾರಣ ಮೈಬೊಜ್ಜು ಬೇಗನೆ ಕರಗುತ್ತದೆ, ಇನ್ನು ದೇಹದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ.

Tap to resize

Latest Videos

ಶುರುವಾಗಿದೆ ಹೊಸ ಫುಡ್ ಟ್ರೆಂಡ್; ನಾನ್‌ ವೆಜ್‌ನಿಂದ ವೆಜ್‌ ಕಡೆ ಬರ್ತಿದ್ದಾರೆ ಸೆಲಬ್ರಿಟಿಗಳು! ...
 

ವೇಗನ್ ಡಯಟ್‌ನ ಹಾನಿಯೇನು ?
- ಹಾಲು ಹಾಗೂ ಮಾಂಸಾಹಾರದಲ್ಲಿ ವಿಟಮಿನ್‌ ಬಿ 12 ಅಧಿಕ ಇರುತ್ತದೆ, ಆದರೆ ವೇಗನ್ ಆಹಾರಕ್ರಮದಲ್ಲಿ ಹಾಲು ಕೂಡ ಬಳಸುವುದಿಲ್ಲ, ಇದರಿಂದ ದೇಹಕ್ಕೆ ಸಾಕಾಗುವಷ್ಟು ಬಿ12 ದೊರೆಯದೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
- ವಿಟಮಿನ್ ಬಿ 12 ಕೊರತೆಯ ಮತ್ತೊಂದು ಹೆಸರೇ ರಕ್ತಹೀನತೆ. ವೇಗನ್ ಆಹಾರಕ್ರಮ ಪಾಲಿಸುವವರಿಗೆ ದೇಹದಲ್ಲಿ ಕಬ್ಬಿಣದಂಶ ಕೊರತೆ ಉಂಟಾಗುವ ಸಾಧ್ಯತೆ ಇದೆ. ಕಬ್ಬಿಣದಂಶದ ಕೊರತೆಯಿಂದ ರಕ್ತ ಕಣಗಳಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗಿ ರಕ್ತ ಹೀನತೆ ಸಮಸ್ಯೆ ಉಂಟಾಗುವುದು. ರಕ್ತಹೀನತೆ ಸಮಸ್ಯೆ ಬಂದಾಗ ಸೂಕ್ತ ಚಿಕಿತ್ಸೆ ದೊರೆಯದೆ ಹೋದರೆ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ದೇಹದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದಾಗ ದೇಹದ ಅಂಗಾಂಗಗಳಿಗೆ ಹಾನಿಯುಂಟಾಗಬಹುದು. ಇನ್ನು ರಕ್ತಹೀನತೆ ಸಮಸ್ಯೆ ಉಂಟಾದಾಗ ರಕ್ತದಲ್ಲಿ ಹಿಮೋಗ್ಲೋಬಿನ್ ಸಮಸ್ಯೆ ಕಡಿಮೆಯಾಗಿ ಹೃದಯದ ಕಾರ್ಯಕ್ಕೆ ಅಡಚಣೆ ಉಂಟಾಗುವುದು. ಆದ್ದರಿಂದ ಕೊರೊನಾ ಟೈಮ್‌ನಲ್ಲಿ ವೇಗನ್ ಡಯಟ್‌ಗೆ ಕಟ್ಟುಬೀಳುವುದು ಬೇಡ.
- ಬರೀ ತರಕಾರಿ ಹಾಗೂ ಹಣ್ಣುಗಳನ್ನು ಮಾತ್ರ ಈ ಆಹಾರದಲ್ಲಿ ಬಳಸುವುದರಿಂದ ಇದು ತುಂಬಾ ಆರೋಗ್ಯಕರವಾದ ಡಯಟ್‌ ಎಂದು ಭಾವಿಸುವುದು ತಪ್ಪು. ಬಾದಾಮಿಯಲ್ಲಿ ಅನೇಕ ಪೋಷಕಾಂಶಗಳಿದ್ದು ಬಾದಾಮಿ ಹಾಲು ಒಳ್ಳೆಯದು. ಹಾಗಂತ ಬಾದಾಮಿ ಹಾಲು ಹಸುವಿನ ಹಾಲಿಗೆ ಪರ್ಯಾಯ ಅಲ್ಲ.

ವೆಜಿಟೇರಿಯನ್ ಡಯಟ್ ಬಗ್ಗೆ ನೀವು ಕೇಳಿರೋದೆಲ್ಲಾ ನಿಜವಲ್ಲ, ಮತ್ತೆ? ...

- ಮಾಂಸದ ಬದಲು ಚೀಸ್‌ ಬಳಸಿ ಕೂಡ ರುಚಿಕರವಾದ ಖಾದ್ಯ ತಯಾರಿಸಬಹುದು, ಇನ್ನು ಚೀಸ್‌ನಲ್ಲಿ ಪ್ರೊಟೀನ್, ವಿಟಮಿನ್ಸ್ ಹಾಗೂ ಖನಿಜಾಂಶಗಳಿವೆ, ಆದರೆ ಮಾಂಸದಲ್ಲಿ ದೊರೆಯುವಷ್ಟು ಪೋಷಕಾಂಶಗಳು ಚೀಸ್‌ನಲ್ಲಿ ದೊರೆಯುವುದಿಲ್ಲ.
- ವೇಗನ್ ಆಹಾರಕ್ರಮದಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ. ದೇಹಕ್ಕೆ ಶಕ್ತಿ ದೊರೆಯಲು ಕ್ಯಾಲೋರಿ ಅವಶ್ಯಕ, ಆದರೆ ಈ ಆಹಾರಕ್ರಮದಲ್ಲಿ ಅಷ್ಟೊಂದು ಕ್ಯಾಲೋರಿ ದೊರೆಯುವುದಿಲ್ಲ.
- ಯಾವುದೇ ಆಹಾರಕ್ರಮ ಪಾಲಿಸಿದರೂ ನೀರು ಕುಡಿಯುವುದು ಅವಶ್ಯಕ. ಇನ್ನು ವೇಗನ್‌ ಆಹಾರಕ್ರಮದಲ್ಲಿ ನಾರಿನಂಶವಿರುವ ತರಕಾರಿಗಳನ್ನು ಬಳಸುತ್ತೇವೆ, ಇದು ಜೀರ್ಣವಾಗಲು ನೀರು ಅವಶ್ಯಕ.
- ಮಾಂಸದಲ್ಲಿ ಕಬ್ಬಿಣದಂಶ ಅಧಿಕವಿದೆ ಹಾಗೂ ಮಾಂಸದಲ್ಲಿರುವ ಕಬ್ಬಿಣದಂಶವನ್ನು ದೇಹವು ಸುಲಭವಾಗಿ ಹೀರಿಕೊಳ್ಳುತ್ತದೆ, ಹಾಗೂ ಕ್ಯಾಲ್ಸಿಯಂ ಕೊರತೆ ಉಂಟಾಗದಿರಲು ಹಾಲು ಕುಡಿಯಬೇಕು. ಆದರೆ ಬರೀ ಹಣ್ಣುಗಳು ಹಾಗೂ ತರಕಾರಿ ಬಳಸುವುದರಿಂದ ಈ ಎರಡು ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.
- ಚೊಲೈನ್ ಎನ್ನುವುದು ಮೆದುಳಿಗೆ ಅವಶ್ಯಕವಾದ ಪೋಷಕಾಂಶ. ಈ ಅಂಶ ಹಾಲಿನಲ್ಲಿದೆ. ಆದರೆ ವೇಗನ್ ಡಯಟ್‌ನಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸುವುದಿಲ್ಲ. ನಮ್ಮ ದೇಹದಲ್ಲಿ ಲಿವರ್ ಚೊಲೈನ್‌ ಉತ್ಪತ್ತಿ ಮಾಡುವುದಾದರೂ ಕೂಡ ಮೆದುಳಿಗೆ ಸಾಕಾಗುವಷ್ಟು ಉತ್ಪತ್ತಿ ಮಾಡುವುದಿಲ್ಲ. ಪೋಷಕಾಂಶದ ಕೊರತೆ ಉಂಟಾದರೆ ಲಿವರ್‌ನ ಕಾರ್ಯಕ್ಕೂ ಅಡಚಣೆ ಉಂಟಾಗುತ್ತದೆ. ಚಯಾಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ.
- ದೇಹದಲ್ಲಿ ಕ್ಯಾಲೋರಿ ಹೆಚ್ಚಾದಾಗ ಮಾತ್ರವಲ್ಲ ಕಡಿಮೆಯಾದರೂ ತೊಂದರೆ ಉಂಟಾಗುವುದು. ಈ ವೇಗನ್ ಡಯಟ್‌ನಿಂದಾಗಿ ಕ್ಯಾಲೋರಿ ಅಂಶ ಕಡಿಮೆಯಾಗಿ ನಿಶ್ಯಕ್ತಿ ಉಂಟಾಗುವುದು. ಆದ್ದರಿಂದ ಈ ಆಹಾರಕ್ರಮವನ್ನು ದೀರ್ಘಕಾಲದವರೆಗೆ ಪಾಲಿಸಲು ಸಾಧ್ಯವಾಗುವುದಿಲ್ಲ.
- ವೇಗನ್ ಡಯಟ್‌ನಲ್ಲಿ ಬರೀ ಹಣ್ಣುಗಳು ಹಾಗೂ ತರಕಾರಿ ಬಳಸುವುದರಿಂದ ದೇಹಕ್ಕೆ ಯಾವುದೇ ಕೊಬ್ಬಿನಂಶ ದೊರೆಯದೆ ತುಂಬಾ ಹಸಿವು ಉಂಟಾಗುತ್ತದೆ, ಹಸಿವು ನಿಯಂತ್ರಿಸಲು ಕೆಲವರು ಜಂಕ್‌ ಫುಡ್ಸ್ ತಿನ್ನುವ ಸಾಧ್ಯತೆ ಇದೆ, ಇದರಿಂದ ದೇಹದ ಆರೋಗ್ಯ ಮೇಲೆ ಮತ್ತಷ್ಟು ಕೆಟ್ಟ ಪರಿಣಾಮ ಬೀರುವುದು.


- ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ದೊರೆಯದಿದ್ದರೆ ಮೂಳೆಗಳ ಆರೋಗ್ಯ ಹಾನಿಯಾಗುವುದು. ಕ್ಯಾಲ್ಸಿಯಂ ಮುಖ್ಯವಾಗಿ ಹಾಲು, ಚೀಸ್‌, ಮೊಸರಿನಲ್ಲಿರುತ್ತದೆ ಹಾಗೂ ತರಕಾರಿಗಳಾದ ಸೊಪ್ಪು, ಸೋಯಾ ಉತ್ಪನ್ನಗಳಲ್ಲಿ ಇರುತ್ತದೆ. ಕ್ಯಾಲ್ಸಿಯಂ ಕೊರತೆ ಉಂಟಾದರೆ ಸಂಧಿವಾತ ಮಾತ್ರವಲ್ಲ, ಹಾರ್ಮೋನಲ್‌ ಅಸಮತೋಲನ ಉಂಟಾಗುವುದು.
- ಮಾಂಸಾಹಾರ, ಹಾಲು ಸೇವಿಸುತ್ತಿದ್ದವರು ಇದ್ದಕ್ಕಿದ್ದಂತೆ ವೇಗನ್ ಡಯಟ್‌ ಅಳವಡಿಸಿಕೊಂಡರೆ ಇದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟಾಗಿ ಅಜೀರ್ಣ ಸಮಸ್ಯೆ ಉಂಟಾಗುವುದು. ಇದರಿಂದ ಮಲಬದ್ಧತೆ ಸಮಸ್ಯೆ ಕಾಡುವುದು.
- ವೇಗನ್ ಡಯಟ್‌ನಲ್ಲಿ ಪ್ರೊಟೀನ್ ಕೊರತೆ ಉಂಟಾಗುತ್ತದೆ. ಆರೋಗ್ಯಕರ ಕೂದಲಿಗೆ ಪ್ರೊಟೀನ್ ಅವಶ್ಯಕ. ನಾವು ಪ್ರೊಟೀನ್‌ಯುಕ್ತ ಆಹಾರಗಳನ್ನು ತಿನ್ನುವುದರಿಂದ ಕೂದಲಿಗೆ ಅಗ್ಯತವಾದ ಪ್ರೊಟೀನ್ ದೊರೆಯುತ್ತದೆ.

ಸಸ್ಯಾಹಾರಿಗಳಿಗೆ ಖಿನ್ನತೆ ಹೆಚ್ಚು, ಮಾಂಸಾಹಾರಿಗಳ ಮಾನಸಿಕ ಆರೋಗ್ಯ ಹೇಗೆ ? ...
 

click me!