ಸಖರಾಯಪಟ್ಟಣದಲ್ಲಿ ಬಗೆ-ಬಗೆಯ ಹಲಸಿನ ಖಾದ್ಯ, ಬಾಯಿಗೆ ರುಚಿ ತೋರಿಸಿದ್ರೆ ಬಿಡಲು ಅಸಾಧ್ಯ

By Suvarna News  |  First Published Jun 30, 2022, 8:54 PM IST

ಗಮನಸೆಳೆದ ಹಲಸು ಮೇಳ/ ಮೇಳಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು/ ಹಲಸಿನ ತಿನಿಸುಗಳ ರುಚಿ ಸವಿದು ಜನರು /ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದಲ್ಲಿ ನಡೆದ ಹಲಸುಮೇಳ


ಚಿಕ್ಕಮಗಳೂರು, (ಜೂನ್.30): ಉಂಡು ಮಾವು ತಿನ್ನು, ಹಸಿದು ಹಲಸು ತಿನ್ನು ಎಂಬ ಮಾತು ರೂಢಿಯಲ್ಲಿದೆ. ಇತರ ಹಣ್ಣುಗಳಿಗಿಂತ ಹಲಸು ಕೊಂಚ ಭಿನ್ನ. ಎಲ್ಲಾ ವರ್ಗದ ಜನರಿಗೆ ಇಷ್ಟವಾಗುವ ಈ ಹಲಸಿನ ಹಣ್ಣನ್ನು ರಾಜ್ಯ ಎಲ್ಲಾ ಭಾಗಗಳಲ್ಲಿಯೂ ಬೆಳೆಯಲಾಗುತ್ತದೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಸಖಾರಾಯ ಪಟ್ಟಣದ ಹಲಸಿನ ಹಣ್ಣಿಗೆ ಮಾತ್ರ ಎಲ್ಲಿಲ್ಲದ ಬೇಡಿಕೆ. ಅಂತೆಯೇ ಸಖಾರಾಯಪಟ್ಟಣದಲ್ಲಿ ಹಲಸುಮೇಳ ನಡೆಯಿತು.ರಾಜ್ಯದ ವಿವಿಧ ಭಾಗಗಳಿಂದ ಮೇಳಕ್ಕೆಆಗಮಿಸಿದ್ದ ಜನರು ಹಲಸಿನ ತಿನಿಸುಗಳ ರುಚಿಯನ್ನು ಸವಿದರು. 

ಹಲಸು ಮೇಳ ಗ್ರಾಮೀಣ ಜನರ ಬಾಯಲ್ಲಿ ನೀರೂರಿಸಿತು

ಹಲಸಿನಿಂದಲೆ ತಯಾರಿಸಿದ ಪಾಯಿಸ, ಹಲ್ವ, ಕಬಾಬ್ ಸೇರಿದಂತೆ ಹಲಸಿನ ದೋಸೆ ಜೊತೆ ಹಲಸಿನ ಬೀಜದ ಕಾಫಿ ಕುಡಿದು ಹೊಸ ರುಚಿಯ ಅನುಭವ ಪಡೆಯುವ ಮೂಲಕ ಹಲಸು ಮೇಳ ಗ್ರಾಮೀಣ ಜನರ ಬಾಯಲ್ಲಿ ನೀರೂರಿಸಿತು. ಚಿಕ್ಕಮಗಳೂರು ಸಖರಾಯಪಟ್ಟಣ ಶಕುನ ರಂಗನಾಥಸ್ವಾಮಿ ದೇವಾಲಯ ಸಮುದಾಯ ಭವನದಲ್ಲಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರ, ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ, ಸಖರಾಯಪಟ್ಟಣ ಹಲಸು ಬೆಳೆಗಾರರ ಸಂಘದ ಸಹಯೋಗದಲ್ಲಿ ಎರಡುದಿನ ಹಮ್ಮಿಕೊಂಡಿದ್ದ ಹಲಸುಮೇಳ ಸಂಪನ್ನಗೊಂಡಿತು.

Tap to resize

Latest Videos

ಹಲಸಿನ ಹಣ್ಣಿನ ಸ್ವರ್ಗ ಈ ಜಾಗ: ವರ್ಷವಿಡೀ ಹಲಸು ಬೆಳೆಯುವ ಏಕೈಕ ಸ್ಥಳ

ಈ ಹಲಸುಮೇಳ ದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜನ ಹಲಸಿನ ತಿನಿಸುಗಳ ರುಚಿ ಸವಿದು ಸಂಭ್ರಮಿಸಿದರು. ಹಲಸಿನ ತೊಳೆ ಎಂದರೆ ಮಕ್ಕಳಿಂದ ಮುದುಕರ ವರೆಗೂ ಪ್ರೀಯವಾದುದು ಎಂಬುದು ಸಾಮಾನ್ಯ ಹಲಸಿನ ತಿಂಡಿಗಳು ಎಂದರೆ ಬಾಯಲ್ಲಿ ಯಾರಿಗೆ ತಾನೆ ನೀರೂರಿಸುವುದಿಲ್ಲ ಅದರಲ್ಲೂ ಸಖರಾಯಪಟ್ಟಣದ ಹಲಸಿಗಂತೂ ರಾಜ್ಯಾಧ್ಯಂತ ಬೇಡಿಕೆ ಹೆಚ್ಚು ಹಾಗಾಗಿ ಎರಡು ದಿನಗಳ ಕಾಲ ನಡೆದ ಹಲಸು ಮೇಳದಲ್ಲಿ ಹಲಸಿನ ಮೌಲ್ಯವಽತ ಉತ್ಪನ್ನಗಳ 10ಮಳೆಗೆಗಳನ್ನು ಹಾಕಲಾಗಿತ್ತು. 

ಹಲಸಿನ ಹಣ್ಣಿನ ಬಗೆ ಬಗೆಯ ತಿಂಡಿಗಳು 

ಹಲಸಿನ ದೋಸೆ, ಹಪ್ಪಳ, ಚಿಪ್ಸ್, ಪತ್ರೊಡೆ, ಹಲಸಿನ ಕಬಾಬ್, ಮೊಳಕ, ಹಲ್ವ, ಮಿಠಾಯಿ, ಹಲಸಿನ ಒಣಗಿದ ಹಾಳೆ, ಉಪ್ಪಿನ ದ್ರಾವಣದಲ್ಲಿ ಸಂಗ್ರಹಿಸಿದ ಹಲಸಿನ ತೊಳೆ, ಸೇರಿದಂತೆ ಬಾಯಲ್ಲಿ ನೀರೂರಿಸುವ ಬಗೆ ಬಗೆಯ ಹಲಸಿನ ತಿಂಡಿಗಳನ್ನು ಸವಿದು ಖುಷಿ ಪಟ್ಟರು.  ಕಾಫಿ ಕುಡಿಯುವುದು ಹೊಸತೇನಲ್ಲ ಆದರೆ ಅದರಲ್ಲೂ ಬಾಯಿ ಚಪ್ಪರಿಸಿಕೊಂಡು ಹಲಸಿನ ಬೀಜ ಹುರಿದು ಪುಡಿಮಾಡಿ ತಯಾರಿಸಿದ ಕಾಫಿ ಕುಡಿದಿದ್ದು ಮಾತ್ರ ವಿಶೇಷವಾಗಿತ್ತು. ನೂರಾರು ಜನರಿಗೆ ಹಲಸಿನಿಂದ ವಿಶೇಷವಾಗಿ ತಯಾರಿಸಿದ ಪಾಯಿಸಿ, ಸಾರು, ಹುಳಿ, ಪಲ್ಯ, ಹಲ್ವ, ಮೊಳಕ ನೀಡಿ ಉಪಚರಿಸಲಾಯಿತು. ಸಿದ್ದು ಹಲಸು, ಶಂಕರ, ಸರ್ವಋತು, ರುದ್ರಾಕ್ಷಿ, ಮಾಂಕಳೆ ಕೆಂಪು, ಚಂದ್ರ ಹಲಸು ಸೇರಿದಂತೆ ಸಖರಾಯಪಟ್ಟಣದ ಸ್ಥಳಿಯ ವಿಶೇಷ ತಳಿಗಳ ಪ್ರದರ್ಶನ ಗಮನ ಸೆಳೆಯಿತು. ಗುಬ್ಬಿ, ಶಿವಮೊಗ್ಗ, ಮಂಗಳೂರು, ಉತ್ತರ ಕನ್ನಡ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನರ್ಸರಿ ಮಾಲಿಕರುಗಳು , ಐಐಎಚ್ಆರ್ ನವರು 20ಕ್ಕೂ ಹೆಚ್ಚು ಹಲಸಿನ ಆಧುನಿಕ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮಾಡಿದರು. 

 ಇನ್ನು ಈ ಮೇಳದಲ್ಲಿ ಹಲಸು ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ಬಿ.ಈಶ್ವರಪ್ಪ, ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಡಾ.ಕೃಷ್ಣಮೂರ್ತಿ  ಸೇರಿದಂತೆ ನೂರಾರು  ರೈತರು  ಭಾಗವಹಿಸಿದರು.

click me!