ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಸರಿಯಾಗ್ಬೇಕೆಂದು ಪಾಲಕರು ಬಯಸ್ತಾರೆ. ಇದೇ ಕಾರಣಕ್ಕೆ ಪೌಷ್ಟಿಕ ಆಹಾರ ನೀಡಲು ಆದ್ಯತೆ ನೀಡ್ತಾರೆ. ಮಕ್ಕಳಿಗೆ ಆರಂಭದಿಂದಲೇ ನಾನ್ ವೆಜ್ ನೀಡಲು ಮುಂದಾಗ್ತಾರೆ. ಆದ್ರೆ ತಜ್ಞರ ಪ್ರಕಾರ, ಮಕ್ಕಳಿಗೆ ಯಾವ ವಯಸ್ಸಿನಲ್ಲಿ ನಾನ್ ವೆಜ್ ನೀಡ್ಬೇಕು ಗೊತ್ತಾ?
ಚಿಕ್ಕ ಮಕ್ಕಳ (Children) ಆಹಾರದ ವಿಷ್ಯ ಬಂದಾಗ ಪಾಲಕರು ಅಲರ್ಟ್ ಆಗ್ತಾರೆ. ಮಕ್ಕಳಿಗೆ ಯಾವ ಆಹಾರ (Food) ನೀಡಿದ್ರೆ ಒಳ್ಳೆಯದು ಎಂಬ ಚಿಂತೆ ಅವರನ್ನು ಸದಾ ಕಾಡ್ತಿರುತ್ತದೆ. ಮೂರು ವರ್ಷ ಒಳಗಿನ ಮಕ್ಕಳಿಗೆ ಯಾವ ಆಹಾರ ನೀಡ್ಬೇಕು ಎಂಬ ಪ್ರಶ್ನೆ ಜೊತೆ ಮಾಂಸ (Meat) ಆಹಾರವನ್ನು ಮಕ್ಕಳಿಗೆ ಯಾವಾಗ ನೀಡ್ಬೇಕು ಎಂಬ ಪ್ರಶ್ನೆ ಕಾಡ್ತಿರುತ್ತದೆ. ಮಾಂಸಾಹಾರ ಮಕ್ಕಳಿಗೆ ಬಹಳ ಅವಶ್ಯಕ ಎನ್ನುತ್ತಾರೆ ತಜ್ಞರು. ಮಾಂಸಾಹಾರದಲ್ಲಿ ಮೊಟ್ಟೆ, ಕೋಳಿ, ಮೀನು, ಕುರಿ ಸೇರಿದಂತೆ ಅನೇಕ ವಿಧಗಳಿವೆ. ಇದರಲ್ಲಿ ಸತು, ಕಬ್ಬಿಣ ಮತ್ತು ಪ್ರೊಟೀನ್ ಹೇರಳವಾಗಿ ಕಂಡುಬರುತ್ತದೆ. ಇದು ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ತುಂಬಾ ಅವಶ್ಯಕವಾಗಿದೆ. ನಿಮ್ಮ ಮಗುವಿಗೆ 9 ತಿಂಗಳು ಅಥವಾ 1 ವರ್ಷ ವಯಸ್ಸಾದಾಗ ನೀವು ಅವರಿಗೆ ಮಾಂಸಾಹಾರ ನೀಡಬಹುದು. ಇದಕ್ಕಿಂತ ಚಿಕ್ಕ ವಯಸ್ಸಿನಲ್ಲಿ ಮಗುವಿಗೆ ಮಾಂಸಾಹಾರ ನೀಡಿದ್ರೆ ಅವರು ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಮೊದಲು ಯಾವುದನ್ನು ನೀಡ್ಬೇಕು ? : ನೀವು ಮಗುವಿಗೆ ಮಾಂಸಾಹಾರ ನೀಡಲು ನಿರ್ಧರಿಸಿದ್ರೆ ಮೊದಲು ಮೀನು, ಮೊಟ್ಟೆ ಮತ್ತು ಕೋಳಿಯಿಂದ ಶುರು ಮಾಡಿ. ಇವು ತುಂಬಾ ಮೃದುವಾಗಿರುತ್ತದೆ. ಮೀನನ್ನು ನೀಡುವಾಗ ಚಿಪ್ಪಿನ ಬಗ್ಗೆ ಗಮನ ಹರಿಸಬೇಕು.
ಮಕ್ಕಳಿಗೆ ಮಾಂಸಾಹಾರ ಸೇವನೆ ಹವ್ಯಾಸ : ಮಕ್ಕಳು ಆರಂಭದಲ್ಲಿ ನಾನ್ ವೆಜ್ ತಿನ್ನಲು ಹಿಂಜರಿಯಬಹುದು. ಗಾಬರಿಯಾಗಬೇಕಾಗಿಲ್ಲ. ನಿಧಾನವಾಗಿ ಪ್ರಯತ್ನಿಸಿದರೆ ಅವರು ನಾನ್ ವೆಜ್ ತಿನ್ನಲು ಪ್ರಾರಂಭಿಸುತ್ತಾರೆ. ನಾನ್ ವೆಜ್ ಅನ್ನು ಸೂಪ್ ಅಥವಾ ಸಾರಿನ ರೂಪದಲ್ಲಿ ತಿನ್ನಿಸಿ. ಮಗುವಿಗೆ ಒಂದು ವರ್ಷವಾಗ್ತಿದ್ದಂತೆ ಕೋಳಿ ಮತ್ತು ಮೀನುಗಳನ್ನು ನೀಡಬಹುದು. ನೇರವಾಗಿ ಬೇಯಿಸಿದ ಮಾಂಸದ ತುಂಡನ್ನು ಮಕ್ಕಳಿಗೆ ನೀಡಬೇಡಿ. ನಾನ್ ವೆಜ್ ಸೂಪ್ ಜೊತೆ ತರಕಾರಿ ಸೇರಿಸಿ. ಆರಂಭದಲ್ಲಿ ಬೇಡವೆಂದ್ರೂ ನಂತ್ರ ಅದಕ್ಕೆ ಮಕ್ಕಳು ಹೊಂದಿಕೊಳ್ಳುತ್ತಾರೆ.
ಅತಿಯಾಗಿ ಟೊಮೇಟೊ ತಿನ್ನೋ ಅಭ್ಯಾಸ ಬಿಟ್ಬಿಡಿ, ಕೀಲು ನೋವು ಕಾಡುತ್ತೆ !
ಮಗು ನಾನ್ ವೆಜ್ ತಿನ್ನಲು ಶುರು ಮಾಡಿದ ಮೇಲೆ ನಾನ್ ವೆಜ್ ನ ಪ್ಯೂರಿ ಮಾಡಿಯೂ ಕೊಡಬಹುದು. ತರಕಾರಿಗಳು ಮತ್ತು ಮಾಂಸವನ್ನು ಪ್ರತ್ಯೇಕವಾಗಿ ಬೇಯಿಸಿದ ನಂತರ ನೀವು ಅವುಗಳನ್ನು ಒಟ್ಟಿಗೆ ಪ್ಯೂರಿ ಮಾಡಬಹುದು ಮತ್ತು ಶಿಶುಗಳಿಗೆ ತಿನ್ನಿಸಬಹುದು.
ನಿಮ್ಮ ಮಗು ಪ್ಯೂರಿಯನ್ನು ತಿನ್ನಲು ಪ್ರಾರಂಭಿಸಿದ ತಕ್ಷಣ ವಾರಕ್ಕೊಮ್ಮೆ ಚಿಕನ್ ಲಿವರ್ ಅನ್ನು ಸಹ ನೀಡಬಹುದು. ಆದ್ರೆ ಅತಿಯಾಗಿ ನೀಡಬಾರದು.
ವಾರಕ್ಕೆ ಎರಡು ಬಾರಿ ನಾನ್ ವೆಜ್ : ಮಗು ನಾನ್ ವೆಜ್ ತಿನ್ನಲು ಆರಂಭಿಸಿದ ನಂತ್ರ ವಾರಕ್ಕೆ ಎರಡು ಬಾರಿ ಮಾತ್ರ ನಾನ್ ವೆಜ್ ನೀಡಿ. ಮಕ್ಕಳು ದೊಡ್ಡವರಾಗ್ತಿದ್ದಂತೆ ದಿನಕ್ಕೆ ಒಂದು ಬಾರಿ ನಾನ್ ವೆಜ್ ನೀಡ್ಬಹುದು.
ನಿಮ್ಮ ಮಗುವಿನ ವಯಸ್ಸು ಎರಡುವರೆ ವರ್ಷ ದಾಟಿದ್ದು, ಅದು ತಾನೇ ಆಹಾರ ತಿನ್ನುತ್ತದೆ ಅಂದಾದ್ರೆ ನೀವು ಕೋಳಿ ಅಥವಾ ಬೇಯಿಸಿದ ಮಾಂಸದ ಸಣ್ಣ ತುಂಡುಗಳನ್ನು ಅವರಿಗೆ ನೀಡಬಹುದು.
ಮಳೆಗಾಲದಲ್ಲಿ ಅಪ್ಪಿತಪ್ಪಿಯೂ ಈ ತರಕಾರಿ ತಿನ್ಬೇಡಿ
ಈ ವಿಷಯಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸಿ :
ಮಕ್ಕಳಿಗೆ ನಾನ್ ವೆಜ್ ಕೊಡುವ ಮುನ್ನ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
1. ವಯಸ್ಸನ್ನು ಪರಿಗಣಿಸಿ ನಾನ್ ವೆಜ್ ನೀಡಬೇಕು. ಒಂದು ವರ್ಷಕ್ಕಿಂತ ಮುಂಚೆಯೇ ಮಗುವಿಗೆ ಮಾಂಸಾಹಾರ ನೀಡದಿರಲು ಪ್ರಯತ್ನಿಸಬೇಕು.
2. ಮಗುವಿಗೆ ನಾನ್ ವೆಜ್ ನೀಡಲು ಪ್ರಾರಂಭಿಸಿದ್ದರೆ, ಪ್ರಮಾಣಕ್ಕೂ ವಿಶೇಷ ಗಮನ ಕೊಡಿ. ತಜ್ಞರ ಪ್ರಕಾರ ಮಕ್ಕಳಿಗೆ ವಾರಕ್ಕೆ ಎರಡು ಬಾರಿ ಮಾತ್ರ ನಾನ್ ವೆಜ್ ನೀಡಬೇಕು.
3. ರಾತ್ರಿ ಊಟಕ್ಕೆ ನಾನ್ ವೆಜ್ ಕೊಡಬೇಡಿ . ಜೀರ್ಣಿಸಿಕೊಳ್ಳಲು ಸಮಯ ಸಿಗುವುದಿಲ್ಲ. ಅದು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.
4. ಮಗುವಿಗೆ ರಾಸಾಯನಿಕವಾಗಿ ಸಂಸ್ಕರಿಸಿದ ಮಾಂಸವನ್ನು ನೀಡಬೇಡಿ. ಇದು ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಮತ್ತು ನೈಟ್ರೇಟ್ ಅನ್ನು ಹೊಂದಿರುತ್ತದೆ.
5. ಐದು ವರ್ಷಗಳವರೆಗೆ ಕೆಂಪು ಮಾಂಸವನ್ನು ನೀಡಬೇಡಿ
6. ಮಗುವಿಗೆ ಹೆಚ್ಚು ಬೇಯಿಸಿದ ಮತ್ತು ಹಸಿ ಮಾಂಸವನ್ನು ನೀಡಬೇಡಿ.