ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವು ವಿಚಾರಗಳನ್ನು ಯಾವಾಗಲೂ ಪರಿಶೀಲಿಸದೇ ನಂಬಲಾಗುವುದಿಲ್ಲ. ಅನೇಕ ಸುದ್ದಿಗಳು ನಕಲಿ ಆಗಿರುತ್ತವೆ. ಇದಕ್ಕೆ ಅನೇಕ ಉದಾಹರಣೆಗಳಿಗೆ ಅದೇ ರೀತಿ ಈಗ ಮತ್ತೊಂದು ಸಾಕಷ್ಟು ವೈರಲ್ ಆಗಿದ್ದ ಸುದ್ದಿಯೊಂದು ಸುಳ್ಳು ಎಂಬುದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವು ವಿಚಾರಗಳನ್ನು ಯಾವಾಗಲೂ ಪರಿಶೀಲಿಸದೇ ನಂಬಲಾಗುವುದಿಲ್ಲ. ಅನೇಕ ಸುದ್ದಿಗಳು ನಕಲಿ ಆಗಿರುತ್ತವೆ. ಇದಕ್ಕೆ ಅನೇಕ ಉದಾಹರಣೆಗಳಿಗೆ ಅದೇ ರೀತಿ ಈಗ ಮತ್ತೊಂದು ಸಾಕಷ್ಟು ವೈರಲ್ ಆಗಿದ್ದ ಸುದ್ದಿಯೊಂದು ಸುಳ್ಳು ಎಂಬುದು ತಿಳಿದು ಬಂದಿದೆ. ಐರ್ಲೆಂಡ್‌ನ ದಂಪತಿಗಳು ಪಕೋಡಾ ಮೇಲಿನ ಪ್ರೀತಿಯಿಂದ ತಮಗೆ ಹುಟ್ಟಿದ ಮಗುವಿಗೆ ಪಕೋಡಾ ಎಂದು ಹೆಸರಿಟ್ಟಿದ್ದಾರೆ ಎಂಬ ವಿಚಾರವೊಂದು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆದರೆ ಇದು ಸುಳ್ಳು ಎಂಬುದು ವರದಿಯಾಗಿದೆ. ಫನ್‌ಗೋಸ್ಕರ ರೆಸ್ಟೋರೆಂಟ್ ಮಾಲೀಕ ಹೀಗೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಚಾರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಐರ್ಲೆಂಡ್‌ನ ದಿ ಕ್ಯಾಪ್ಟನ್ಸ್ ಟೇಬಲ್‌ನ ಮಾಲೀಕ ಹಿಲರಿ ಬ್ರಾನಿಫ್ (Hilary Braniff), ಹೊಟೇಲ್ ಉದ್ಯಮಕ್ಕೆ ಸ್ವಲ್ಪ ಮೆರಗು ತರಲು ನಾನು ಈ ತಮಾಷೆಯ ಕಥೆಯನ್ನು ಸೃಷ್ಟಿ ಮಾಡಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಮಕ್ಕಳಿಗೆ ಹೆಸರಿಡುವ ವಿಚಾರದಲ್ಲಿ ಪೋಷಕರು ಸಾಕಷ್ಟು ಯೋಚನೆ ಮಾಡುತ್ತಾರೆ. ಕೆಲವೊಮ್ಮೆ ತಮ್ಮ ಹಳೆ ತಲೆಮಾರಿನವರ ಹೆಸರಿಟ್ಟರೇ ಮತ್ತೆ ಕೆಲವರು ಫೇಮಸ್ ವ್ಯಕ್ತಿಗಳ ಹೆಸರಿಡುತ್ತಾರೆ. ಆದರೆ ಇಷ್ಟವಾದ ತಿನಿಸುಗಳ ಹೆಸರನ್ನು ಯಾರಾದರೂ ಇಡುತ್ತಾರಾ ಇಲ್ಲ ಎಂದುಕೊಳ್ಳಬೇಡಿ, ಐರ್ಲೆಂಡ್‌ನ ದಂಪತಿಗಳು ತಮಗೆ ಹುಟ್ಟಿದ ಮಗುವಿಗೆ ಪಕೋಡಾ ಮೇಲಿನ ಪ್ರೇಮದಿಂದ ಪಕೋಡಾ ಎಂದು ಹೆಸರಿಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
undefined
ಭಾರತೀಯ ತಿನಿಸಿನ ಮೇಲೆ ವ್ಯಾಮೋಹ: ಮಗುವಿಗೆ ಪಕೋಡಾ ಎಂದು ಹೆಸರಿಟ್ಟ ಐರ್ಲೆಂಡ್ ದಂಪತಿ
ಐರ್ಲೆಂಡ್‌ನ ನ್ಯೂಟೌನಬ್ಬೆಯಲ್ಲಿರುವ (Newtownabbey) ಕ್ಯಾಪ್ಟನ್ ಟೇಬಲ್ ರೆಸ್ಟೋರೆಂಟ್ (The Captain's Table) ತನ್ನ ಅಧಿಕೃತ ಫೇಸ್‌ಬುಕ್ (Facebook) ಪೇಜ್‌ನಲ್ಲಿ ಒಂದು ಆಹಾರದ ಆರ್ಡರ್‌ನ ರಶೀದಿ ಹಾಗೂ ಆಗಸ್ಟ್ 24ರಂದು ಜನಿಸಿದ ಒಂದು ಹೆಣ್ಣು ಮಗುವಿನ ಫೋಟೋವೊಂದನ್ನು ಹಂಚಿಕೊಂಡಿದ್ದರು. ಜೊತೆಗೆ, ತಮ್ಮ ಕ್ಯಾಪ್ಟನ್ ಟೇಬಲ್ ರೆಸ್ಟೋರೆಂಟ್‌ನಲ್ಲಿ ಪಕೋಡಾವನ್ನು ಇಷ್ಟಪಡುತ್ತಿದ್ದ ತಾಯಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಪಕೋಡಾ (pakoras) ಎಂದು ಹೆಸರಿಟ್ಟಿದ್ದಾರೆ ಎಂದು ಅದು ಬರೆದುಕೊಂಡಿತ್ತು. ಇದೊಂದು ಮೊದಲು, ಈ ಜಗತ್ತಿಗೆ ಪಕೋಡಾಗೆ ಸ್ವಾಗತ, ನಾವು ನಿಮ್ಮನ್ನು ಭೇಟಿಯಾಗಲು ಕಾಯುವುದಕ್ಕೆ ಸಾಧ್ಯವಿಲ್ಲ ಎಂದು ಪೋಸ್ಟ್‌ಗೆ ಕ್ಯಾಪ್ಷನ್ ನೀಡಲಾಗಿತ್ತು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚು ಹಬ್ಬುವ ರೀತಿ ವೈರಲ್ ಆಗಿತ್ತು.
ಅನೇಕರು ಈ ಪೋಸ್ಟ್‌ಗೆ ಹಲವು ಸ್ವಾರಸ್ಯಕರವಾದ ಕಾಮೆಂಟ್‌ಗಳನ್ನು ಮಾಡಿದ್ದರು. ನಾನು ಕೂಡ ಗರ್ಭಿಣಿಯಾಗಿದ್ದಾಗ ಕಲ್ಲಂಗಡಿ (watermelon) ಹಾಗೂ ಬಾಳೆಹಣ್ಣನ್ನು (banana) ಬಹಳ ಇಷ್ಟಪಟ್ಟು ತಿನ್ನುತ್ತಿದ್ದೆ. ಆದರೆ ಪುಣ್ಯಕ್ಕೆ ಮಗುವಿಗೆ ಆ ಹೆಸರಿಟ್ಟಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದರು. ಮತ್ತೊಬ್ಬರು ತಮಾಷೆಯಾಗಿ ತಮ್ಮ ಜೊತೆ ತಮ್ಮ ಅಳಿಯನ ಫೋಟೋ ಪೋಸ್ಟ್ ಮಾಡಿ ಇದು ನಮ್ಮ ಅಳಿಯ ಟೊಮೆಟೋ ಸಾಸ್ ಎಂದು ಕಾಮೆಂಟ್ ಮಾಡಿದ್ದರು. ಮತ್ತೊಬ್ಬರು ತಮ್ಮೆರಡು ಮಕಳ ಫೋಟೋ ಹಾಕಿ ಇವೆರಡು ನನ್ನ ಮಕ್ಕಳು ಚಿಕನ್ ಹಾಗೂ ಟಿಕ್ಕಾ ಎಂದು ಕಾಮೆಂಟ್ ಮಾಡಿದ್ದರು. ಮತ್ತೊಬ್ಬರು ನನ್ನ ಮಗಳಿಗೆ ಟಾಕೊ ಬೆಲ್ಲಾ (Taco Bella) ಎಂದು ಹೆಸರಿಟ್ಟಿದ್ದಾಗಿ ಕಾಮೆಂಟ್ ಮಾಡಿದ್ದಾರೆ.
ಪಕೋಡ ಹೆಚ್ಚು ಎಣ್ಣೆ ಹೀರಿಕೊಳ್ಳದಂತೆ ಫ್ರೈ ಮಾಡೋಕೆ ಇವೆ ಸಿಂಪಲ್ ಟ್ರಿಕ್ಸ್
ಹೀಗೆ ಸಾಮಾಜಿಕ ಜಾಲತಾಣದಲ್ಲಿ (social media) ಈ ವಿಚಾರ ಸಾಕಷ್ಟು ವೈರಲ್ ಆಗುತ್ತಿದ್ದಂತೆ ಕ್ಯಾಪ್ಟನ್ ಟೇಬಲ್ ಓನರ್ ಹಿಲರಿ ಬ್ರಾನಿಫ್ ( Hilary Braniff) ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ವಿಚಾರವೇ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಏರುತ್ತಿರುವ ಬೆಲೆ ಹಾಗೂ ಹೆಚ್ಚುತ್ತಿರುವ ಇಂಧನ ದರಗಳ ಮಧ್ಯೆ ಆಹಾರೋದ್ಯಮಕ್ಕೆ ಸ್ವಲ್ಪ ಉತ್ತೇಜನ ನೀಡಲು ಈ ರೀತಿ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಅಂದಹಾಗೆ ಆ ಫೋಸ್ಟ್‌ನಲ್ಲಿದ್ದ ಮಗು ತನ್ನ ಮೊಮ್ಮಗಳು (granddaughter) ಎಂದು ರೆಸ್ಟೋರೆಂಟ್ ಮಾಲೀಕ ಹಿಲರಿ ಹೇಳಿಕೊಂಡಿದ್ದಾರೆ. ಆಕೆಗೆ ಗ್ರೇಸ್ ಎಂದು ಹೆಸರಿಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ನಾನು ನನ್ನಿಷ್ಟದ ಎರಡು ವಸ್ತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬೇಕೆಂದು ನಾನು ಬಯಸಿದೆ. ಅದರಲ್ಲಿ ಒಂದು ನನ್ನ ಮೊಮ್ಮಗಳು, ಮತ್ತೊಂದು ಚಿಕನ್ ಪಕೋಡಾ ಎಂದು ಅವರು ಹೇಳಿಕೊಂಡಿದ್ದಾರೆ. ತಮಾಷೆಗಾಗಿ ಈ ಎರಡು ವಸ್ತುಗಳನ್ನು ಸಂಯೋಜಿಸಬೇಕೆಂದು ನಾನು ಯೋಚಿಸಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.