ನೀವು ಒಂದು ನಿಮಿಷದ ಊಟಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತಿರಿ. ಅದು ಯಾರ ಜೊತೆ ಊಟಕ್ಕೆ ಕುಳಿತಿದ್ದೇವೆ. ಊಟ ಹೇಗಿದೆ ಎಂಬ ಸಂದರ್ಭದ ಮೇಲೆ ಹೋಗುತ್ತದೆ ಎಂದು ನೀವು ಹೇಳಲು ಬಹುದು. ಆದಾಗ್ಯೂ ಒಂದು ಊಟವನ್ನು ಕನಿಷ್ಠ ಎಷ್ಟು ಬೇಗ ಮುಗಿಸಲು ಸಾಧ್ಯ 15 ನಿಮಿಷ ಅಥವಾ 10 ನಿಮಿಷ ಎಷ್ಟೋ ಇರಬಹುದು. ಒಬ್ಬೊಬ್ಬರು ಒಂದೊಂದು ರೀತಿ ಊಟ ಮಾಡುತ್ತಾರೆ ಅದು ಅವರವರ ಅಭಿರುಚಿ, ಜೀರ್ಣಕ್ರಿಯೆ, ಆಹಾರ ಶೈಲಿಯ ಮೇಲೆ ಹೋಗುತ್ತದೆ. ಇಷ್ಟೆಲಾ ಪುರಾಣ ಯಾಕೆ ಅಂತ ಕೇಳ್ತಿದ್ದೀರಾ. ಇಲ್ಲೊಬ್ಬ ಪುಣ್ಯಾತ್ಮ ಸುಮಾರು 3 ಕೆಜಿ ತೂಗುತ್ತಿದ್ದ ಸಮೋಸಾವನ್ನು ಕೇವಲ ಐದು ನಿಮಿಷದಲ್ಲಿ ಸ್ವಾಹಾ ಮಾಡಿದ್ದಾನೆ. ಹೌದು ವಿಚಿತ್ರ ಎನಿಸಿದರು ನಿಜ. ದೆಹಲಿಯ ಫುಡ್ ಬ್ಲಾಗರ್ ಒಬ್ಬರು 5 ನಿಮಿಷದಲ್ಲಿ ಮೂರು ಕೆಜಿ ತೂಗುವ ಸಮೋಸಾವನ್ನು ತಿನ್ನುವ ಮೂಲಕ 11 ಸಾವಿರ ರೂಪಾಯಿಯ ನಗದನ್ನು ಬಹುಮಾನವಾಗಿ ಗೆದ್ದಿದ್ದಾರೆ.
ನೀವು ಕೆಲವು ಹೊಟೇಲ್‌ಗಳು ನೀಡುವ ಆಹಾರದ ಚಾಲೆಂಜ್‌ನ್ನು ಕೇಳಿರಬಹುದು. ಅವರು ನೀಡುವ ಬರೋಬರಿ ಆಹಾರವನ್ನು ಕೆಲವು ನಿಮಿಷಗಳಲ್ಲಿ ನೀವು ತಿಂದು ಪೂರೈಸುವ ಮೂಲಕ ಸವಾಲು ಸಮಾಪ್ತಿಗೊಳಿಸುವ ಜೊತೆಗೆ ನಗದು ಬಹುಮಾನ ನೀಡುವ ಸವಾಲು ಇದಾಗಿದೆ. ರಾಷ್ಟ್ರ ರಾಜಧಾನಿ(National Capital) ದೆಹಲಿಯ (Delhi) ಹಲವು ಪ್ರದೇಶಗಳಲ್ಲಿ ಈ ಸವಾಲುಚಾಲ್ತಿಯಲ್ಲಿದೆ. ಈ ಸವಾಲಿನಲ್ಲಿ ಭಾಗವಹಿಸಿದ ರಜನೀಶ್ ಗ್ಯಾನಿ ಎಂಬ ಫುಡ್ ಬ್ಲಾಗರ್ ಒಬ್ಬರು ಈ ಸವಾಲನ್ನು ಗೆದ್ದಿದ್ದಾರೆ. ರಜನೀಶ್ ಗ್ಯಾನಿ ತಮ್ಮ ಫೇಸ್‌ಬುಕ್ ಹಾಗೂ ಯುಟ್ಯೂಬ್‌ನಲ್ಲಿ ಆರ್ ಯು ಹಂಗ್ರಿ ಎಂಬ ಹೆಸರಿನಲ್ಲಿ ಪೇಜೊಂದನ್ನು ನಡೆಸುತ್ತಿದ್ದಾರೆ. ಇಲ್ಲಿ ಅವರು ತಾವು ಭಾಗವಹಿಸಿದ ಆಹಾರದ ಚಾಲೆಂಜ್‌ಗಳ ವಿಡಿಯೋಗಳನ್ನು ಹಾಕುತ್ತಿರುತ್ತಾರೆ.
ಕಳೆದ ತಿಂಗಳು ಈ ಬ್ಲಾಗರ್ 30 ನಿಮಿಷಗಳಲ್ಲಿ 21 ಪ್ಲೇಟ್ ಚೋಲೆ ಕುಲ್ಚೆ ತಿನ್ನುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ(social Media) ವೈರಲ್ ಆಗಿದ್ದರು. ಈ ಸವಾಲಿನಲ್ಲಿ ಗೆದ್ದ ಅವರು ಬುಲೆಟ್ ಬೈಕ್‌ನ್ನು ಗೆದ್ದಿದ್ದರು. ಆದರೆ ನಂತರದಲ್ಲಿ ಬುಲೆಟ್ ಬೈಕ್‌ನ್ನು(Bullet Bike) ಹೊಟೇಲ್ ಮಾಲೀಕರಿಗೆ ಮರಳಿಸಿದ ಅವರು ನಂತರ ಇಂತಹದೇ ಹಲವು ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು. ಈ ವಿಡಿಯೋವನ್ನು ಫೇಸ್ಬುಕ್‌ನಲ್ಲಿ 12 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದರು.
ಇದೀಗ ಸ್ಟ್ರೀಟ್ ಫುಡ್ (street Food)ಬ್ಲಾಗರ್ ಮತ್ತೊಮ್ಮೆ ವೈರಲ್ ಆಗಿದ್ದು, ಕೇವಲ 5 ನಿಮಿಷದಲ್ಲಿ 3 ಕೆಜಿ ತೂಕದ ಸಮೋಸಾ (Samosa) ತಿಂದಿದ್ದಾರೆ. ದೆಹಲಿಯ ಉಪಾಹಾರ ಗೃಹದಲ್ಲಿ ಚಿತ್ರೀಕರಿಸಲಾದ ಈ ಆಹಾರ ಸವಾಲಿನ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದ್ದು, 1 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ. ಈ ಬಾರಿ ಅವರು ಕೇವಲ 5 ನಿಮಿಷದಲ್ಲಿ 3 ಕೆಜಿ ತೂಕದ ಸಮೋಸಾ ತಿಂದಿದ್ದಾರೆ. ಅವರು ದೆಹಲಿಯ ರೆಸ್ಟೋರೆಂಟ್ ಒಂದರಲ್ಲಿ ಆಹಾರ ತಿನ್ನುತ್ತಿರುವ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಾಕಿಕೊಂಡಿದ್ದಾರೆ.
ವಿಡಿಯೋದಲ್ಲಿ ಹೊಟೇಲ್‌ನ ಮಾಲೀಕರು ಮೊದಲು ಸವಾಲನ್ನು ವಿವರಿಸುತ್ತಾರೆ ನಂತರ ಸಮೋಸವನ್ನು ತಯಾರಿಸುವ ರೀತಿಯನ್ನು ತೋರಿಸುತ್ತಾರೆ. ನಂತರ ಫೋನ್‌ನಲ್ಲಿ ಟೈಮರ್ ಅಳವಡಿಸಿ ಎರಡು ದಿನಗಳಿಂದ ಹಸಿವಿನಿಂದ ಇರುವ ವ್ಯಕ್ತಿಗೆ ಸಮೋಸವನ್ನು ಬಡಿಸಿದ್ದಾರೆ. ಇದರೊಂದಿಗೆ ಕೆಲವು ಚಟ್ನಿ, ನೀರು ಹಾಗೂ ಕೆಲವು ಪ್ರೋತ್ಸಾಹಿಸುವ ಸ್ನೇಹಿತರು ಜೊತೆ ಸೇರಿ ಇವರು ಈ ಆಹಾರದ ಸವಾಲನ್ನು ಗೆದ್ದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.