ಸಾಮಾನ್ಯವಾಗಿ ನಮ್ಮ ಭಾರತದಲ್ಲಿ ಮಗುವಿಗೆ ಹುಟ್ಟಿದ ಕೂಡಲೇ ಹೆಸರಿಡುವುದಿಲ್ಲ. ಅದಕ್ಕೆ ನೂರೆಂಟು ಶಾಸ್ತ್ರಗಳನ್ನು ಮಾಡಿ, ಜಾತಕ ನಕ್ಷತ್ರಗಳನ್ನು ನೋಡಿ, ಮಗು ಹುಟ್ಟಿದ ಎರಡು ತಿಂಗಳ ನಂತರ ಅಥವಾ, 15 ದಿನ, ಮೂರು ತಿಂಗಳು ಹೀಗೆ ಹಲವು ಪ್ರಸಕ್ತವಾದ ಸಮಯಗಳನ್ನು ನೋಡಿ ಮಗುವಿಗೆ ಹೆಸರಿಡುತ್ತಾರೆ. ಆದರೆ ಐರ್ಲೆಂಡ್‌ನಲ್ಲಿ ಭಾರತದ ತಿನಿಸಿಗೆ ಮಾರುಹೋದ ದಂಪತಿ ತಮ್ಮ ಮಗುವಿಗೆ ಪಕೋಡಾ ಎಂದು ಹೆಸರಿಟ್ಟಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಅನೇಕರು ಸ್ವಾರಸ್ಯಕರವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಐರ್ಲೆಂಡ್‌ನ (Irlend)ಪ್ರಖ್ಯಾತ ರೆಸ್ಟೋರೆಂಟ್ ನ್ಯೂ ಟೌನ್ ಅಬ್ಬೆ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಹಂಚಿಕೊಂಡಿದೆ. ಹೀಗೆ ಮಗುವಿಗೆ ಪಕೋಡಾ ಎಂದು ಹೆಸರಿಟ್ಟ ದಂಪತಿ ಈ ಹೋಟೇಲ್‌ಗೆ ದಿನಾ ಬಂದು ಪಕೋಡಾ ಆರ್ಡರ್ ಮಾಡುತ್ತಿದ್ದರು. ಹೊಟೇಲ್‌ಗೆ ಹೋದಾಗಲೆಲ್ಲಾ ಈ ದಂಪತಿ ತಮ್ಮಿಷ್ಟದ ಹಲವು ಪಕೋಡಾಗಳನ್ನೇ ಆರ್ಡರ್ ಮಾಡುತ್ತಿದ್ದರಂತೆ. ಈಗ ಪಕೋಡಾ ಮೇಲಿನ ಪ್ರೇಮವನ್ನು ಒಂದು ಹಿಡಿ ಜಾಸ್ತಿಯೇ ತೋರಿಸಿರುವ ದಂಪತಿ ಈಗ ತಮಗೆ ಜನಿಸಿದ ನವಜಾತ ಶಿಶುವಿಗೆ ಪಕೋಡಾ ಎಂದು ಹೆಸರಿಟ್ಟು, ತಮ್ಮ ಪಕೋಡಾ ಮೇಲಿನ ಪ್ರೇಮವನ್ನು ಅಜರಾಮರವಾಗಿಸಿದ್ದಾರೆ.
ಸಂಜೆ 7 ಗಂಟೆಯ ನಂತರ ಅಪ್ಪಿತಪ್ಪಿಯೂ ಇಂಥಾ ಆಹಾರ ತಿನ್ಬೇಡಿ
ಇನ್ನು ಈ ವಿಚಾರ ತಿಳಿದ ಜನ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದು, ನಾನು ಗರ್ಭಿಣಿ ಇದ್ದಾಗ ಕಲ್ಲಂಗಡಿ (Watermelon) ಹಾಗೂ ಬಾಳೆಹಣ್ಣು (Banana) ಮುಂತಾದವನ್ನು ಇಷ್ಟಪಟ್ಟು ತಿನ್ನುತ್ತಿದೆ. ಆದರೆ ಪುಣ್ಯಕ್ಕೆ ನಾನು ಮಕ್ಕಳಿಗೆ ಅವುಗಳ ಹೆಸರನ್ನೇ ಇಟ್ಟಿಲ್ಲ ಎಂದು ಕಾಮೆಂಟ್ ಚೆನ್ನಾಗಿತ್ತು. ಮತ್ತೊಬ್ಬರು ಇದು ನನ್ನ ಮತ್ತೆರಡು ಮಕ್ಕಳು ಚಿಕನ್ ಹಾಗೂ ಟಿಕಾ ಎಂದು ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.
ಅಲ್ಲದೇ ಮಗುವಿನ ಹೆಸರಿಡುವ ವೇಳೆ ಪೋಷಕರು ತುಂಬಾ ವಿಭಿನ್ನತೆ ಕಾಯ್ದುಕೊಳ್ಳಲು ಬಯಸುತ್ತಾರೆ. ನಮ್ಮ ಮಗುವಿನ ಹೆಸರು ಈ ಮೊದಲು ಬೇರೆ ಯಾರಿಗೂ ಇರಬಾರದು, ಒಂಥರಾ ವಿಭಿನ್ನ ಆಗಿರಬೇಕು ಕೇಳಲು ಸುಂದರವಾಗಿರಬೇಕು ಕರೆಯಲು ಸುಲಭವಾಗಿರಬೇಕು ಎಂದೆಲ್ಲಾ ಯೋಚಿಸಿ ಗೂಗಲ್‌ನಲ್ಲಿ ಸರ್ಚ್ ಮಾಡಿ ಬಂಧುಗಳು ಅಕ್ಕ ತಂಗಿಯರು ಅಣ್ಣ ತಮ್ಮಂದಿರ ಬಳಿ ಕೇಳಿ ಸುಂದರವಾದ ಹೆಸರಿಡುತ್ತಾರೆ. ಇಷ್ಟೇ ಅಲ್ಲದೇ ಈ ನಾಮಾಕರಣದ ವೃತ್ತಾಂತ ಎಳೆದಷ್ಟು ಉದ್ದವಾಗುತ್ತದೆ. ಕೆಲವೊಮ್ಮೆ ಇದಕ್ಕೆ ಗಂಡ ಹೆಂಡಿರ (Husband Wife) ಮಧ್ಯೆ ಸಣ್ಣ ಕೋಳಿ ಜಗಳ ಅಕ್ಕ ತಮ್ಮಂದಿರ ಮಧ್ಯೆ ಹುಸಿ ಮುನಿಸು ಆಗುವುದು ಇದೆ. ಅದಕ್ಕೆ ಕಾರಣ ಅವರಿವರು ಹೇಳಿದ ಹೆಸರನ್ನು ಆಯ್ಕೆ ಮಾಡಬೇಕು ಎಂಬುದು, ಹೆಣ್ಣಿನ (ತಾಯಿ) ಕಡೆಯವರು ಹೇಳಿದ ಹೆಸರು ಬೇಡ ಎಂದು ಮಗುವಿನ ಅಪ್ಪನ ಕಡೆಯ ವಾದ, ಅಪ್ಪನ ಕಡೆಯದು ಬೇಡ ಎಂದು ಅಮನ ಕಡೆಯ ವಾದ ಹೀಗೆ ಸಣ್ಣದೊಂದು ಹೆಸರಿಡುವುದಕ್ಕೂ ಸಾವಿರ ಬಾರಿ ಸಾವಿರ ರೀತಿಯಲ್ಲಿ ಯೋಚಿಸುವ ಸಾದಾ ಭಾರತೀಯರು ನಾವು. ಹಾಗಿದ್ದೂ ಮಗುವಿನ ಅಪ್ಪ ಅಮ್ಮನಿಗೆ ಮಾತ್ರ ಮಗುವಿನ ಹೆಸರಿನ ಮೇಲೆ ಸಂಪೂರ್ಣ ಹಕ್ಕಿರುವುದರಿಂದ ಕೊನೆಯ ಆಯ್ಕೆ ಅವರದೇ ಆಗಿರುತ್ತದೆ. ಕೆಲವರು ಹೆಣ್ಣು ಮಗುವಾದರೆ ಹೆಸರಿನ ಕೊನೆಯಲ್ಲಿ ಮುತ್ತಜ್ಜಿಯ ಹೆಸರನ್ನೊ ಗಂಡು ಮಗುವಾದರೆ ಮುತ್ತಜ್ಜನೋ ಹೆಸರನ್ನು ಇರಿಸಿ ಆ ಹೆಸರನ್ನು ಮುಂದಿನ ಪೀಳಿಗೆಗೂ ತಲುಪವುವಂತೆ ಮಾಡುತ್ತಾರೆ. ಇದು ಒಂದು ಕುಟುಂಬದ ಪೂರ್ವಜರಿಗೆ ನೀಡುವ ಗೌರವದ ಸಂಕೇತ ಎಂದೇ ಭಾವಿಸುತ್ತಾರೆ.
ಪಕೋಡ ಹೆಚ್ಚು ಎಣ್ಣೆ ಹೀರಿಕೊಳ್ಳದಂತೆ ಫ್ರೈ ಮಾಡೋಕೆ ಇವೆ ಸಿಂಪಲ್ ಟ್ರಿಕ್ಸ್
ಇನ್ನು ನಮ್ಮ ಉತ್ತರ ಕರ್ನಾಟಕದತ್ತ (North Karnataka)ಹೋದರೆ ಇರುವ ತರಕಾರಿಗಳೆಲ್ಲ ಹೆಸರಿನ ಹಿಂದಿರುತ್ತದೆ. ಉಳ್ಳಾಗಡ್ಡಿ, ಮೆಣಸಿನಕಾಯಿ, ಜೋಳದ ರೊಟ್ಟಿ ಎಂದೆಲ್ಲಾ ಹೆಸರಿನ ಹಿಂದೆ ಒಂದು ತರಕಾರಿ ಸುತ್ತಿಕೊಂಡಿರುತ್ತದೆ. ಕೇಳಲು ಹಾಸ್ಯಮಯವೆನಿಸುವ ಈ ತರಕಾರಿ ಹಿನ್ನೆಲೆಯ ಹೆಸರುಗಳ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.