ಮಳೆಗಾಲದ ಸಂಜೆಗಳನ್ನು ಮಜವಾಗಿಸುವ ಪಕೋಡಾ

By Suvarna News  |  First Published Jul 14, 2020, 4:48 PM IST

ಬರೀ ಈರುಳ್ಳಿ, ಹೀರೇಕಾಯಿ ಪಕೋಡಾವಲ್ಲ, ಚಿಕನ್, ಮೊಟ್ಟೆ, ಮೀನು, ಸೋಯಾ, ಪನ್ನೀರ್‌ನಿಂದಲೂ ಪಕೋಡಾ ಮಾಡಬಹುದು. ಒಮ್ಮೆ ಟ್ರೈ ಮಾಡಿ ನೋಡಿ. 


ಮಳೆಗಾಲ ಎಂದರೆ ಸಂಜೆಯ ಸಮಯಕ್ಕೆ ಏನಾದರೂ ಬಿಸಿಬಿಸಿ ಕುರುಕಲು ಬೇಕೇಬೇಕು. ಈ ಬೇಕುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ತೃಪ್ತಿಯಾಗಿಸುವ ಸಾಮರ್ಥ್ಯ ಪಕೋಡಾದ್ದು. ಕೇವಲ ಈರುಳ್ಳಿ ಪಕೋಡಾವಲ್ಲ, ವಿಧವಿಧವಾದ ಪಕೋಡಾಗಳನ್ನು ಮಾಡಬಹುದು. ಐದು ವಿಧದ ಪಕೋಡಾಗಳನ್ನಿಲ್ಲಿ ನೀಡಲಾಗಿದೆ. 

ಚಿಕನ್ ಪಕೋಡಾ
ಬೇಕಾಗುವ ಸಾಮಗ್ರಿಗಳು: ಮೂಳೆರಹಿತ ಚಿಕನ್ ಸ್ಟ್ರಿಪ್ಸ್ 1\2 ಕೆಜಿ, 2 ಚಮಚ ಮೈದಾ, 2 ಚಮಚ ಕಡಲೆ ಹಿಟ್ಟು, ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 7-8 ಬೆಳ್ಳುಳ್ಳಿ ಎಸಳು, ಅರ್ಧ ಚಮಚ ಪೆಪ್ಪರ್ ಪುಡಿ, 1 ಚಮಚ ಗರಂ ಮಸಾಲೆ, 1 ಚಮಚ ಕೊತ್ತಂಬರಿ ಪುಡಿ, 2 ಚಮಚ ನಿಂಬೆರಸ

Tap to resize

Latest Videos

ಮಾಡುವ ವಿಧಾನ: ಪೆಪ್ಪರ್, ಕೆಂಪು ಮೆಣಸಿನ ಪುಡಿ, ಸಣ್ಣಗೆ  ಹೆಚ್ಚಿದ ಬೆಳ್ಳುಳ್ಳಿ, ಉಪ್ಪು, ಗರಂ ಮಸಾಲೆ, ಕೊತ್ತಂಬರಿ ಪುಡಿ ಹಾಗೂ ನಿಂಬೆರಸವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಚಿಕನ್ ಹಾಕಿ 1 ಗಂಟೆಯ ಕಾಲ ಬಿಡಿ. ಬಳಿಕ ಮೈದಾ ಹಾಗೂ ಕಡಲೆ ಹಿಟ್ಟಿನಿಂದ ತಯಾರಿಸಿಕೊಂಡ ಹಿಟ್ಟಿನೊಳಗೆ ಈ ಚಿಕನ್ ಸ್ಟ್ರಿಪ್ಸ್ ಅದ್ದಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ತೆಗೆದು, ಟೊಮ್ಯಾಟೋ ಕೆಚಪ್‌ನೊಂದಿಗೆ ಸವಿಯಲು ನೀಡಿ. 

ತಿನ್ನೋದಕ್ಕೆ ಹಿರಿಯರು ಮಾಡಿರೋ ರೂಲ್ಸ್ ಪಾಲಿಸಿದ್ರೆ ಆರೋಗ್ಯ ಭಾಗ್ಯ ಹೆ ...

ಮೀನಿನ ಪಕೋಡಾ
ಬೇಕಾಗುವ ಸಾಮಗ್ರಿಗಳು: 2 ವೈಟ್ ಫಿಶ್, 1 ಬೀಟನ್ ಎಗ್, 2 ಚಮಚ ಜೋಳದ ಹಿಟ್ಟು, ಕೆಂಪು ಮೆಣಸಿನ ಪುಡಿ ಹಾಗೂ ಉಪ್ಪು ರುಚಿಗೆ ತಕ್ಕಷ್ಟು. 
ಮಾಡುವ ವಿಧಾನ: ಮೀನುಗಳನ್ನು ಸ್ಟೀಮ್‌ನಲ್ಲಿ ಬೇಯಿಸಿ ಮಧ್ಯಮ ಗಾತ್ರದ ಪೀಸ್‌ಗಳಾಗಿ ಕತ್ತರಿಸಿಕೊಳ್ಳಿ. ಜೋಳದ ಹಿಟ್ಟಿಗೆ ಬೀಟ್ ಮಾಡಿದ ಮೊಟ್ಟೆ, ಕೆಂಪು ಮೆಣಸಿನ ಪುಡಿ ಹಾಗೂ ಉಪ್ಪು ಹಾಕಿ ಕಲಸಿ.  ಈ ಹಿಟ್ಟಿನಲ್ಲಿ ಮೀನನ್ನು ಅದ್ದಿ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಹಿಟ್ಟಿಗೆ ಹೆಚ್ಚಿನ ಮಸಾಲೆಗಾಗಿ ಜಿಂಜರ್ ಗಾರ್ಲಿಕ್ ಪೇಸ್ಟ್, ನಿಂಬೆರಸ, ಸ್ವಲ್ಪ ನೀರು ಹಾಕಿ ಕಲೆಸಿಕೊಳ್ಳಬಹುದು. 

ಮೊಟ್ಟೆಯ ಪಕೋಡಾ
ಬೇಕಾಗುವ ಸಾಮಗ್ರಿಗಳು: 9 ಬಾಯ್ಲ್ಡ್ ಎಗ್, 1 ಕಪ್ ಕಡಲೆ ಹಿಟ್ಟು, 2 ಸಣ್ಣದಾಗಿ ಹೆಚ್ಚಿಕೊಂಡ ಹಸಿಮೆಣಸು, 1 ಚಮಚ ಕೆಂಪು ಮೆಣಸಿನ ಪುಡಿ, ಚಿಟಿಕೆ ಅಡುಗೆ ಸೋಡಾ, ಕಾಲು ಚಮಚ ಪೆಪ್ಪರ್, ಸಣ್ಣದದಾಗಿ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು. 
ಮಾಡುವ ವಿಧಾನ: ಮೊಟ್ಟೆಯ ಶೆಲ್‌ಗಳನ್ನು ತೆಗೆದು, ಮೊಟ್ಟೆಯನ್ನು ಎರಡು ಭಾಗವಾಗಿ ಕತ್ತರಿಸಿ. ಅದಕ್ಕೆ ಉಪ್ಪು ಹಾಗೂ ಪೆಪ್ಪರ್ ಸೇರಿಸಿ. ಬಟ್ಟಲೊಂದರಲ್ಲಿ ಕಡಲೆ ಹಿಟ್ಟು, ಮೆಣಸಿನ ಪುಡಿ, ಅಡುಗೆ ಸೋಡಾ, ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ದೋಸೆ ಹಿಟ್ಟಿನ ಹದಕ್ಕೆ ತನ್ನಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಹಿಟ್ಟಿನಲ್ಲಿ ಮೊಟ್ಟೆಗಳನ್ನು ಅದ್ದು ಬಾಣಲೆಗೆ ಹಾಕಿ. ಕಂದು ಬಣ್ಣಕ್ಕೆ ತಿರುಗಿದ ಬಳಿಕ ಹೊರ ತೆಗೆದು ಟೊಮ್ಯಾಟೋ ಕೆಚಪ್ ಜೊತೆ ಸವಿದು ನೋಡಿ. 

ಸೋಯಾ ಪಕೋಡಾ
ಬೇಕಾಗುವ ಸಾಮಗ್ರಿಗಳು: 1 ಕಪ್ ಸೋಯಾ ಚಂಕ್ಸ್, ಅರ್ಧ ಕಪ್ ಕಡಲೆ ಹಿಟ್ಟು, ಶುಂಠಿ ಹಾಗೂ ಚಿಲ್ಲಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ  ಚಮಚ ಸೋಡಿಯಂ ಬೈಕಾರ್ಬೋನೇಟ್, ಸ್ವಲ್ಪ ಅರಿಶಿನ
ಮಾಡುವ ವಿಧಾನ: ನೀರಿನಲ್ಲಿ ಸೋಯಾ ಚಂಕ್ಸ್‌ನ್ನು ಅರ್ಧ ಗಂಟೆಗಳ ಕಾಲ ನೆನೆಸಿಡಿ. ನಂತರ ನೀರನ್ನು ಹಿಂಡಿ ತೆಗೆಯಿರಿ. ಬಟ್ಟಲಿನಲ್ಲಿ ಕಡಲೆ ಹಿಟ್ಟು, ಅರಿಶಿನ, ಸೋಡಾ, ಉಪ್ಪು, ಶುಂಠಿ, ಹಸಿಮೆಣಸಿನ ಪೇಸ್ಟ್ ಸೇರಿಸಿ ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಕಲಸಿ. ಇಡ್ಲಿ ಹಿಟ್ಟಿನಂತೆ ದಪ್ಪಗಿರುವ ಹದದಲ್ಲಿದ್ದಾಗ ಸೋಯಾ ಚಂಕ್ಸ್‌ಗಳನ್ನು ಅದ್ದಿ ತೆಗೆದು ಎಣ್ಣೆಯಲ್ಲಿ ಕರಿಯಿರಿ. 

ಮನೆಯಲ್ಲಿ ಈಸಿಯಾಗಿ ಕುರ್‌ಕುರೆ ಮಾಡುವ ಸಿಕ್ರೇಟ್‌ ವಿಧಾನ

ಪನೀರ್ ಪಕೋಡಾ
ಬೇಕಾಗುವ ಸಾಮಗ್ರಿಗಳು: 1 ಕಪ್ ಕಡಲೆ ಹಿಟ್ಟು, 1 ಚಮಚ ಕೆಂಪು ಮೆಣಸಿನ ಪುಡಿ, ಕಾಲು ಚಮಚ ಅರಿಶಿನ, ಉಪ್ಪು, 300 ಗ್ರಾಂ ಪನೀರ್, 2 ಚಮಚ ಚಾಟ್ ಮಸಾಲಾ, ಕರಿಯಲು ಎಣ್ಣೆ.
ಮಾಡುವ ವಿಧಾನ: ಕಡಲೆ ಹಿಟ್ಟು, ಅರಿಶಿನ, ಉಪ್ಪು, ಕೆಂಪು ಮೆಣಸಿನ ಪುಡಿ ಸೇರಿಸಿಕೊಂಡು ನೀರಿನೊಂದಿಗೆ ಬೆರೆಸಿ ಹಿಟ್ಟನ್ನು ತಯಾರಿಸಿಟ್ಟುಕೊಳ್ಳಿ. ಪನೀರ್ ಪೀಸ್‌ಗಳಿಗೆ ಚಾಟ್ ಮಸಾಲಾ ಸಿಂಪಡಿಸಿ ಹಿಟ್ಟಿನಲ್ಲಿ ಅದ್ದಿರಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಪನೀರನ್ನು ಡೀಪ್ ಫ್ರೈ ಮಾಡಿ. 

click me!