ಜಂಕ್ ಫುಡ್ ಬರ್ಗರ್ ತಿನ್ಬೇಡಿ ಅಂತಾರೆ, ಆದರೆ ಇವನು ಬರ್ಗರ್ ತಿಂದು, ವರ್ಲ್ಡ್ ರೆಕಾರ್ಡ್ ಮಾಡಿದ್ದಾನೆ!

By Suvarna News  |  First Published Jan 12, 2024, 12:14 PM IST

ಬರ್ಗರ್ ತಿಂದ್ರೆ ಆರೋಗ್ಯ ಹಾಳಾಗುತ್ತೆ ಅಂತಾ ತಜ್ಞರು ಹೇಳ್ತಾರೆ. ಆದ್ರೆ ಈತನ ಅದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಪ್ರತಿ ದಿನ ಬರ್ಗರ್ ತಿಂದ್ರೂ ಈತನ ಆರೋಗ್ಯ ಹಾಳೂ ಆಗಿಲ್ಲ. ಒಂದೆರಡು ದಿನ ಅಲ್ಲ ಈತ ಎಷ್ಟು ವರ್ಷದಿಂದ ಬರ್ಗರ್ ತಿನ್ನುತ್ತಿದ್ದಾನೆ ಗೊತ್ತಾ?
 


ಇಷ್ಟವಾಗುವ ಆಹಾರವನ್ನು ನಾವು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತೇವೆ. ಆಗಾಗ ನಮ್ಮಿಷ್ಟದ ಆಹಾರವನ್ನು ತುಂಬಾ ಖುಷಿಯಿಂದ ತಿನ್ನುತ್ತೇವೆ ಕೂಡ. ಆದ್ರೆ ಅದು ನಿಮಗೆ ಇಷ್ಟ ಎನ್ನುವ ಕಾರಣಕ್ಕೆ ಪ್ರತಿ ದಿನ ಅದನ್ನೇ ತಿನ್ನಿ ಅಂದ್ರೆ ನಮ್ಮ – ನಿಮ್ಮಿಂದ ಅದು ಸಾಧ್ಯವಿಲ್ಲ. ಜಾಮೂನ್ ನಿಮ್ಮ ಫೆವರೆಟ್ ಎನ್ನುವ ಕಾರಣಕ್ಕೆ ನೀವು ಪ್ರತಿ ದಿನ ಜಾಮೂನು ತಿನ್ನುತ್ತಾ ಹೋದ್ರೆ ಕೆಲವೇ ದಿನಗಳಲ್ಲಿ ನಿಮಗೆ ಅದು ವಾಕರಿಕೆ ತರಿಸುತ್ತೆ. ಇನ್ಮುಂದೆ ಜಾಮೂನನ್ನು ನನ್ನ ಹತ್ತಿರ ತರ್ಬೇಡಿ ಎನ್ನುವವರಿದ್ದಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿಗೆ ಕಳೆದ ಐವತ್ತು ವರ್ಷಗಳಿಂದ ಪ್ರತಿ ದಿನ ಒಂದೇ ಆಹಾರ ಸೇವನೆ ಮಾಡಿದ್ರೂ  ಬೋರ್ ಆಗೇ ಇಲ್ಲ. ಆತನಿಗೆ ಪ್ರತಿ ದಿನ ಬರ್ಗರ್ ಬೇಕೇಬೇಕು. ಅದು ಮ್ಯಾಕ್ಡೋನಾಲ್ಡ್ ನ ಬಿಗ್ ಮ್ಯಾಕ್‌. 

ಯಸ್, ಬಿಗ್ ಮ್ಯಾಕ್ (Big Mac) ತಿನ್ನುವ ಮೂಲಕವೇ ವಿಶ್ವದಾಖಲೆ (World Records) ಮಾಡಿದ ಆ ವ್ಯಕ್ತಿ ಹೆಸರು ಡೊನಾಲ್ಡ್ ಗೋರ್ಸ್ಕಿ. ಅಮೆರಿಕದ ವಿಸ್ಕಾನ್ಸಿನ್ ನಿವಾಸಿ. ವಯಸ್ಸು 69 ವರ್ಷ. ಜೈಲಿನಲ್ಲಿ ಗಾರ್ಡ್ ಆಗಿ ಡೊನಾಲ್ಡ್ ಗೋರ್ಸ್ಕಿ ಕೆಲಸ ಮಾಡ್ತಿದ್ದ. ಆದ್ರೆ ಈಗ ನಿವೃತ್ತಿಯಾಗಿದ್ದಾರೆ. ಡೊನಾಲ್ಡ್ ಗೋರ್ಸ್ಕಿಗೆ, ಮೆಕ್‌ಡೊನಾಲ್ಡ್ಸ್ ಬಿಗ್ ಮ್ಯಾಕ್ ಬರ್ಗರ್ ಎಷ್ಟು ಇಷ್ಟ ಅಂದ್ರೆ ಆತ ದಿನದಲ್ಲಿ ಎರಡು ಬಿಗ್ ಮ್ಯಾಕ್ ಬರ್ಗರ್ ಕೂಡ ತಿನ್ನಬಲ್ಲ. 

Tap to resize

Latest Videos

undefined

ಮುಂಗಾರಿನ ಮಿಂಚು ಚಿತ್ರದಲ್ಲಿ ತೋರಿಸಿದ ಕೆಂಪಿರುವ ಚಟ್ನಿ ನೆನಪಿದ್ಯಾ? ಆರೋಗ್ಯಕ್ಕಿದು ಹಿತ

1972ರಿಂದ ಡೊನಾಲ್ಡ್ ಗೋರ್ಸ್ಕಿ, ಈ ಬಿಗ್ ಮ್ಯಾಕ್ ಬರ್ಗರ್ ತಿನ್ನಲು ಶುರು ಮಾಡಿದ್ದಾನೆ. ಜನವರಿ 1, 2023 ರ ವೇಳೆಗೆ 33,400 ಹ್ಯಾಂಬರ್ಗರ್ ಸ್ಯಾಂಡ್‌ವಿಚ್‌ಗಳನ್ನು ತಿಂದಿದ್ದಾನೆ. ಈತ ತಿನ್ನುವ ಬರ್ಗರ್ ನಲ್ಲಿ ಎರಡು ಬೀಫ್ ಪ್ಯಾಟೀಸ್, ಅಮೇರಿಕನ್ ಚೀಸ್, ಉಪ್ಪಿನಕಾಯಿ, ಲೆಟಿಸ್, ಕೊಚ್ಚಿದ ಈರುಳ್ಳಿ ಮತ್ತು ಬಿಗ್ ಮ್ಯಾಕ್ ಸಾಸ್  ಹಾಗೂ ಎಳ್ಳು ಉದುರಿಸಿದ ಬನ್‌ ಇರುತ್ತದೆ. 

 

ಹಿಂದಿನ ವರ್ಷ ಡೊನಾಲ್ಡ್ ಗೋರ್ಸ್ಕಿ ತನ್ನ ಬಿಗ್ ಮ್ಯಾಕ್ ಬರ್ಗರ್ ಜರ್ನಿ ಬಗ್ಗೆ ಹೇಳಿದ್ದ. ಆತ ಮೇ 17, 1972 ರಿಂದ ಬಿಗ್ ಮ್ಯಾಕ್ ಬರ್ಗರ್ ತಿನ್ನಲು ಪ್ರಾರಂಭಿಸಿದ್ದ. ಗೊರ್ಸ್ಕ್ ಮೊದಲ ಬಾರಿಗೆ ಫಾಂಡ್ ಡು ಲ್ಯಾಕ್ ಶಾಖೆಯಲ್ಲಿ ಬಿಗ್ ಮ್ಯಾಕ್ ಅನ್ನು ಸೇವಿಸಿದ. ಬಿಗ್ ಮ್ಯಾಕ್‌ನೊಂದಿಗಿನ ಅವನ ಪ್ರೇಮ ಸಂಬಂಧ ಇಲ್ಲಿಯೇ ಪ್ರಾರಂಭವಾಯಿತು. ಶಾಖೆಗೆ ಹೋಗಿ ಮೂರು ಬಿಗ್ ಮ್ಯಾಕ್ ತೆಗೆದುಕೊಂಡು ಕಾರಿನಲ್ಲಿ ಬಂದು ತಿನ್ನಲು ಶುರು ಮಾಡಿದ್ದೆ. ಅಲ್ಲಿಂದಲೇ ನಾನು ಇದನ್ನು ಜೀವನದ ಭಾಗವಾಗಿ ಮಾಡಿಕೊಂಡೆ ಎಂದು ಡೊನಾಲ್ಡ್ ಹೇಳಿದ್ದಾನೆ. ಮೇ 7, 2022 ರಂದು ಬಿಗ್ ಮ್ಯಾಕ್ ಪ್ರೀತಿಯ 50 ನೇ ವಾರ್ಷಿಕೋತ್ಸವವನ್ನು ಆಚರಿಸಿದ್ದ. 1972 ರಿಂದ ಇಲ್ಲಿಯವರೆಗೆ ಡೊನಾಲ್ಡ್ ಗೋರ್ಸ್ಕಿ ಕೇವಲ 8 ದಿನ ಬಿಗ್ ಮ್ಯಾಕ್ ಸೇವನೆ ಮಾಡಿಲ್ಲವಂತೆ. ಒಮ್ಮೆ ಮೆಕ್ಡೋನಾಲ್ಡ್ ಮುಚ್ಚಿದ್ದ ಕಾರಣವಾದ್ರೆ ಇನ್ನೊಂದು ಅವರ ತಾಯಿ ಸಾವನ್ನಪ್ಪಿದಾಗ. 

ಡೊನಾಲ್ಡ್ ಗೋರ್ಸ್ಕಿ, ಮೆಕ್ಡೊನಾಲ್ಡ್ ನ  ಬರ್ಗರ್ ಕಿಂಗ್ ವೆಪರ್ ಮತ್ತು ಟಾಪರ್ ಡಬಲ್ ಬರ್ಗರನ್ನು 1984ರಲ್ಲಿ ಟ್ರೈ ಮಾಡಿದ್ದ. ಆದ್ರೆ ಬಿಗ್ ಮ್ಯಾಕ್ ನಷ್ಟು ಇಷ್ಟವಾಗಲಿಲ್ಲ. ಇದು ವಿಶ್ವದ ಅತ್ಯುತ್ತಮ ಸ್ಯಾಂಡ್ವಿಚ್ ಎಂದು ಡೊನಾಲ್ಡ್ ಗೋರ್ಸ್ಕಿ ಹೇಳಿದ್ದಾನೆ. 

24 ವರ್ಷದಿಂದ ಅಮ್ಮ ಬಳಸ್ತಿದ್ದ ಮಸಾಲೆ ಡಬ್ಬ ನೋಡಿದ ಮಗಳು ಕಂಗಾಲು!

1997 ರವರೆಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅವರ ಸಾಧನೆಯನ್ನು ಮೊದಲು ಗುರುತಿಸಿತು. ಅಧಿಕೃತವಾಗಿ 15,000 ಬಿಗ್ ಮ್ಯಾಕ್ ಬರ್ಗರ್‌ಗಳನ್ನು ಅವರು ತಿಂದಿದ್ದ. 2018 ರಲ್ಲಿ ಗೋರ್ಸ್ಕೆ 30,000 ಬಿಗ್ ಮ್ಯಾಕ್‌ಗಳನ್ನು ತಿಂದಿದ್ದ. ತನ್ನ ಉನ್ನತ ಚಯಾಪಚಯ ಮತ್ತು ಉತ್ತಮ ಆರೋಗ್ಯಕ್ಕೆ ಧನ್ಯವಾದ ಹೇಳುವ ಗೋರ್ಸ್ಕೆಗೆ ಬಿಗ್ ಮೆಕ್ ತ್ಯಜಿಸುವ ಯಾವುದೇ ಆಲೋಚನೆ ಇಲ್ಲ. ಸಾಯುವ ಸಂದರ್ಭದಲ್ಲೂ ನನ್ನ ಮಗ ನನಗೆ ಬರ್ಗರ್ ನೀಡ್ತಾನೆ ಎಂದು ಗೋರ್ಸ್ಕೆ ಜೋಕ್ ಮಾಡ್ತಾನೆ. 
 

click me!