ಅಯೋಧ್ಯೆಯ ಜಗತ್ಪ್ರಸಿದ್ಧ ಹನುಮಾನ್ ಗರ್ಹಿ ಲಡ್ಡುಗೂ ಜಿಐ ಟ್ಯಾಗ್ ಸಿಕ್ಕಿದೆ. ಈ ಲಡ್ಡು ಯುಗಯುಗಾಂತರಗಳಿಂದ ಪ್ರಸಿದ್ಧಿ ಪಡೆದಿದೆ.
ರಾಮಮಂದಿರ ದೇಗುಲದ ಪ್ರತಿಷ್ಠಾಪನೆಗೆ ಇನ್ನೇನು ಕೆಲವೇ ದಿನವಿದೆ. ಅಯೋಧ್ಯೆಯಲ್ಲಿ ಇದರ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ಅಯೋಧ್ಯೆಯ ಹನುಮಾನ್ ಗರ್ಹಿ ಬೇಸನ್ ಲಾಡೂಗೆ ಜಿಐ ಟ್ಯಾಗ್ ದೊರೆತಿದೆ.
ಒಡಿಶಾದ ಚಿಗಳಿ ಚಟ್ನಿಗೆ ಜಿಐ ಟ್ಯಾಗ್ ಸಿಕ್ಕಿದ ಬೆನ್ನಲ್ಲೇ ಅಯೋಧ್ಯೆಯ ಪ್ರಸಿದ್ಧ ಹನುಮಾನ್ ಗರ್ಹಿ ಲಾಡೂ ಕೂಡಾ ಭೌಗೋಳಿಕ ಸೂಚಕ ಮುದ್ರೆ ಒತ್ತಿಸಿಕೊಂಡಿದೆ. ಈ ಗುರುತಿಸುವಿಕೆಯು ಈ ಲಾಡೂಗಳ ವಿಶಿಷ್ಟ ಗುರುತನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಅಯೋಧ್ಯೆ ಈ ಲಾಡುಗಳ ಮೂಲ ಎಂಬುದನ್ನು ಸೂಚಿಸುವ ಜೊತೆಗೆ, ಸ್ಥಳೀಯ ಉತ್ಪಾದಕರ ಸಾಂಸ್ಕೃತಿಕ ಪರಂಪರೆ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಸಹ ಭೌಗೋಳಿಕ ಸೂಚಕ ಟ್ಯಾಗ್ ಬೆಂಬಲಿಸುತ್ತದೆ.
undefined
ಸರ್ಕಾರದ ಈ ಕ್ರಮವನ್ನು ಶ್ಲಾಘಿಸುತ್ತಿರುವ ಸ್ಥಳೀಯ ಲಾಡೂ ತಯಾರಕರು, 'ಈ ಬೆಳವಣಿಗೆಯು ಅಯೋಧ್ಯೆಯ ನಿವಾಸಿಗಳು ಮತ್ತು ಮೋದಕ ಸಮಾಜಕ್ಕೆ ಸಂತೋಷವನ್ನು ತರುತ್ತದೆ.ರಾಮಮಂದಿರ ಉದ್ಘಾಟನೆಯ ಈ ಸಮಯದಲ್ಲಿ ಜಿಐ ಟ್ಯಾಗ್ ಸಿಕ್ಕಿರುವುದು ಹೆಚ್ಚು ಮಹತ್ವದ್ದಾಗಿದೆ, ' ಎಂದಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮನನ್ನು ನೋಡುವ ಮೊದಲು, ಭಕ್ತರು ಅಯೋಧ್ಯೆಯ ರಕ್ಷಕನೆಂದು ಪರಿಗಣಿಸಲ್ಪಟ್ಟ ಭಗವಾನ್ ಹನುಮಂತನಿಂದ ಆಶೀರ್ವಾದವನ್ನು ಪಡೆಯಬೇಕು ಎಂಬ ಸಂಪ್ರದಾಯವಿದೆ. ಇದಕ್ಕಾಗಿ ಜನರು ಪೂಜ್ಯ ಭಬಜರಂಗಬಲಿ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ತೆರಳಬೇಕು. ಈ ದೇವಾಲಯದಲ್ಲಿ ಲಾಡೂ ಪ್ರಸಾದ ಕೊಡಲಾಗುತ್ತದೆ.
ಹನುಮಾನ್ ಗರ್ಹಿ ಲಡ್ಡು ಏಕೆ ಪ್ರಸಿದ್ಧ?
ಹನುಮಾನ್ ಗರ್ಹಿ ಲಡ್ಡು ಯುಗಯುಗಾಂತರಗಳಿಂದ ಪ್ರಸಿದ್ಧಿ ಪಡೆದಿದೆ. ಜನರು ತಮ್ಮೊಂದಿಗೆ ದೂರದ ಸ್ಥಳಗಳಿಗೆ ಈ ಲಡ್ಡುವನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ. ಈ ಲಡ್ಡುಗಳ ವಿಶೇಷತೆಯೆಂದರೆ, ಅವುಗಳನ್ನು ತಯಾರಿಸಲು ವಿಭಿನ್ನ ವಿಧಾನಗಳಿವೆ. ಪ್ರತಿಯೊಬ್ಬರೂ ಅದನ್ನು ಇಷ್ಟಪಡುತ್ತಾರೆ.
ಭೌಗೋಳಿಕ ಸೂಚನೆ (GI) ಎಂದರೇನು?
ಭೌಗೋಳಿಕ ಸೂಚನೆಯು ನಿರ್ದಿಷ್ಟ ಭೌಗೋಳಿಕ ಮೂಲವನ್ನು ಹೊಂದಿರುವ ಮತ್ತು ಗುಣಗಳನ್ನು ಹೊಂದಿರುವ ಅಥವಾ ಆ ಮೂಲದ ಕಾರಣದಿಂದಾಗಿ ಖ್ಯಾತಿಯನ್ನು ಹೊಂದಿರುವ ಉತ್ಪನ್ನಗಳ ಮೇಲೆ ಬಳಸಲಾಗುವ ಚಿಹ್ನೆ.