Blue Ghee Rice: ಈ ಅನ್ನಕ್ಕೆ ಇದೆಲ್ಲಿಂದ ಗಾಢ ನೀಲಿ ಬಣ್ಣ? ಕೃತಕ ಬಣ್ಣವಂತೂ ಅಲ್ವೇ ಅಲ್ಲ; ಇದು ಸೂಪರ್ರಾದ ನೀಲಿ ಘೀ ರೈಸ್‌

By Suvarna News  |  First Published Apr 19, 2024, 6:56 PM IST

ಶಂಖಪುಷ್ಪದ ಹೂವಿನ ಎಸಳು ಬಳಸಿ ಅನ್ನಕ್ಕೆ ದಟ್ಟವಾದ ನೀಲಿ ಬಣ್ಣ ನೀಡುವ ಜತೆಗೆ, ಅದರಿಂದ ಘೀ ರೈಸ್‌ ತಯಾರಿಸುವ ವಿಧಾನವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಲಾಗಿದೆ. ಇದನ್ನು ಬಟರ್‌ ಫ್ಲೈ ಘೀ ರೈಸ್‌ ಎಂದು ಹೆಸರಿಸಲಾಗಿದೆ. ಬಟರ್‌ ಫ್ಲೈ ಪೀ ಫ್ಲಾವರ್‌ ಎಂದರೆ ಶಂಖಪುಷ್ಪದ ಹೂವು. 
 


ಅಡುಗೆ ಮನೆ ಎನ್ನುವುದು ವಿಶ್ವವಿದ್ಯಾಲಯ ಇದ್ದಂತೆ. ಅಲ್ಲಿ ಕಲಿತುಕೊಳ್ಳುವುದು ಸಿಕ್ಕಾಪಟ್ಟೆ ಇರುತ್ತದೆ. ಅಡುಗೆಯನ್ನು ಕಲಿತು ಮುಗಿಯಿತು ಎನ್ನುವಂತಿಲ್ಲ. ಹಳೆಯ, ಹೊಸ ಅಡುಗೆಗಳನ್ನು ಕಲಿಯುತ್ತ ಹೋದರೆ ಅದು ಸುಲಭದಲ್ಲಿ ಮುಗಿಯುವ ಕಾರ್ಯವಲ್ಲ. ಇತ್ತೀಚೆಗಂತೂ ಹೊಸ ಹೊಸ ಮಾದರಿಯ ಅಡುಗೆಗಳನ್ನು ಯಾರಾದರೂ ಪರಿಚಯಿಸುತ್ತಲೇ ಇರುತ್ತಾರೆ. ಅವುಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದರೆ ಮುಗಿಯಿತು, ಕೆಲವೇ ಸಮಯದಲ್ಲಿ ಲಕ್ಷಾಂತರ ಜನರನ್ನು ತಲುಪಿ, ಅವುಗಳ ಬಗ್ಗೆ ಚರ್ಚೆಯಾಗಿ, ಫೇಮಸ್‌ ಆಗುತ್ತವೆ. ಕೆಲವು ದಿನಗಳ ಹಿಂದೆ ಪ್ರೂಟ್ಸ್‌ ಪಾನಿಪೂರಿಯ ಬಗ್ಗೆ ಎಲ್ಲೆಡೆ ಭಾರೀ ಚರ್ಚೆಯಾಗಿತ್ತು. ಈಗ ಇನ್‌ ಸ್ಟಾಗ್ರಾಮ್‌ ನಲ್ಲಿ ಹೊಸ ರೂಪದ ಘೀ ರೈಸ್‌ ಕುರಿತ ವೀಡಿಯೋ ಸಾಕಷ್ಟು ವೈರಲ್‌ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಘೀ ರೈಸಿನ ಬಣ್ಣ ನೋಡಿದರೆ ಅಚ್ಚರಿಯಾಗಬಹುದು. ಅಪ್ಪಟ ನೀಲಿ ಬಣ್ಣದಲ್ಲಿರುವ ಘೀ ರೈಸ್‌ ಅನ್ನು @thecookingamma  ಎನ್ನುವ ಖಾತೆಯಿಂದ ಶೇರ್‌ ಮಾಡಲಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

ಹೊಸ ಅಡುಗೆಗಳನ್ನು (Food) ಟ್ರೈ ಮಾಡುವುದು ಕೆಲವರ ಅಭ್ಯಾಸ. ಹೊಸ ರೀತಿಯ ರೈಸ್‌ ಬಾತನ್ನೋ, ದಿಡೀರ್‌ ಮಾಡುವ ತಿಂಡಿಗಳನ್ನೋ ಕಲಿತುಕೊಂಡು ಮನೆಯಲ್ಲಿ, ಮಕ್ಕಳಿಗೆ ಮಾಡಿಕೊಡುವುದು ಹಲವು ಗೃಹಿಣಿಯರಿಗೆ ಪ್ರಿಯವಾದ ಕೆಲಸ. ಅಂಥ ಕುತೂಹಲಿಗಳಿಗೆ ನೀಲಿ ಬಣ್ಣದ ಘೀ ರೈಸ್‌ (Blue Ghee Rice) ಹೊಸದೊಂದು ಅವಕಾಶ ನೀಡುತ್ತದೆ ಎಂದರೆ ತಪ್ಪಿಲ್ಲ. ಈ ಚಿತ್ರದಲ್ಲಿರುವ ನೀಲಿ ಬಣ್ಣದ ಅನ್ನವನ್ನು ನೋಡಿ. ಅಷ್ಟು ದಟ್ಟವಾದ ನೀಲಿ ಬಣ್ಣ ಬರಲು ಯಾವುದೋ ಕೃತಕ (Artificial) ಅಂಶವನ್ನು ಸೇರಿಸಿರಬಹುದು ಎನ್ನುವ ಅನುಮಾನ ಬರುತ್ತದೆ. ಆದರೆ, ಹಾಗೇನೂ ಇಲ್ಲ. ನೀಲಿ ಬಣ್ಣವನ್ನು ಶಂಖಪುಷ್ಪದ ಹೂವಿನ (Butterfly Pea Flower) ಎಸಳುಗಳಿಂದ ಪಡೆದುಕೊಳ್ಳಲಾಗಿದೆ ಎನ್ನುವ ಅಚ್ಚರಿಯ ಸಂಗತಿ ಇನ್‌ ಸ್ಟಾಗ್ರಾಮ್‌ ನಲ್ಲಿ ಶೇರ್‌ (Share) ಮಾಡಿರುವ ವೀಡಿಯೋದಿಂದ ತಿಳಿದುಬರುತ್ತದೆ. 

Hara Hachi Bu: ಜಪಾನೀಯರ ಆರೋಗ್ಯ ರಹಸ್ಯ ಇದು: ಹರಾ ಹಚಿ ಬು!

Tap to resize

Latest Videos

undefined

ಸಿದ್ಧಪಡಿಸೋದು ಸುಲಭ
ಫುಡ್‌ ವ್ಲಾಗರ್‌ (Vloger) ಪ್ರತಿಮಾ ಪ್ರಧಾನ್‌ ಎನ್ನುವವರು ತಮ್ಮ ಇನ್‌ ಸ್ಟಾ ಖಾತೆಯಲ್ಲಿ ಇದನ್ನು ಶೇರ್‌ ಮಾಡಿದ್ದಾರೆ. ಅದನ್ನು ಸಿದ್ಧಪಡಿಸುವ ವಿಧಾನವೂ ಸರಳವಾಗಿದೆ. ಆರಂಭದಲ್ಲಿ ಅವರು ಶಂಖಪುಷ್ಪದ ಹೂವುಗಳನ್ನು ಚೆನ್ನಾಗಿ ತೊಳೆಯುತ್ತಾರೆ. ಬಳಿಕ, ಅವುಗಳ ಎಸಳುಗಳನ್ನು ಒಂದೊಂದಾಗಿ ಬಿಡಿ, ತೊಟ್ಟಿನ ಬುಡದಲ್ಲಿರುವ ಹಸಿರು ಬಣ್ಣದ ತುಣುಕನ್ನು ಬಿಡಿಸುತ್ತಾರೆ. ಬಳಿಕ, ಅವುಗಳನ್ನು ನೀರಿನಲ್ಲಿ (Water) ಹಾಕಿ ಕುದಿಸುತ್ತಾರೆ. ಈ ಸಮಯದಲ್ಲಿ ಸ್ವಲ್ಪ ಅಕ್ಕಿಯನ್ನು ಒಂದು ಬೌಲ್‌ ನಲ್ಲಿ ನೆನೆಸಿಡುತ್ತಾರೆ. ಸ್ವಲ್ಪ ಸಮಯ ಬಿಟ್ಟು ನೀರು ಕುದಿದು, ಶಂಖಪುಷ್ಪದ ಎಸಳುಗಳು ಬಣ್ಣ ಬಿಡುತ್ತವೆ. ನೀರು ನೀಲಿಯಾಗಿ ಕಾಣುತ್ತದೆ. ಆ ಸಮಯದಲ್ಲಿ ಎಸಳುಗಳನ್ನು ಕೈಹುಟ್ಟಿನಿಂದ ತೆಗೆದುಹಾಕುತ್ತಾರೆ. ಬಳಿಕ, ಅದಕ್ಕೆ ನೆನೆಸಿಟ್ಟ ಅಕ್ಕಿಯನ್ನು ಹಾಕಿ ಮಧ್ಯಮ ಉರಿಯಲ್ಲಿ ಸುಮಾರು ಇಪ್ಪತ್ತು ನಿಮಿಷ ಇಟ್ಟು ಅನ್ನ ಮಾಡುತ್ತಾರೆ, ಅದಕ್ಕೆ ಮೇಲಿನಿಂದ ಉಪ್ಪು, ತುಪ್ಪ ಹಾಕುತ್ತಾರೆ. ಬಳಿಕ, ನಾಲ್ಕಾರು ಚಮಚ ತುಪ್ಪ ಹಾಕಿ, ಅದಕ್ಕೆ ಗೋಂಡಂಬಿ, ಒಣದ್ರಾಕ್ಷಿ, ಮಸಾಲೆ (Spice) ಎಲೆ, ಲವಂಗ, ಈರುಳ್ಳಿ ಸೇರಿದಂತೆ ಕೆಲವು ಮಸಾಲೆಗಳನ್ನು ಹಾಕಿ ಫ್ರೈ ಮಾಡುತ್ತಾರೆ. ಬಳಿಕ, ಅದಕ್ಕೆ ನೀಲಿ ಅನ್ನವನ್ನು ಹಾಕಿ ಸರಿಯಾಗಿ ಮಿಕ್ಸ್‌ (Mix) ಮಾಡುತ್ತಾರೆ. ಬಿಸಿಯಾದ ನೀಲಿ ಘೀ ರೈಸ್‌ ಸಿದ್ಧವಾಗುತ್ತದೆ. 

ಬೊಜ್ಜಿನಿಂದಾಗಿ ಉಂಟಾಗೋ ಆರೋಗ್ಯ ಸಮಸ್ಯೆಗಳೇನು?

ಮಲೇಷ್ಯಾದಲ್ಲೂ ಇದೆ
ಇದಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಭಿನ್ನ ಭಿನ್ನ ಪ್ರತಿಕ್ರಿಯೆಗಳು (Reactions) ಬಂದಿವೆ. ಪೋಸ್ಟ್‌ ಮಾಡಿದ ಒಂದು ವಾರದಲ್ಲೇ 12 ಮಿಲಿಯನ್‌ ಜನ ವೀಕ್ಷಣೆ ಮಾಡಿದ್ದಾರೆ. ಅನೇಕರು ಈ ಪ್ರಯತ್ನಕ್ಕೆ ಮೆಚ್ಚುಗೆ ಸೂಸಿದ್ದಾರೆ.

 

ಒಬ್ಬರು ಇದನ್ನು “ಮುಂಬೈ ಇಂಡಿಯನ್‌ ರೈಸ್‌ ಪ್ಲೇಟ್‌ʼ ಎಂದು ತಮಾಷೆ ಮಾಡಿದ್ದರೆ, ಮತ್ತೊಬ್ಬರು “ಅವತಾರ್‌ ಬಿರಿಯಾನಿʼ ಎಂದಿದ್ದಾರೆ. ಕೇವಲ ಭಾರತದಲ್ಲಷ್ಟೇ ಅಲ್ಲ, ಮಲೇಷ್ಯಾದಿಂದ ಒಬ್ಬರು ಪ್ರತಿಕ್ರಿಯೆ ನೀಡಿದ್ದು, “ಇದೇ ಹೂವನ್ನು ಬಳಸಿ ನಾವು ನೀಲಿ ಅನ್ನವನ್ನು ಮಾಡುತ್ತೇವೆ. ಇದಕ್ಕೆ ನಾವು ನಾಸಿ ಕೆರಾಬು (Nasi Kerabu) ಎಂದು ಕರೆಯುತ್ತೇವೆʼ ಎಂದು ತಿಳಿಸಿದ್ದಾರೆ. ಆದರೆ, ಕೆಲವರು ʼಇದು ತಿನ್ನೋಕೆ ಚೆನ್ನಾಗಿರಲ್ಲʼ ಎಂದಿದ್ದಾರೆ. 
 

click me!