ಬರೀ ಕಿತ್ತಳೆ ಜೂಸ್ ಕುಡಿದು 40 ದಿನ ಬದುಕ್ಕಿದ್ದವಳಿಗೆ, ಅಧ್ಯಾತ್ಮ ಅನುಭವವೂ ಆಯ್ತಂತೆ!

By Suvarna News  |  First Published Apr 18, 2024, 12:29 PM IST

ದಿನಕ್ಕೊಂದು ಗ್ಲಾಸ್ ಜ್ಯೂಸ್ ಆರೋಗ್ಯ ಕಾಪಾಡುತ್ತೆ. ಬೇಸಿಗೆಯಲ್ಲಿ ಇದಕ್ಕಿಂತ ಬೆಸ್ಟ್ ಮದ್ದು ಬೇರೇನೂ ಇಲ್ಲ. ಆದ್ರೆ ಈ ಮಹಿಳೆ ಊಟ ಬಿಟ್ಟು ಬರೀ ಜ್ಯೂಸ್ ನಲ್ಲಿದ್ದಾಳೆ. ಅದೂ ವೆರೈಟಿ ಜ್ಯೂಸ್ ಅಲ್ಲ… ಕಿತ್ತಳೆ ಹಣ್ಣಿನ ಜ್ಯೂಸ್..  
 


ಜಗತ್ತಿನ ಪ್ರತಿಯೊಂದು ಭಾಗ ಭಿನ್ನವಾಗಿರುವಂತೆ ಪ್ರಪಂಚದಲ್ಲಿರುವ ಪ್ರತಿಯೊಬ್ಬರೂ ಭಿನ್ನ. ಅನೇಕರು ತಮ್ಮ ಆಹಾರದಲ್ಲಿ ಪ್ರಯೋಗಗಳನ್ನು ಮಾಡ್ತಿರುತ್ತಾರೆ. ವಾರದಲ್ಲಿ ಒಮ್ಮೆ ಉಪವಾಸ ಮಾಡ್ಬೇಕು, ಬೆಳಿಗ್ಗೆ ಉಪಹಾರ ಸೇವಿಸ್ಲೇಬೇಕು, ಸಂಜೆ ಆರರೊಳಗೆ ಊಟ ಮುಗಿಸ್ಬೇಕು ಎಂಬೆಲ್ಲ ನಿಯಮವನ್ನು ಚಾಚೂ ತಪ್ಪದೆ ಪಾಲಿಸುವವರಿದ್ದಾರೆ. ಮತ್ತೆ ಕೆಲವರು ಇವೆಲ್ಲವನ್ನೂ ಹೊರತುಪಡಿಸಿ ಹೊಸ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಒಂದು ವಾರ ಪೂರ್ತಿ ಬರೀ ದ್ರವ ಆಹಾರ ಸೇವಿಸಿ, ಆರೋಗ್ಯಕ ಜೀವನ ನಡೆಸಲು ಪ್ರಯತ್ನಿಸುವವರಿದ್ದಾರೆ. ದ್ರವ ಆಹಾರ ಎಂದಾಗ ನಮಗೆ ಜ್ಯೂಸ್ ನೆನಪಾಗುತ್ತದೆ. ಆರೋಗ್ಯಕರ ಜ್ಯೂಸ್ ಡಯಟ್ ಫುಡ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಅದ್ರಲ್ಲೂ ಕಿತ್ತಳೆ ಹಣ್ಣಿನ ಜ್ಯೂಸ್ ಗೆ ಎಲ್ಲಿಲ್ಲದ ಪ್ರಾಮುಖ್ಯತೆ ಇದೆ. ದೇಹಕ್ಕೆ ಶಕ್ತಿ ನೀಡುವ ಜ್ಯೂಸ್ ಎಂದೇ ಇದು ಪ್ರಸಿದ್ಧಿ. ಅನಾರೋಗ್ಯದ ಸಮಯದಲ್ಲಿ ಜ್ಯೂಸ್ ಸೇವಿಸಬೇಡಿ ಅಂತ ವೈದ್ಯರು ಹೇಳಿದ್ರೂ ಆ ಪಟ್ಟಿಯಲ್ಲಿ ಕಿತ್ತಳೆ ಜ್ಯೂಸ್ ಇರೋದಿಲ್ಲ. ಇಷ್ಟೊಂದು ಮಹತ್ವ ಪಡೆದಿರುವ ಈ ಜ್ಯೂಸನ್ನು ದಿನದಲ್ಲಿ ಒಮ್ಮೆ ಸೇವಿಸಬಹುದು. ಆದ್ರೆ ಇಲ್ಲೊಬ್ಬ ಮಹಿಳೆ ಬರೀ ಕಿತ್ತಳೆ ಜ್ಯೂಸ್ ಕುಡಿದು 40 ದಿನ ಜೀವನ ನಡೆಸಿದ್ದಾಳೆ. ಆಕೆ ಬೇರೆ ಯಾವುದೇ ಆಹಾರ ಸೇವನೆ ಮಾಡಿಲ್ಲ ಎನ್ನುವುದು ವಿಶೇಷ.

40 ದಿನ ಕಿತ್ತಳೆ (orange) ಹಣ್ಣಿನ ಜ್ಯೂಸ್ ಕುಡಿದ ಮಹಿಳೆ : ಅನ್ನಿ ಓಸ್ಬೋರ್ನ್ ಕಿತ್ತಳೆ ಜ್ಯೂಸ್ (Juice) ಕುಡಿದು ಬದುಕಿದ ಮಹಿಳೆ. ಇನ್ಸ್ಟಾಗ್ರಾಮ್ ನ @fruitisbeaut ಖಾತೆಯಲ್ಲಿ ಅನ್ನಿ ಓಸ್ಬೋರ್ನ್ ಪ್ರಸಿದ್ಧಿ ಪಡೆದಿದ್ದಾಳೆ. ಆಕೆ ಆಹಾರ (food)ದ ಮೇಲೆ ಆಗಾಗ ಪ್ರಯೋಗ ಮಾಡ್ತಿರುತ್ತಾಳೆ. ಹಣ್ಣಿನ ಪ್ರಯೋಜನದ ಬಗ್ಗೆ ಜನರಿಗೆ ಸಲಹೆ ನೀಡುವ ಅನ್ನಿ ಓಸ್ಬೋರ್ನ್ ಈಗ ಕಿತ್ತಳೆ ಹಣ್ಣಿನ ಜ್ಯೂಸ್ ಸೇವಿಸಿ 40 ದಿನ ಹೇಗಿದ್ದೆ ಎಂಬುದನ್ನು ಹೇಳಿದ್ದಾಳೆ. ಅನ್ನಿ ಓಸ್ಬೋರ್ನ್ 40 ದಿನ ಬೇರೆ ಏನೂ ಆಹಾರ ತಿಂದಿಲ್ಲ. ರಜಾ ದಿನದಲ್ಲಿ ಅನ್ನಿ ಈ ಕೆಲಸಕ್ಕೆ ಕೈ ಹಾಕಿದ್ದಳು. ಹಾಗಾಗಿ ನನಗೆ ಸ್ವಲ್ಪ ವಿಶ್ರಾಂತಿ ಸಿಕ್ತು  ಎನ್ನುತ್ತಾಳೆ. ಉಪವಾಸ ಮಾಡುವ ಜನರು ರಜಾ ದಿನಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುತ್ತಾಳೆ ಅನ್ನಿ ಓಸ್ಬೋರ್ನ್. 

Tap to resize

Latest Videos

undefined

ನಿಮ್ಮ ಆರೋಗ್ಯ ಕಾಪಾಡಿಕೊಳ್ಳೋದಕ್ಕೆ 'ಐದು ನಿಮಿಷದ ಸೂತ್ರ'ವೇ ಸಾಕು!

ಇನ್ಸ್ಟಾಗ್ರಾಮ್ ನಲ್ಲಿ (Instagram) ಆಕೆ ಹಾಕಿರುವ ಪೋಸ್ಟ್ ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಆಕೆ ಜ್ಯೂಸ್ ಹೇಗೆ ತಯಾರಿಸುತ್ತಿದ್ದಳು ಎಂಬ ಪ್ರಶ್ನೆಯೂ ಇದೆ. ಅದಕ್ಕೆ ಉತ್ತರಿಸಿದ ಅನ್ನಿ, 1966ರ ಹ್ಯಾಂಡ್ ಜ್ಯೂಸರ್ ಬಳಸೋದಾಗಿ ಹೇಳಿದ್ದಾಳೆ. ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ಮಾಡ್ತಿದ್ದ ನಾನು ಭಾವನಾತ್ಮಕ, ದೈಹಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ಅನುಭವಿಸಿದ್ದೇನೆ ಎಂದಿದ್ದಾಳೆ. ಆಹಾರವಿಲ್ಲದೆ ಬರೀ ಜ್ಯೂಸ್ ಸೇವನೆ ಮಾಡಿದ್ರೂ ದೇಹದಲ್ಲಿ ಅಪಾಯ ಶಕ್ತಿ ಇತ್ತು. ನಾನು ಆಧ್ಯಾತ್ಮಿಕತೆ ಅನುಭವಪಡೆದೆ ಎಂದು ಅನ್ನಿ ಹೇಳಿದ್ದಾಳೆ.

ಕುಟುಂಬದ ಆರೋಗ್ಯ ಚೆನ್ನಾಗಿರ್ಬೇಕಂದ್ರೆ ಮ್ಯಾಗಿ ಸೇರಿ ಈ 9 ಪದಾರ್ಥಗಳನ್ನು ಬೆಳಗಿನ ತಿಂಡಿಗೆ ಮಾಡ್ಲೇಬೇಡಿ!

ಕಿತ್ತಳೆ ಜ್ಯೂಸ್ ಪ್ರಯೋಜನ : ಕಿತ್ತಳೆ ರಸದಲ್ಲಿ (Orange Juince) ವಿಟಮಿನ್-ಎ, ವಿಟಮಿನ್-ಬಿ, ವಿಟಮಿನ್-ಸಿ, ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ ಹೇರಳವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು (Immunity Power) ಹೆಚ್ಚಿಸುತ್ತದೆ. ರೋಗದ ವಿರುದ್ಧ ಹೋರಾಡಲು ನಿಮಗೆ ಶಕ್ತಿಯನ್ನು ನೀಡುತ್ತದೆ. ಹೃದಯಕ್ಕೂ ಇದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಯಾವುದೇ ಅತಿಯಾದ್ರೂ ಅಪಾಯ ಇರುವ ಕಾರಣ ಕಿತ್ತಳೆ ಹಣ್ಣಿನ ಜ್ಯೂಸನ್ನು ಕೂಡ ಮಿತವಾಗಿ ಸೇವನೆ ಮಾಡಬೇಕು. ದಿನಕ್ಕೆ 2,000 ಮಿಗ್ರಾಂಗಿಂತ ಹೆಚ್ಚು ವಿಟಮಿನ್ ಸಿ ನಮ್ಮ ದೇಹಕ್ಕೆ ಹೋಗಬಾರದು. 

 
 
 
 
 
 
 
 
 
 
 
 
 
 
 

A post shared by Anne Osborne (@fruitisbeaut)

click me!