Kitchen Hack: ಕೆಲವೇ ಸೆಕೆಂಡುಗಳಲ್ಲಿ ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ಸುಲಭ ವಿಧಾನ

By Suvarna News  |  First Published Apr 20, 2022, 5:33 PM IST

ಇಂಟರ್ ನೆಟ್ ಲೋಕದಲ್ಲಿ ನಿತ್ಯ ಹತ್ತಾರು ವಿಚಾರಗಳು ವೈರಲ್ (Viral) ಆಗುತ್ತಿರುತ್ತವೆ. ಇದೀಗ ಈ ಪಟ್ಟಿಗೆ ಬೆಳ್ಳುಳ್ಳಿ (Garlic) ಸಿಪ್ಪೆ ಬಿಡಿಸುವ ವಿಡಿಯೋ ಕೂಡ ಭಾರಿ ವೈರಲ್ ಆಗಿದೆ. ಅರೆ ಬೆಳ್ಳುಳ್ಳಿ ಬಿಡಿಸುವ ವಿಡಿಯೋ (Video) ಎಂದು ಮೂಗು ಮುರಿಯಬೇಡಿ. ಅದ್ಹೇಗೆ ಅಂತ ತಿಳ್ಕೊಂಡ್ರೆ ನಿಮ್ಮ ಅಡುಗೆ (Cooking) ಕೆಲ್ಸ ಈಝಿಯಾಗ್ಬೋದು.


ಇತ್ತಿಚಿನ ದಿನಗಳಲ್ಲಿ ಜನರು ಸೋಷಿಯಲ್ ಮೀಡಿಯಾ (Social media)ವನ್ನು ಹೆಚ್ಚು ಬಳಸುತ್ತಿದ್ದಾರೆ. ಒಳ್ಳೆಯ ವಿಚಾರವಾಗಿರಲಿ, ಕೆಟ್ಟ ವಿಚಾರವಾಗಿರಲಿ ಸೋಷಿಯಲ್ ಮೀಡಿಯಾದಲ್ಲಿ ಬೇಗ ವೈರಲ್‌ ಆಗುತ್ತವೆ. ಯಾವುದೇ ವಿಚಾರವಾಗಿರಲಿ ಸಾಮಾಜಿಕ ಮಾಧ್ಯಮಗಳಲ್ಲಿ ಥಟ್ಟಂತ ವಿಡಿಯೋಗಳು ಅಪ್ ಲೋಡ್ ಆಗಿ ಬಿಡುತ್ತವೆ. ಇವುಗಳಲ್ಲಿ ಕೆಲವು ಬಾಲಿಶ ಎಂದೆನಿಸಿದರೆ. ಕೆಲವೊಂದು ನಿಜಕ್ಕೂ ಬಹಳ ಉಪಯುಕ್ತವಾಗಿರುತ್ತವೆ. ಇದೀಗ ಬೆಳ್ಳುಳ್ಳಿ (Garlic) ಸಿಪ್ಪೆಯನ್ನು ಸುಲಭವಾಗಿ ಹೇಗೆ ತೆಗೆಯುವುದು ಎಂಬ ವಿಡಿಯೋ ವೈರಲ್ (Viral video) ಆಗುತ್ತಿದೆ. 

ಅಡುಗೆ ಹಲವರಿಗೆ ಪಾಲಿಗೆ ತುಂಬಾ ಕಷ್ಟಕರವಾದ ವಿಚಾರ. ತರಕಾರಿ ಹೆಚ್ಚುವುದು, ಬೇಯಿಸುವುದು ಮೊದಲಾದವುಗಳನ್ನೆಲ್ಲಾ ಮಾಡೋಕೆ ಒದ್ದಾಡ್ತಾರೆ. ಅದ್ರಲ್ಲೂ ಈರುಳ್ಳಿ ಹೆಚ್ಚುವುದು, ಬೆಳ್ಳುಳ್ಳಿ, ಶುಂಠಿಯ ಸಿಪ್ಪೆ ತೆಗೆಯುವುದು, ಸೊಪ್ಪುಗಳನ್ನು ಬಿಡಿಸುವುದು ಎಲ್ಲರಿಗೂ ರೇಜಿಗೆ ಹುಟ್ಟಿಸುತ್ತದೆ. ಹೀಗಿರುವಾಗ ಇಲ್ಲೊಂದು ವೀಡಿಯೋದಲ್ಲಿ ಸುಲಭವಾಗಿ ಬೆಳ್ಳುಳ್ಳಿಯ ಸಿಪ್ಪೆ ಸುಲಿಯುವ ವಿಧಾನವನ್ನು ಶೇರ್ ಮಾಡಲಾಗಿದೆ.

Latest Videos

undefined

ಚಾಕೋಲೇಟ್‌ನಿಂದ ಬೆಳ್ಳುಳ್ಳಿವರೆಗೆ.. ಆಹಾರದ ಮೂಲಕ Anxiety ನಿವಾರಿಸಿಕೊಳ್ಳಿ

ಆದ್ದರಿಂದ ಅಡಿಗೆ ಭಿನ್ನತೆಗಳ ವಿಷಯಕ್ಕೆ ಬಂದಾಗ, ನಮ್ಮ ಅಡುಗೆ ಪ್ರಕ್ರಿಯೆಯನ್ನು ಸುಗಮ, ಸುಲಭ ಅಥವಾ ಸರಳವಾಗಿ ಮಾಡುವ ಯಾವುದನ್ನಾದರೂ ದಾರಿಯನ್ನು ಹುಡುಕುತ್ತಿರುತ್ತೇವೆ. ಬೆಳ್ಳುಳ್ಳಿ ನಮ್ಮ ಮೆಚ್ಚಿನ ಖಾರದ ಭಕ್ಷ್ಯಗಳಿಗೆ ಅತ್ಯಗತ್ಯ, ಆದರೆ ಇದರ ಸಿಪ್ಪೆ ಬಿಡಿಸುವುದು ಮಾತ್ರ ಎಲ್ಲರಿಗೂ ತಲೆನೋವು ತರವು ವಿಷಯ. ಇಂಟರ್ನೆಟ್‌ನ ಮೆಚ್ಚಿನ ಕ್ರಿಸ್ಸಿ ಟೀಜೆನ್ ಅವರು ನಮಗೆ ಸುಲಭವಾದ ವಿಧಾನದಲ್ಲಿ ಬೆಳ್ಳುಳ್ಳಿಯ ಸಿಪ್ಪೆ ತೆಗೆಯುವ ವಿಧಾನದ ಬಗ್ಗೆ ತಿಳಿಸಿದ್ದಾರೆ.

ಬೆಳ್ಳುಳ್ಳಿಯ (Garlic) ಸಿಪ್ಪೆ ಸುಲಿಯುವುದು ಎಂದರೆ ಬಹಳ ಕಿರಿಕಿರಿ ಕೆಲಸ. ಬಹಳಷ್ಟು ಹೊತ್ತು ತೆಗೆದುಕೊಳ್ಳುತ್ತದೆ . ಕೆಲವೊಮ್ಮೆ ಉಗುರು ನೋವು ಬರುವುದೂ ಇದೆ. ಆದರೆ ಈ ಟೆಕ್ನಿಕ್ ಬಳಸಿದರೆ ಕ್ಷಣಾರ್ಧದಲ್ಲಿ ಇಡೀ ಬೆಳ್ಳುಳ್ಳಿ ಸಿಪ್ಪೆ ತೆಗೆದುಬಿಡಬಹುದು. ಇದೀಗ ಇಂಥಹ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ.

ನವರಾತ್ರಿ ಸಮಯದಲ್ಲಿ ಈರುಳ್ಳಿ, ಬೆಳ್ಳುಳ್ಳಿ ತಿನ್ಬಾರ್ದು ಅಂತಾರಲ್ಲ ಯಾಕೆ ?

ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಭವಾಗಿ ಬಿಡಿಸುವ ವಿಧಾನ

  • ಮೊದಲಿಗೆ ಒಂದು ಸಂಪೂರ್ಣ ಬೆಳ್ಳುಳ್ಳಿಯನ್ನು ಬೌಲ್‌ಗೆ ಹಾಕಿ
  • ಅರ್ಧ ಬೌಲ್‌ಗೆ ಆಗುವಷ್ಟು ನೀರು ತುಂಬಿಸಿ 
  • 30 ನಿಮಿಷಗಳ ಕಾಲ ಇದನ್ನು ಮೈಕ್ರೋವೇನ್‌ನಲ್ಲಿಡಿ
  • ಈಗ ಬೆಳ್ಳುಳ್ಳಿಯನ್ನು ನೀರಿನಿಂದ ಹೊರತೆಗೆದು ಆರಲು ಬಿಡಿ
  • ಬೆಳ್ಳುಳ್ಳಿಯ ತಲೆ ಮತ್ತು ಬುಡದ ಭಾಗವನ್ನು ಚಾಕುವಿನಿಂದ ಕತ್ತರಿಸಿ ತೆಗೆಯಿರಿ
  • ನಂತರ ಬೆಳ್ಳುಳ್ಳಿಯನ್ನು ಒಮ್ಮೆ ಕೊಡವಿದರೆ ಸಾಕು ಎಸಳುಗಳು ಸುಲಭವಾಗಿ ಸಿಪ್ಪೆ ರಹಿತವಾಗಿ ನೆಲಕ್ಕೆ ಬೀಳುತ್ತದೆ.

ಟಿಕ್‌ಟಾಕ್‌ನಲ್ಲಿ ಟೀಜೆನ್‌ನ ಕಂಪನಿ ಈ ಸಲಹೆಯನ್ನು ಹಂಚಿಕೊಂಡಿದೆ. ಟಿಕ್‌ಟಾಕ್‌ನಲ್ಲಿ ಶೇರ್ ಮಾಡಿರುವ ಈ ಸರಳ ವೀಡಿಯೋವನ್ನು ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಈ ಟೆಕ್ನಿಕ್ ಬಳಸಿದರೆ ಸೆಕೆಂಡುಗಳ ಒಳಗೆ ಇಡೀ ಬೆಳ್ಳುಳ್ಳಿಯ ಸಿಪ್ಪೆ ಸುಲಿಯುವುದು ಸಾಧ್ಯವಾಗಲಿದೆ. ಈ ವಿಡಿಯೋ ನೋಡಿ ಬಹಳ ಮಂದಿ ಮನೆಯಲ್ಲೂ ಈ ರೀತಿ ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ಯತ್ನಿಸಿದ್ದಾರಂತೆ. 

Garlic Milk Benefits: ಮಲಬದ್ಧತೆ ಸಮಸ್ಯೆನಾ ? ಬೆಳ್ಳುಳ್ಳಿ ಹಾಲು ಕುಡ್ದು ನೋಡಿ

ಬೆಳ್ಳುಳ್ಳಿಯನ್ನು ಕೈಗೆ ತೆಗೆದುಕೊಳ್ಳದೇ ಅದನ್ನು ಬೇರ್ಪಡಿಸದೇ ಸುಲಭವಾಗಿ ಬೆಳ್ಳುಳ್ಳಿಯನ್ನು ಮತ್ತು ಅದರ ಸಿಪ್ಪೆಯನ್ನು ಬೇರ್ಪಡಿಸುವ ಚಾಕಚಕ್ಯತೆಗೆ ಇಂಟರ್ ನೆಟ್ ಲೋಕ ಫುಲ್ ಫಿದಾ ಆಗಿದೆ. ಇನ್ಯಾಕೆ ತಡ ಬೆಳ್ಳುಳ್ಳಿಯ ಸಿಪ್ಪೆ ತೆಗೆಯುವ ಈ ಹ್ಯಾಕ್‌ನ್ನು ನೀವು ಸಹ ಟ್ರೈ ಮಾಡಿ.

click me!