ಪಾಲಕ್‌ಗಿಂತ ಹೆಚ್ಚು ಪೌಷ್ಟಿಕಾಂಶ ನೀಡುತ್ತೆ ಈ ತರಕಾರಿ, ಕ್ಯಾನ್ಸರ್- ಶುಗರ್ ಗುಣಪಡಿಸಲೂ ಸಹಕಾರಿ

By Suvarna News  |  First Published Jan 4, 2024, 5:11 PM IST

ರಕ್ತದಲ್ಲಿನ ಸಕ್ಕರೆ ಹೆಚ್ಚಿದ್ದರೆ ಖಂಡಿತವಾಗಿಯೂ ಈ ಹಸಿರು ತರಕಾರಿಯನ್ನು ಪ್ಲೇಟ್‌ನಲ್ಲಿ ಸೇರಿಸಿ. ಇದು ಮಧುಮೇಹವನ್ನು ನಾಶಪಡಿಸುವ ಶಕ್ತಿಯನ್ನು ಹೊಂದಿದೆ ಮತ್ತು ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ. ಈ ತರಕಾರಿ ಪಾಲಕಕ್ಕಿಂತ ಹೆಚ್ಚಿನ ಪೌಷ್ಟಿಕಾಂಶವನ್ನು ನೀಡುತ್ತದೆ. ಯಾವುದು ಈ ಸೂಪರ್ ಫುಡ್ ಗೊತ್ತಾ?


ಪಾಲಕ್ ಸೊಪ್ಪನ್ನು ಅತ್ಯಂತ ಶಕ್ತಿಶಾಲಿ ಮತ್ತು ಪೌಷ್ಟಿಕ ಆಹಾರ ಎಂದು ಹೇಳಲಾಗುತ್ತದೆ. ಆದರೆ ಒಂದು ತರಕಾರಿ ಇದಕ್ಕಿಂತ ಹೆಚ್ಚು ಆರೋಗ್ಯಕರ. ಅದಕ್ಕೆ ಕ್ಯಾನ್ಸರ್ ಅನ್ನು ನಿರ್ಮೂಲನೆ ಮಾಡುವ ಶಕ್ತಿಯೂ ಇದೆ. ಆದರೆ ಇದು ವಿದೇಶಿ ತಳಿಯಾದ್ದರಿಂದ ಇದರ ಬಗ್ಗೆ ತಿಳಿದವರು ಬಹಳ ಕಡಿಮೆ. ಹಾಗಾಗಿ, ಬಳಕೆಯೂ ಕಡಿಮೆ. ಇದು ಕೇವಲ ಒಂದು ರೀತಿಯ ಎಲೆಕೋಸು ಎಂದು ಕೆಲವರು ಭಾವಿಸುತ್ತಾರೆ. ಆದರೆ ಈ ತರಕಾರಿ ಅದಕ್ಕಿಂತ ಹೆಚ್ಚು ಆರೋಗ್ಯಕರವಾಗಿದೆ. 
ಹೌದು, ನಾವು ಹೇಳುತ್ತಿರುವುದು ಹಸಿರು ಹೂ ಕೋಸಿನಂತಿರುವ ಬ್ರೊಕೋಲಿ ಬಗ್ಗೆ. 

ಬ್ರೊಕೊಲಿಯು ಅನೇಕ ಜೀವಸತ್ವಗಳು, ಖನಿಜಗಳು, ಆ್ಯಂಟಿಆಕ್ಸಿಡೆಂಟ್‌ ಮತ್ತು ಫೈಬರ್‌ಗಳ ಉಗ್ರಾಣವಾಗಿದೆ. ಇದನ್ನು ತಿನ್ನುವುದರಿಂದ ಆಂತರಿಕ ಊತ ಕಡಿಮೆಯಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲ, ಬ್ರೊಕೊಲಿಯು ಅನೇಕ ರೋಗಗಳಿಗೆ ಪರಿಹಾರವಾಗಿದೆ, ಆದ್ದರಿಂದ ಇದನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಬೇಕು. 

Tap to resize

Latest Videos

undefined

ಕ್ಯಾನ್ಸರ್ ಗೆ ಖಚಿತ ಚಿಕಿತ್ಸೆ
ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಗ್ಯಾಸ್ಟ್ರಿಕ್ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್, ಕಿಡ್ನಿ ಕ್ಯಾನ್ಸರ್, ಮೂತ್ರಕೋಶ ಕ್ಯಾನ್ಸರ್ ಇತ್ಯಾದಿಗಳಿಗೆ ಬ್ರೊಕೊಲಿ ಔಷಧವಾಗಬಲ್ಲದು. ಬ್ರೊಕೊಲಿಯು ಜೀವಕೋಶದ ಹಾನಿಯನ್ನು ತಡೆಯುವ ಯಾವುದೇ ತರಕಾರಿಗಳಿಗಿಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. 

ಮಧುಮೇಹ ನಿಯಂತ್ರಣ
ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಬೇಕಾಗುತ್ತವೆ. ಆದ್ದರಿಂದ, ಬ್ರೊಕೊಲಿ ಮಧುಮೇಹ ರೋಗಿಗಳಿಗೆ ಜೀವರಕ್ಷಕದಂತೆ ಕೆಲಸ ಮಾಡುತ್ತದೆ. ಫೈಬರ್ ಕಾರಣದಿಂದಾಗಿ, ಗ್ಲೂಕೋಸ್ ರಕ್ತದಲ್ಲಿ ನಿಧಾನವಾಗಿ ಬಿಡುಗಡೆಯಾಗುತ್ತದೆ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಅದರಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ.

ಉತ್ತಮ ಹೃದಯ ಕಾರ್ಯ
ಆಲ್ಕೋಹಾಲ್, ಅಧಿಕ ಕೊಲೆಸ್ಟ್ರಾಲ್, ಕೊಬ್ಬು ಮತ್ತು ಟ್ರೈಗ್ಲಿಸರೈಡ್‌ಗಳಿಂದ ರಕ್ತನಾಳಗಳು ನಿರ್ಬಂಧಿಸಲ್ಪಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಹೃದಯವು ಹೆಚ್ಚು ಬಲದಿಂದ ಪಂಪ್ ಮಾಡಬೇಕಾಗುತ್ತದೆ ಮತ್ತು ಸಮಯದೊಂದಿಗೆ ಒತ್ತಡವು ಹೆಚ್ಚಾಗುತ್ತದೆ. ಬ್ರೊಕೊಲಿಗೆ ಈ ಎಲ್ಲಾ ಹಾನಿಗಳಿಂದ ರಕ್ಷಿಸುವ ಸಾಮರ್ಥ್ಯವಿದೆ.

ಕರುಳಿನ ಆರೋಗ್ಯ
ಬ್ರೊಕೋಲಿಯು ಆಹಾರದ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ಬ್ಯಾಕ್ಟೀರಿಯಾಗಳ ಹೆಚ್ಚಳದಿಂದಾಗಿ, ಕರುಳಿನ ಆರೋಗ್ಯವು ಸುಧಾರಿಸುತ್ತದೆ ಮತ್ತು ದೈನಂದಿನ ತ್ಯಾಜ್ಯವನ್ನು ಸುಲಭವಾಗಿ ತೆಗೆದುಹಾಕಲಾಗುತ್ತದೆ.

ನೂಡಲ್ಸ್‌ಗೆ ಕಾರ್ನ್ ಹಾಕಿದ್ದಕ್ಕೇ ಸಂಬಂಧ ಕಡಿದುಕೊಂಡ ಹುಡುಗ, ಇಂಥವನು ...

ಸ್ಕ್ರೀಜೋಫ್ರೀನಿಯಾ
ಸ್ಕಿಜೋಫ್ರೇನಿಯಾ ಹೊಂದಿರುವ ಜನರಿಗೆ ತಮ್ಮ ರೋಗಲಕ್ಷಣಗಳನ್ನು ನಿರ್ವಹಿಸಲು ಬ್ರೊಕೊಲಿ  ಸಹಾಯ ಮಾಡಬಹುದೇ ಎಂದು ಕಂಡುಹಿಡಿಯಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ. 

ಒಟ್ಟಿನಲ್ಲಿ ಈ ಫಾರಿನ್ ತರಕಾರಿಯನ್ನು ನಿಮ್ಮದಾಗಿಸಿಕೊಂಡಲ್ಲಿ ಆರೋಗ್ಯದ ಲಾಭವೂ ನಿಮ್ಮದೇ ಆಗಲಿದೆ. 

click me!