ವಿಶ್ವದ ಅತ್ಯಂತ ಕೆಟ್ಟ ಆಹಾರಗಳ ಪಟ್ಟಿಯಲ್ಲಿ ಭಾರತದ ಈ ಫೇಮಸ್‌ ತಿನಿಸು ಕೂಡಾ ಇದೆ..!

By Vinutha Perla  |  First Published Jan 4, 2024, 11:10 AM IST

ಇತ್ತೀಚೆಗೆ ಟೇಸ್ಟ್ ಅಟ್ಲಾಸ್ ವಿಶ್ವದ ಟಾಪ್ 100 ವರ್ಸ್ಟ್ ರೇಟೆಡ್ ಫುಡ್ ಲಿಸ್ಟ್‌ನ್ನು ಬಿಡುಗಡೆ ಮಾಡಿದೆ. ಅತ್ಯಂತ ಕೆಟ್ಟ ರುಚಿಯನ್ನು ಹೊಂದಿರೋ ಭಾರತದ ಆಹಾರಗಳ ಪಟ್ಟಿಯಲ್ಲಿ ಭಾರತೀಯರ ಒಂದು ನೆಚ್ಚಿನ ಆಹಾರವೂ ಸೇರಿದೆ. ಅದ್ಯಾವುದು?


ಆಹಾರ ಅಂದ್ರೆ ಸಾಕು ಎಲ್ಲರ ಬಾಯಲ್ಲೂ ನೀರೂರುತ್ತೆ..ಪ್ರಪಂಚದಾದ್ಯಂತ ವಿಭಿನ್ನ ರುಚಿಯ ಹಲವು ರೀತಿಯ ಆಹಾರಗಳಿವೆ. ಹಲವು ಹೆಸರಿನಿಂದ ಖ್ಯಾತಿ ಪಡೆದಿವೆ. ಆದರೆ ಕೆಲವು ಆಹಾರಗಳು ಫೇಮಸ್ ಆಗಿದ್ದರೂ ಅದರ ರುಚಿ ಹಲವರಿಗೆ ಹಿಡಿಸುವುದಿಲ್ಲ. ಮತ್ತೆ ಕೆಲವು ಆಹಾರಗಳು ಹೆಚ್ಚು ಫೇಮಸ್ ಅಲ್ಲದಿದ್ದರೂ ಹಲವರ ಫೇವರಿಟ್. ಹೀಗೆ ವಿಶ್ವದಾದ್ಯಂತ ವೆರೈಟಿ ವೆರೈಟಿ ಆಹಾರಗಳಿವೆ. ಸಿಹಿ, ಹುಳಿ, ಖಾರ, ಕಹಿ, ಹೀಗೆ ನಾನಾ ರೀತಿಯ ರುಚಿ, ಸ್ವಾದವನ್ನು ಹೊಂದಿರುವ ಆಹಾರಗಳಲ್ಲಿ ಯಾವುದು ಬೆಸ್ಟ್‌, ಯಾವುದು ವರ್ಸ್ಟ್‌ ಎಂದು ಕಂಡುಹಿಡಿಯೋದು ಕಷ್ಟ. ಹೀಗಿರುವಾಗ ಇತ್ತೀಚೆಗೆ, ಟೇಸ್ಟ್ ಅಟ್ಲಾಸ್ ವಿಶ್ವದ ಟಾಪ್ 100 ಕೆಟ್ಟ ದರದ ಆಹಾರಗಳನ್ನು ಕಂಡುಹಿಡಿಯಲು ಸಮೀಕ್ಷೆ ನಡೆಸಿದೆ.

ಇತ್ತೀಚೆಗೆ ಟೇಸ್ಟ್ ಅಟ್ಲಾಸ್ 'ವಿಶ್ವದ ಟಾಪ್ 100 ವರ್ಸ್ಟ್ ರೇಟೆಡ್ ಫುಡ್' ಲಿಸ್ಟ್‌ನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕಡಿಮೆ ರ್ಯಾಂಕ್‌ ಪಡೆದ ಎಲ್ಲಾ 100 ಭಕ್ಷ್ಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ವಿಶ್ವದ ಹಲವು ದೇಶಗಳ ಆಹಾರಗಳು ಈ ಲಿಸ್ಟ್‌ನಲ್ಲಿವೆ. ಭಾರತ ಮತ್ತು ಅಮೆರಿಕದ ತಿನಿಸುಗಳು ಕೂಡ ಈ ಲಿಸ್ಟ್‌ನಲ್ಲಿ ಸೇರಿದೆ.

Latest Videos

undefined

ಭಾರತದ ಬೆಸ್ಟ್ ಫುಡ್‌ ಲಿಸ್ಟ್‌ನಲ್ಲಿ ಬಿರಿಯಾನಿನೇ ಇಲ್ಲ, ನಂ.1 ಸ್ಥಾನದಲ್ಲಿರೋ ಆಹಾರ ಯಾವುದು?

ಭಾರತೀಯರು ಇಷ್ಟಪಟ್ಟು ತಿನ್ನೋ ಈ ಆಹಾರ ಅತ್ಯಂತ ಕಳಪೆ ಫುಡ್
ಟೇಸ್ಟ್ ಅಟ್ಲಾಸ್‌ನ ಕೆಟ್ಟ ಆಹಾರಗಳ ಈ ಪಟ್ಟಿಯಲ್ಲಿ ಮುಖ್ಯವಾಗಿ ಭಾರತದ ಒಂದು ಆಹಾರವೂ ಸೇರಿದೆ. ಅದು ಮತ್ಯಾವುದೂ ಅಲ್ಲ, ಆಲೂ ಬೈಂಗನ್. ಆಲೂಗಡ್ಡೆ, ಬದನೆ, ಈರುಳ್ಳಿ, ಟೊಮ್ಯಾಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಮಸಾಲೆಗಳ ಮಿಶ್ರಣದ ಸುವಾಸನೆಗಳನ್ನು ಸಂಯೋಜಿಸುವ ಜನಪ್ರಿಯ ಭಾರತೀಯ ಗ್ರೇವಿ ಭಕ್ಷ್ಯವಾಗಿದೆ. ಈ ಖಾದ್ಯವನ್ನು ತಾಜಾ ಕೊತ್ತಂಬರಿ ಎಲೆಗಳಿಂದ ಅಲಂಕರಿಸಲಾಗುತ್ತದೆ. ಹೆಚ್ಚಿನ ಜನರು ಇದನ್ನು ತವಾ ರೋಟಿಯೊಂದಿಗೆ ಆನಂದಿಸುತ್ತಾರೆ, 

ಭಾರತದಲ್ಲಿ ಆಲೂ ಬೈಂಗನ್‌ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಆದರೆ ಇಷ್ಟೆಲ್ಲಾ ಫೇಮಸ್ ಆಗಿರುವುದರ ಹೊರತಾಗಿಯೋ ಆಲೂ ಬೈಂಗನ್ ಅಟ್ಲಾಸ್ ಪಟ್ಟಿಯಲ್ಲಿ 5ರಲ್ಲಿ 2.7 ರ ಕಡಿಮೆ ರೇಟಿಂಗ್‌ನ್ನು ಪಡೆಯಿತು. ಜಗತ್ತಿನ ಕೆಟ್ಟ ಆಹಾರಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿತು. ಆದರೆ ಅನೇಕ ಭಾರತೀಯರು ಈ ರ್ಯಾಂಕ್‌ನ್ನು ಒಪ್ಪುವುದಿಲ್ಲ. ಆಲೂ ಬೈಂಗನ್ ಭಾರತೀಯರ ನೆಚ್ಚಿನ ಆಹಾರ. ಇದು ಭಾರತೀಯ ಪಾಕಪದ್ಧತಿಯ ಸಾರವನ್ನು ತಿಳಿಸುವ ಅತ್ತುತ್ತಮ ಭಕ್ಷ್ಯವಾಗಿದೆ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.

Chicken Recipes: ಜಗತ್ತಿನ ಅತ್ಯುತ್ತಮ ಚಿಕನ್ ರೆಸಿಪಿ ಯಾವುದು ಗೊತ್ತಾ?

ಶಾರ್ಕ್ ಮಾಂಸದಿಂದ ತಯಾರಿಸುವ ಆಹಾರ ಐಸ್‌ಲ್ಯಾಂಡ್‌ನ ವರ್ಸ್ಟ್‌ ಫುಡ್‌
ಐಸ್‌ಲ್ಯಾಂಡ್‌ನ 'ಹಕಾರ್ಲ್' ಎಂದು ಕರೆಯಲ್ಪಡುವ ಫುಡ್‌ ಸಹ ಕೆಟ್ಟ ಆಹಾರ ಎಂದು ಸ್ಥಾನ ಪಡೆದಿದೆ. ಇದನ್ನು ಶಾರ್ಕ್ ಮಾಂಸದಿಂದ ತಯಾರಿಸಲಾಗುತ್ತದೆ. ಮೂರು ತಿಂಗಳ ಕಾಲ ಹುದುಗಿಸಿ ಇದನ್ನು ಸಿದ್ಧಪಡಿಸುತ್ತಾರೆ. ಇದನ್ನು 'ಬ್ರೆನ್ನಿವಿನ್' ಎಂಬ ಸ್ಥಳೀಯ ಪಾನೀಯದೊಂದಿಗೆ ಟೂತ್‌ಪಿಕ್‌ನಲ್ಲಿ ಬಡಿಸಲಾಗುತ್ತದೆ. ಐಸ್‌ಲ್ಯಾಂಡಿಗರು ಇದನ್ನು ಸವಿಯಾದ ಪದಾರ್ಥವೆಂದು ಪರಿಗಣಿಸುತ್ತಾರೆ. ಆದರೆ ಇದು ಉಸಿರುಗಟ್ಟುವಿಕೆಗೆ ಕಾರಣವಾಗುತ್ತದೆ ಅನ್ನೋ ಕಾರಣಕ್ಕೆ ಇದನ್ನು ಕೆಟ್ಟ ಆಹಾರವೆಂದು ಪರಗಣಿಸಲಾಗಿದೆ.

ವಿಶ್ವಾದ್ಯಂತ ಇರೋ 50 ಆಹಾರಗಳನ್ನು ಈ 'ವಿಶ್ವದ ಟಾಪ್ 100 ವರ್ಸ್ಟ್ ರೇಟೆಡ್ ಫುಡ್' ಲಿಸ್ಟ್‌ನಲ್ಲಿ ಸೇರಿಸಲಾಗಿದೆ. ಹಲವು ದೇಶಗಳಿಗೆ ಟ್ರಾವೆಲ್ ಮಾಡುವವರು ಅಥವಾ ಆಹಾರಪ್ರಿಯರು ಈ ಕೆಟ್ಟ ತಿನಿಸುಗಳ ಪಟ್ಟಿಯನ್ನೊಮ್ಮೆ ನೋಡಲೇಬೇಕು. ಈ ಪಟ್ಟಿಯಲ್ಲಿ ಪ್ರತಿ ದೇಶದ ಪ್ರಸಿದ್ಧ ಆಹಾರದ ಬಗ್ಗೆ ಮತ್ತು ಬಹುಶಃ ಯಾರೂ ತಿನ್ನಲು ಸಾಧ್ಯವಾಗದ ಕೆಲವು ಆಹಾರಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

 
 
 
 
 
 
 
 
 
 
 
 
 
 
 

A post shared by TasteAtlas (@tasteatlas)

click me!